ಮಾತು ಮಾತಲ್ಲೇ ನನ್ನಲ್ಲಿ ಒಂದಾಗುವ ಹುಡುಗಿ,
ಮಾತು ಇಷ್ಟ ಪಡದವನಿಗೆ ಅದರ ಚಟ ಹತ್ತಿಸಿದವಳು!
ಒಂದೊಮ್ಮೆ ನನ್ನ ಮೇಲೆ ಗೂಬೆ ಕೂರಿಸಿ, ನಗುತ್ತಾ,
ಒರೆ ಕಣ್ಣಿನಿಂದ ಕಣ್ಣು ಮಿಟುಕಿಸುವವಳು
ರಾತ್ರಿಯಲ್ಲಿ ಹೊರಗೆ ಹೋಗುವಾಗ ಧೈರ್ಯ
ಕೊಡುವಾಕೆ, ಲೈಟ್ ಆಫ್ ಮಾಡಲು ಹೆದರುವವಳು
ಒಮ್ಮೊಮ್ಮೆ ನನಗೂ ಅನಿಸುವುದುಂಟು ನನಗಾಗಿಯೇ
ಬಂದಿರುವಳೋ ಎಂದು, ಅವಳ ಹುಚ್ಚಾಟಗಳ
ನೋಡಿದರೆ ಎಂದಾದರೂ ಎದೆಯ ಬಡಿತವನ್ನು
ಅರ್ಥ ಮಾಡಿಕೊ, ಎಂದು ಮನಸ್ಸಲ್ಲೇ ನನ್ನ ನಿವೇದನೆ
ಆದರೆ ಅವಳಿಗಿಲ್ಲ ಅದರ ಗೊಡವೆ
ಮುಗಿಯದ ಹತ್ತೂರಿನ ಕಥೆಗಳಿಗೆ, ಇಲ್ಲ ಕೊನೆ
ಆದರೆ ಒಮ್ಮೊಮ್ಮೆ ಮಾತ್ರ ಸಮೀಪ ತಾನೂ
ಬಂದು ಕುಳಿತಿರುತ್ತಾಳೆ ಮೆಲ್ಲಗೆ, ಮೌನಿಯಾಗಿ
ಪ್ರೀತಿ ಅಂದರೆ ಇದೇ ಏನು ಎಂದು
ಬಿಟ್ಟ ಕಂಗಳಲ್ಲಿ ಲಜ್ಜೆಯ ತುಂಬಿಕೊಂಡು ಕೇಳಿದರೆ
ಎಂದಿನಂತೆ ನನ್ನ ಅದೇ ಉತ್ತರ, ನಾನರಿಯೆ
ಆದರೆ ಪ್ರೀತಿ ಇರುವೆಡೆ ನಾ ನಿನ್ನನ್ನೇ ಕಾಣುವೆ
++++++++++++++++++++++++++++++++++++++++++++++++++++++++++++++++++
ಡಿಸ್‌ಕ್ಲೇಮರ್: ಇದು ನನ್ನ ಸ್ವಂತ ಕವನ ಅಲ್ಲ. ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ಸಿಕ್ಕಿದ್ದು. ಚೆನ್ನಾಗಿ ಇತ್ತು, ಹಾಗಾಗಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ಸಂಬಂಧಪಟ್ಟವರ ಆಕ್ಷೇಪ ಇದ್ದಲ್ಲಿ ದಯಮಾಡಿ ತಿಳಿಸಿ, ಇದನ್ನು ಆಕ್ಷಣವೇ ಅಳಿಸುತ್ತೇನೆ.

No comments:
Post a Comment