Pages

Wednesday, April 13, 2016

ತಾಪಮಾನ













ಬೆಂಗಳೂರಿನ ಗರಿಷ್ಠ ತಾಪಮಾನ ತಲುಪಿದೆ ನಲವತ್ತೆರಡು
ಅದಕ್ಕೆ ಕಾರಣಗಳೆನೆಂದು ನೀ ಪಟ್ಟಿ ಮಾಡು
ದಶ ದಿಕ್ಕುಗಳಿಂದಲೂ ಕಬಳಿಕೆಯಾಗುತ್ತಿದೆ ಕಾಡು
ಕೆರೆಗಳಂತೂ ಆಗಿವೆ ಕಾಂಕ್ರೀಟ್ ಕಟ್ಟಡಗಳ ಬೀಡು
ಎಲ್ಲಾ ಕಡೆ ಥಳಥಳಿಸುತಿದೆ ಡಾಂಬರು ರೋಡು
ಮಾಯವಾಗಿದೆ ನಗರದ ಹೊರವಲಯದಲ್ಲಿ ಗುಡ್ಡ-ಗಾಡು
ಹುಡುಕಿದರೂ ಕಾಣದಾಗಿದೆ ಹಕ್ಕಿ-ಪಕ್ಷಿಗಳ ಗೂಡು
ವನ್ಯ ಜೀವಿಗಳು ತಪ್ಪುತ್ತಿವೆ ಅದರ ಜಾಡು
ಇದಕ್ಕೆಲ್ಲ ಏನು ಪರಿಹಾರ ನೀ ತಡಕಾಡು
ರಜಾ ದಿನಗಳಲ್ಲೊಂದು ಸಸಿ ನೆಡು
ಅದ ಪೋಷಿಸಿ ಆರೈಕೆ ಮಾಡು
ಪರಿಹಾರ ಕಾರ್ಯ ತಡ ಆದರೆ ಕಾದಿದೆ ದೊಡ್ಡ ಕೇಡು

Friday, April 1, 2016

ಮಾತು


ಮಾತು ಅತಿ ಹೆಚ್ಚಾದರೆ ಅದಕ್ಕಿಲ್ಲ ಕಿಮ್ಮತ್ತು
ಮಾತು ಅತಿ ಕಡಿಮೆಯಾದರೂ ಇಲ್ಲ ಗಮ್ಮತ್ತು 
ಹೆಚ್ಚು-ಕಡಿಮೆಯಾದರಂತೂ ಕಾದಿರತ್ತೆ ಆಪತ್ತು 
ಮಿತವಾಗಿ ಮಾತಾಡುವುದು ಒಂದು ಕರಾಮತ್ತು 
ಸಿದ್ದಿಸಿಕೊಂಡವನಿಗೆ ಅದೇ ದೊಡ್ಡ ಸಂಪತ್ತು 
ಮಧ್ಯೆ ಮಾತಾಡುವರಿಗೆ ಹೇಳುವರು, ಅವರಿಗೆ ಯಾಕೆ ಬೇಕಿತ್ತು 
ಕೆಲವರು ಮಾತಾಡಿದರಂತೂ ಉದುರುವುದು ಮುತ್ತು 
ಕೆಲವೊಮ್ಮೆ ಮಾತಾಡಿದರೆ ಬರುವುದು ಕುತ್ತು 
ಆದರಿಂದಲೇ ಮಾತಾಡು ನೀ ಎಚ್ಚೆತ್ತು
*******

