Pages

Saturday, December 29, 2012

ಭಾರತ-ಪಾಕ್ T20

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಹಫೀಸಾ (ಹಫೀಜ್)
ಮಾಡುತ್ತಿದ್ದ ಬ್ಯಾಟಿನಿಂದ ಬಹಳ ಆವಾಸಾ (ಆವಾಜ್)
ಔಟ್ ಮಾಡಲು ನಮ್ಮವರು ಮಾಡುತ್ತಿದ್ದರು ಹರಸಾಹಸ
ಭಾರತೀಯ ಬೌಲರ್ಗಳ ಮೇಲಿತ್ತು ನಮಗೆ ಸಾಕಷ್ಟು ಭರೊಸ
ಪಾಕಿಸ್ತಾನದಲ್ಲಿ ನಡೆಯುತ್ತಿತ್ತು ಸಾಮೂಹಿಕ ನಮಾಸ (ನಮಾಜ್)
ಪ್ರಾರ್ಥನೆಗೂ ಮೀರಿ ನಿಂತಿತ್ತು ನಮ್ಮವರು ಕೊಟ್ಟಿದ್ದ ಸಮಾಸ (ಬಿಡಿಸಲಾಗದ ಟಾರ್ಗೆಟ್)
ಇತಿಹಾಸದಲ್ಲೇ ಮೊದಲ ಬಾರಿ "ಶುಕ್ರವಾರ"ದಂದು (ಪಾಕ್ ವಿರುದ್ದ) ಭಾರತ ಗೆದ್ದಿದ್ದು ನಮಗೆಲ್ಲ ಸಂತಸ

**************************************************************************

KP :- ಬಾಳ್ ಠಾಕ್ರೆ ಬದುಕಿದ್ದರೆ ಈ ಸೀರೀಸ್ಗೆ ಬೀಳುತ್ತಿತ್ತು ಗರಗಸ :P
 

Wednesday, December 26, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೨


ಬೃಂದಾ ಲಂಡನ್ನಿಗೆ ಹೋಗಿ ಬಂದಳೋ ಇಲ್ಲವೋ ? ಗೊತ್ತಿಲ್ಲ...ಅವಳು ನನಗೆ ತಿರುಗಿ ಕರೆ ಮಾಡಲೇ ಇಲ್ಲ.. ಅವಳ ಐಡಿಯಾಗಳು ಫಲಿಸಲ್ಲಿಲ್ಲವೇನೋ ? ಎದುರಿಗಿದ್ದವರೇ ಏನೂ ಮಾಡಲಾಗದಿರುವಾಗ ಇನ್ನ ಇವಳು ಮೊಬೈಲ್ ಲಿ ರೆಕಾರ್ಡ್ ಆಗಿರೋ ನಿನ್ನ ಧ್ವನಿ ಮತ್ತೆ ನಿನ್ನ ಫೋಟೋ ಹಿಡಿಕೊಂಡು ನಿಂತರೆ ಪ್ರಿಯ ಎದ್ದು ಕೂರಕ್ಕೆ ನೀನೇನು ಪವಾಡ ಪುರುಷಾನ? ಕೇಳಿದವರು ನಗ್ತಾರೆ ಅಷ್ಟೇ ಅಂತ ಸಂಯುಕ್ತ ಹೇಳಿದ್ದಳು. ಸಂಯುಕ್ತ ಹೇಳಿದ್ದು ನನಗೂ ಸರಿಯೆನ್ನಿಸಿತು.

ಆಮೇಲೆ ನಾನು ಎಂದಿನಂತೆ ನನ್ನ ಕೆಲಸದಲ್ಲಿ ಮಗ್ನನಾಗಿಬಿಟ್ಟೆ. ಸಂಯುಕ್ತ ೮ ನೆ ಸೆಮಿಸ್ಟರ್ ಲಿ ಡಿಸ್ಟಿಂಕ್ಷನ್ ಲಿ ತೇರ್ಗಡೆಯಾಗಿ ದ್ದಳು. ೨-೩ ಕಂಪನಿಯಲ್ಲಿ ಕ್ಯಾಂಪಸ್ ಲಿ ಸೆಲೆಕ್ಟ್ ಆಗಿದ್ದ ಸಂಯುಕ್ತ ಕೆಲಸಕ್ಕೆ ಹೋಗಲು ತುದಿಗಾಲಲ್ಲಿ ನಿಂತಿದ್ದಳು. ಆದರೆ ಅವರಮ್ಮ ಅವಳಿಗೆ ಮದುವೆ ಮಾಡಲು ತವಕಿಸುತ್ತಿದ್ದರು. ನಾನು ಅಮ್ಮ ಮಗಳು ಇಬ್ಬರನ್ನು ಒಪ್ಪಿಸಿ, ಸಂಯುಕ್ತಳಿಗೆ ಪೋಸ್ಟ್ ಗ್ರಾಜುಯೇಷನ್ ಮಾಡಲು GATE ಪರೀಕ್ಷೆಗೆ ಸಿದ್ದತೆ ನಡೆಸಲು ತಿಳಿಸಿದೆ. ಅವಳ ಕೋಚಿಂಗ್ ಗೆ ಹಣ ನಾನೇ ಕಟ್ಟಿದೆ. ಜೊತೆಗೆ ಪ್ರತಿದಿನ ರಾತ್ರಿ ೯ಕ್ಕೆ ಕೋಚಿಂಗ್ ಮುಗಿದ ನಂತರ ನಾನೇ ಹೋಗಿ ಕರೆದುಕೊಂಡು ಬಂದು ಅವರ ಮನೆಗೆ ಬಿಡುತ್ತಿದ್ದೆ. ಚೆನ್ನಾಗಿ ಓದಿದ ಸಂಯುಕ್ತ  IIT Kharagpur ನಲಿ ಸೀಟು ಗಿಟ್ಟಿಸಿದಳು.  ಅವಳ ಅಪ್ಪ ಅಮ್ಮರಿಗೆ ಅಲ್ಲಿಗೆ ಕಳುಹಿಸಲು ಒಪ್ಪಿಸಿ ನಾನೇ ಖುದ್ದಾಗಿ ಹೋಗಿ ಫೀಸ್ ಕಟ್ಟಿ ಅವಳಿಗೆ ಅಲ್ಲಿ ಎಲ್ಲ ವ್ಯವಸ್ಥೆ ಮಾಡಿ ಬಂದೆ. ಅಮೋದಿನಿಗೆ B.Eಲಿ ಕ್ಲಾಸ್ಮೇಟ್ ಆಗಿದ್ದ ಸುದರ್ಶನ್ ಸಂಯುಕ್ತಳಿಗೆ MTech  ಲಿ ಜೊತೆಯಾಗಿದ್ದರಿಂದ ಸಂಯುಕ್ತಳಿಗೆ ಕೊಂಚ ನೆಮ್ಮದಿಯಾಗಿತ್ತು. [ಈ ವಿಷಯ ನನಗೆ ಅಮೋದಿನಿ  ಭೇಟಿಯಾಗುವ ಮುಂಚೆ ಗೊತ್ತೇ ಇರಲ್ಲಿಲ್ಲ.ಸಂಯುಕ್ತ ಹೇಳೇ ಇರಲ್ಲಿಲ್ಲ.]

