MTR ತಲುಪುತ್ತಲೇ, ಸಂಯುಕ್ತ ಅಮೋದಿನಿಯನ್ನ ಅಪ್ಪಿಕೊಂಡು ಅಕ್ಕ ಎಷ್ಟು ದಿನ ಆಯ್ತು ನಿನ್ನ ನೋಡಿ ಅನ್ನುತ್ತಿರಲು ನಾನು ತಬ್ಬಿಬ್ಬಾಗಿ ಬಿಟ್ಟೆ. ತೀರಾ ಗಲಿಬಿಲಿಯಾದ ನನ್ನನ್ನು ಕುರಿತು ಅಮೋದಿನಿ Yes, I know ಸಂಯುಕ್ತ. ನಾನು ಅವಳು ಕ್ಲಾಸ್ ೧೨ರ ತನಕ ಓದಿದ್ದು ಒಂದೇ ಶಾಲೆಯಲಿ. ಅವಳು ನನಗಿಂತ ೪ ವರ್ಷ ಚಿಕ್ಕವಳು. ಅವರಿಬ್ಬರೂ ಒಬ್ಬರಿಗೊಬ್ಬರು ಪರಿಚಿತರಿರಬಹುದೆಂದು ನಾನು ಊಹಿಸಿದ್ದು ನಿಜವಾಗಿತ್ತು. ನಾವು ೫ನೇ ಮಹಡಿಯಲ್ಲಿದ್ದ MTR ಹೊಟೇಲಿನ ಮೂಲೆ ಟೇಬಲಲಿ ಕೂತೆವು. ಅಮೋದಿನಿ-ಸಂಯುಕ್ತ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ನನಗೆ ಅವರಿಬ್ಬರ ಸ್ನೇಹದ ಬಗ್ಗೆ ಒಬ್ಬರಾದ ಮೇಲೊಬ್ಬರಂತೆ ಬಿಡುವಿಲ್ಲದೇ ಹೇಳತೊಡಗಿದರು. ಅದರ ಒಟ್ಟು ಸಾರಾಂಶ - ಶಾಲಾ ದಿನಗಳಲ್ಲಿ ಇಬ್ಬರೂ ಓದಿನಲಿ ಮುಂದು. ಹಾಗೆಯೇ ಆಟದಲ್ಲಿಯೂ ಕೂಡ. ಶಾಲೆಯಲ್ಲಿರುವ ತನಕ ಜೂನಿಯರ್ ವಿಭಾಗದಲ್ಲಿ ಸಂಯುಕ್ತ ಸೀನಿಯರ್ ವಿಭಾಗದಲ್ಲಿ ಅಮೋದಿನಿ - ಇವರಿಬ್ಬರ ಹೆಸರಿರದ ವಿಜೇತ ಪಟ್ಟಿ ಶಾಲಾ ಇತಿಹಾಸದಲ್ಲೇ ಇಲ್ಲ. ಸ್ಕಾಲರ್‌ಶಿಪ್ ಆಗಲಿ ಅಥವಾ ಯಾವುದೇ ಪ್ರಶಸ್ತಿಯಾಗಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಪಡೆಯುತ್ತಿದ್ದರು. ಇಬ್ಬರೂ ಜೊತೆಯಾಗಿ ತೆಗೆಸಿರೋ ಅದೆಷ್ಟೋ ಫೋಟೋಗಳು ಇಬ್ಬರ ಬಳಿಯೂ ಇದೆ. ಅಮೋದಿನಿಯನ್ನು ಕಂಡರೆ ಸಂಯುಕ್ತಳಿಗೆ ಅಪಾರವಾದ ಗೌರವ. ಸಂಯುಕ್ತಳ ಎಷ್ಟೋ ಸಂದೇಹಗಳಿಗೆ ಅಮೋದಿನಿ ಪರಿಹಾರ ನೀಡಿದ್ದಾಳೆ ಮತ್ತು ಆಟವಾಡುವಾಗ ಸಾಕಷ್ಟು ಟಿಪ್ಸ್ ಕೊಟ್ಟಿದ್ದಾಳೆ. ಅವಳ ಬ್ಯಾಚಿನಲಿ ಸಂಯುಕ್ತ ಮೊದಲಿಗಳೇ ಆದರೂ, ಅಮೋದಿನಿ ಮಾಡಿದ ದಾಖಲೆಗಳನ್ನು ಸಂಯುಕ್ತಳಿಗೆ ಮುರಿಯಲು ಸಾಧ್ಯವಾಗಲೇ ಇಲ್ಲ. ಅದು ಶಾಲೆಯಲ್ಲಿ ಹೈಯೆಸ್ಟ್ ಮಾರ್ಕ್ಸ್ ತೆಗೆದಿರುವುದೇ ಆಗಿರಬಹುದು ಅಥವಾ ಕ್ರೀಡೆಗಳಲ್ಲಿ ದಾಖಲೆ ಮಾಡಿರುವುದೇ ಆಗಿರಬಹುದು. ಹಾಗಾಗಿ ಸಂಯುಕ್ತಳಿಗೆ ಅಮೋದಿನಿ ಈಸ್ ಗ್ರೇಟ್..