Thursday, January 21, 2016

ಪ್ರಕಟಿಸದ ಟ್ವೀಟ್ಗಳು - ೧


(೧/೨) ನಮ್ಮ ದೇಶದ ಇಂದಿನ ಈ (ದುರ)ಸ್ಥಿತಿಗೆ , ನನ್ನ ಪ್ರಕಾರ ಅಂಗಾನೆಯರೇ ಪ್ರಮುಖ ಕಾರಣರು. ಯಾರು ಈ ಅಂಗಾನೆಯರು?
೧. ನಾಕಾರು ದೇಶದ ಕಾನೂನು ಪದ್ದತಿಗಳನ್ನು ಕದ್ದು ಚಿತ್ರಾನ್ನ ಮಾಡಿ ನಮ್ಮ ದೇಶಕ್ಕೆ ಅಳವಡಿಸಿದ, ಎಲ್ಲೋ ಮೂಲೆಯಲ್ಲಿದ್ದ ಜಾತಿಯನ್ನು ದೇಶದ ನಡುವಿಗೆ ತಂದು ಜಾತಿ ಆಧಾರದಲ್ಲಿ ಮೀಸಲಾತಿ ಪದ್ದತಿಗೆ ನಾಂದಿ ಹಾಕಿದ ಆ ಅ ಒಬ್ಬ.
೨. ಅಖಂಡ ಹಿಂದುಸ್ಥಾನ ವಿಭಜಕ, ಭಯೋತ್ಪಾದಕರ ವಾಸಸ್ಥಾನ ಪಾಕಿಸ್ತಾನದ ಜನಕ ಆ ಗಾ ಎರಡನೆಯವ. 
೩. ಅಧಿಕಾರ ದಾಹಿ, ಸ್ವಾರ್ಥಿ, ಸ್ವಜನ ಪಕ್ಷ-ಪಾತಿ, ಸ್ತ್ರೀ ಲೋಲ, ಜಾತಿ ಆಧಾರದಲ್ಲಿ ವೋಟ್ ಬ್ಯಾಂಕ್ ಕೀಳು ರಾಜಕೀಯ ಶುರು ಮಾಡಿದ ಶುದ್ದ ಅಯೋಗ್ಯ ಆ ನೆ ಮತ್ತೊಬ್ಬ.
ಇವರೆಲ್ಲರೂ ನಮ್ಮ ದೇಶದ ನಾಯಕರೆಂದೇ ನಾವು ಓದಿ ನಂಬಿ, ಇಂದಿಗೂ ಪ್ರತ್ಯೇಕ ದಿನಗಳಲ್ಲಿ ಅವರ ಜಯಂತಿ ಉತ್ಸವಗಳನ್ನು ಆಚರಿಸುತ್ತಾ ವ್ಯರ್ಥವಾಗಿ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಾ ಕಾಲಹರಣ ಮಾದುತ್ತಿದ್ದೆವೆ. ಎಂದಿಗೆ ನಾವು ಎಚ್ಚೆತ್ತುಕೊಳ್ಳುವುದು?
[ ನಮ್ಮ ಆರಾಧ್ಯ ದೈವ ರಾಮ ಕೃಷ್ಣರ ಬಗ್ಗೆ ಅವಹೇಳನ ಮಾತುಗಳನ್ನಾಡಿ ಜೆಡ್ ಶ್ರೇಣಿ ಭದ್ರತೆಯಲ್ಲಿ ಓಡಾಡುತ್ತ ಪೋಲಿಸ್ ಕಾವಲಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಿಕ್ಷೆ ಪಡೆದ ಭಗ್ 'ವಾನರ' ಎಂಬ ದೂರ್ತ ಏನು ಬೇಕಾದರೂ ಮಾತನಾಡಬಹುದು ಅದು ನನ್ನ ಅಭಿವ್ಯಕ್ತಿ ಸ್ವಾತಂತ್ರ ಅನ್ನಲ್ಲಿಲ್ಲವೇ? ಹಾಗೇನೆ ಇದುನೂ ನನ್ನ ಅನಿಸಿಕೆ. ]
  
(೨/೨) ರಾಮಲಿಂಗಾ ರೆಡ್ಡಿ ಹೇಳ್ತಾರೆ : "ಹಿಂಬದಿ ಸವಾರರಿಗೆ ಶಿರಸ್ತ್ರಾಣ ಕಡ್ಡಾಯ ಸುಪ್ರೀಂ ಕೋರ್ಟಿನ ಆದೇಶ. ಆದೇಶ ಪಾಲನೆ ಮಾಡ್ತಿದೀವಿ ಅಷ್ಟೇ". .. ರೆಡ್ಡಿ ಯವರೇ - ದಂಡ ಕಟ್ಟೋರು ಸುಪ್ರೀಂ ಕೋರ್ಟಿಗೆ ಹೋಗಿ ಕಟ್ತಾರೆ ಬಿಡಿ.. ನೀವ್ ಯಾಕೆ ವಸೂಲ್ ಮಾಡುಸ್ತಿರ ? ಮತ್ತೆ ಹೇಳಿ , ನಿಮ್ಗ್ ಎಷ್ಟ್ ಕಮಿಷನ್ ಸಿಗುತ್ತೆ ಒಂದ್ ಹೆಲ್ಮೆಟ್ ಮಾರಾಟ ಆದ್ರೆ ? ಥು .. ನಿಮ್ಮೊಕ್ಕಿಷ್ಟು .. ಬೆಂಗಳೂರಲ್ಲಿ ಇರುವುದು ರಸ್ತೇನ ಅಥವಾ ಗುಂಡಿಗಳ ಅನ್ನೋವಷ್ಟರ ಮಟ್ಟಿಗೆ ಇದೆ ಇಲ್ಲಿನ ರಸ್ತೆಗಳು.. ಅದರ ಬಗ್ಗೆ ಗಮನ ಕೊಡಿ.