[ಅಮೋದಿನಿಯ ಬಗ್ಗೆ ಹೆಚ್ಚು ತಿಳಿಯಲು "ಅವಳ ಕಾಲ್ ಬರುತ್ತಾ" ಕಥೆ ಇಲ್ಲಿ ಓದಿ - http://sudhieblog.blogspot.in/2012/03/blog-post.html]

ಎರಡು ವರ್ಷ ಎರಡು ದಿನದಂತೆ ಕೆಳೆದಿತ್ತು. ಈ ಅವಧಿಯಲ್ಲೇ ನನಗೆ ವಿದೇಶಕ್ಕೆ ಹಾರುವ ಅವಕಾಶ ಸಿಕ್ಕಿತ್ತು. ಅಲ್ಲೇ ಬರೆದಿದ್ದು lifeu ಇಷ್ಟೇನೆ ! ಕವನ.

[lifeu ಇಷ್ಟೇನೆ ಕವನ ಇಲ್ಲಿ ಓದಿ - http://sudhieblog.blogspot.in/2011/10/lifeu.html ]

ಪ್ರಿಯಳ ಮೇಲೆ ನನಗೆ ಯಾವ ಭಾವನೆಗಳು ಉಳಿದಿರಲ್ಲಿಲ್ಲ.. ಅವಳನ್ನು ಒಮ್ಮೆ ನೋಡುವ ಕುತೂಹಲ ಇತ್ತು ಅಷ್ಟೇ.. ಅದೂ ಕೂಡ ನಾನು ಮೋಸ ಹೋಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು. ಆದರೆ ಮತ್ತೆ ಸುಮಾರು ೨ ವರ್ಷಗಳ ಕಾಲ ಅವಳ ಬಗ್ಗೆ ನನಗೆ ಏನು ತಿಳಿಯಲೇ ಇಲ್ಲ .. ಅಂದರೆ ಪ್ರಿಯಳ ಜೊತೆ ನಾನು ನೇರ ಮಾತಾಡಿ ಸುಮಾರು ನಾಲ್ಕು ವರ್ಷಗಳೇ ಕಳೆದುಹೋಗಿತ್ತು.

*******************************************************************************

ಇವತ್ತು ಬೆಳಗ್ಗೆ ಬೃಂದಾ ಕರೆ ಮಾಡಿ ಹೇಳಿದ್ದಿಷ್ಟು [ಬೃಂದಾ ನನಗೆ ಕರೆ ಮಾಡಿದ್ದರ ಬಗ್ಗೆ ನೆನೆಪಿಲ್ಲದ್ದಿದ್ದರೆ ಭಾಗ ೧ ನೋಡಿ ] ---- ಏ ಸರಿಯಾಗಿ ಎದ್ದಿದ್ಯ ತಾನೇ? ಎಚ್ಚರಿಕೆ ಇದ್ಯಾ? ನಾನ್ ಹೇಳೋದನ್ನ ಸರ್ಯಾಗಿ ಕೇಳುಸ್ಕೋ ................................... ನಾನು ಲಂಡನ್ನಿಗೆ ಹೋಗಿದ್ದೆ.. ನಾನು ಮಾಡಿದ ಯಾವ ಐಡಿಯಾಗಳು ಪ್ರಯೋಜನವಾಗಲ್ಲಿಲ್ಲ. ಹಾಗಾಗಿ ನಾನು ನಿನಗೆ ತಿರುಗಿ ಕರೆ ಮಾಡಿರಲ್ಲಿಲ್ಲ... ಹಾಗು ನಾನು ಅಂಕಲ್ ಮನೆಗೆ ಹೋಗುತ್ತಿದ್ದುದು ಅಷ್ತಿಕ್ಕಷ್ಟೇ... ಅವರು ನನ್ನ ಹತ್ತಿರ ಯಾವ ವಿಷಯವನ್ನು ಸರಿಯಾಗಿ ಹೇಳುತ್ತಿರಲ್ಲಿಲ್ಲ. ಈಗ ಹತ್ತು ನಿಮಿಷದ ಹಿಂದಷ್ಟೇ ಆಂಟಿ  ಫೋನ್ ಮಾಡಿ ಪ್ರಿಯ ಬರುತ್ತಿದ್ದಾಳೆ ನಮ್ಮ ಜೊತೆ ಏರ್ಪೋರ್ಟ್ ಗೆ ಬರ್ತ್ಯ ಅಂತ ಕೇಳುದ್ರು? ನಾನು ಹೂ ಅಂದು ನಿನಗೂ ವಿಷಯ ತಿಳಿಸಿದ್ದಿನಿ.. ನೀನು ಬಾ.. ಈ ಕ್ಷಣಾನೆ ಹೊರಡು. ನಾನು ರಾಜಾಜಿ ನಗರದ SJR ವಿಮೆನ್'s ಕಾಲೇಜ್ ಹತ್ರ ಕಾಯ್ತಿರ್ತೀನಿ ಅಂತ ಒಂದೇ ಉಸಿರಿಗೆ ಹೇಳಿ ನನ್ನ ಉತ್ತರಕ್ಕೂ ಕಾಯದೆ ದೂರವಾಣಿ ಸಂಪರ್ಕವನ್ನು ಕಡಿದಳು.


ಯಾಕೆ ಫೋನ್ ಕಟ್ ಮಾಡ್ದೆ? ಯಾಕೆ ಕಟ್ ಮಾಡ್ದೆ? ನಾನು ಕನವರಿಸುತ್ತಿದ್ದೆ. ಬೃಂದಾ ಯಾವ ಫೋನೂ? ಯಾರ್ ಕಟ್ ಮಾಡಿದ್ದು? ನಿನ್ನ ಹೆಂಡತಿ ಫೋನ್ ಮಾಡಿದ್ದಳ? ಅಂತ ಕೇಳಿದಳು. ನಾನು ಎಚ್ಚರಗೊಂಡು ಎದ್ದು ಕೂತೆ. [ನಾನು ಕಾರಿನಲ್ಲಿ ಮಲಗಿದ್ದುದು ನೆನಪಿಲ್ಲದ್ದಿದ್ದರೆ ಭಾಗ ೨ ನೋಡಿ ]. ನನಗಿನ್ನೂ ಮದುವೆಯಾಗಿಲ್ಲ ಅಂತ ಬೃಂದಾಳಿಗೆ ತಿಳಿಸಬೇಕು ಅನಿಸಲಿಲ್ಲ. ನಮ್ಮ ಕಾರು ಏರ್ಪೋರ್ಟಿನ ಪಾರ್ಕಿಂಗ್ ಕಡೆ ಪ್ರವೇಶಿಸುತ್ತಿತ್ತು. ಗಾಡಿ ಪಾರ್ಕ್ ಮಾಡಿ ಆಂಟಿ ಅಂಕಲ್ ಇದ್ದ ಕಡೆ ನಾವು ಬಂದೆವು. ಬೃಂದಾ ನನಗೆ ಅವರ ಪರಿಚಯ ಮಾಡಿಸಿದಳು. ನನ್ನ ಪರಿಚಯ ಅವರಿಗೆ ಇತ್ತಂತೆ! ನೀವು ಬಂದದ್ದು ಸಂತೋಷವಾಯಿತು ಅಂತ ಹೇಳಿ ಅಂಕಲ್ ನನ್ನನ್ನು ಅಪ್ಪಿಕೊಂಡು You are great ಇವತ್ತು ನಮ್ಮ ಪ್ರಿಯ ಬದುಕಿದ್ದಾಳೆ ಅಂದ್ರೆ ಅದು ನಿಮ್ಮಿಂದಲೇ ಅಂದರು.  ಆಂಟಿ ಕೂಡ ಹೂ ಗುಡುತ್ತಿದ್ದರು.  ಅಷ್ಟರಲ್ಲಿ ಲಂಡನ್ನಿಂದ Luftansa Airlines ಬಂದಿಳಿದಿತ್ತು.