ಸುಮಾರು ಒಂದು ಗಂಟೆಗಳ ಕಾಲ ಅವರಿಬ್ಬರ ಮಾತುಕತೆ ನಡೆಯಿತು. ನಾನು ಅದನ್ನು ಎಂಜಾಯ್ ಮಾಡಿದೆ. ಅಷ್ಟರಲ್ಲಾಗಲೇ ಖಾರ ಭಾತ್, ಇಡ್ಲಿ ವಡ, ಮಸಾಲೆ ದೋಸೆ, ಕೇಸರಿಭಾತ್ - ಎಲ್ಲಾ ಒಂದೊಂದು ಪ್ಲೇಟ್ ಖಾಲಿ ಮಾಡಿದ್ದೆವು. ೨ ನಿಮಿಷ ಮೌನ ಆವರಿಸಿತ್ತು. ಒಬ್ಬರ ಮುಖವನ್ನೊಬ್ಬರು ನೋಡುತ್ತಿರುವಾಗಲೇ ಸಂಯುಕ್ತ ನನ್ನ ಕಡೆ ತಿರುಗಿ ಗಂಭೀರ ಧ್ವನಿಯಲ್ಲಿ " ಬೇರೆ ಯಾರನ್ನೇ ನೀನು ಮದುವೆಯಾಗಲು ಹೊರಟಿದ್ದರೂ ನಾನು ಬಿಡುತ್ತಿರಲ್ಲಿಲ್ಲ. ಅಮೋದಿನಿಗೊಸ್ಕರ ನನ್ನ ಪ್ರೀತಿ ತ್ಯಾಗ ಮಾಡುತ್ತಿದ್ದೇನೆಂದರೆ ನನ್ನ ಬಗ್ಗೆ ನನಗೇ ಹೆಮ್ಮೆಯೆನಿಸುತಿದೆ. ನಾನು ನಿನ್ನನ್ನು ಪಡೆಯಲೇಬೇಕೆಂಬ ಹಟಕ್ಕೆ ಬಿದ್ದರೂ, ಅಮೋದಿನಿಯನ್ನು ಗೆಲ್ಲಲು ಸಾಧ್ಯವೇ ಇಲ್ಲ. ಅದು ಈಗಾಗಲೇ ಎಷ್ಟೋ ಬಾರಿ ಸಾಬೀತಾಗಿ ಹೋಗಿದೆ. ಆದರೆ ಒಂದು ಮಾತು ನೆನಪಿಟ್ಟುಕೊ. ನನಗೆ ಬೇಕೆನಿಸಿದಾಗ ನಿಮ್ಮ ಮನೆಗೆ ಬರುತ್ತೇನೆ, ಇಷ್ಟ ಬಂದ ಹಾಗೆ ಇರುತ್ತೇನೆ.. ಅದಾವುದಕ್ಕೂ ನೀನು ಅಡ್ಡಿ ಪಡಿಸಬಾರದು. ಅಕ್ಕ ನೀವು ಅಷ್ಟೇ" - ಇಷ್ಟು ಹೇಳಿ ಕರ್ಚಿಪ್ ತೆಗೆದು ಮುಖ ಮುಚ್ಚುಕೊಂಡುಬಿಟ್ಟಳು. ನನಗೂ ಅಮೋದಿನಿಗು ಮಾತೆ ಹೊರಡಲ್ಲಿಲ್ಲ. ಅಮೋದಿನಿ ಸಂಯುಕ್ತಳ ಬಲಗೈಯನ್ನು ತನ್ನ ಎರಡು ಕೈಗಳಿಂದ ಗಟ್ಟಿಯಾಗಿ ಹಿಡಿದುಕೊಂಡುಬಿಟ್ಟಿದ್ದಳು. ಅಮೋದಿನಿಯ ಕಣ್ಣು ನೀರಿನಿಂದ ಆವರಿಸಿ, ಅವಳಿಗೆ ಕಣ್ಣು ಬಿಡಲು ಸಾಧ್ಯವಾಗುತ್ತಿರಲ್ಲಿಲ್ಲ. ನಾನು ಇಬ್ಬರ ಭುಜದ ಮೇಲೂ ಮೆಲ್ಲಗೆ ತಟ್ಟುತ್ತಾ ಸಾಂತ್ವನ ಹೇಳಲು ಪ್ರಯತ್ನಿಸುತ್ತಿದ್ದೆ.
