Pages

Tuesday, November 1, 2011

ನನ್ನಮ್ಮ

ಮದುವೆ ಎಂದರೇನು ಎಂದು ತಿಳಿಯದ ವಯಸಲಿ ಗಂಡನ ಮನೆ ಸೇರಿ
ಅತ್ತೆ ಅಜ್ಜಿಯರ ಕಠಿಣ, ದ್ವಂದ್ವ, ವ್ಯಂಗ್ಯ ಮಾತುಗಳಿಗೆ ಕಿವಿಗೊಡದೆ
15-20 ಜನರ ತುಂಬಿದ ಮನೆಯಲ್ಲಿ ಎಲ್ಲರೊಂದಿಗೂ ಹೊಂದಿಕೊಂಡು
ಸಮಯಕ್ಕೆ ಸರಿಯಾಗಿ ಊಟ ತಿಂಡಿ ನಿದ್ದೆ ಇಲ್ಲದೆ
ಏಕಾದಶಿ ಚಾತುರ್ಮಾಸ್ಯ ವ್ರತಗಳನ್ನು ಎಂದೂ ತಪ್ಪಿಸದೆ
ನಾಕು ಮಕ್ಕಳ ತಾಯಿಯಾಗಿ, ತನ್ನ ಸುಖ ಸಂತೋಷಗಳನ್ನು ತ್ಯಾಗಮಾಡಿ
ಮುಗಿಯದೇ ಇರುವ ಮನೆ ಕೆಲಸಕ್ಕೆ, ಹಿರಿಯರ ಸೇವೆಗೆ ತನ್ನ ದೇಹವನ್ನು ಸವೆಸಿ
ನಡು ಐವತ್ತರಲ್ಲಿ ನಾಕಾರು ಖಾಯಿಲೆಗಳಿಂದ ನರಳುತ್ತಿರುವ
ಆ ಮಹಾತಾಯಿ ನನ್ನಮ್ಮ.

ನನ್ನವಳಾಗುವವಳು ಹೀಗಿರಬೇಕು


ನನಗಿಂತ ಹೆಚ್ಚು ಬುದ್ದಿವಂತೆಯಾಗಿರಬೇಕು
ನನ್ನ ಸೋಮಾರಿತನವನ್ನು ಹೋಗಲಾಡಿಸಬೇಕು
ನನ್ನ ಖರ್ಚು,ವೆಚ್ಚ,ಉಳಿಸುವಿಕೆಯನ್ನು ನೋಡಿಕೊಳ್ಳಬೇಕು
ನನ್ನ ಇಷ್ಟ-ಕಷ್ಟಗಳನ್ನು ಅರ್ಥಮಾಡಿಕೊಳ್ಳಬೇಕು
ಎಲ್ಲಕ್ಕಿಂತ ಮಿಗಿಲಾಗಿ
ನಾನು ಹ.ಸ ಎಂದರೆ ಅವಳು ವಾ.ಜೀ ಎನ್ನಬೇಕು

Thursday, October 27, 2011

ನಾವುಗಳು ನಮ್ಮ ಸಾಫ್ಟ್‌ವೇರ್ ಕಂಪನಿಗಳು

ನಾವುಗಳು ನಮ್ಮ ಸಾಫ್ಟ್‌ವೇರ್ ಕಂಪನಿಗಳು...
ಖಾಲಿ ಹೊಡೆಯುವ ಕ್ಯೂಬಿಕಲ್ಲುಗಳು,
ಸ್ಕ್ರ್ಯಾಪ್ ಆಗಿ ಹೋದ ಪ್ರಾಜೆಕ್ಟುಗಳು...

ಟ್ರೇನಿಂಗ್ ತೆಗೆದುಕೊಂಡು ಕೈ ಕೊಡುವ ಫ್ರೆಷರುಗಳು,
ಸೀನಿಯರುಗಳು ಅನುಭವಿಸುವ ಪ್ರೆಷರುಗಳು...

ಡೆಡ್ಲೈನುಗಳು, ನೈಟೌಟುಗಳು, ರಿಲೀಸುಗಳು,
ಪಿಜ್ಜಾ, ಬರ್ಗರ್, ಡಿನ್ನರ್ ಆರ್ಡರುಗಳು...

ಏನೂ ಕಿಸಿಯದೆ ಕಾಸುಗಿಟ್ಟಿಸುವ ವೇಸ್ಟು ಬಾಡಿಗಳು,
ಎಷ್ಟು ಕಿಸಿದರೂ ಕಿರೀಟ ಗಳಿಸದ ನತದೃಶ್ಟ ಗೂಬೆಗಳು...

ಕಾಸು ಗಿಟ್ಟಿಸದ ಡೆಮೋ ಪ್ರಾಜೆಕ್ಟುಗಳು,
ಕೈಗೆ ಸಿಗದೆ ಕನಸಾಗಿ ಉಳಿಯುವ ಪ್ರಪೋಸಲ್ಲುಗಳು...

ಕೈ ಹಿಡಿದು ನಡೆಸದ ಟೀಮ್ ಲೀಡರುಗಳು,
ತಲೆ ಸವರಿ ಕೈ ಕೊಡುವ ಮ್ಯಾನೇಜರುಗಳು...

ಕಾಕ್‌ಟೇಲ್ ಪಾರ್ಟಿಯಲ್ಲಿ ಕುಡಿದು ಕಕ್ಕುವ ಆಲ್ಕೋಹಾಲಿಕ್ಕುಗಳು,
ವೀಕೆಂಡನಲ್ಲೂ ಆಫೀಸಿನಲ್ಲೇ ಸಾಯುವ ವರ್ಕೋಹಾಲಿಕ್ಕುಗಳು...

Windowsಗಳು, Linuxಗಳು, Androidಗಳು,
ಕುಂಟುತ್ತಾ ನಡೆದ Symbianಗಳು...

MIPSಗಳು, DSPಗಳು, ARMಗಳು,
ಸಿಸ್ಕುಗಳನ್ನು ಮೀರಿ ಬೆಳೆಯುತ್ತಿರುವ ರಿಸ್ಕುಗಳು...

Nokiaಗಳು, Samsungಗಳು, TIಗಳು,
ಅಲ್ಲೇ ಸೇರಬೇಕೆಂದು ಬಡಿದುಕೊಳ್ಳುವ ಬಾಯಿಗಳು...

ಡಾಲರುಗಳು, ಪೌಂಡುಗಳು, ಯೂರೋಗಳು,
ಅದರಲ್ಲೇ ಗಳಿಸಬೇಕೆಂಬ ಹೀರೋಗಳು...

Out of the boxಥಿಂಕಿಂಗುಗಳು, Big pictureಗಳು, Positive attitudeಗಳು,
Self motivationಗಳು, open mindಗಳು, not-so kindಗಳು...

ನಾವುಗಳು ನಮ್ಮ ಸಾಫ್ಟ್‌ವೇರ್ ಕಂಪನಿಗಳು..

ದುಂಡಿರಾಜ್ ಅವರ ಪ್ರೇಮ ಹನಿಗಳು


1
ನಾನು ಪ್ರೀತಿಸಿದ ಹುಡುಗಿ
ತುಂಬಾ ಉದಾರಿಯಾಗಿದ್ದಳು
ಒಂದು ಕೇಳಿದರೆ
ಹತ್ತು ಕೊಡುತ್ತಿದ್ದಳು
ಉಂಗುರ ತೊಡಿಸಲು
ಬೆರಳು ಕೊಡು ಎಂದಾಗ
ಕೈ ಕೊಟ್ಟಳು

2
'ನನ್ನೊಲವಿನ ದೀಪಾ
ಆಗು ನನ್ನ ಬಾಳಿಗೆ
ನಂದಾದೀಪ"
ಎಂದೆಲ್ಲ ಪ್ರೇಮ ಪತ್ರ
ಬರೆದಿದ್ದ ಹುಡುಗ
ಕೇಳುತ್ತಿದ್ದಾನಂತೆ ಈಗ
'ಆ ಪತ್ರ ನಂದಾ ದೀಪ ?"

3
ನಿನ್ನೆ ಆಕೆ
ಇಂದು ಈಕೆ
ನಾಳೆ
ಇನ್ನೊಬ್ಬ ನಲ್ಲೆ
ಹೆಣ್ಣೆಂದರೆ
ಹುಡುಗರಿಗೆ
ಟೀವಿ ಚಾ-ನಲ್ಲೆ ?

4
ಸದಾ ಖುಷಿಯಾಗಲು
ಏನಿರಬೇಕು ?
ಬಾಳಿನಲ್ಲಿ ದಿನವೂ ಹನಿ
ಮೂನಿರಬೇಕು
ನನ್ನ ತೋಳಿನಲ್ಲಿ ಪ್ರಿಯೆ
ನೀನಿರಬೇಕು
ಬೇಸಿಗೆಯಾದ್ದರಿಂದ ಫ್ಯಾನಿರಬೇಕು

5
ಒಲವಿನ ಓಲೆ
ಬರೆಯತ್ತಾರೆ
ನೀನೇ ನನ್ನ ನಳಿನಾಕ್ಷಿ
ಉತ್ತರ ಬಾರದೆ
ಇದ್ದರೆ ಕೊನೆಗೆ
ಅನ್ನುತ್ತಾರೆ ಹುಳಿದ್ರಾಕ್ಷಿ !

ನೋಡಿಯೂ ನೋಡದೆ ಮೋಡಿಯ ಮಾಡಿದೆ

ಕಣ್ಣಲ್ಲೆ ನೀ ಏಕೆ ಕರೆದೆ
ಕನಸಲ್ಲಿ ನಿನ ಬಿಂಬ ಕೊರೆದೆ
ಮನಸಲ್ಲಿ ಹೊಸ ಮಂಕು ಸುರಿದೆ
ತಲೆಗೆಲ್ಲ ಸವಿ ಮತ್ತು ಏರಿದೆ

ನೋಡಿಯೂ ನೋಡದೆ ಮೋಡಿಯ ಮಾಡಿದೆ
ಅನವರತ ನನ್ನನೇಕೆ ಕಾಡಿದೆ
ನಿನಗೇನು ನಾ ಕೇಡು ಬಗೆದೆ
ಬಡಪಾಯಿಯ ತ್ರಿಶಂಕು ಮಾಡಿದೆ

ಗಗನಕೂ ಭುವಿಗೂ ಜೋಕಾಲಿ ಆಡಿಸಿದೆ
ನನಗೆ ನಾನೇ ನಗುವ ಹುಚ್ಚು ಮೂಡಿಸಿದೆ
ಜನ ಜಾತ್ರೆಯಲೂ ಏಕಾಂಗಿಯಾಗಿಸಿದೆ
ನೋವುನಲಿವಿನ ಭಾವಸಾಗರದಿ ಚಕ್ಷು ನೆನೆಸಿದೆ

ಸಾಕಿನ್ನು ಸೂರ್ಯಚಂದ್ರರ ಕಣ್ಣಾಮುಚ್ಚಾಲೆ
ಕಳುಹಿಸು ಅಪೂರ್ವ ಮಿಲನದ ಕರೆಯೋಲೆ
ಈ ಪ್ರೇಮ ನೋಡಿ ಜಗವೆಲ್ಲ ನಾಚಲಿ
ಒಂದು ಕ್ಷಣವಾದರೂ ಈ ಬಡಪಾಯಿ ಬದುಕಲಿ
+++++++++++++++++++++++++++++++++++++++++++++++++++++++++++++++++++++
ಡಿಸ್‌ಕ್ಲೇಮರ್: ಇದು ನನ್ನ ಸ್ವಂತ ಕವನ ಅಲ್ಲ. ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ಸಿಕ್ಕಿದ್ದು. ಚೆನ್ನಾಗಿ ಇತ್ತು, ಹಾಗಾಗಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ಸಂಬಂಧಪಟ್ಟವರ ಆಕ್ಷೇಪ ಇದ್ದಲ್ಲಿ ದಯಮಾಡಿ ತಿಳಿಸಿ, ಇದನ್ನು ಆಕ್ಷಣವೇ ಅಳಿಸುತ್ತೇನೆ.