ಸುಮಾರು ೩೦-೩೨ ವಯಸ್ಸಿನ ಸ್ವಲ್ಪ ನನ್ನದೇ ಹೋಲಿಕೆ ಇರುವ ಹುಡುಗ, ಕೈಯಲ್ಲಿ ಒಂದು ಮಗುವನ್ನು ಹಿಡಿದ, ಸಣ್ಣ ಜುಟ್ಟಿದ್ದ ಹುಡುಗಿ ನಮ್ಮ ಕಡೆ ಬರುತ್ತಿದ್ದುದು ಕಾಣಿಸಿತು. ಅವರು ನಮ್ಮ ಹತ್ತಿರ ಬರುತ್ತಿದ್ದಂತೆ, ಅಂಕಲ್ ನನ್ನ ಮತ್ತೆ ಬೃಂದಾ ಕಡೆ ನೋಡಿ, ಮೀಟ್ Mr.Sujay , Priya's Husband ಅಂದರು. ನಾವಿಬ್ಬರು ಹುಬ್ಬೇರಿಸಿ ನಮ್ಮ ಪರಿಚಯ ಮಾಡಿಕೊಳ್ಳಬೇಕು ಅಷ್ಟರಲ್ಲಿ ಸುಜಯ್ I Know both of you ಅಂದನು. ಆಗಲೇ ಪ್ರಿಯ Who are these Suju? ನಂಗೆ ಗೊತ್ತೇ ಇಲ್ಲ ಅಂದಳು. ಬೃಂದಾ ಪ್ರಿಯಳ ಹತ್ತಿರ ಹೋಗಿ ಏ ಪ್ರಿಯ ಏನಾಗಿದೆ ನಿನಗೆ ನಾನು ಕಣೆ ಬೃಂದಾ ಅಂದಳು. ಸುಜಯ್ ಮಧ್ಯೆ ಬಂದು, Priya you go with aunty and uncle. I will join you at home ಅಂತ ಹೇಳಿ, ಪ್ರಿಯಾಳಿಗೆ ಆಂಟಿ ಅಂಕಲ್ ಎಂದೇ ಪರಿಚಿತವಾಗಿರುವ ಅವರ ಅಪ್ಪ ಅಮ್ಮ ನ ಜೊತೆಯಲ್ಲಿ ಪ್ರಿಯಾಳನ್ನ ಫಾರ್ಚಿ ಹತ್ತಿಸಿ ತಾನು ನಾವು ಬಂದಿದ್ದ ಮ್ಯಾಟಿಲಿ ಬಂದು ಕೂತ.

ಕಾರಿನಲ್ಲಿ ಸುಜಯ್ ನಮಗೆ ಹೇಳಿದ್ದು :

ಸುಜಯ್ ಡಾ. ಶೀಲರ ಮಗ. ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಅವನಿಗೆ ಪ್ರಿಯಳ ಕೇಸ್ ಕುತೂಹಲ ಮೂಡಿಸಿತ್ತು. ಬೃಂದಾ ಲಂಡನ್ನಿಗೆ ಹೋಗೋ ಆರು ತಿಂಗಳು ಮುಂಚಿಂದ ಅವನು ಪ್ರಿಯ ಕೇಸ್ ಸ್ಟಡಿ ಮಾಡುತ್ತಿದ್ದ. ಆದರೂ ಏನು ಪ್ರಯೋಜನವಾಗಿರಲ್ಲಿಲ್ಲ. ಅವನು ಒಂದು ವಾರದ ಮಟ್ಟಿಗೆ ರಜೆಯ ಮೇಲೆ ಹೋಗಿದ್ದಾಗ ಬೃಂದಾ ಅಲ್ಲಿ ಹೋಗಿದ್ದರಿಂದ ಅವನ ಪರಿಚಯ ಅವಳಿಗಾಗಿರಲ್ಲಿಲ್ಲ. ಬೃಂದಾ ಲಂಡನ್ನಿಗೆ ಹೋದಾಗ ಪ್ರಿಯಳ ಮೊಬೈಲ್  ಅನ್ನು ಡಾ. ಶೀಲ ಅವರಿಗೆ ಕೊಟ್ಟು ಅದರಿಂದ ಏನಾದರು ಪ್ರಯೋಜನವಾಗಬಹುದು ಅಂತ ಹೇಳಿ ಅಲ್ಲೇ ಬಿಟ್ಟು ಬಂದಿದ್ದಳು. ಆ ಮೊಬೈಲ್ ಇಟ್ಟುಕೊಂಡು ಬೃಂದಾ ಏನೋ ಸಾಹಸ ಮಾಡುತ್ತಿದ್ದಾಗ ಡಾ. ಶೀಲ ಒಮ್ಮೆ ಗಮನಿಸಿದ್ದರಂತೆ. ಹಾಗಾಗಿ ಆ ಮೊಬೈಲ್ ಅವರಿಗೆ ಸಿಕ್ಕಿದಾಗ ಅದನ್ನು ಅವರು ಸುಜಯ್ ಗೆ ನೀಡಿದ್ದರು. ಸುಜಯ್ ಆ ಮೊಬೈಲ್ ಲಿ ಸೇವ್ ಆಗಿದ್ದ ನನ್ನ ಪ್ರಿಯಳ ಪ್ರತಿಯೊಂದು ಸಂಭಾಷಣೆಯನ್ನು ಆಲಿಸಿದ್ದ. ಜೊತೆಗೆ ನಮ್ಮ ಚಾಟ್ ಹಿಸ್ಟರಿ ಓದಿದ್ದ... ಪ್ರಿಯಳನ್ನು ಸರಿ ಮಾಡಲು ಏನೇನೋ ಮಾಡಿದ್ದ ಸುಜಯ್ ಗೆ , ನನ್ನ ಅವಳ ಸಂಭಾಷಣೆಯಲ್ಲಿನ A lot can happen over a coffee ಅನ್ನೋ ವಾಕ್ಯ ನೋಡಿದ ಕೂಡಲೇ ಮಿಂಚಿನಂತೆ ಒಂದು ಐಡಿಯಾ ಸಿಕ್ಕಿತಂತೆ. ಪ್ರಿಯಳನ್ನು ಕೆಫೆ ಕಾಫಿ ಡೇ  ಗೆ ಕಳುಹಿಸಲು ಆಸ್ಪತ್ರೆಯಲ್ಲಿ ಒಪ್ಪದ್ದಿದ್ದಾಗ, ಅವನು ಆಸ್ಪತ್ರೆಯ ಒಂದು ಭಾಗವನ್ನೇ ಸ್ವಲ್ಪ ದಿನದ ಮಟ್ಟಿಗೆ ಕೆಫೆ ಕಾಫಿ ಡೇ ಆಗಿ ಪರಿವರ್ತಿಸಿದ್ದನಂತೆ. ಮೊದಲೆರಡು ದಿನ ಬರಿ ಕಾಫಿ ಡೇ ಮುಂದೆ ಅವಳನ್ನು ಕರೆದುಕೊಂಡು ಹೋಗಿದ್ದಂತೆ.. ಮೂರನೇ ದಿನ ಅವಳನ್ನು ಕಾಫಿ ಡೇ ಒಳಗೆ ಕರೆದುಕೊಂಡು ಹೋಗುತ್ತಿದ್ದಂತೆ ಅವಳು A lot can happen over a coffee ಅಂದಳಂತೆ. ಅಂದಿಗೆ ಅವಳು ಯಥಾಸ್ಥಿತಿಗೆ  ಮರಳಿದರೂ ಅವಳಿಗೆ  ಹಳೆಯ ನೆನಪುಗಳು ಯಾವುದೂ ಇರಲ್ಲಿಲ್ಲವಂತೆ.