ಸುಮಾರು ಹೊತ್ತಾದ ಮೇಲೆ ಚೇತರಿಸಿಕೊಂಡ ಸಂಯುಕ್ತ ವಾಚ್ ನೋಡಿಕೊಂಡು ಸಮಯ ೭:೩೦ ಆಗಿದೆ, ನಾನಿನ್ನು ಹೊರಡುತ್ತೇನೆ. ಕೇಶಿ, ಸೀ ಯು ಆಟ್ ಹೋಮ್, ಸೀ ಯು ಅಕ್ಕ ಟೇಕ್ ಕೇರ್ ಮಾಡಿ ಅಂದವಳೇ ನನ್ನ ಮಾತಿಗೂ ಕಾಯದೇ ಎದ್ದು ಹೊರಟೇಹೋದಳು. ಸಂಯುಕ್ತ ಹೋದಮೇಲೆ ನಾನು ಅಮೋದಿನಿ ಮನೆ- ನೆಂಟರು- ಕೆಲಸ - ಅವಳು ಲಂಡನ್ ಯೂನಿವರ್ಸಿಟೀಯಿಂದ ಡಿಸ್ಟೆನ್ಸ್ ಲರ್ನಿಂಗ್ ಸ್ಕೀಮ್ ಲಿ MBA ಮಾಡಲು ಪಟ್ಟ ಸಾಹಸ - ನನ್ನ ವಿದೇಶ ಯಾತ್ರೆ .... ಹೀಗೆ ಇನ್ನೂ ಹಲವಾರು ವಿಷಯಗಳನ್ನು ಸುಮಾರು ಮುಕ್ಕಾಲು ಗಂಟೆ ಮಾತಾಡಿದೆವು. ಸುಮಾರು ೮:೩೦ರ ಹೊತ್ತಿಗೆ ಇಬ್ಬರೂ ಟಾಟಾ ಸೀ ಯು, ಟೇಕ್ ಕೇರ್ ಅಂತ ಹೇಳಿಕೊಳ್ಳುತ್ತಾ ಮನೆಯತ್ತ ಹೊರಡಬೇಕು ಅನ್ನುವಾಗ ಅಮೋದಿನಿ ನನ್ನ ಕೈ ಹಿಡಿದು ಮೆಲ್ಲಗೆ ಅಮುಕುತ್ತಾ " You do not worry about Samyukta. I will manage and take care of her. She will be perfectly alright in few days ". ಅಮೋದಿನಿಗೆ ಥ್ಯಾಂಕ್ ಯು ಸೋ ಮಚ್ ಅಂತ ಹೇಳಿ ಮನೆ ಕಡೆ ಹೊರಟೆ.
S (ಸಂಯುಕ್ತ) ತನ್ನ ಪ್ರೀತಿ ಪ್ರಾರಂಭಿಸಿದಳು ಅಷ್ಟೇ... ಇನ್ನು V (ವಿಮಲ) ಒಂದು ಅಂತರ ಕಾಯ್ದುಕೊಂಡುಬಿಟ್ಟಳು. ಉಳಿದವಳು A (ಅಮೋದಿನಿ).. ಅಮೋದಿನಿಯೆ ಅಂತ್ಯನಾ??