Tuesday, October 25, 2011

ವಕ್ರೋಕ್ತಿ

೧. ಮದುವೆ ಮನೆಯಲ್ಲಿ ಮತ್ತು ಕಾಲೇಜ್ ಕ್ಯಾಂಟೀನ್ ನಲ್ಲಿ ಹುಡುಗಿಯರ ಮುಂದೆ ಊಟಕ್ಕೆ ಕುಳಿತುಕೊಳ್ಳಬಾರದು. ಆ ಕಡೆ ಊಟ ಮಾಡಲೂ ಆಗೋಲ್ಲ. ಈ ಕಡೆ ಸೌಂದರ್ಯ ಸವಿಯಲೂ ಆಗಲ್ಲ.
೨. ಫೇಸ್ ಬುಕ್ ಅಂದರೆ ಹುಡುಗಿಯರಂತೆ. ನೀವು ಎಲ್ಲವನ್ನು ಅರ್ಥಮಾಡಿಕೊಂಡಿರಿ ಎಂದುಕೊಂಡುವಷ್ಟರಲ್ಲಿ ಮತ್ತೆ ಬದಲಾವಣೆ ಆಗಿರುತ್ತದೆ.

ಕೃಪೆ - ಕನ್ನಡಪ್ರಭ

Thursday, October 20, 2011

ನಮ್ಮ ಮೆಟ್ರೋ

ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಬೆಂಗಳೂರೇ ಮುಂದು
ಆದರೆ ಟ್ರ್ಯಾಫಿಕ್ ಮ್ಯಾನೇಜ್ ಮೆಂಟ್ ಲಿ ಬಹಳ ಹಿಂದು
ಬೆಂಗಳೂರಿನ ಟ್ರ್ಯಾಫಿಕ್ ಸಮಸ್ಯೆಗೆ ಪರಿಹಾರ ಎಂದು?
ಎಂದು ಗೊಣಗುತ್ತಿದ್ದವರಿಗೆ ಸಿಕ್ಕಿದೆಯಾ ಉತ್ತರ ಇಂದು?
ಹೊರಡಲಿದೆ ಮೆಚ್ಚಿನ " ನಮ್ಮ ಮೆಟ್ರೋ " ಇಂದು
ಉದ್ಘಾಟಿಸಲಿದ್ದಾರೆ ಕಮಲ್‌ನಾಥ್ ದೆಹಲಿಯಿಂದ ಬಂದು
ಶಂಕರ್ ನಾಗ್ ಕನಸು ಕಂಡಿದ್ದರು ಅಂದು
ಕಟ್ಟಿದ್ದಾರೆ ಮೆಟ್ರೋ ಅನೇಕ ಮರಗಳ ಕೊಂದು
ಮಾಡಿದ್ದಾರೆ ತುಂಬಾ ವೆಚ್ಚ ದುಂದು
ಈಗಾಗಿರುವುದು ಬರೀ ರೀಚ್-೧ (ಒಂದು)
ತಲುಪಬೇಕಾದರೆ ಇಡೀ ನಗರ, ಸಾಗಬೇಕಿದೆ ಕೆಲಸ ಇನ್ಮುಂದೂ

Tuesday, October 18, 2011

ವಿಷಯವೇಕೆ ಕವನಕೆ

ವಿಷಯವೇಕೆ ಕವನಕೆ
ಮನದ ಭಾವ ರೂಪಕೆ

ಹೆಪ್ಪುಗಟ್ಟಿ ಕೂತ ನೆನಪು
ಚೆಲುವಿಗಿರುವ ಆ ಒನಪು
ಕಾಣುತಿರುವ ಹಗಲುಗನಸು
ಕಂಡ ಕನಸು ಆದ ನನಸು
ಆಗದಿರಲು ಬಂದ ಮುನಿಸು
ಪ್ರಕೃತಿಯ ಈ ಸೊಗಸು

ಎಲ್ಲ ಕುಳಿತು ಎದೆಯಲಿ
ಇಟ್ಟರೊಮ್ಮೆ ಕಚಗುಳಿ
ಕೊಟ್ಟಂತೆಯೆ ಆಹ್ವಾನ
ಬರೆಯಲೊಂದು ಕವನ

ಬಾಳ ಪುಸ್ತಕ

ನನ್ನ ಬಾಳ ಪುಸ್ತಕದಲ್ಲಿ ನಿನ್ನ ಅಥವಾ ನಿನ್ನಂತವರ ಆಗಮನವಾಗುತ್ತದೆಂದು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ.
ನೀನು ಸಿಕ್ಕಾಗ ನಿನ್ನ ಬಗ್ಗೆ ಯವುದೋ ಪುಟದ ಒಂದು ಮೂಲೆಯಲ್ಲಿ  ಒಂದು ಸಾಲು ಬರೆದೆ. ಆಮೇಲೆ ಅದನ್ನು ದಪ್ಪ ಅಕ್ಷರದಲ್ಲಿ ಬರೆದೆ. ಆಮೇಲೆ ನಿನಗಾಗಿ ಒಂದು ಪುಟವನ್ನು ಮೀಸಲಿರಿಸಿದೆ. ಆ ಪುಟದಲ್ಲಿ ಒಂದೊಂದು ಅಕ್ಷರವನ್ನೂ ಜಾಗರೂಕತೆಯಿಂದ, ಬಹಳ ಸುಂದರವಾಗಿ ಬರೆಯಲಾರಂಭಿಸಿದೆ. ಅದರಲ್ಲಿ ಆಗುವ ಚಿತ್ತು ಕಾಟುಗಳು, ನನ್ನ ಬಾಳ ತುಂಬ ನನ್ನನ್ನು ಅಪಹಾಸ್ಯ ಮಾಡಿ ನಗಬಾರದಲ್ಲ?
ನಿನಗೋಸ್ಕರ ಮೀಸಲಿರಿಸಿದ ಒಂದು ಪುಟ ಸಾಕಾಗಲೇ ಇಲ್ಲ, ಇನ್ನೊಂದರಲ್ಲಿ ಬರೆದೆ. ನಂತರ ಮತ್ತೊಂದು ಮಗದೊಂದು, ಈಗ ನೀನು ಆ ಪುಸ್ತಕದ ಅವಿಭಾಜ್ಯ ಅಂಗ. ಒಮ್ಮೆ ಯಾವುದೋ ಕ್ಷಣದಲ್ಲಿ ಆ ಪುಟಗಳನ್ನು ಕೀಳಬೇಕೆಂದು ಪ್ರಯತ್ನಿಸಿದೆ. ಆದರೆ ಕೀಳಲು ಮಾತ್ರ ಆಗಲಿಲ್ಲ. ಬದಲಾಗಿ ಇನ್ನೂ ಬರೆದೆ, ಈಗಲೂ ಬರೆಯತ್ತುಲೇ ಇದ್ದೇನೆ, ದಿನಾಲೂ, ಪ್ರತಿ ಕ್ಷಣ..