ಅಂದಿನಿಂದ ಹೊಸ ಜೀವನ ಆರಂಭಿಸಿದ್ದ ಪ್ರಿಯ, ಯಾರನ್ನೇ ಕಂಡರೂ ಯಾವ ವಸ್ತುವನ್ನೇ ಕಂಡರೂ ಅದೇನೆಂದು ಪ್ರಶ್ನೆ ಮಾಡುತ್ತಿದ್ದಳು. ಅವಳನ್ನು ೨ ವರ್ಷದಿಂದ ಚಿಕ್ಕ ಮಗುವಿನ ಹಾಗೆ ಬೆಳೆಸಿದ್ದಾನೆ ಸುಜಯ್... ಅವನನ್ನು ಬಿಟ್ಟು ಬೇರೊಬ್ಬರ ಜೊತೆ ಮಾತಾಡಲು ಹೆದರುತ್ತಿದ್ದ ಪ್ರಿಯ ಇವತ್ತು ಒಂದು ಮಗುವಿನ ತಾಯಿಯಾಗಿ ಲೈಫ್ ಗ್ರೋ ಆಸ್ಪತ್ರೆಯಲ್ಲೇ ಸುಜಯ್ ಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಸುಜಯ್ ಇನ್ನು ಏನೋ ಹೇಳುತ್ತಲೇ ಇದ್ದ... ಆದರೆ ನನಗ್ಯಾವುದೂ ಬೇಕಿರಲ್ಲಿಲ್ಲ.
ಸ್ವಲ್ಪ ಹೊತ್ತಿಗೆ ಕಾರು ನಾವು ಬೆಳಗ್ಗೆ ಬಂದಿದ್ದ ಬಂಗಲೆಯ ಮುಂದೆ ನಿಂತಿತ್ತು.  ನಾವು ಬಂದ ೫-೧೦ ನಿಮಿಷಕ್ಕೆ ಫಾರ್ಚಿ ಕೂಡ ಬಂದಿತು. ನಾವು ಎಲ್ಲರೂ ಒಟ್ಟಿಗೆ ಒಳಹೋದೆವು. ನಾವು ಒಳ ಹೋಗುತ್ತಿದ್ದಂತೆ ಬೃಂದಾ ನನ್ನ ಮತ್ತೆ ಸುಜಯ್ ನ ನನಗೆ ಬೆಳಗ್ಗೆ ತೋರಿಸಿದ್ದ ಮಹಡಿಯ ಮೇಲಿನ ರೂಮಿಗೆ ಕರೆದೊಯ್ದಳು... ಏನಾಶ್ಚರ್ಯ!! ಆ ರೂಮಿನ ಗೋಡೆಗಳ ತುಂಬಾ ಬರೆ ನನ್ನ ಫೋಟೋಗಳು ರಾರಾಜಿಸುತ್ತಿದೆ... ಬೃಂದಾ ಹೇಳುತ್ತಿದ್ದಳು.. ನೋಡು ಇದೇ ಕೋಣೆಯಲ್ಲಿ ಪ್ರಿಯ ಇದ್ದಿದು... ಅವಳು ನಿನ್ನನ್ನು ಎಷ್ಟು ಹಚ್ಚಿಕೊಂಡಿದ್ದಳು ಎನ್ನುವುದು ನಾನು ಹೇಳಲೇಬೇಕಿಲ್ಲ ಅಲ್ಲವಾ?? ಸುಜಯ್ ಕೂಡ ಮೂಕನಾಗಿದ್ದ..

ಆಗಲೇ ಅಮ್ಮ ನನಗೆ ಕರೆ ಮಾಡಿದ್ದರು. ವಿಮಲಳಿಗೆ [ವಿಮಲಳ ಬಗ್ಗೆ ಹೆಚ್ಚು ತಿಳಿಯಲು ಅವಳ ಕಾಲ್ ಬರುತ್ತಾ ಕಥೆ ಇಲ್ಲಿ ಓದಿ - http://sudhieblog.blogspot.in/2012/03/blog-post.html ] ಮದುವೆ ಗೊತ್ತಾಯಿತ್ತಂತೆ ಅಂತ ಅಮ್ಮ ಹೇಳುತ್ತಿದ್ದರೆ ನನಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತೆ ಆಗುತ್ತಿತ್ತು. ನಾನು ಅಮ್ಮ ಹೇಳಿದ ಮಾತಿನಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಹತ್ತಿರ ಬಂದ ಸುಜಯ್ ನನಗೆ - I cant believe that you had impressed her this much.. you are simply great man ಎಂದು ನನ್ನನ್ನು ಅಪ್ಪಿಕೊಂಡಿದ್ದ. ಅಷ್ಟರಲ್ಲಿ Aunt said this is my room ಅನ್ನುತ್ತಾ ಅಲ್ಲಿಗೆ ಬಂದ ಪ್ರಿಯ, ಅಲ್ಲಿರುವ ಫೋಟೋಗಳನ್ನು ನೋಡಿ, ನನ್ನ ಕಡೆ ತಿರುಗಿ, I see people pasting hero heroines posters in their room.. How crazy you man? you have pasted your posters only.. but this is my room from now on... ಅನ್ನುತ್ತಾ, ಕೆಲಸದವನನ್ನು ಕರೆಯುತ್ತಾ, ಗೋಡೆಗೆ ಅಂಟಿಸಿದ್ದ ನನ್ನ ಫೋಟೋಗಳನ್ನು ಕಿತ್ತು ಹಾಕಲು ಆದೇಶಿಸಿದಳು. ಆ ಕೆಲಸದವನು ಅವತ್ತು ನೀವೇ ಹೇಳಿದರಲ್ಲಮ್ಮ ಅಂಟಿಸಲು ಇವತ್ತು ನೀವೇ ಕಿತ್ತು ಹಾಕಿ ಅಂತಿದೀರಲ್ಲ ಅನ್ನುತ್ತಿದ್ದರೆ ಪ್ರಿಯ What? What are you talking? Just tear it off ಅನ್ನುತ್ತಿದ್ದಳು.  ಆ ಕೆಲಸದವನು ನನ್ನ ಚಿತ್ರಗಳನ್ನು ಕಿತ್ತು ಹಾಕಲು ಶುರು ಮಾಡಿದ್ದನು.

