ನಾನು ಪ್ರೀತಿಸಿದ ಹುಡುಗಿ
ತುಂಬಾ ಉದಾರಿಯಾಗಿದ್ದಳು
ಒಂದು ಕೇಳಿದರೆ
ಹತ್ತು ಕೊಡುತ್ತಿದ್ದಳು
ಉಂಗುರ ತೊಡಿಸಲು
ಬೆರಳು ಕೊಡು ಎಂದಾಗ
ಕೈ ಕೊಟ್ಟಳು
2
'ನನ್ನೊಲವಿನ ದೀಪಾ
ಆಗು ನನ್ನ ಬಾಳಿಗೆ
ನಂದಾದೀಪ"
ಎಂದೆಲ್ಲ ಪ್ರೇಮ ಪತ್ರ
ಬರೆದಿದ್ದ ಹುಡುಗ
ಕೇಳುತ್ತಿದ್ದಾನಂತೆ ಈಗ
'ಆ ಪತ್ರ ನಂದಾ ದೀಪ ?"
3
ನಿನ್ನೆ ಆಕೆ
ಇಂದು ಈಕೆ
ನಾಳೆ
ಇನ್ನೊಬ್ಬ ನಲ್ಲೆ
ಹೆಣ್ಣೆಂದರೆ
ಹುಡುಗರಿಗೆ
ಟೀವಿ ಚಾ-ನಲ್ಲೆ ?
4
ಸದಾ ಖುಷಿಯಾಗಲು
ಏನಿರಬೇಕು ?
ಬಾಳಿನಲ್ಲಿ ದಿನವೂ ಹನಿ
ಮೂನಿರಬೇಕು
ನನ್ನ ತೋಳಿನಲ್ಲಿ ಪ್ರಿಯೆ
ನೀನಿರಬೇಕು
ಬೇಸಿಗೆಯಾದ್ದರಿಂದ ಫ್ಯಾನಿರಬೇಕು
5
ಒಲವಿನ ಓಲೆ
ಬರೆಯತ್ತಾರೆ
ನೀನೇ ನನ್ನ ನಳಿನಾಕ್ಷಿ
ಉತ್ತರ ಬಾರದೆ
ಇದ್ದರೆ ಕೊನೆಗೆ
ಅನ್ನುತ್ತಾರೆ ಹುಳಿದ್ರಾಕ್ಷಿ !
No comments:
Post a Comment