********************************************************************************************************************************
ಮನೆಗೆ ಬಂದಾಗ ೯:೩೦ ಆಗಿತ್ತು. ಆಗಲೇ ಅಣ್ಣನಿಗೆ ಕಾಲ್ ಮಾಡಿ ಅಮೋದಿನಿ ನನಗೆ ಒಪ್ಪಿಗೆ, ನೀವು ಅವರ ಮನೆಯವರಿಗೆ ತಿಳಿಸಿಬಿಡಿ ಅಂತ ಹೇಳಲು ಮನೆ ನಂಬರ್ ಡೈಯಲ್ ಮಾಡಿದವನು, ೨ ದಿನದಲ್ಲಿ ಹೇಳುತ್ತಿನಿ ಅಂದವನು ಈಗಲೇ ಒಪ್ಪಿಗೆ ಕೊಡುತ್ತಿದ್ದಾನೆ.. ಎಷ್ಟು ಆತುರ ನೋಡು ಅಂತ ಮನೆಯಲ್ಲಿ ರೇಗಿಸುತ್ತಾರೆ, ನಾಳೆ ಬೆಳಗ್ಗೆ ಹೇಳಿದರಾಯಿತು ಅಂತ ಸುಮ್ಮನಾಗಿ ಹಾಸಿಗೆ ಮೇಲೆ ಉರುಳಿದೆ. ಮನಸ್ಸು ನಿರಾಳವಾಗಿತ್ತು. ನಾವು ಪ್ರೀತಿಸಿದವರಿಗಿಂತ ನಮ್ಮನ್ನು ಪ್ರೀತಿಸಿದವರನ್ನು ಮದುವೆ ಮಾಡಿಕೊಳ್ಳುವುದೇ ಸರಿ ಅನ್ನೋದು ನಾನು ಮೊದಲಿನಿಂದಲೂ ನಂಬಿಕೊಂಡ ಸಿದ್ದಾಂತ. ಸಂಯುಕ್ತ - ಆಮೋದಿನಿ, ಇಬ್ಬರಲ್ಲಿ ನಾನು ಅಮೋದಿನಿಯನ್ನು ಆರಿಸಿದ್ದೆ. ಸಂಯುಕ್ತಳು ಆಮೋದಿನಿ ಈಸ್ ಗ್ರೇಟ್ ಅಂತ ಹೇಳಿದ್ದು ನನ್ನ ನಿರ್ಧಾರವನ್ನು ಅನುಮೋದಿಸಿದಂತೆ ಆಗಿತ್ತು. ಅಮೋದಿನಿಯಂತಹ ಹುಡುಗಿಯನ್ನ ಪಡೆಯಲು ನಾನೆಷ್ಟು ಅದೃಷ್ಟವಂತ.. ನನ್ನ ಖುಷಿಗೆ ಪಾರವೇ ಇರಲ್ಲಿಲ್ಲ.
ಆದರೆ ಆ ಸಂತೋಷ ಬಹಳ ಹೊತ್ತು ಉಳಿಯಲ್ಲಿಲ್ಲ. ಸಮಯ ಸುಮಾರು 10:45 ಇರಬಹುದು. ನನ್ನ ಮೊಬೈಲ್ ರಿಂಗಣಿಸಿತು. ಆಮೋದಿನಿ ಕಾಲ್ ಮಾಡಿದ್ದಳು. ನಾನು ವಾ ಆಮೋದಿನಿ ಅಂದುಕೊಳ್ಳುತ್ತಾ ಹಲೋ ಅಂದೇ. ಆ ಕಡೆ ಆಮೋದಿನಿ ಅಳುತ್ತಿದ್ದಳು.
ನಾನು - ಯಾಕೆ ಆಮೋದಿನಿ ಏನಾಯಿತು?
ಆಮೋದಿನಿ - ನಾನು ಆ ವಿಷಯವನ್ನು ಮನೆಯಲ್ಲಿ ಹೇಳಲೇಬಾರದಿತ್ತು. ತಪ್ಪು ಮಾಡಿಬಿಟ್ಟೆ.... ನಾನು ತಪ್ಪು ಮಾಡಿಬಿಟ್ಟೆ.
ನಾನು - ಯಾವ ವಿಷ್ಯ? ನೀ ಎನ್ ತಪ್ಪು ಮಾಡಿದೆ?
ಆಮೋದಿನಿ - ..........................................................
ನಾನು - ಹೌದಾ? ಅದೇ ಅವರ ಕಡೆ ನಿರ್ಧಾರ ಅಂತ?