ಕಾಮಕಸ್ತ್ರೀ ಹಾಲು

ಪ್ರಾರ್ಥನೆಗೆ ನಿ೦ತವವರ ಸಾಲಿನ ನಡುವೆಗೆಲ್ಲೋ ಶುರುವಾದ ಗುಸುಗುಸು ಸುದ್ದಿ, ಪ್ರಾರ್ಥನೆ ಮುಗಿಸಿ ಕನ್ನಡ ಕ್ಲಾಸಿಗೆ ಹೋಗಿ ಕೂರುವದರೊಳಗಾಗಿ ಎಲ್ಲಾ 28 ಮ೦ದಿ ಹುಡುಗರ ಬಾಯಲ್ಲಿ ಸುದ್ದಿಯಾಗಿ ಹೋಗಿತ್ತು. ಸಾರಾ೦ಶ ಇಷ್ಟೇ, ಹೆಗಡೇರ ಹೋಟೆಲ್ ನಲ್ಲಿ ಕಾಮಕಸ್ತ್ರೀ ಹಾಲು ಸಿಗುತ್ತದೆಯ೦ತೆ. ಮೊದಲು ಯಾರ ಬಾಯಿ೦ದ ಹೊರಬಿತ್ತೋ ಗೊತ್ತಿಲ್ಲ, ಯಾರ ಕಿವಿಗೆ ನುಗ್ಗಿತೋ ಗೊತ್ತಿಲ್ಲ, ತೀರಾ ಇಪ್ಪತ್ತು ನಿಮಿಷದ ಅವಧಿಯಲ್ಲಿ ಅದು ಬ್ರೇಕಿ೦ಗ್ ನ್ಯೂಸ್ ಆಗಿತ್ತು. ಇದಾದಮೇಲೆ ಮಧ್ಯಾನ್ಹದ ಊಟದ ಬ್ರೇಕ್ ವರೆಗೂ ಎಲ್ಲರಿಗೂ ಅದೊ೦ದೇ ಸುದ್ದಿ. ಕ್ಲಾಸಲ್ಲಿ ಯಾರದರೂ ಬಹಳವಿಚಾರ ಮಾಡುವ ಪೋಸಿನಲ್ಲಿ ಕೂತು ಪಾಠ ಕೇಳುತ್ತಿದ್ದರೆ ಹಿ೦ದಿ೦ದ "ಕಾಮಕಸ್ತ್ರೀ ಹಾಲು ಹೇಗೆ ಕುಡಿಯಲಿ ಎ೦ದು ವಿಚಾರ ಮಾಡುತ್ತಿದ್ದಾನೆ" ಅನ್ನುವ ಡೈಲಾಗ್ ಗಳು ಬರತೊಡಗಿದವು. ಕೊನೆಯ ಪಿರಿಯಡ್ ನ ಮೇಸ್ಟ್ರು ಕ್ಲಾಸ್ ಐದು ನಿಮಿಷ ಮೊದಲೇ ಬಿಟ್ರು. ನಾವೆಲ್ಲಾ "ಮಾಸ್ತರು, ಹಾಲು ಖಾಲಿ ಆಗೋದ್ರಲ್ಲಿ ಬೇಗ ಹೋಗಿ ಕುಡಿಯಬೇಕು ಅ೦ತಾನೇ ಐದು ನಿಮಿಷ ಮೊದಲೇ ಬಿಟ್ರು" ಅ೦ದ್ಕೊ೦ಡು ಮಾತನಾಡಿಕೊ೦ಡೆವು. ಕೆಲವರಿಗೆ ಈ ಹೆಗಡೇರಿಗೆ ಎಲ್ಲಿ ಕಾಮಕಸ್ತ್ರೀ ಹಾಲು ಸಿಕ್ಕಿತು ಅನ್ನುವ ಬಹಳ ದೊಡ್ಡ ಅನುಮಾನ ಬ೦ತು. ಅದೇ ಅನುಮಾನಕ್ಕೆ ಮಾರಾಟ ಮಾಡುವಷ್ಟೇಲ್ಲಾ ಎಲ್ಲಿ ಸಿಕ್ಕಿತು? ತನಗೆ ಇಟ್ಟುಕೊಳ್ಳದೆ ಮಾರುತ್ತಿರುವದು ಯಾಕೆ? ಹೇಗೆ ತ೦ದಿರಬಹುದು? ಅ೦ತೆಲ್ಲ ಉಪಪ್ರಶ್ನೆ ಬ೦ತು. ನಮ್ಮ ಈ ಕಾಮಕಸ್ತ್ರೀ ಹಾಲು ಅನ್ನುವ ಶಬ್ದ ಪ್ರಯೋಗ ಕ್ಲಾಸಿನ ಹುಡುಗಿಯರ ಕಿವಿಗೂ ಬಿತ್ತು. ಮುಜುಗರವಾಗಿ ಅವರು ನಮ್ಮಕಡೆಗೆ ಸ್ವಲ್ಪ ಓರೆಯಾಗಿ ಬೆನ್ನುಹಾಕಿ ಕೂತು ಕೂತು ಮುಖ ಅಡ್ಡ ಮಾಡಿಕೊ೦ಡರು. ಒಟ್ಟಿನಲ್ಲಿ ಮಧ್ಯಾನ್ಹದ ಊಟದ ಬ್ರೇಕ್ ವರೆಗೂ ಕುರುಡರು ಆನೆಯನ್ನು ವಣಿ೯ಸಿದ ಕಥೆಯ೦ತೆ ನಾವು ನಮಗೆ ತೋಚಿದ್ದನ್ನೆಲ್ಲ ಕಾಮಕಸ್ತ್ರೀ ಹಾಲಿನ ವಿಷಯವಾಗಿ ಮಾತಾಡಿದ್ದೋ ಮಾತಾಡಿದ್ದು. ಬೇಗ೦ ಕೀ ಶಾದೀಮೆ ಅಬ್ದುಲ್ಲಾ ದೀವಾನಾ ಅನ್ನೋ ಮಾತಿನ ಹಾಗೆ ನಮಗೆ ಹೆಸರು ಕೇಳಿಯೆ ಥ್ರಿಲ್ಲೋಥ್ರಿಲ್ಲು. ಮಧ್ಯಾನ್ಹ ಯಾವಾಗ ಊಟಕ್ಕೆ ಬಿಟ್ರೋ, ಈಡೀ ಕ್ಲಾಸಿಗೆ ಕ್ಲಾಸೇ ಹೆಗಡೆರ ಹೋಟೇಲ್ ಮು೦ದೆ. ನಮ್ಮಲ್ಲೇ ಒಬ್ಬವಮು೦ದೆ ಬ೦ದು ಅದೆ೦ತದು ಅ೦ತ ನೋಡೇಬಿಡುವ ಆತುರದಲ್ಲಿ "ಹೆಗಡೇರೆ ಒ೦ದು ಕಾಮಕಸ್ತ್ರೀ ಹಾಲು ಕೊಡಿ" ಅ೦ದ. ಅವನ ಈ ಮಾತಿಗೆ ಬಾಯಿತು೦ಬ ತು೦ಬಿಕೊಡ ಎಲೆಯಡಿಕೆ ರಸ ಎದುರಿನವರಿಗೆ ಪ್ರೋಕ್ಷಣ್ಯವಾಗುವದನ್ನು ತಪ್ಪಿಸಲು ಬಿರಬಿರನೆ ಹೊರಗೋಡಿ ಕ್ಯಾಕರಿಸಿ ಉಗಿದು ಬ೦ದು "ಮ೦ಗ್ಯಾ ವೈತ೦ದು, ಅದು ಕಾಮಕಸ್ತ್ರೀ ಹಾಲು ಅಲ್ಲಾ, ಕಾಮಕಸ್ತೂರಿ* ಹಾಲು. ಮೊದಲು ಹೆಸರು ಹೇಳದು ಕಲಿ ಆಮೇಲೆ ಹಾಲು ಕುಡಿ ಅ೦ದ್ರು". ನಿರಾಶೆಯ ಪರಮಾವಧಿಯಲ್ಲಿ ನಾವಿದ್ದರೆ ಮುಖ ರಿನ್ ಹಾಕಿ ಮೂರುದಿನ ನೆನೆಸಿಟ್ಟು ತೊಳೆದ ಬಟ್ಟೆಯ೦ತೆ ಬಿಳಿಬಿಳಿ ಬಿಳಿಚಿಕೊ೦ಡಿತ್ತು.

++++++++++++++++++++++++++++++++++++++++++++++++++++++++++++++++++++
Disclaimer: ಇದು ನನ್ನ ಸ್ವಂತ ಕಥೆ ಅಲ್ಲ. ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ಸಿಕ್ಕಿದ್ದು. ಚೆನ್ನಾಗಿ ಇತ್ತು, ಹಾಗಾಗಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ಸಂಬಂಧಪಟ್ಟವರ ಆಕ್ಷೇಪ ಇದ್ದಲ್ಲಿ ದಯಮಾಡಿ ತಿಳಿಸಿ, ಇದನ್ನು ಆಕ್ಷಣವೇ ಅಳಿಸುತ್ತೇನೆ.

ನನ್ನ ಹುಡುಗಿ

ಮಾತು ಮಾತಲ್ಲೇ ನನ್ನಲ್ಲಿ ಒಂದಾಗುವ ಹುಡುಗಿ,
ಮಾತು ಇಷ್ಟ ಪಡದವನಿಗೆ ಅದರ ಚಟ ಹತ್ತಿಸಿದವಳು!
ಒಂದೊಮ್ಮೆ ನನ್ನ ಮೇಲೆ ಗೂಬೆ ಕೂರಿಸಿ, ನಗುತ್ತಾ,
ಒರೆ ಕಣ್ಣಿನಿಂದ ಕಣ್ಣು ಮಿಟುಕಿಸುವವಳು
ರಾತ್ರಿಯಲ್ಲಿ ಹೊರಗೆ ಹೋಗುವಾಗ ಧೈರ್ಯ
ಕೊಡುವಾಕೆ, ಲೈಟ್ ಆಫ್ ಮಾಡಲು ಹೆದರುವವಳು

ಒಮ್ಮೊಮ್ಮೆ ನನಗೂ ಅನಿಸುವುದುಂಟು ನನಗಾಗಿಯೇ
ಬಂದಿರುವಳೋ ಎಂದು, ಅವಳ ಹುಚ್ಚಾಟಗಳ
ನೋಡಿದರೆ ಎಂದಾದರೂ ಎದೆಯ ಬಡಿತವನ್ನು
ಅರ್ಥ ಮಾಡಿಕೊ, ಎಂದು ಮನಸ್ಸಲ್ಲೇ ನನ್ನ ನಿವೇದನೆ
ಆದರೆ ಅವಳಿಗಿಲ್ಲ ಅದರ ಗೊಡವೆ
ಮುಗಿಯದ ಹತ್ತೂರಿನ ಕಥೆಗಳಿಗೆ, ಇಲ್ಲ ಕೊನೆ

ಆದರೆ ಒಮ್ಮೊಮ್ಮೆ ಮಾತ್ರ ಸಮೀಪ ತಾನೂ
ಬಂದು ಕುಳಿತಿರುತ್ತಾಳೆ ಮೆಲ್ಲಗೆ, ಮೌನಿಯಾಗಿ
ಪ್ರೀತಿ ಅಂದರೆ ಇದೇ ಏನು ಎಂದು
ಬಿಟ್ಟ ಕಂಗಳಲ್ಲಿ ಲಜ್ಜೆಯ ತುಂಬಿಕೊಂಡು ಕೇಳಿದರೆ
ಎಂದಿನಂತೆ ನನ್ನ ಅದೇ ಉತ್ತರ, ನಾನರಿಯೆ
ಆದರೆ ಪ್ರೀತಿ ಇರುವೆಡೆ ನಾ ನಿನ್ನನ್ನೇ ಕಾಣುವೆ

++++++++++++++++++++++++++++++++++++++++++++++++++++++++++++++++++
ಡಿಸ್‌ಕ್ಲೇಮರ್: ಇದು ನನ್ನ ಸ್ವಂತ ಕವನ ಅಲ್ಲ. ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ಸಿಕ್ಕಿದ್ದು. ಚೆನ್ನಾಗಿ ಇತ್ತು, ಹಾಗಾಗಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ಸಂಬಂಧಪಟ್ಟವರ ಆಕ್ಷೇಪ ಇದ್ದಲ್ಲಿ ದಯಮಾಡಿ ತಿಳಿಸಿ, ಇದನ್ನು ಆಕ್ಷಣವೇ ಅಳಿಸುತ್ತೇನೆ.

ಜೋಕ್

ಸೀರೆ Advertisement Board : ಹೆಂಡತಿಯು ಬನಾರಸ್ಸ್ ಸೀರೆ - ರೂ. 10/-, ನೈಲಾನ್ ಸೀರೆ - ರೂ. 8/-, ಕಾಟನ್ ಸೀರೆ - ರೂ. 5/- ಎನ್ನುವ Advertisement Board ನೋಡಿದಳು.... ಹೆಂಡತಿ : ರೀ.... ಐನೂರು ರೂಪಾಯಿ ಕೊಡಿ, ಒಂದು ಐವತ್ತು ಸೀರೆ ಕೊಳ್ಳುತ್ತೇನೆ. ಗಂಡ : ಲೇ.... 'ಇಸ್ತ್ರೀ' ಅಂಗಡಿ ಕಣೇ ಅದು !!!

