Pages

Thursday, October 27, 2011

ನೋಡಿಯೂ ನೋಡದೆ ಮೋಡಿಯ ಮಾಡಿದೆ

ಕಣ್ಣಲ್ಲೆ ನೀ ಏಕೆ ಕರೆದೆ
ಕನಸಲ್ಲಿ ನಿನ ಬಿಂಬ ಕೊರೆದೆ
ಮನಸಲ್ಲಿ ಹೊಸ ಮಂಕು ಸುರಿದೆ
ತಲೆಗೆಲ್ಲ ಸವಿ ಮತ್ತು ಏರಿದೆ

ನೋಡಿಯೂ ನೋಡದೆ ಮೋಡಿಯ ಮಾಡಿದೆ
ಅನವರತ ನನ್ನನೇಕೆ ಕಾಡಿದೆ
ನಿನಗೇನು ನಾ ಕೇಡು ಬಗೆದೆ
ಬಡಪಾಯಿಯ ತ್ರಿಶಂಕು ಮಾಡಿದೆ

ಗಗನಕೂ ಭುವಿಗೂ ಜೋಕಾಲಿ ಆಡಿಸಿದೆ
ನನಗೆ ನಾನೇ ನಗುವ ಹುಚ್ಚು ಮೂಡಿಸಿದೆ
ಜನ ಜಾತ್ರೆಯಲೂ ಏಕಾಂಗಿಯಾಗಿಸಿದೆ
ನೋವುನಲಿವಿನ ಭಾವಸಾಗರದಿ ಚಕ್ಷು ನೆನೆಸಿದೆ

ಸಾಕಿನ್ನು ಸೂರ್ಯಚಂದ್ರರ ಕಣ್ಣಾಮುಚ್ಚಾಲೆ
ಕಳುಹಿಸು ಅಪೂರ್ವ ಮಿಲನದ ಕರೆಯೋಲೆ
ಈ ಪ್ರೇಮ ನೋಡಿ ಜಗವೆಲ್ಲ ನಾಚಲಿ
ಒಂದು ಕ್ಷಣವಾದರೂ ಈ ಬಡಪಾಯಿ ಬದುಕಲಿ
+++++++++++++++++++++++++++++++++++++++++++++++++++++++++++++++++++++
ಡಿಸ್‌ಕ್ಲೇಮರ್: ಇದು ನನ್ನ ಸ್ವಂತ ಕವನ ಅಲ್ಲ. ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ಸಿಕ್ಕಿದ್ದು. ಚೆನ್ನಾಗಿ ಇತ್ತು, ಹಾಗಾಗಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ಸಂಬಂಧಪಟ್ಟವರ ಆಕ್ಷೇಪ ಇದ್ದಲ್ಲಿ ದಯಮಾಡಿ ತಿಳಿಸಿ, ಇದನ್ನು ಆಕ್ಷಣವೇ ಅಳಿಸುತ್ತೇನೆ.

No comments:

Post a Comment