ಒಂದು ಹೃದಯ ಕಿತ್ತು ಬರುವಂತ ಸುದ್ದಿ. ಒಂದು ಹೃದಯ ಕಿತ್ತು ಬರುವಂತ ದೃಶ್ಯ. ಎರಡು ನಿಜಾನ?

ಬೃಂದಾಳಿಗೆ ಪ್ರಿಯ ಅವಳನ್ನು ನೆನಪಿಟ್ಟುಕೊಳ್ಳದಿರುವುದು ಬಹಳ ಬೇಸರ ತರಿಸಿತ್ತು...ಹಾಗಾಗಿ ಆಂಟಿ ಕಾಫಿ ತರುವ ಮೊದಲೇ ಅವಳು ಪ್ರಿಯ ಸುಜಯ್ ಗೆ ಬಾಯ್ ಟೇಕ್ ಕೇರ್ ಅನ್ನುತ್ತಾ ನನ್ನ ಕಡೆ ತಿರುಗಿ, ನಿನ್ನ ಹೆಂಡತಿಯನ್ನು ಕರ್ಕೊಂಡು ಬಾರೋ ಮತ್ತೊಮ್ಮೆ ಸಿಗೋಣ ಸೀ ಯು ಅಂತ ಕೈ ಬೀಸುತ್ತಾ ಹೊರಟೇ ಹೋದಳು. ಐದು ನಿಮಿಷದಲ್ಲಿ ಆಂಟಿ ಬಿಸಿ ಬಿಸಿ ಕಾಫಿ ತಂದಿದ್ದರು. ರಾತ್ರಿ ಎಬ್ಬಿಸಿ ಕಾಫಿ ಕೊಟ್ಟರೂ ಕುಡಿಯುವ ನಾನು, ೩-೪ ನಿಮಿಷ ಎಲ್ಲವನ್ನು ಮರೆತು ಘಮ ಘಮ ಪರಿಮಳಯುಕ್ತವಾದ ಫಿಲ್ಟರ್ ಕಾಫಿಯನ್ನು ಆಸ್ವಾದಿಸಿದೆ. ನಂತರ ಆಂಟಿ ಅಂಕಲ್ ಗೆ ಹೊರಡುತ್ತೇನೆ ಎಂದು ತಿಳಿಸಿ ಪ್ರಿಯ ಸುಜಯ್ ಗೆ ಟಾಟಾ ಹೇಳಿ ಮಗುವಿಗೊಂದು ಹಣೆಯ ಮೇಲೆ ಮುತ್ತು ಕೊಟ್ಟು ಅಲ್ಲಿಂದ ಜಾಗ ಖಾಲಿ ಮಾಡಿದೆ.

ಮಾರ್ಗಮಧ್ಯದಲ್ಲಿ ಗೃತ್ಸಮದನನ್ನು ಎಚ್ಚರಿಸಿ FM ಆನ್ ಮಾಡಿದಾಗ ನಗುವ ಹೂವು ಚಿತ್ರದ

ಇರಬೇಕು ಇರಬೇಕು ಅರಿಯದ ಕಂದನ ತರಹ
ನಗಬೇಕು ಅಳಬೇಕು ಇರುವಂತೆ ಹಣೆಬರಹ

ಇರಬೇಕು ಇರಬೇಕು ತಾವರೆ ಎಲೆಯ ತರಹ
ಕಣ್ಣೀರೋ ಪನ್ನೀರೋ ಯಾರಲಿ ಮಾಡಲಿ ಕಲಹ
ಯಾರಲಿ ಮಾಡಲಿ ಕಲಹ

ಇರಬೇಕು ಇರಬೇಕು ಬಾಳಲಿ ಭರವಸೆ ಮುಂದೆ
ನೋವಿರಲಿ ನಲಿವಿರಲಿ ನೋಡಲೆಬಾರದು ಹಿಂದೆ
ನೋಡಲೆ ಬಾರದು ಹಿಂದೆ


ಇರಬೇಕು ಇರಬೇಕು ಅರಿಯದ ಕಂದನ ತರಹ
ನಗಬೇಕು ಅಳಬೇಕು ಇರುವಂತೆ ಹಣೆಬರಹ

ಹಾಡು ಬರುತ್ತಿದ್ದದ್ದನ್ನು ಕೇಳಿ, ಈ ಹಾಡನ್ನು ನನಗಾಗಿಯೇ ಹಾಕಿದ್ದರೆನೋ ಅನಿಸಿ ಗಾಡಿಯನ್ನು ಮನೆ ಕಡೆ ತಿರುಗಿಸಿದೆ. 

Friday, December 21, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೧


ಕರೆ ಬಂದಾಗ ನಾನು ಸಂಯುಕ್ತ ಒಟ್ಟಿಗೆ ಇದ್ದೆವು. ಸಂಯುಕ್ತ ಅವಳ ಇಬ್ಬರು ಗೆಳೆತಿಯರಾದ ಸಮುದ್ಯತ, ಸಂಗೀತ  ಮತ್ತು ಗೆಳೆಯ ಸಂಕರ್ಷಣ, ನಾಕು ಜನ ಸಾಯಂಕಾಲ ಸರಿಯಾಗಿ ಏಳಕ್ಕೆ ನನ್ನ ಮನೆಯಲ್ಲಿರುತ್ತಿದ್ದರು. ಆಗ ಎಂಟನೆ ಸೆಮಿಸ್ಟರ್ ನಲ್ಲಿದ್ದ ಅವರುಗಳ ಪ್ರಾಜೆಕ್ಟ್ ವರ್ಕಿಗೆ ನಾನೇ ಗೈಡ್ ಮಾಡುತ್ತಿದ್ದೆ. ಅವತ್ತು ಉಳಿದ ಮೂವರು ತಮ್ಮ ಗೆಳತಿಯ ನಿಶ್ಚಿತಾರ್ಥವಿದೆಯೆಂದು ಪ್ರಾಜೆಕ್ಟ್ ವರ್ಕಿಗೆ ಬಂದಿರಲ್ಲಿಲ್ಲ. ಇವಳು ಏನೋ ಕಾರಣ ಹೇಳಿ ಅಲ್ಲಿಗೆ ಹೋಗುವುದನ್ನು ತಪ್ಪಿಸಿ ನನಗೆ ಅಂಟಿಕೊಂಡಿದ್ದಳು. ಕರೆ ಬಂದಾಗ ನಾನು ಕೈಯಲ್ಲಿ soldering gun ಹಿಡಿದ್ದಿದ್ದೆ. ಹಾಗಾಗಿ ಸಂಯುಕ್ತ ಹೋಗಿ ಮೊಬೈಲ್ ತೊಗೊಂಡು ಏ ಅನ್ನೋನ್ ಕಣೋ ... ನಾನೇ ತೊಗೋತೀನಿ ಪ್ಲೀಸ್ ಅಂದ್ಲು.. ನಾನು ಅರೆಕ್ಷಣ ಯೋಚಿಸಿ ಮಾತಾಡು ಅಂದೆ. ಸಂಯುಕ್ತ ಕರೆ ಸ್ವೀಕರಿಸಿದವಳೇ ಸ್ಪೀಕರ್ ಆನ್ ಮಾಡಿದಳು. ಆ ಕಡೆಯಿಂದ ಬೃಂದಾ ಮಾತಾಡುತ್ತಿದ್ದಳು.

