ನನ್ನ ಬಾಳ ಪುಸ್ತಕದಲ್ಲಿ ನಿನ್ನ ಅಥವಾ ನಿನ್ನಂತವರ ಆಗಮನವಾಗುತ್ತದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.
ನೀನು ಸಿಕ್ಕಾಗ ನಿನ್ನ ಬಗ್ಗೆ ಯವುದೋ ಪುಟದ ಒಂದು ಮೂಲೆಯಲ್ಲಿ ಒಂದು ಸಾಲು ಬರೆದೆ. ಆಮೇಲೆ ಅದನ್ನು ದಪ್ಪ ಅಕ್ಷರದಲ್ಲಿ ಬರೆದೆ. ಆಮೇಲೆ ನಿನಗಾಗಿ ಒಂದು ಪುಟವನ್ನು ಮೀಸಲಿರಿಸಿದೆ. ಆ ಪುಟದಲ್ಲಿ ಒಂದೊಂದು ಅಕ್ಷರವನ್ನೂ ಜಾಗರೂಕತೆಯಿಂದ, ಬಹಳ ಸುಂದರವಾಗಿ ಬರೆಯಲಾರಂಭಿಸಿದೆ. ಅದರಲ್ಲಿ ಆಗುವ ಚಿತ್ತು ಕಾಟುಗಳು, ನನ್ನ ಬಾಳ ತುಂಬ ನನ್ನನ್ನು ಅಪಹಾಸ್ಯ ಮಾಡಿ ನಗಬಾರದಲ್ಲ?
ನಿನಗೋಸ್ಕರ ಮೀಸಲಿರಿಸಿದ ಒಂದು ಪುಟ ಸಾಕಾಗಲೇ ಇಲ್ಲ, ಇನ್ನೊಂದರಲ್ಲಿ ಬರೆದೆ. ನಂತರ ಮತ್ತೊಂದು ಮಗದೊಂದು, ಈಗ ನೀನು ಆ ಪುಸ್ತಕದ ಅವಿಭಾಜ್ಯ ಅಂಗ. ಒಮ್ಮೆ ಯಾವುದೋ ಕ್ಷಣದಲ್ಲಿ ಆ ಪುಟಗಳನ್ನು ಕೀಳಬೇಕೆಂದು ಪ್ರಯತ್ನಿಸಿದೆ. ಆದರೆ ಕೀಳಲು ಮಾತ್ರ ಆಗಲಿಲ್ಲ. ಬದಲಾಗಿ ಇನ್ನೂ ಬರೆದೆ, ಈಗಲೂ ಬರೆಯತ್ತುಲೇ ಇದ್ದೇನೆ, ದಿನಾಲೂ, ಪ್ರತಿ ಕ್ಷಣ..

No comments:
Post a Comment