ಮನಸ್ಸಿನ ಪ್ರಶ್ನೆ

1. ಬಯಕೆ ತೋಟವ ಕಟ್ಟಿ ಆಸೆ ಬಲೆಗೆ ಬಿದ್ದು ದುಃಖದ ಕಡಲಲ್ಲೇ ಸಿಲುಕಿ ಹೋಗುವ ಜೀವಕೆ ಪ್ರೀತಿಯ ಸೆರೆ ಯಾಕೆ ?
2. ಶಿಶುವಾಗಿ ಜನಿಸಿ ಶವವಾಗಿ ಚಿತೆಯ ಕಾವಲ್ಲಿ ಬೇಯುವ ಈ ದೇಹಕೆ ಪ್ರೇಮದ ತಾಪ ಬೇಕೆ ??

ಜೀವ ಹೋಗುವ ಈ 'ದೇಹ ' ನಾಶವಾಗುವ ಈ 'ಸಂಪತ್ತು' ಮಾಸಿ ಹೋಗುವಾ ಈ 'ಸೌಂದರ್ಯ ' ಮೂರು ದಿನಗಳ ಈ ಬಾಳಿನ ಮಧ್ಯೆ ನೋಡಿದಾಗ ಉಳಿಯುವುದೊಂದೇ 'ಸ್ನೇಹ'

ಭಾವನೆಗಳು ಅನ್ನೋದು ನದಿಯ ಹಾಗೆ.... ಕೊನೆ ಇಲ್ಲದ ಪಯಣ..... ಯಾವುದೂ ಜತೆ ಉಳಿಯಲ್ಲ..... ಉಳಿಯೋದು ಒಂದೇ ಹೃದಯ ತಂದಿಟ್ಟ ನೆನಪು ಮಾತ್ರ !

Monday, October 17, 2011

ಬ್ಲಾ೦ಡ್ ಗರ್ಲ್ ಡೈರಿ

ಎಲ್ಲೋ ಸಿಕ್ಕಿದ ಬ್ಲಾ೦ಡ್ ಗರ್ಲ್ ಒಬ್ಬಳ ಡೈರಿಯ ಕೆಲ ಪುಟಗಳು..

೨೨/೪/೨೦೦೯: ಇದು ನನ್ನ ಮೊದಲ ಕ್ರೂಸ್ ಪ್ರಯಾಣ, ಬೆಳಿಗ್ಗೆ ನನ್ನ ಲಗೇಜ್ ಮತ್ತು ಮೇಕಪ್ ಕಿಟ್ ನೊ೦ದಿಗೆ ಪ್ರಯಾಣ ಆರ೦ಭಿಸಿದೆ. ಸೆಕ್ಸಿಯಾಗಿ ಕಾಣುವ ಎಲ್ಲಾ ಉಡುಪು ತೆಗೆದುಕೊ0ಡಿದ್ದೆ. ತು೦ಬಾ ಎಕ್ಸೈಟ್ಮೆ೦ಟ್ ಇತ್ತು.

೨೩/೪/೨೦೦೯: ತು೦ಬಾ ಸು೦ದರ ಸಮುದ್ರ. ಡಾಲ್ಫಿನ್ ಮತ್ತು ವೇಲ್ ಗಳನ್ನು ನೋಡಿದೆ. ನಮ್ಮ ಕ್ರೂಸ್ ನ ಕ್ಯಾಪ್ಟನ್ ಸಿಕ್ಕಿದ್ದ. ತು೦ಬಾ ಒಳ್ಳೆಯವನ೦ತೆ ಅನ್ನಿಸಿದ, ಮೊದಲ ಭೇಟಿಯಲ್ಲಿ.

೨೪/೪/೨೦೦೯: ಗಾಲ್ಫ್ ಆಡಿದೆ. ನಾಲ್ಕಾರು ಬಾಲ್ ಸಮುದ್ರಕ್ಕೆ ಹೊಡೆದಮೇಲೆ, ಈಜುಕೊಳಕ್ಕೆ ಬ೦ದು ಈಜಾಡಿ ಉಲ್ಲಸಿತನಾದೆ. ಕ್ಯಾಪ್ಟನ್ ರಾತ್ರಿಯ ಊಟಕ್ಕೆ ಆಮ೦ತ್ರಿಸಿದ. ಅವನೊ೦ದಿಗೆ ಘ೦ಟೆಗಳು ನಿಮಿಷದ೦ತೆ ಸರಿದು ಹೋದವು. ತು೦ಬಾ ಆಕರ್ಷಕ ವ್ಯಕ್ತಿತ್ವ ಅವನದು.

೨೫/೪/೨೦೦೯: ಕ್ರೂಸ್ ನ ಕ್ಯಾಸಿನೋದಲ್ಲಿ ಇವತ್ತು ಎ೦ಟುನೂರು ಡಾಲರ್ ಗೆದ್ದೆ. ಕ್ಯಾಪ್ಟನ್ ಅವನ ಕ್ಯಾಬಿನ್ ನಲ್ಲಿ ರಾತ್ರಿಯ ಊಟಕ್ಕೆ ಆಮ೦ತ್ರಿಸಿದ. ಅದೊ೦ದು ವೈಭವಯುತವಾದ ಊಟ. ಪಾಸ್ತಾ ಮತ್ತು ಶಾ೦ಪೇನ್ ನೊ೦ದಿ೦ದಿಗೆ ನನ್ನ ಊಟ ಮುಗಿಸಿದೆ. ರಾತ್ರಿ ಅವನ ಕ್ಯಾಬಿನ್ ನಲ್ಲೇ ಮಲಗುವ೦ತೆ ಕೇಳಿಕೊ೦ಡ, ಪತಿಗೆ ಮೋಸಮಾಡಲಾರೆ ಎ೦ದು ಅವನಿಗೆ ಹೇಳಿಬ೦ದೆ.

೨೬/೪/೨೦೦೯: ಬಿಸಿಲಿನ ಝಳ ಜೋರಾಗಿದ್ದರಿ೦ದ ಪೂಲ್ ನಲ್ಲಿ ಜಾಸ್ತಿ ಹೊತ್ತು ಇರಲಾಗಲಿಲ್ಲ. ಬಾರ್ ಗೆ ಬ೦ದು ಶಾ೦ಪೇನ್ ಹೀರತೊಡಗಿದೆ. ಕ್ಯಾಪ್ಟನ್ ನನ್ನ ನೋಡಿದ. ನನ್ನೊ೦ದಿಗೆ ಒ೦ದಿಷ್ಟು ಲಾರ್ಜ್ ಡ್ರಿ೦ಕ್ಸ್ ಹೀರಿದ ನ೦ತರ ಮತ್ತೆ ರಾತ್ರಿ ತನ್ನ ಕ್ಯಾಬಿನ್ಗೆ ಮಲಗಲು ಬರಲು ಆಮಂತ್ರಿಸಿದ . ನಾನು ನಿರಾಕರಿಸಿದೆ. ನೀನು ಬರದಿದ್ದರೆ ಕ್ರೂಸ್ ಮುಳುಗಿಸಿಬಿಡುತ್ತೇನೆ ಅ೦ದ. ನಾನು ತು೦ಬಾ ಆಘಾತಗೊ೦ಡಿದ್ದೆ.

೨೭/೪/೨೦೦೯:
ಇ೦ದು ನಾನು ಸಾವಿರದ ಆರುನೂರು ಜನರ ಜೀವ ಉಳಿಸಿದೆ.
ಎರಡು ಬಾರಿ.


++++++++++++++++++++++++++++++++++++++++++++++++++++++++++++++++++
Disclaimer: ಇದು ನನ್ನ ಸ್ವಂತ ಕಥೆ ಅಲ್ಲ. ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ಸಿಕ್ಕಿದ್ದು. ಚೆನ್ನಾಗಿ ಇತ್ತು, ಹಾಗಾಗಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ಸಂಬಂಧಪಟ್ಟವರ ಆಕ್ಷೇಪ ಇದ್ದಲ್ಲಿ ದಯಮಾಡಿ ತಿಳಿಸಿ, ಇದನ್ನು ಆಕ್ಷಣವೇ ಅಳಿಸುತ್ತೇನೆ.

ಕಪ್ಪೆ ಕಥೆ

ಅಮೆರಿಕದ ಯಾವುದೋ ನಗರ. ಸಂಜೆ ಹೊತ್ತು. ಬಿಳಿಗೂದಲ ಸುಂದರಿಯೊಬ್ಬಳು ಸುಮ್ಮನೇ ನಡೆದು ಹೋಗುತ್ತಿರುವಾಗ ಆಕರ್ಷಕ ಜಾಹಿರಾತೊಂದು ಕಣ್ಣಿಗೆ ಬಿತ್ತು.

"ಸೆಕ್ಸ್ ಕಪ್ಪೆಗಳು"- ಕೇವಲ ಇಪ್ಪತ್ತು ಡಾಲರ್
ಮನೀ ಬ್ಯಾಕ್ ಗ್ಯಾರೆಂಟಿ ಇದೆ.
ಸಲಹೆಗಳನ್ನು ಓದಿಕೊಳ್ಳಿ

ಯಾಕೋ ಹೊಸ ತರಹದ ಸಾಹಸಕ್ಕೆ ಮನ ಮಾಡಿದ ಹುಡುಗಿ, ಇಪ್ಪತ್ತು ಡಾಲರ್ ಗಳನ್ನು ಕೊಟ್ಟು, ಮನೆಗೆ ಬಂದಳು. ಬಂದವಳೇ, ಕಪ್ಪೆ ಇರೋ ಬಾಕ್ಸಿನ ಮೇಲಿದ್ದ ವಿವರಣೆಗಳನ್ನು ಓದಿಕೊಂಡಳು.

೧. ಚೆನ್ನಾಗಿ ಸ್ನಾನ ಮಾಡಿ
೨.ಒಳ್ಳೇ ಘಮ ಘಮಿಸೋ ಸುಗಂಧ ಹಾಕಿಕೊಳ್ಳಿ
೩. ಒಳ್ಳೇ ಆಕರ್ಷಕ ಬಟ್ಟೆ ತೊಟ್ಟುಕೊಳ್ಳಿ.
೪. ಕಪ್ಪೆ ಜೊತೆ ಮಂಚಕ್ಕೆ ತೆರಳಿ.