ಬೃ : ಹಲೋ
ಸಂ : ಹಲೋ
ಬೃ : ಯಾರ್ ಮಾತಾಡದು?
ಸಂ : ನಿಮಗ್ಯಾರ್ ಬೇಕಿತ್ತು?
ಬೃ : ನೀವ್ ಮಾತಾಡ್ತಿರೋ ಮೊಬೈಲ್ ನ ಓನರ್ ಬೇಕಿತ್ತು.
ಸಂ : ಒಹ್ .. ಓನರ್ ಹೆಂಡ್ತಿ ನೆ ಮಾತಾಡ್ತಿರದು ಹೇಳಿ ಪರವಾಗಿಲ್ಲ
ಬೃ : ವಾಟ್ ?? ಓನರ್ ಹೆಂಡ್ತಿ ನ?
ಸಂ : ಎಸ್ .. ಹೇಳಿ.. ಏನ್ ಹೇಳಬೇಕಾಗಿತ್ತು ?
ಬೃ : ಏನು ಇಲ್ಲ ಬಿಡಿ...
ಸಂ : ಸರಿ .. ಇಡ್ಲಾ?..... ಇಲ್ಲ ನೀವ್ ಅವರ ಜೊತೇನೆ ಮಾತಾಡ್ಬೇಕು ಅಂತಿದ್ರೆ ಕೊಡ್ತೀನಿ.. ಅವ್ರ್ ಬರ್ತಾ ಇದಾರೆ.
ಬೃ : ಕೊಡಿ ಕೊಡಿ.. ನಾನ್ ಅವ್ರ ಹತ್ರನೇ ಮಾತಾಡ್ಬೇಕು
ಸಂ : ಓಕೆ..
ಹಾಗೆ ಹೇಳಿ ಸಂಯುಕ್ತ ಜೋರಾಗಿ ರೀ ತೊಗೊಲ್ರಿ ಫೋನ್  ಓನರ್ ಅಂತೆ.. ನೀವೇ ತಾನೇ .. ಬೇಗ ಬನ್ನಿ .. ಅಂತ ಸುಮ್ನೆ ಜೋರಾಗಿ ಕೂಗಿದಳು.
ನಾ: ಬಂದೆ ಬಂದೆ ... ಹಲೋ
ಬೃ : ಹೇಯ್ ಹಲೋ .. ನಾನು ಕಣೋ ಬೃಂದಾ
ನಾ : ಹೂ?
ಬೃ : ಬೃಂದಾ ಬೃಂದಾ
ನಾ : ಒಹ್.. ಬೃಂದಾ .. What a surprise! How are you?
ಬೃ : ನಾನು ಸೂಪರ್.. ನೀನ್ ಹೇಗಿದ್ಯ? ಮದುವೆ ಯಾವಾಗ್ ಆಯ್ತೋ?
ನಾ : ನಾನು ಚೆನ್ನಾಗಿದೀನಿ... ಮತ್ತೆ? ಏನ್ ಪತ್ತೆನೆ ಇಲ್ಲ.. ಎಲ್ಲಿದ್ಯ? ಏನ್ ಮಾಡ್ತಿದ್ಯ?

ಬೃ : ಹು ... ನಾನೀಗ ಸುಗುಣದಲ್ಲೇ ಲ್ಯಾಬ್ ಆಪರೇಟರ್ ಆಗಿದೀನಿ... ಪ್ರಿಯ ಹೋದಮೇಲೆ ಸ್ವಲ್ಪ ದಿನ ಮನೇಲೆ ಇದ್ದೆ. ಆಮೇಲೆ ಒಂದಿನ ಅಂಕಲ್ ನಮ್ಮ ಮನೆಗೆ ಬಂದು, ಆವತ್ ಏನೋ ಆಗೊಯ್ತಮ್ಮ .. ಎಲ್ಲರಿಗೂ ಬೇಜಾರ್ ಆಗಿತ್ತು. ಅದಿಕ್ಕೆ ಇವಳು ಹಾಗ್ ಹೇಳಿದ್ದಾಳೆ ನಿನಗೆ.. ನೀನ್ ಆದ್ರು ಅಷ್ಟೇ .. ಮನೆ ಕಡೆ ಬರ್ಬಾರ್ದಿತ್ತಾ? ಇನ್ಮೇಲಿಂದ ನೀನು ಅಲ್ಲೇ ಕೆಲಸ ಮಾಡು. ಆಮೇಲೆ ದಿನ ನಮ್ ಮನೆಗೆ ಬಂದು ಹೋಗು ಅಂತ ಹೇಳಿ ಅಲ್ಲೇ ಕೆಲಸ ಕೊಡಿಸಿದರು.

ನಾ : ಗುಡ್.. ಗುಡ್ ... ಒಳ್ಳೆ ಅಂಕಲ್ :P ಅದ್ಸರಿ ಇಷ್ಟ್  ದಿನ ಇಲ್ಲದೆ ಇದ್ದ ನನ್ನ ನೆನಪು ಇದ್ದಕ್ಕಿದ್ದ ಹಾಗೆ ಹೇಗೆ ಬಂತು ಅಂತ?
ಬೃ : ಏಯ್ ನೆನಪಿಲ್ಲ ಅಂತ ಹೇಳಬೇಡ .. ನಾನ್ ಯಾವಾಗಲು ನಿನ್ನ ನೆನಪಿಸಿಕೊಳ್ಳುತ್ತೀನಿ ... ನೀನಾದ್ರು ಕಾಲ್ ಮಾಡ್ಬೇಕು ತಾನೇ?
ನಾ : ಒಹ್.. ನಂಗೆ ನಿನ್ ನೆನಪೇ ಇರಲ್ಲಿಲ್ಲ ಅದಿಕ್ಕೆ ಕಾಲ್ ಮಾಡಲ್ಲಿಲ್ಲ. (ಸಂಯುಕ್ತ ಗೆ ಕಣ್ಣು ಹೊಡೆದೆ :P )
ಬೃ : ಹುನಪ್ಪ... ನಮ್ಮ ನೆನಪೆಲ್ಲ ಎಲ್ ಇರತ್ತೆ ನಿಂಗೆ? ಮದ್ವೆ ಆದ್ಮೇಲ್ ಎಲ್ಲರೂ ಅಷ್ಟೇ.. (ಬೃಂದಾ ಹಾಗೆ ಹೇಳ್ತಿದ್ದ ಹಾಗೆ  ಸಂಯುಕ್ತ ನಂಗೆ ಕಣ್ಣು ಹೊಡೆದಳು ಅಂತ ನಂಗ್ ಬರ್ಯಕ್ ಇಷ್ಟ ಇರ್ಲ್ಲಿಲ್ಲ.. ಆದ್ರೆ ಸಂಯುಕ್ತಳ ಬಲವಂತಕ್ಕೆ ಬರೆದೆ :P )
ನಾ : ಅದು ಸರಿ ಅದು ಸರಿ