ಆಮೋದಿನಿ - ಹೌದು..ಅದೇ ಕಡೆ ನಿರ್ಧಾರವಂತೆ. ನನ್ನನ್ನು ಒಂದು ಮಾತು ಕೇಳಲ್ಲಿಲ್ಲ. ನಾಳೆನೆ ಅಪ್ಪ ನಿಮ್ಮ ಮನೆಗೆ ಹೋಗ್ತಿದಾರಂತೆ ವಿಷ್ಯ ತಿಳಿಸೋದಿಕ್ಕೆ.
ನಾನು - ಒಹ್..
ಆಮೋದಿನಿ - ನಾ ಎನ್ ಮಾಡ್ಬೇಕು ಅಂತಾನೆ ಗೊತ್ತಾಗ್ತಿಲ್ಲ.
ನಾನು - ಆಮೋದಿನಿ, ಈಗ ಏನು ಮಾಡಲು ಸಾಧ್ಯವಿಲ್ಲ. ಬೆಳಗ್ಗೆ ಬೇಗನೆ ಸಿಗೋಣ.. ಕೂಡಿ ಮಾತಾಡಿ ಒಂದು ನಿರ್ಧಾರಕ್ಕೆ ಬರೋಣ.
ಆಮೋದಿನಿ - ಸರಿ.. ಆಯಿತು. ನಾಳೆ ಸಿಗೋಣ. ಗುಡ್ ನೈಟ್.
ನಾನು - ಗುಡ್ ನೈಟ್.
ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಯಿತು. ಮನೆಗೆ ಫೋನ್ ಮಾಡಿ ಈಗಲೆ ವಿಷಯವನ್ನು ತಿಳಿಸಿಬಿಡೋಣ ಅಂದುಕೊಂಡರೂ, ಅವರಾದರೂ ನೆಮ್ಮದಿಯಿಂದ ನಿದ್ದೆ ಮಾಡಲಿ ನಾಳೆ ಹೇಗಿದ್ದರೂ ಆಮೋದಿನಿ ತಂದೆ ಅಲ್ಲಿಗೆ ಹೋಗುತ್ತಿದ್ದಾರೆ. ಎಲ್ಲ ವಿಷಯ ತಿಳೀದೇ ತಿಳಿಯುತ್ತದೆ ಅಂದು ಕೊಂಡು ತಲೆ ಮೇಲೆ ಕೈ ಹೊತ್ತು ಸುಮ್ಮನೇ ಕುಳಿತುಬಿಟ್ಟೆ.
ಅಜ್ಜಿ ಹೇಳಿದ ಮಾತು ನೆನಪಾಯಿತು. ಆಗ ಅಜ್ಜಿ ಎಷ್ಟು ದೈನ್ಯದಿಂದ ಕೇಳಿಕೊಂಡಿದ್ದರು.. ಮಗು ಬೇಡ ಅಂತ.. ನಾನೆಲ್ಲಿ ಕೇಳಿದೆ.. ಹೋಗಿ ಬಂದೆ ಬಿಟ್ಟೆ. ಅಂದು ಅಜ್ಜಿಯ ಮಾತನ್ನು ಕೇಳಿದ್ದರೆ ನನಗಿಂದು ಈ ಸ್ಥಿತಿ ಬರುತ್ತಿರಲ್ಲಿಲ್ಲ.