ಉದ್ವೇಗದಿಂದಲೇ ಅಲ್ಲಿದ್ದಂತೆಯೇ ಮಾಡಿದ ಸುಂದರಿ, ಕಪ್ಪೆಯೊಡನೆ ಮಂಚಕ್ಕೆ ತೆರಳಿದಳು. ನಿಮಿಷ ಕಳೆದರೂ ಏನೂ ಆಗಲಿಲ್ಲ. ಐದು ನಿಮಿಷ ಕಳೆದರೂ ಏನೂ ಆಗಲಿಲ್ಲ. ಹತ್ತಾದರೂ.ತಲೆ ಕೆಟ್ಟ ಹುಡುಗಿ, ಮತ್ತೊಮ್ಮೆ ಕಪ್ಪೆ ತಂದ ಬಾಕ್ಸು ನೋಡಿದಳು. ಅಡಿ ಭಾಗದಲ್ಲೊಂದು ಒಕ್ಕಣೆ ಇತ್ತು.

ಏನಾದರೂ ಸಮಸ್ಯೆಗಳಿದ್ದರೆ ಅಥವಾ ಪ್ರಶ್ನೆಗಳಿದ್ದರೆ ದಯವಿಟ್ಟು ನೀವು ಕಪ್ಪೆ ಕೊಂಡ ಶಾಪ್ ಗೆ ಫೋನ್ ಮಾಡಿ, ನಂ...

ಪಟಪಟನೆ ನಂಬರೊತ್ತಿದ ಆಕೆ ಅತ್ತಕಡೆಯಿಂದ ಧ್ವನಿ ಕೇಳಿದೊಡನೇ ತನ್ನ ಸಮಸ್ಯೆಯನ್ನ ಬಡಬಡ ಅಂತ ಹೇಳಿದಳು. ಆ ಕಡೆಯ ವ್ಯಕ್ತಿ ಮೆತ್ತಗೆ - ಹೌದಾ, ಇಲ್ಲಿ ಇನ್ನೊಂದು ನಿಮ್ಮದೇ ತರದ ಸಮಸ್ಯೆ ಅಟೆಂಡ್ ಮಾಡ್ತಾ ಇದೀನಿ ಮೇಡಂ, ಅಡ್ರೆಸ್ ಹೇಳಿ ಅಂದವನೇ, ಕಾಲು ಗಂಟೆಲಿ ಬರುವುದಾಗಿ ತಿಳಿಸಿದ.

ಸರಿಯಾಗಿ ೧೫ ನಿಮಿಷಗಳ ನಂತರ ಮನೆಯ ಬೆಲ್ ರಿಂಗಾಯಿತು. ಸಮಸ್ಯೆಗೆ ಅರ್ಧ ಪರಿಹಾರ ಸಿಕ್ಕ ಖುಷಿಯಲ್ಲಿ ಬೆಡಗಿ ಬಾಗಿಲು ತೆರೆದಳು. ಮತ್ತೊಮ್ಮೆ ಕೂತು ಅಂಗಡಿಯಾತ ತಾಳ್ಮೆಯಿಂದ ಇವಳ ಕಥೆಯೆಲ್ಲ ಕೇಳಿದ. ಬನ್ನಿ ಮೇಡಮ್, ಬೆಡ್ ರೂಮ್ ಗೆ ಹೋಗೋಣ ಅಂದವನೇ, ಕಪ್ಪೆ ಕೈಯಲ್ಲಿ ಹಿಡಿದುಕೊಂಡ.

ಆಕೆಯನ್ನ ಮಂಚಕ್ಕೆ ಹೋಗಲು ಹೇಳಿ, ಅತ್ಯಂತ ಕಾಳಜಿಯ ಧ್ವನಿಯಲ್ಲಿ ಕಪ್ಪೆಯನ್ನು ನೋಡುತ್ತ ಅಂದ-

"ನೋಡು ಮರೀ, ಇದೊಂದೇ ಬಾರಿ -ಕೊನೇ ಸಲ ನಾನು ನಿನಗೆ ಏನು ಮಾಡಬೇಕು ಅಂತ ಹೇಳಿ ಕೊಡ್ತಿರೋದು. ಸರಿಯಾಗಿ ನೋಡ್ಕೋ..ಪ್ಲೀಸ್, ಮರಿಬೇಡ"

++++++++++++++++++++++++++++++++++++++++++++++++++++++++++++++++++++++++
Disclaimer: ಇದು ನನ್ನ ಸ್ವಂತ ಕಥೆ ಅಲ್ಲ. ಅಂತರ್ಜಾಲದಲ್ಲಿ ಬ್ರೌಸ್ ಮಾಡುವಾಗ ಸಿಕ್ಕಿದ್ದು. ಚೆನ್ನಾಗಿ ಇತ್ತು, ಹಾಗಾಗಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ಸಂಬಂಧಪಟ್ಟವರ ಆಕ್ಷೇಪ ಇದ್ದಲ್ಲಿ ದಯಮಾಡಿ ತಿಳಿಸಿ, ಇದನ್ನು ಆಕ್ಷಣವೇ ಅಳಿಸುತ್ತೇನೆ.

Thursday, October 13, 2011

ಜೀವನ

ದುಡಿಯುತ್ತಿದ್ದೆ ನಾನು ಕಷ್ಟಪಟ್ಟು
ಮನೆ-ಮಠ ಎಲ್ಲವನ್ನು ಬಿಟ್ಟು
ಸೇದುತ್ತಿರಲ್ಲಿಲ್ಲ ಬೀಡಿ-ಸಿಗರೇಟ್ ಸುಟ್ಟು
ಕುಡಿಯುತ್ತಿರಲ್ಲಿಲ್ಲ ಬೇರೇನು ಟೀ-ಕಾಫೀ ಬಿಟ್ಟು
ಆಗಿತ್ತು ತಲೆ ತುಂಬಾ ಬರಿ ಹೊಟ್ಟು
ಹಾಕ್ತಿದ್ದೆ ಶಾಂಪೂ ಒಂದು ದಿನ ಬಿಟ್ಟು
ನಡುಸ್ತಿದ್ದೆ ಜೀವ್ನಾ ದೆವ್ರಿಗೆ ಐಟಿ ಕೊಟ್ಟು
ಅಂದ್ಕೊಂಡಿದ್ದೆ ಇದೇ ನನ್ ಯಶಸ್ಸಿನ ಗುಟ್ಟು
ಅದೊಂದಿನ ಸಿಕ್ಕಳು ಅವಳು ಗ್ರಹಚಾರ ಕೆಟ್ಟು
ನೋಡಿದೆ ಅವಳನು ಕಣ್ಣಲ್ಲಿ ಕಣ್ಣಿಟ್ಟು
ಮದುವೆ ಆಗಿ ಮಾಡ್ಕೊಂಡೆ ಯಡವಟ್ಟು
ಶುರುವಾಯಿತು ಆಗಲು ಖರ್ಚು ದುಪ್ಪಟ್ಟು
ಸಾಗಿತು ಸಂಸಾರ ಮುರಿಯದೆ ಒಗ್ಗಟ್ಟು
ಮುಂದೊಂದು ದಿನ ಅವಳಾಗಲ್ಲಿಲ್ಲ ಮುಟ್ಟು
ಕಾರಣ ಹೇಳ್ಬೇಕಿಲ್ಲ ನಾ ಬಾಯ್ಬಿಟ್ಟು
ಆಯಿತು ಮನೆಯಲ್ಲೊಂದು ಹೊಸ ಹುಟ್ಟು
--------------------------------------------
ಬಹಳ ಹೊತ್ತಾಯ್ತು ಅವ್ರಿಬ್ರುನ ಬಿಟ್ಟು
ಈಗ ಹೊರಡ್ಬೇಕು ನಾನು ಬರ್ಯೊದ್ನ ಬಿಟ್ಟು

Monday, October 10, 2011

ಹಂಪಿ ಎಕ್ಸ್‌ಪ್ರೆಸ್

ಬಳ್ಳಾರಿ-ಹೊಸಪೇಟೆಗೆ ಭಾರತೀಯ ರೈಲ್ವೇಸ್ಲಿ ಯಾವತ್ತು ಹೋಗ್ಬಾರ್ದುರೀ
ಅತ್ಲಾಗೆ ಆ ವಾಸ್ನೆ ಇತ್ಲಾಗೆ ಈ ವಾಸ್ನೆ ಟ್ರೈನಲ್ಲಿ ಮಲಗ್ಬಾರ್ದುರೀ
ಹೊರಡೊದು ರಾತ್ರಿ ಹತ್ತಕ್ಕೆ ರೀ
ಸೇರೋದು ಬೆಳಗ್ಗೆ ಹತ್ತಕ್ಕೆ ರೀ
ಹಂಪಿ ಎಕ್ಸ್‌ಪ್ರೆಸ್ ನ  ಹತ್ಬಾರ್ದೂ ರೀ
ಬಸ್ಸಲ್ಲೇ ಹೋಗೋದು ಉತ್ತಮ ರೀ



ನಿನ್ನ ನೆನಪು

ಎಂದೋ ಕಂಡ ನಿನ್ನ ನೆನಪು ಇಂದು ನನ್ನ  ಕಾಡಿದೆ
ಅಂದು ಕಂಡ ಕನಸು ಇಂದು ಎಲ್ಲೋ ಕಮರಿ ಹೋಗಿದೆ
ಹರಿಯುತಿರುವ ನದಿ ನಂಗೆ ನಿಂತ ಹಾಗೆ ಕಂಡಿದೆ
ಜುಳು ಜುಳು ಶಬ್ದವಂತು ಕೇಳಿಸದೆ ಸಾಗಿದೆ
ಹಚ್ಚ ಹಸಿರು ಮರವು ಎನಗೆ ಬೋಳಾಗಿ ಒಣಗಿದೆ
ಈಗ ತಾನೇ ಅರಳಿದ್ ಹೂವು ಮುದುಡಿದಂತೆ ಮೂಡಿದೆ
ಹೊಳೆಯುತಿರುವ ನಕ್ಷತ್ರ ಎನಗೆ ಚುಚ್ಚಿದಂತೆ ಆಗಿದೆ
ಆಗಸದ ಚಂದ್ರಮ ನನ್ನ ನೋಡಿ ನಕ್ಕಿದೆ
ಎಂದೋ ಕಂಡ ನಿನ್ನ ನೆನಪು ಇಂದು ನನ್ನ  ಕಾಡಿದೆ
ಅಂದು ಕಂಡ ಕನಸು ಇಂದು ಎಲ್ಲೋ ಕಮರಿ ಹೋಗಿದೆ