ಬೃ : ಈಗ ನಾನ್ ಕಾಲ್ ಮಾಡಿದ್ದು ಎನಿಕ್ಕೆ ಗೊತ್ತಾ?
ನಾ : ನಂಗೇನ್ ಗೊತ್ತು? ನೀನ್ ಹೇಳುದ್ರೆ ಗೊತ್ತಾಗತ್ತೆ ...
ಬೃ : ಇದೊಂತರ ಗುಡ್ + ಬ್ಯಾಡ್ ನ್ಯೂಸ್ ... ನಂಗು ಈಗಷ್ಟೇ ಗೊತ್ತಾಯಿತು
ನಾ : ಅದೇನಪ್ಪ ಅಂತದು ?
ಬೃ : ಪ್ರಿಯ ಬದುಕಿದ್ದಾಳೆ.
ನಾ : ವಾಟ್? ಏನ್ ಹೇಳ್ತಿದ್ಯ ನೀನು?
ಬೃ : ಎಸ್ .. She is alive. ಆದ್ರೆ ಕೋಮದಲ್ಲಿದಾಳೆ.
ನಾ : ಯಾವಾಗಿಂದ?
ಬೃ : ಸುಮಾರು ೧೫ ತಿಂಗಳಿನಿಂದ.
ನಾ : ೧೫ ತಿಂಗಳ? ೧೫ ದಿನಾನ?
ಬೃ : ತಿಂಗಳು .. ಸುಮಾರು ಒಂದುಕಾಲ್ ವರ್ಷದಿಂದ ಹಾಗೆ ಇದಾಳೆ. ಬದುಕಿ ಸತ್ತಿದ್ದಾಳೆ.
ನಾ : ಎಲ್ಲಿದಾಳೆ ಈಗ?
ಬೃ : ಇಂಗ್ಲೆಂಡ್ ನಲ್ಲಿ
ನಾ : ಬೃಂದಾ .. ಅದೇನ್ ಹೇಳ್ತಿದ್ಯ ಬಿಡಿಸಿ ಹೇಳು... ನಂಗೆ ಏನೂ ಅರ್ಥ ಆಗ್ತಿಲ್ಲ. ಅವತ್ತು ಪ್ರಿಯ ಸತ್ತಳು ಅಂತ ಹೇಳ್ದೆ.. ಇವತ್ತು ಬದುಕಿದ್ದಾಳೆ ಕೋಮದಲ್ಲಿದಾಳೆ ಅಂತಿದ್ಯ.. ನೀನ್ ಹೇಳೋದನ್ನೆಲ್ಲ ನಾನು ನಂಬಬೇಕ?


ಬೃ : ಹೌದು .. ನಾನು ನಿನ್ನೆವರೆಗೂ ಪ್ರಿಯ ಸತ್ತಿದಾಳೆ ಅಂತಾನೆ ಅಂದ್ಕೊಂಡಿದ್ದೆ. ಆದರೆ ನಿನ್ನೆ ಆಂಟಿ ಹೇಳಿದಮೇಲೆ ಗೊತ್ತಾಯಿತು.
ನಾ : ಆಂಟಿ ಯಾರು? ಪ್ರಿಯ ಅಮ್ಮನ?
ಬೃ : ಹು.. ಪ್ರಿಯ ಅವರ ತಾಯಿ ... ನಾನು ನಿನ್ನೆ ಅವರ ಮನೆಗೆ ಹೋಗಿದ್ದೆ. ಅಂಕಲ್ ನನಗೆ ಸುಗುಣದಲ್ಲಿ ಕೆಲಸ ಕೊಡಿಸಿದ ಮೇಲೆ, ಮೊದಮೊದಲು ನಾನು ಅವರ ಮನೆಗೆ ದಿನಾ ಹೋಗುತ್ತಿದ್ದೆ. ಬರಬರುತ್ತಾ  ಕೆಲಸದ ಒತ್ತಡ ಜಾಸ್ತಿಯಾಗಿ ವಾರಕ್ಕೊಂದು ಬಾರಿ ಹೋಗುತ್ತಿದ್ದೆ.. ಆಮೇಲೆ ತಿಂಗಳಿಗೊಮ್ಮೆ .. ಈಗ ೩-೪ ತಿಂಗಳಿಂದ ನಾನು ಹೋಗೆ ಇರಲ್ಲಿಲ್ಲ. ನಿನ್ನೆ ಸಂಜೆ ಸ್ವಲ್ಪ ಬಿಡುವಿದ್ದರಿಂದ ಇದ್ದಕ್ಕಿದ್ದ ಹಾಗೆ ಹೊರಟುಬಿಟ್ಟೆ
ನಾ : ಏನ್ ಹರಿ ಕಥೆ ಹೇಳ್ತಿದ್ಯ?
ಬೃ : ಇಲ್ಲ ಕಣೋ...
ಅಂತ ಹೇಳುತ್ತಾ ಬೃಂದಾ, ಅವಳ ಮತ್ತೆ ಆಂಟಿ ನಡುವಿನ ಸಂಭಾಷಣೆಯ ಪಾಠ ಒಪ್ಪಿಸಿದಳು.

ನಿನ್ನೆ ನಾನ್ ಹೋದಾಗ ಅಂಕಲ್ ಮನೇಲಿ ಇರಲ್ಲಿಲ್ಲ... ನಾನು ಆಂಟಿಗೆ ಅಂಕಲ್ ಎಲ್ಲಿ ಅಂತ ಕೇಳಿದ್ದಕ್ಕೆ,
ಆಂಟಿ :  " ಇವರು ಪ್ರಿಯಳನ್ನು ನೋಡೋಕೆ ಲಂಡನ್ ಗೆ ಹೋಗಿದಾರೆ "
ಬೃ : ಏನ್ ಹೇಳ್ತಾ ಇದ್ದೀರಾ ಆಂಟಿ ನೀವು? ಪ್ರಿಯ ನ ನೋಡೋಕ?
ಆಂಟಿ : ಇಲ್ಲಮ್ಮ .. ಯಾವ್ದೋ ಬಿಸಿನೆಸ್ ಕೆಲಸದ ಮೇಲೆ ಹೋಗಿದಾರೆ. ಪ್ರಿಯ ನ ಟ್ರೀಟ್ ಮಾಡುತ್ತಿದ್ದರಲ್ಲ ಆ ಡಾಕ್ಟರ್ ಜೊತೆ.
ಬೃ : ಯಾಕ್ ಆಂಟಿ ಮುಖ ಬೆವರುತ್ತಿದೆ...? ನೀವ್ ಏನೋ ಸುಳ್ ಹೇಳ್ತಾ ಇದ್ದೀರಾ... ಪ್ರಿಯ ಬದುಕಿದ್ದಾಳ ಆಂಟಿ ?
ಆಂಟಿ : (ಸೆರಗಿನಲ್ಲಿ ಮುಖ ವರೆಸಿಕೊಳ್ಳುತ್ತಾ )ಇಲ್ಲಮ್ಮ... ಹಾಗೇನಿಲ್ಲ. ಸ್ವಲ್ಪ ಶಕೆ ಆಗ್ತಿದೆ ಅಷ್ಟೇ. ಪ್ರಿಯ ಪ್ರಿಯ ..
ಬೃ : ಹೇಳಿ ಆಂಟಿ .. ನೀವು ಏನೋ ಮುಚ್ಚಿಡುತ್ತಿದ್ದಿರ? ಹೇಳಿ .. ನಾನು ಯಾರಿಗೂ ಹೇಳೋಲ್ಲ... ನಾನು ನಿಮ್ಮ ಮಗಳೇ ತಾನೇ?