ಮಾರನೆ ದಿನ ನಾನು ಆಮೋದಿನಿ ಕಾರಂಜಿ ಆಂಜನೇಯನ ದೇವಸ್ಥಾನದಲ್ಲಿ ಬೆಳಗ್ಗೆ 7ಕ್ಕೆ ಭೇಟಿ ಮಾಡಿ ಸುಮಾರು ಹೊತ್ತು ಚರ್ಚಿಸಿದೆವು. ನಾನೇ ದುಡುಕಿಬಿಟ್ಟೆ ಕಣೋ.. ಅಮ್ಮನಿಗೆ ಹೇಳಬಾರದಿತ್ತು.. ಮದುವೆಯಾದ ಮೇಲೆ ತಿಳಿದ್ದಿದ್ದರೆ ಅವರೇನು ಮಾಡುತ್ತಿದ್ದರು? ನಿನ್ನೆ ರಾತ್ರಿ ನನ್ನ ಒಂದು ಮಾತು ಕೇಳಲ್ಲಿಲ್ಲ.. ತಾತನ ಮಾತನ್ನು ಅಣ್ಣ ಎಂದೂ ಮೀರೋದಿಲ್ಲ.. ತಾತನದು ಹಟ ಸ್ವಭಾವ.. ಬೇಡ ಎಂದರೆ ಬೇಡ..ಆಮೋದಿನಿಗೇನು ಕಮ್ಮಿ, ಇನ್ನೂ ಒಳ್ಳೇ ಹುಡುಗ ಸಿಗುತ್ತಾನೆ.. ನೀವು ಎಷ್ಟೇ ಬಲವಂತ ಮಾಡಿದರೂ ನಾನು ಇಂಥದ್ದನ್ನೆಲ್ಲ ಒಪ್ಪೋದಿಲ್ಲ ಅಂದುಬಿಟ್ಟರು. ಅಣ್ಣನಿಗೆ ಬಹಳ ಬೇಸರವಾದರೂ ತಾತನಿಗೆ ಎದುರಾಗಿ ನಿಂತು ಈ ಮದುವೆ ಮಾಡಲು ಅವರಿಗೆ ಇಷ್ಟ ಇಲ್ಲ. ಹಾಗಂತ ತಾತನನ್ನ ಒಪ್ಪಿಸುವುದು ಆಗದಂತ ಕೆಲಸ.
ಎಲ್ಲ ವಿಧಿಯಾಟ. ನಾನು ಏನೂ ಮಾತಡಲ್ಲಿಲ್ಲ. ತಂದೆಯ ಮಾತನ್ನು ಮೀರದ ಅಮೋದಿನಿಯ ಅಪ್ಪ ನಮ್ಮಿಬ್ಬರಿಗೂ ಆದರ್ಶವಾಗಿಬಿಟ್ಟಿದ್ದರು. ದೊಡ್ಡವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವಿಬ್ಬರೂ ಬದ್ಡರಾಗಿರೋಣ ಅಂದುಕೊಂಡು ಹೊರಟುಬಿಟ್ಟೆವು.
ಮಾರನೆ ದಿನ ಆಮೋದಿನಿ ತಂದೆ ನಮ್ಮ ಮನೆಯಲ್ಲಿ ಹೇಳಿದ್ದಿಷ್ಟು:
ನನಗೆ ಈ ಮಾತನ್ನು ಹೇಳಲು ತುಂಬಾ ಬೇಸರವಾಗುತ್ತಿದೆ. ನಮಗೆ ಈ ಸಂಬಂಧ ಬೇಡ.. ನೀವು ಬೇಕಂತಲೇ ಆ ವಿಚಾರವನ್ನು ತಿಳಿಸಲ್ಲಿಲ್ಲವೋ ಅಥವಾ ಆ ವಿಷ್ಯ ಪ್ರಸ್ತಾಪಕ್ಕೆ ಬರಲ್ಲಿಲ್ಲವೋ ಅದರ ಚರ್ಚೆ ಬೇಡ. ತೀರಾ ಸಂಪ್ರದಾಯಸ್ಥರಾದ ನಮ್ಮ ತಂದೆಗೆ ನಿಮ್ಮ ಮಗ ಎಲ್ಲ ರೀತಿಯಿಂದ ಹಿಡಿಸಿದ್ದ.. ಆದರೆ ಇದೊಂದು ವಿಚಾರದ ಹೊರತಾಗಿ..ನಿಮ್ಮ ಮಗ ವಿದೇಶಕ್ಕೆ ಹೋಗಿ ಬಂದಿರುವ ವಿಚಾರ ನಮಗೆ ನಿನ್ನೆಯಷ್ಟೇ ನಿಮ್ಮ ಮಗನ ಮುಖಾಂತರ ತಿಳಿಯಿತು. ನನ್ನ ಅಭ್ಯಂತರ ಏನೂ ಇಲ್ಲ.. ಆದರೆ ಇಳಿ ವಯಸ್ಸಿನ್ನಲ್ಲಿರುವ ನನ್ನ ತಂದೆಯನ್ನು ಎದುರು ಹಾಕಿಕೊಂಡು ಮಗಳ ಮದುವೆ ಮಾಡಲು
ನನಗೆ ಸುತಾರಾಂ ಇಷ್ಟವಿಲ್ಲ. ನಡೆದ್ದದ್ದೆಲ್ಲ ಒಂದು ಕಹಿ ಘಟನೆಯಂತ ಮರೆತು ಬಿಡಿ. ದಯಮಾಡಿ ನಮ್ಮನ್ನು ಕ್ಷಮಿಸಿ.