Sunday, October 2, 2011

ನಾನು ಬಂದೆ

ನಿನ್ನನ್ನು ನೋಡಲೆಂದೇ ನಾನು ಬಂದೆ
ನಿಮ್ಮ ಮನೆ ಮುಂದೆ
ನೀ ಬರಲೇ ಇಲ್ಲ ಬಾಲ್ಕನಿ ಮುಂದೆ
ನಾ ಬಿಡದೆ, ನಿಮ್ಮನೆಯೊಳಗೆ ಬಂದೆ
ನೀ ಅಡಗಿದೆ ರೂಮು ಬಾಗಿಲಿನ ಹಿಂದೆ
ಕೂಗಿ ಕರೆದರು ಬರಲ್ಲಿಲ್ಲ ನನ್ನ ಮುಂದೆ
ಬಿಜ಼ಿ ಎಂದು ನಾಟಕ ಮಾಡಿದೆ ನೀ ಬೇಕೆಂದೆ

ಮೊದಲು - ಆಮೇಲೆ - ಸದ್ಯಕ್ಕೆ

ಮೊದಲು
ನಿನ್ನ ಆ ನಯನಗಳಿಗೆ ನಾ ದಾಸನಾಗಿಬಿಟ್ಟೆ
ನಿನಗೆ ನಾ ಗುಲಾಮನಾಗಿರಲು ನಿರ್ಧರಿಸಿಬಿಟ್ಟೆ
ಬಾಸು ಕೊಟ್ಟ ಚಾಕೊಲೇಟು ನಿನಗಾಗೆ ತೆಗೆದಿರಿಸಿಕೊಟ್ಟೆ
ಸಿಗೋದು ಅಸಾಧ್ಯ ಎನಿಸಿದರೂ ನಿನ್ನಲ್ಲೇ ಮನಸನೆಟ್ಟೆ

ಆಮೇಲೆ
(ಕೆಳಗಿನ ಮೂರು ಆಯ್ಕೆಗಳಲ್ಲಿ ನಿಮಗೆ ಸರಿಯೆನಿಸಿದ ಒಂದನ್ನು ಕಾಮೆಂಟ್ ನಲ್ಲಿ ಹಾಕಿ)
_________________________________________________
_________________________________________________
_________________________________________________



1. ನೀನು ಸಿಕ್ಕಾಗ ಒಡೆಯಿತು ಸಂತೋಷದ ಕಟ್ಟೆ
ನಿನ್ನ ಬೆರಳುಗಳಿಗೆ ಕಾಲುಂಗುರವನಿಟ್ಟೆ
ನಿನ್ನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟೆ


2. ಸದಾ ನಿನ್ನ ಜೊತೆ ಇರುವ ಕನಸ ಕಂಡುಬಿಟ್ಟೆ
ರೆಡ್ ಇನ್ಕ್ ನೇ ರಕ್ತ ಅಂದ್ಕೋಂಡ್ ನಿನ್ಗೊನ್ದು ಪತ್ರ ಬರ್ದಿಟ್ಟೆ
ಕಾಫೀ/ಟೀ ನೇ ಮದ್ಯ/ಗುಂಡು ಅಂದ್ಕೋ ಬಿಟ್ಟೆ


3. ನಿನ್ನನ್ನೇ ನಂಬಿ ನಾನು ಕೆಟ್ಟೆ
ನಾ ನಿನ್ನ ಬೇರೆಯವನಿಗೆ ಬೀಟ್ಕೋಟ್ ಬಿಟ್ಟೆ
ನಿನ್ನ ನೆನಪಲ್ಲೆ ನಾ ಇನ್ನೊಬ್ಳುನ್ ಕಟ್ಕೊಂಡ್ಬಿಟ್ಟೆ.

ಸದ್ಯಕ್ಕೆ
ನನಗನಿಸುತಿದೆ ಈ ಪ್ರಪಂಚವೇ ಲೊಳಲೊಟ್ಟೇ

ಮಳೆ

ರಾತ್ರಿ ಮಲಗಿದಾಗ ಎಲ್ಲಿ ಅಡಗಿತ್ತೊ ಮಳೆ
ಬೆಳ್ಗೆ ಎದ್ದಾಗ ಮನೆ ಮುಂದೆ ನೀರಿನ ಹೊಳೆ
ಪಕ್ಕದಲ್ಲಿದ್ದ ಇವಳನ್ನ ಎಬ್ಬಿಸಿದೆ, ಲೇ ಏಳೆ
ಅವಳಂದಳು, ನೀ ಎದ್ದು ಮೈ ತೊಳೆ
ನಿತ್ಯಕರ್ಮ ಮುಗಿಸಿ ಬಂದಾಗ ಟೇಬಲ್ ಮೇಲಿತ್ತು ಕಾಫಿ ಕೋಡುಬಳೆ
ಆಫೀಸಿಗೆ ಹೊರಟೆ, TVದಲ್ಲಿ ಎಲ್ಲರಲ್ಲೂ Raincoatನ ಕಳೆ
ಮತ್ತೆ ಸುರಿಯುತ್ತಿತ್ತು ಜೋರಾಗಿ ದಪ್ಪಹನಿ ಮಳೆ
+++++++++++++++++++++++++++++++++++++++++++++++++++
TV ಅಂದ್ರೆ TechiegaLa Vaahana, ಅದೇ ಕಣ್ರೀ ನಂ ವೋಲ್ವೋ ಬಸ್ಸು

ನೋಡಿದೆ ಅವಳನು

ನೋಡಿದೆ ಅವಳನು ಮೆಗಾಮಾರ್ಟಿನಲಿ
ಹಾಗೆ ಉಳಿದುಬಿಟ್ಟಳು ಮನಸಿನಲಿ
ಕಾಡುತಾಳೆ ಇಂದಿಗೂ ಕನಸಿನಲಿ
ಅವಳನು ಎಲ್ಲಿ ಹುಡುಕಲಿ
ಬೇಡುವೆ ನಾ ದೇವರಲಿ
ಅವಳು ನನಗೆ ಬೇಗ ಸಿಗಲಿ
ಮತ್ತು ಅವಳೆಂದೆದಿಗೂ ನನಗೆ ಇರಲಿ

ವರ

ಪಾರಣೆ ಮುಗಿಸಿದೆ ಸೋಮವಾರ-
ಮುಗಿದ ನಂತರ ಹರಿವಾಸರ
ಜೋರಾಗಿ ಹಚ್ಚಿದ್ದೆ ಅಕ್ಷತೆ - ಅಂಗಾರ
ಬಸ್ಸು ಹಿಡಿಯಲು ಓಡಿದೆ ಸರ ಸರ
(ಬಸ್ಸು ಹತ್ತಿ ಕೂತ ಮೇಲೆ)
ಪಕ್ಕದವ ಕೇಳಿದ ನೀವು ಬ್ರಾಹ್ಮಣರ?
(ಉದ್ದ ಕೂದಲು, ಗಡ್ಡ, ಕಿವಿಯಲ್ಲಿ ಓಲೆ ಎಲ್ಲ ನೋಡಿ ನಾನಂದೆ)
ಹೌದು ಗುರು, ಏನೀ ನಿನ್ನವತಾರ?
(ಮುಂದೆ ನಿಂತಿದ್ದ ಒಂದು ಹುಡುಗಿಯ ತೋರಿಸಿ ಅವನಂದ)
ಎಲ್ಲಾ ಆ ಹುಡುಗಿಗೋಸ್ಕರ !
ನಾನಂದೆ, ಆಗು ನೀ ಬೇಗ ಆ ಹುಡುಗಿಗೆ ವರ !!

ಬಸ್ ಪ್ರಯಾಣ ನೆನಪಾಗಿತ್ತು

ಆಫೀಸ್ಸಿಂದ ಹೊರಟಾಗ ಸಂಜೆ ಐದು ಮೂವತ್ತಾಗಿತ್ತು
ಬಿಗ್ ಬಜ಼ಾರ್ ಸ್ಟಾಪ್ ಲೆ TV ತುಂಬಿ ತುಳುಕುತ್ತಿತ್ತು
ಎಫ್.ಎಮ್ ನ ಹಾಡು ಕಿವಿಗೆ ಇಂಪಾಗಿತ್ತು
ಬೆಳ್ಗೆ ಬೇಗ ಎದ್ಡಿದ್ದ ನಂಗೆ ಕಣ್ಣು ಎಳೆಯುತ್ತಿತ್ತು
ಏಸೀ ಪಕ್ಕಕ್ಕೆ ತಿರುಗಿಸಿದಾಗ, ತಲೆ ಸೀಟಿಗೆ ಒರಗಿತ್ತು
ಕಣ್ಣು ಬಿಟ್ಟಾಗ TV SBSಲಿ ನಿಂತಿತ್ತು
ಎದುರು ಸೀಟಲ್ಲಿ ಪ್ರೇಮಿಗಳ ಜೋಡಿ ಕೂತಿತ್ತು
ನನಗೆ ಅವಳೊಂದಿಗಿನ ಆ ದಿನಗಳ ಬಸ್ ಪ್ರಯಾಣ ನೆನಪಾಗಿತ್ತು
ಪುಸ್ತಕ ಪೆನ್ನು ಕೈಯಿಂದ ಜಾರಿತ್ತು
ಮನಸ್ಸು ವಿಧಿಯನ್ನು ಹಳಿಯುತ್ತಿತ್ತು !

SBS - ಸಿಲ್ಕ್ ಬೋರ್ಡ್ ಸಿಗ್ನಲ್

ವಾಹನ ದಟ್ಟಣೆ

ಬೆಂಗಳೂರಲ್ಲಿ ಸಿಕ್ಕಾಪಟ್ಟೆ ವಾಹನ ದಟ್ಟಣೆ
ಕಾರಣ? ಕೇಳಿದರೆ ಯಾರು ಬೇಕಾದರೂ ಹೇಳುತ್ತಾರೆ ತಟ್ಟನೆ
ಒಂದು) ಪ್ರಗತಿಯೇ ಕಾಣದೆ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಗಳು
ಎರಡು) ನಾಕೆಂಟು ಮಂದಿ ಕೂರುವ ಕಾರಲ್ಲಿ ಹೋಗುತಾರೆ ಒಬ್ಬಿಬ್ಬರು
ಇದಕ್ಕೆಲ್ಲ ಪರಿಹಾರ ???? ಇದೆ.
ಕೆಲಸ ಬೇಗ ಪೂರೈಸಲು ಗುತ್ತಿಗೆದಾರರಿಗೆ ಸರಕಾರ ಹೊರಡಿಸಬೇಕು ಕಟ್ಟಪ್ಪಣೆ
ಕಾರ್ ಪೂಲಿಂಗ್ ನಂತಹ ಯೋಜನೆಗಳಿಗೆ ಸರಕಾರ ಹಾಕಬೇಕು ಮಣೆ
ಆಗ ನಾವು ಬೇಗ ಸೇರಬಹುದು ನಮ್ಮ ಕೋಣೆ