ಆಂಟಿ : ನಾನ್ ಯಾರ್ ಹತ್ರ ಹೇಳ್ಕೊಳ್ಳಿ .. ಎಲ್ಲ ನಮ್ಮ ಕರ್ಮ. ಅವಳು ಸತ್ತಿದ್ದಿದ್ದ್ರೆ ಎಷ್ಟೋ ನೆಮ್ಮದಿಯಿಂದ ಇರಬಹುದಿತ್ತು. ಅವಳನ್ನು ಈ ಸ್ಥಿತಿಲಿ ನೋಡೋಕಾಗಲ್ಲಮ್ಮ ನೋಡೋಕಾಗಲ್ಲ ... ಬೃ : ಅಳಬೇಡಿ ಆಂಟಿ? ಏನಾಯಿತು ಹೇಳಿ .. ಪ್ರಿಯ ಎಲ್ಲಿದಾಳೆ? ಹೇಗಿದಾಳೆ?
ಆಂಟಿ : ಪ್ರಿಯ ಬದುಕಿದ್ದು ಸತ್ತಿದಾಳಮ್ಮ.. ಈಗ ಲಂಡನ್ ನಲ್ಲಿ ಇದ್ದಾಳೆ.. ಅವಳನ್ನು ನೋಡೋಕೆ ಇವರು ಹೋಗಿರದು .
ಬೃ : ಮತ್ತೆ? ಇಷ್ಟ್ ದಿನ ....
ಆಂಟಿ : ಇಷ್ಟ್ ದಿನ ಏನು? ಈಗಲೂ ಅವಳು ಸತ್ತೊಗಿದಾಳೆ ಅಂತಾನೆ ಎಲ್ರು ತಿಳ್ಕೊಂಡಿದಾರೆ ನನ್ನ ಇವರನ್ನ ಮತ್ತೆ ಆ ಡಾಕ್ಟರ್ ನ ಹೊರತುಪಡಿಸಿ .. ಈಗ ನಿಂಗ್ ಗೊತ್ತಾಗಿದೆ. ದಯವಿಟ್ಟು ಯಾರಿಗೂ ಹೇಳಬೇಡಮ್ಮ ,, ನಿಂಗೆ ನಾ ಹೇಳಿರೋದು ಅಂಕಲ್ ಗು ಗೊತ್ತಾಗೋದು ಬೇಡ ಪ್ಲೀಸ್ ಬೃ : ಆಗಲಿ .. ನಾನು ಯಾರಿಗೂ ಹೇಳೋಲ್ಲ... ನೀವ್ ಅದೇನಾಯಿತು ಅಂತ ಬಿಡಿಸಿ ಹೇಳಿ

ಆಂಟಿ :
ನಿನಗೂ ಗೊತ್ತೇ ಇದೆ. ನಮ್ಮ ಮನೆಯಲ್ಲಿ ಯಾವಾಗಲೂ ಯಾರಾದರೂ ನೆಂಟರು ಇದ್ದೆ ಇರುತ್ತಾರೆ. ಪ್ರಿಯಾಗೆ ಕ್ಯಾನ್ಸರ್ ಅಂತ ತಿಳಿದಮೇಲೆ ನನ್ನ ಕಡೆ ಮತ್ತು ಅವರ ಕಡೆ ನೆಂಟರಿಗೆಲ್ಲ ನಮ್ಮ ಆಸ್ತಿ ಮೇಲೆ ಕಣ್ಣು ಬಿತ್ತು. ಪ್ರಿಯಳನ್ನು ನೋಡಿಕೊಂಡು ಹೋಗುವ ನೆಪದಲ್ಲಿ ಬಂದು ಎಲ್ಲಾ ನೆಂಟರು ಒಬ್ಬಬ್ಬರಾಗಿ ನಮ್ಮಲ್ಲೇ ಉಳಿದುಕೊಂಡು ಬಿಟ್ಟರು. ಮೊದ ಮೊದಲು ನಮಗೂ ಏನು ಗೊತ್ತಗಲ್ಲಿಲ್ಲ.. ಹರೆಯದ ಹುಡುಗಿಗೆ ಕ್ಯಾನ್ಸರ್ ಅಂದರೆ ಯಾರಿಗೆ ತಾನೇ ಬೇಜಾರ್ ಆಗಲ್ಲ? ಹಾಗಾಗಿ ಎಲ್ಲರೂ ನೋಡಿಕೊಂಡು ಹೋಗಲು ಬರ್ತಿದಾರೆ.. ಇಲ್ಲೇ ಉಳಿಯಲಿ .. ಇನ್ನೆಷ್ಟು ದಿನ .. ಅವಳಿಗೂ ಎಲ್ಲಾ ನೆಂಟರು ಮನೆಯಲ್ಲಿದ್ದರೆ ಒಂದು ಖುಷಿ ಇರತ್ತೆ ಅಂತ ನಾವು ಭಾವಿಸಿದ್ದೆವು. ಆದರೆ ಇವರುಗಳ ಉಪಟಳ ಜಾಸ್ತಿಯಾಯಿತೇ ವಿನಃ ನಮಗೊಂತು ಪ್ರಯೋಜನವಾಗಲ್ಲಿಲ್ಲ ... ಇವರುಗಳ ಉಪಚಾರದಲ್ಲಿ, ಗಲಾಟೆ ಗದ್ದಲದಲ್ಲಿ ನಮಗೆ ಪ್ರಿಯಳನ್ನ ನೋಡಿಕೊಳ್ಳೋಕೆ ಸಾದ್ಯವಾಗಲ್ಲಿಲ್ಲ ... ನಿನಗೆ ಗೊತ್ತಲ ಅವಳು ಮಾತ್ರೆ ತೊಗೊಳೊದೆ ಬಿಟ್ಟು ಬಿಟ್ಟಿದ್ದಳು. ಅವಳು ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾಳೆ ಅನ್ನುತ್ತಿದ್ದಂತೆ , ಇನ್ನು ಇಷ್ಟ್ ಬೇಗ ಸಾಯಲ್ವಲ ...  ಸ್ವಲ್ಪ ದಿನ ಬಿಟ್ಟೆ ಬರೋಣ ಅಂತ ಹಲವು ಮಂದಿ ಹೊರಟರು. ಇನ್ನು ನಾಕಾರು ಮಂದಿ ಉಳಿದ್ದಿದ್ದರು. ಅವರುಗಳು ಆಡುತ್ತದ್ದ ಮಾತುಗಳನ್ನು ಕೇಳಿ ನಮಗೆ ಬಹಳ ಬೇಸರವಾಗುತ್ತಿತ್ತು.. ಆದರೂ ