Pages

Sunday, October 2, 2011

ನ್ಯಾನೋ ಕಥೆ - ೧

ಊರೆಲ್ಲ ಕೂಗಿ ಹೇಳುವೆ.. ನಾನೀಗ ನಿನ್ನ ಮೋಹಿತ..... ಎಂದು ಪ್ರೀತಿಯ ಅಮಲಿನಲಿ ಹಾಡುತ್ತಿದ್ದ ಗೆಳೆಯನಿಗೆ ನಾನು " ನಿನಗೆ (ಮೀಟೆ)ರ್ (ಇಲ್ಲ), ಸುಮ್ನೇ ನಿಮ್ಮ (ಅಪ್ಪ ಅಮ್ಮಂಗೆ) ತೊಂದರೆ ಕೊಡ್ಬೇಡ, ಆವ್ರು (ತೋರ್ಸಿ)ದ್ ಹುಡ್ಗೀನ ಒಪ್ಕೋ, (ಆಮೇಲ್ ಮದ್ವೆ ಮಾಡ್ಕೋ) ಅಂದೆ.
ಅವನು ಗಾಂಧಿ ಬಜ಼ಾರ್ಲೀ ಅವನ ಪ್ರೇಯಸಿ [ಈಗ ಮಡಡಿಯೂ ಹೌದು] ಜೊತೆಯಲ್ಲಿ ಸಿಕ್ಕಿದ್ದ. ನನ್ನ ಕೈ ಕುಲುಕಿ " ಲೇ ಅವತ್ತು ಎಂತ ಮಾತು ಹೇಳಿದೋ.. ನೀ ಹೇಳ್ದನ್ಗೆ ಮಾಡಿದೆ. ನನ್ನ ಮದುವೆ ಆಯ್ತು" ಅಂದ. ನಾನು ಏನು ಹೇಳಿದ್ನೊ ನಿಂಗೆ ಎಂದೆ. "ಮೀಟೆ ಇಲ್ಲ. ಅಪ್ಪ ಅಮ್ಮಂಗೆ ತೋರ್ಸಿ ಆಮೇಲ್ ಮದ್ವೆ ಮಾಡ್ಕೋ" ಅಂತ ಹೇಳಿದ್ಯಲೊ. ನಾ ಹಾಗೆ ಹೇಳಿದ್ನ?? ಅನುಮಾನಿಸಿದೆ. ಏನೋ ಎಲ್ಲ ಒಳ್ಳೇದಾಯಿತಲ್ಲ ಬಿಡು ಅಂದು ಅವನಿಗೆ ಟಾಟಾ ಹೇಳಿ ಮುನ್ನಡೆದೆ. ಅವನು ತಿರುಗಿ ನನ್ನೆಡೆಗೆ ಬಂದು ನಿನಗೊಂದು ಮಾತು ಹೇಳಬೇಕು ಅಂದ. ಹೇಳೋ ಮಾರಾಯ ಅಂದೆ. ನಿನಗೆ ಮೀಟೆರ್ ಇಲ್ಲ, ಸುಮ್ನೇ ನಿಮ್ಮ ಅಪ್ಪ ಅಮ್ಮಂಗೆ ತೊಂದರೆ ಕೊಡ್ಬೇಡ, ಆವ್ರು ತೋರ್ಸಿದ್ ಹುಡ್ಗೀನ ಒಪ್ಕೋ, ಆಮೇಲ್ ಮದ್ವೆ ಮಾಡ್ಕೋ" ಅಂದ.  ಆದರೆ ಅವ್ನು ಹೇಳಿದ್ದು ನಂಗೆ ಸರಿಯಾಗಿ ಕೇಳಿಸಿತು.
ನೀತಿ : ಪ್ರೀತಿ ಬರಿ ಕುರುಡಲ್ಲ. ಕಿವುಡೂ ಹೌದು!

No comments:

Post a Comment