ವೋಲ್ವೋ ಬಸ್ ಕಂಡಕ್ಟರ್ ನ ಅಳಲು

ಈ ಬಸ್ಸಿಗೆ ಹತ್ತುವುದಿಲ್ಲ ಬೇರೆ ಯಾವ ಮಾಸು
ಇಲ್ಲಿ ಕಾಣುವುದು ಬರೀ ಐಟಿ ಕೂಸು
ತೋರಿಸಿದರೆ ಎಲ್ಲ ಮಂತ್ಲೀ / ಡೈಲೀ ಪಾಸು
ನಮಗೆಲ್ಲಿಂದ ಬರಬೇಕು ಕಾಸು
ಟಾರ್ಗೆಟ್ ಮೀಟ್ ಮಾಡದ್ದಿದ್ದ್ರೆ ಬಾಸು
ತೊಗೋತಾರೆ ನಮಗೆ ಕ್ಲಾಸು
ಮಾಡ್ತಾರೆ ಸಂಬಳದಲ್ಲಿ ಲಾಸು

ವೀಕೆಂಡ್ ಮಾಮೂಲು

ಅಕ್ಕನ ಮನೆಯಲ್ಲಿ ಮಾಡಿದ್ದರು ಅನ್ನ ಹೆಸರುಕಾಳು
ಊಟ ಮಾಡಿ ಹೊರಟಾಗ ರಾತ್ರಿ ಒಂಬತ್ತುಕಾಲು
ಮೆಜೆಸ್ಟಿಕ್ ಸೇರಿದಾಗ ಐವತ್ತು ರೂ ಆಗಿತ್ತು ಆಟೋದವನ ಪಾಲು
ತುಮಕೂರು ಬಸ್ಸು ಹತ್ತಿ ಕುಳಿತೆ ಚಾಚಿ ಕಾಲು
ಮನೆ ತಲುಪಿದಾಗ ರಾತ್ರಿ ಹನ್ನೆರಡು ಕಾಲು
ಅಮ್ಮ ಮಾಡಿಕೊಟ್ಟಳು ಒಂದು ಲೋಟ ಹಾಲು
ಕುಡಿದು ಮಲಗಿದೆ ಹೊದ್ದು ಶಾಲು
ವೀಕೆಂಡಿನಲಿ ನನಗಿದೆಲ್ಲ ಮಾಮೂಲು

ಭಾರತ ಟೆಸ್ಟ್ ಕ್ರಿಕೆಟ್

ಎಲ್ಲರೂ ಅಂದಿದ್ದರು ಟೆಸ್ಟ್ ಕ್ರಿಕೆಟಲಿ ಭಾರತವೇ ಮೇಲು
ನಂ.೧ ಪಟ್ಟ ಉಳಿಸಿಕೊಳ್ಳಲು ಅಭ್ಯಸಿಸಬೇಕಿತ್ತು ರಾತ್ರಿ ಹಗಲು
ಲಾರ್ಡ್ಸ್ ಟೆಸ್ಟಿನಲಿ ಇಂಗ್ಲೆಂಡ್ ಒಡ್ಡಿತು ಪ್ರತಿಷ್ಟೆಯ ಸವಾಲು
ಸರಿಯಾಗಿ ಆಡಲ್ಲಿಲ್ಲ ಯಾರೂ ಬಿಟ್ಟರೆ ವಾಲು
ನಡೆಯಲ್ಲಿಲ್ಲ ಧೋನಿ ಕಮಾಲು ಒಪ್ಪಿಕೊಂಡಿತು ಭಾರತ ಸೋಲು
ಮುಂದಿನ ಪಂದ್ಯಗಳಲ್ಲಾದರೂ ಗೆಲ್ಲಲಿ, ನೀವು ಬನ್ನಿ ಹಾರೈಸಲು-
ಫೇಸ್ ಬುಕ್ ಟ್ವಿಟರ್ ಆರ್ಕುಟ್ ಗಳಲು

ಸಿ.ಎಮ್

ಸಿ.ಎಮ್ ಒಂದು ಕಾಲದಲಿ ಮೆರೆದರು ಅಡ್ಡಾದಿಡ್ಡಿ
ಆಗ ಅವರ ಬೆಂಬಲಕ್ಕಿದ್ದರು ಅಣ್ಣ ತಮ್ಮ ರೆಡ್ಡಿ
ಕುಮಾರಸ್ವಾಮಿ ಆಗಾಗ ಮಾಡುತ್ತಿದ್ದ ಅಡ್ಡಿ
ಆದರೂ ಅಂಜಲ್ಲಿಲ್ಲ ಸಿ.ಎಮ್ ಯಡ್ಡಿ
ಬಳ್ಳಾರಿಯಲಿ ಇಳಿಸಿದರು ಟನ್ ಗಟ್ಟಲೆ ಮಡ್ಡಿ
ದೋಚಿದರು ಕೋಟಿ ಗಟ್ಟಲೆ ಹಣದ ದೊಡ್ಡಿ
ಲೋಕಾಯುಕ್ತ ಹಿಡಿದರು ಕೈಲಿ ಕಡ್ಡಿ
ಕುರ್ಚಿಯಿಂದ ಕೆಳಗಿಳಿದ ಯಡ್ಡಿ
ಆಗ್ಬೇಕಂತೆ ಸಿ.ಎಮ್ ಶೋಭಕ್ಕ, ಆದ್ರೆ ಅವ್ಳು ದಡ್ಡಿ
ಮುಂದೇನಾಗತ್ತೋ ಎಲ್ಲರೂ ಕಾದು ನೋಡ್ಡಿ (ಡಿ)

ನನ್ನ ಚೆಲುವೆ.. ಎಲ್ಲಿರುವೆ

ಎಲ್ಲಿರುವೆ ಓ ಚೆಲುವೆಯೇ! ಭುವಿಗಿಳಿದಿರುವೆಯ ನನಗಾಗೆ
ಬೇಗ ಬಂದು ಸೇರಿಕೋ ಈ ನನ್ನ ಹೃದಯದರಮನೆಗೆ
ಮಹರಾಣಿಯ ಹಾಗೆ!!

ಹನಿಗವನಗಳು

ಪತ್ರ:
   ಅವ್ಳಿಗಾಗೆ ಬರೆದೆ ಪತ್ರ
   ತೋರಿಸದೇ ಇಟ್ಕೊಂಡೆ ನನ್ಹತ್ರ
   ಅವ್ಳು ಸಿಕ್ಕಾಗ ಕೇಳಿದೆ...
   ನಿನ್ ಮದ್ವೆ ಯಾವ್ಚತ್ರ ?

ಚುಂಬನ:
    ಅವಳೆನ್ದರೆ ಮೈ ಕಂಪನಾ
    ಬೇಕೆನಿಸುತಿದೆ ಆಲಿಂಗನ
    ನೀಡು ಬಾರೆ ಚುಂಬನ :)

ಗೊಂದಲ:
    ಪ್ರೀತಿ ತೋರಿಸಬೇಕೆಂಬ ಹಂಬಲ
    ಆದರೆ ಹೇಗೆ ಎಂಬ ಗೊಂದಲ :(

ನನ್ನಾಕೆ:
    ನನ್ನಾಕೆ ಸಾವಿರದಲ್ಲಿ ಒಬ್ಬಳು
    ನೀನೆ ನನ್ನ ಜೀವ ಎಂದವಳು
    ಬೇರೊಬ್ಬನನ್ನು ಕಟ್ಟಿಕೊಂಡಳು :p

ಚಿನ್ನ:
    ಮರೆತರೂ ಮರೆಯಲಾರೆನು ನಿನ್ನ
    ನೆನೆದರು ಕರೆಯಲಾರೆನು ನಿನ್ನ
    ಆದರೂ ನೀನೆ ನನ್ನ ಚಿನ್ನ :)

ಪ್ರೀತಿ - ಧೈರ್ಯ:
   ಪ್ರೀತಿ ಮಾಡಬೇಕೆನಿಸಿದಾಗ ಧೈರ್ಯ ಇರಲ್ಲಿಲ್ಲ
   ಧೈರ್ಯ ಬಂದಾಗ ಪ್ರೀತಿ ಬೇಕೆನಿಸಲ್ಲಿಲ್ಲ!

ಕಾರು - ಬಾರು:
    ಅತ್ತ ನೋಡಿದರೆ ಕಾರು
    ಇತ್ತ ನೋಡಿದರೆ ಬಾರು
    ಆದರೆ, ಮನಸ್ಸಲ್ಲಿ ಅವಳದೇ ಕಾರು - ಬಾರು :d

ಪ್ರೀತಿ - ಫಜೀತಿ:
    ತಿಳಿಯದ ವಯಸಲಿ ಬಂದ ಪ್ರೀತಿ
    ತಿಳಿಯದಾದಾಗ ಬಯಸಿದ ಪ್ರೀತಿ
    ವಯಸು - ಬಯಸು , ಇವೆರಡು ಫಜೀತಿ :p

ನಿನ್ನ ನೆನಪು:
    ಬಾನ ಪೂರ್ತಿ ಪ್ರೀತಿ ನೆನಪಿನ ಕವನ
    ಮರೆಯ ಮೋಡ ಮುಸುಕಿದಾಗ ಜೀವನ
    ಮೋಡ ಸರಿದು ಮತ್ತೆ ಬಾನ ದರ್ಶನ
    ಆ ನಿನ್ನ ನೆನಪು ಪುನರಾವರ್ತನ!

lifeu ಇಷ್ಟೇನೆ !