ಅಣ್ಣ ಫೋನ್ ಮಾಡಿ ವಿಷಯ ತಿಳಿಸಿದರು. ಹೋಗಲಿ ಬಿಡಣ್ಣ.. ಏನ್ ಮಾಡೋಕೆ ಆಗತ್ತೆ.. ಎಲ್ಲ ನಾವ್ ಅಂದುಕೊಂಡಂಗೇ ಆಗೋದಿಲ್ಲ. ರಾಯರೆ ಮುಂದೆ ದಾರಿ ತೋರುತ್ತಾರೆ. ನೀವು ಬೇಜಾರು ಮಾಡಿಕೊಬೇಡಿ ಅಂತ ಕಟ್ ಮಾಡಿದೆ.
FM ಆನ್ ಮಾಡಿದೆ.
ಅರಿಯದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ.. ಮರಳಿ ಕೊಡುವೆಯ ತಿರುಗಿ ಗೆಳತಿ ಬರುವೆಯಾ.. ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು... ಸ್ವಪ್ನದ ಸೆರೆಮನೆಗೆ ತೆರಳಿದೆ ಒಲವಿಂದು ನಗುವ ಕಂಗಳಲಿ ಮಿಂಚಿದೆ ಹನಿಯೊಂದೂ.. ಅರಿಯದಂತೆ ಕಳೆದುಹೋದ ಆ ನಲುಮೆಯ ಕ್ಷಣಗಳ..
ಮರಳಿ ಕೊಡುವೆಯ ತಿರುಗಿ ಗೆಳತಿ ಬರುವೆಯಾ..... ಮುಗಿಯದ ಕವಿತೆ ನೀನು ಮರೆಯದ ಹಾಡು ನೀನು... ಪದಗಳ ಬರೆಯದಲೆ ಪತ್ರವು ಮುಗಿದಾಗ ನೆನಪಿನ ಜಾತ್ರೆಯಲಿ ತಬ್ಬಲಿ ಅನುರಾಗ.. ಎದೆಯ ಗೂಡಿನಲ್ಲಿ ಬೆಳಗುವ ಪ್ರೇಮದ ಹಣತೆಯ ಸುತ್ತಾ ಕಪ್ಪು ಕವಿದಿದೆ.. ಕುರುಡು ಕನಸು ಮಲಗಿದೆ.....
ಯಾವುದೋ ಪುಸ್ತಕದಲ್ಲಿ ಓದಿದ ಕೆಳಗಿನ ಸಾಲು ನೆನಪಾಯಿತು.
You will not get what you love but what you are !

ಕತೆ ತುಂಬಾ ಚೆನ್ನಾಗಿದೆ ಸರ್. ಸಂಪದಿಂದ ನಿಮ್ಮ ಬ್ಲಾಗ್ನವರೆಗೆ ಹುಡುಕಿಕೊಂಡು ಓದಿಸಿತು. ಅವಳ ಕಾಲ್ ಬರಲಿ ಅಂತ ಕತೆಯ ಮೊದಲಲ್ಲಿ ಅನ್ನಿಸುತ್ತಿತ್ತು. ಅಂತ್ಯ ಚೆನ್ನಾಗಿದೆ.
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ವಿಶಾಲ್ ಅವರೆ.
DeleteTumba chenagide kathe ... Idu nimma nija jeevanada kathe ya ? Samyukta jote eegina sambandha ?
ReplyDeleteಧನ್ಯವಾದಗಳು ಪ್ರಭು ಅವರೆ. ಕೆಲವೊಂದು ಘಟನೆಗಳನ್ನು ಬಿಟ್ಟರೆ ಇದೊಂದು ಕಾಲ್ಪನಿಕ ಕಥೆಯಷ್ಟೇ. ನನ್ನ ನಿಜ ಜೀವನಕ್ಕೆ ಸಂಬಂಧಪಟ್ಟಿದ್ದಲ್ಲ. ಸಂಯುಕ್ತಾ ನನ್ನ ಕನಸಿನ ಕನ್ಯೆಯ ಪಾತ್ರವೇ ಹೊರತು ನಿಜ ಜೀವನದಲ್ಲಿ ಇಲ್ಲ.
DeleteVery Nice story, Gripping
ReplyDelete