ದಿಗಂತ್ ಜೊತೆ

೧ . ಶಾಸ್ತ್ರ - ಗೀಸ್ತ್ರ ಗಾಳಿಗೆ ತೂರಿ
    ನೆಂಟ್ರೂ - ಇಷ್ಟ್ರೂ ಮಾತು ಕೇಳ್ದೆ
    ವಿದೇಶಕ್ಕೆ ಪ್ರಯಾಣ ಮಾಡೊ
      lifeu ಇಷ್ಟೇನೆ !
೨. ಮಡಿ ಮೈಲಿಗೆ ಎಲ್ಲ ಬಿಟ್ಟು
   ಸಂಪ್ರದಾಯಗಳ್ನ ಮರ್‍ತು
   foreign ಕನ್ಸು ನನ್ಸು ಮಾಡ್ಕೋ
   lifeu ಇಷ್ಟೇನೆ !
೩. ಸುಯ್ಯನೆ ಹೋಗೋ ಬೆಂಜ಼ು ಕಾರು
    BMW Wolksvagon ಜೊತೆ ರೇಸು
    ಕಾಣದೆ ಇರೋ ಸುಜ಼ುಕಿ ಹುಡ್ಕೊ
    lifeu ಇಷ್ಟೇನೆ !
೪. ಹೊಸ ಜನರ ಪರಿಚಯ ಮಾಡ್ಕೋ
ಭಟ್ಟರ ಜೊತೆ
   ಜಾದುಗಾರನ ಜಾದು ನೋಡ್ಕೋ
   ಪಾರ್ಟಿಲಿ ಹಾಳಾಗಬೇಡ
   lifeu ಇಷ್ಟೇನೆ !
೫. ಕುಡಿಯಲು ಬೇಡ ಸೇದಲೂ ಬೇಡ
   ನಾನ್ ವೆಜ್ ಅಂತು ಬೇಡವೇ ಬೇಡ
   ಕಾಫಿ ಮಾತ್ರ ತುಂಬಾ ಹೀರ್ಕೊ
   lifeu ಇಷ್ಟೇನೆ !
೬. ಹೇಳಲು ಕೇಳಲು ಯಾರು ಇಲ್ಲ
    3 BHK ಲಿ ಸುಖವೇ ಇಲ್ಲ
    ಒಂಟಿಯಾಗಿ ಪೆನ್ಡಾಲು ಹಾಕೋ
    lifeu ಇಷ್ಟೇನೆ !
೭. ಒಂಟಿ ಜೀವ್ನ ಶತೃಗು ಬೇಡ
    ಹಳೆನೆನ್‌ಪು ಪರ್ದಾಟ ಬೇಡ
    ಜಂಟಿಯಾಗಲು ಮದುವೆ ಮಾಡ್ಕೋ
    lifeu ಇಷ್ಟೇನೆ !
೮. ಹಸಿವೆ ಗಿಸಿವೆ ಯಾರಿಗೆ ಇಲ್ಲ
   ಮಾಡ್ಕೋಳಕ್ಕೆ ಏನೇನಿಲ್ಲ
   ಉಪ್ಯೋಸಕ್ಬರ್ದೆ ready2eat ತಿನ್ಕೊ
   lifeu ಇಷ್ಟೇನೆ !
೯. Laptop ಚಾರ್‌ಜರ್ ಗೆ socket ಇಲ್ಲ
   ಟೀವೀಯಲ್ಲಿ ಕೇಬಲ್ ಇಲ್ಲ
   ಮೊಬೈಲ್ ಒಳ್ಗೆ ಕರೆನ್ಸೀ ಇಲ್ಲ
    lifeu ಇಷ್ಟೇನೆ !
೧೦. ಬೆಳಗಿನ ಹೊತ್ತು ನಿದ್ದೆ ಮಾಡ್ಕೋ
      ರಾತ್ರಿ ಹೊತ್ತು ಎದ್ದು ಕೂತ್ಕೋ
      ಸುಮ್ನಿರ್ಲಾರ್ದೆ 2 ಪೇಜ್ ಗೀಚ್ಕೋ
      lifeu ಇಷ್ಟೇನೆ !

೧೧. CEO ಜೊತೆ ಊಟಕ್ ಹೋಗು
     order ಮಾಡದೆ ಕಣ್ ಕಣ್ ಬಿಟ್ಕೊ
      ಎಲ್ರೂ ಮುಂದೆ ಮರ್ಯಾದೆ ಕಳ್ಕೊ
      lifeu  ಇಷ್ಟೇನೆ !
೧೨. ಅಜ್ಜಿ - ತಾತ ಸತ್ರು ಕೂಡ
      ಮನೆಯ ಕಡೆಗೆ ತಿರುಗಿ ನೋಡ್ದೆ
      foreign ಅಲ್ಲಿ ಜಾಂಡ ಊರ್ಕೋ
      lifeu  ಇಷ್ಟೇನೆ !
೧೩. ಸಂಜೆ ಹೊತ್ತು ವಾಕಿಂಗ್ ಮಾಡ್ಕೋ
      ಆಚೆ ಬರ್‍ದೇ ಇರೋರ್ನ ಹುಡ್ಕೊ
      ಒಂಟಿಯಾಗಿ ಮನೆಯನು ಸೇರ್‌ಕೋ
      lifeu  ಇಷ್ಟೇನೆ !
೧೪. ಬೆಡ್ಡಿನ ಮೇಲೆ ಬೆಚ್ಚಗೆ ಮಲ್ಕೊ
      blanket ಒಳ್ಗೆ ಬೆಚ್ಚಿ ಬೀಳ್ಕೊ
      alarm ಹೊಡ್ಯಕ್ ಮುಂಚೇನೆ ಏಳ್ಕೊ
      lifeu  ಇಷ್ಟೇನೆ !
೧೫. ಬ್ರೆಡ್ಡು ಬಟರು ಜಾಮೆ ತಿಂಡಿ
      ಪಿಜ಼್ಜ಼ ಬರ್ಗರ್ ಸ್ಯಾಂಡ್‌ವಿಚ್ ಊಟ
      ಅನ್ನ ಸಾರು ಅಂದ್ಕೋಂಡ್ ತಿನ್ಕೊ
      lifeu  ಇಷ್ಟೇನೆ !
 ೧೬. B.E ಓದಿಸಿ ಅಮ್ಮ ಬಿಟ್ಲು
      ಕೆಲ್ಸ ಕೊಡ್ಸಿ ಭಾವ ಕೆಟ್ರು
      foreign ಕಳ್ಸಿ manager ಸತ್ತ
      lifeu  ಇಷ್ಟೇನೆ !
೧೭. Debug ಅಲ್ಲಿ ಇದ್ದೇ ನಾನು
     Training ಒಳ್ಗೆ ನುಕ್ಕೊಬಿಟ್ಟೆ
     ಹಣೆಬರಕ್ ಹೊಣೆ ಯಾರು
     lifeu  ಇಷ್ಟೇನೆ !
೧೮. ಆದ್ದದ್ದೆಲ್ಲ ಒಳ್ಳೆದಾಯ್ತು
      ಅನುಭವ ನೂರಾಎಂಟು
      ಮುಂದಿನ ಜೀವ್ನದ್ ದಾರಿ ದೀಪ
      lifeu  ಇಷ್ಟೇನೆ !
೧೯. Foreign ಅಲ್ಲಿ ಒಬ್ನೆ ಬ೦ಟ
      ಸೋಂಬೇರೀನೆ ಪರಮ ನೆಂಟ
      ಅಂದ್ಕೊಂಡವ್ನೇ ದೊಡ್ಡ ದಡ್ಡ
      lifeu  ಇಷ್ಟೇನೆ !
೨೦. ಇಪ್ಪತ್ತಿಕ್ಕೆ ಕೊನೇ ಆಯ್ತು
      data card ಸಿಕ್ಕಿ ಆಯ್ತು
      ಪೆನ್ನು ಪೇಪರ್ ಗೆ ಟಾಟಾ ಬೈ ಬೈ
      lifeu  ಇಷ್ಟೇನೆ !

ನ್ಯಾನೋ ಕಥೆ - ೧

ಊರೆಲ್ಲ ಕೂಗಿ ಹೇಳುವೆ.. ನಾನೀಗ ನಿನ್ನ ಮೋಹಿತ..... ಎಂದು ಪ್ರೀತಿಯ ಅಮಲಿನಲಿ ಹಾಡುತ್ತಿದ್ದ ಗೆಳೆಯನಿಗೆ ನಾನು " ನಿನಗೆ (ಮೀಟೆ)ರ್ (ಇಲ್ಲ), ಸುಮ್ನೇ ನಿಮ್ಮ (ಅಪ್ಪ ಅಮ್ಮಂಗೆ) ತೊಂದರೆ ಕೊಡ್ಬೇಡ, ಆವ್ರು (ತೋರ್ಸಿ)ದ್ ಹುಡ್ಗೀನ ಒಪ್ಕೋ, (ಆಮೇಲ್ ಮದ್ವೆ ಮಾಡ್ಕೋ) ಅಂದೆ.
ಅವನು ಗಾಂಧಿ ಬಜ಼ಾರ್ಲೀ ಅವನ ಪ್ರೇಯಸಿ [ಈಗ ಮಡಡಿಯೂ ಹೌದು] ಜೊತೆಯಲ್ಲಿ ಸಿಕ್ಕಿದ್ದ. ನನ್ನ ಕೈ ಕುಲುಕಿ " ಲೇ ಅವತ್ತು ಎಂತ ಮಾತು ಹೇಳಿದೋ.. ನೀ ಹೇಳ್ದನ್ಗೆ ಮಾಡಿದೆ. ನನ್ನ ಮದುವೆ ಆಯ್ತು" ಅಂದ. ನಾನು ಏನು ಹೇಳಿದ್ನೊ ನಿಂಗೆ ಎಂದೆ. "ಮೀಟೆ ಇಲ್ಲ. ಅಪ್ಪ ಅಮ್ಮಂಗೆ ತೋರ್ಸಿ ಆಮೇಲ್ ಮದ್ವೆ ಮಾಡ್ಕೋ" ಅಂತ ಹೇಳಿದ್ಯಲೊ. ನಾ ಹಾಗೆ ಹೇಳಿದ್ನ?? ಅನುಮಾನಿಸಿದೆ. ಏನೋ ಎಲ್ಲ ಒಳ್ಳೇದಾಯಿತಲ್ಲ ಬಿಡು ಅಂದು ಅವನಿಗೆ ಟಾಟಾ ಹೇಳಿ ಮುನ್ನಡೆದೆ. ಅವನು ತಿರುಗಿ ನನ್ನೆಡೆಗೆ ಬಂದು ನಿನಗೊಂದು ಮಾತು ಹೇಳಬೇಕು ಅಂದ. ಹೇಳೋ ಮಾರಾಯ ಅಂದೆ. ನಿನಗೆ ಮೀಟೆರ್ ಇಲ್ಲ, ಸುಮ್ನೇ ನಿಮ್ಮ ಅಪ್ಪ ಅಮ್ಮಂಗೆ ತೊಂದರೆ ಕೊಡ್ಬೇಡ, ಆವ್ರು ತೋರ್ಸಿದ್ ಹುಡ್ಗೀನ ಒಪ್ಕೋ, ಆಮೇಲ್ ಮದ್ವೆ ಮಾಡ್ಕೋ" ಅಂದ.  ಆದರೆ ಅವ್ನು ಹೇಳಿದ್ದು ನಂಗೆ ಸರಿಯಾಗಿ ಕೇಳಿಸಿತು.
ನೀತಿ : ಪ್ರೀತಿ ಬರಿ ಕುರುಡಲ್ಲ. ಕಿವುಡೂ ಹೌದು!

ನನ್ನೆಡೆ ನೋಡೇ

ನಾನೆಲ್ಲಿ ಹೋದರೂ ನಿನ್ನನ್ನೇ ಹುಡುಕುವೆ
ನಿನಗಿಲ್ಲವೇ ನನ್ನ ಇರುವಿನ ಅರಿವೆ?
ಆದರೂ ನೀನ್ ಯಾಕೆ ಸುಮ್ಮನಿರುವೆ
ಒಮ್ಮೆ ನನ್ನೆಡೆ ನೋಡಬಾರದೇ ಚೆಲುವೆ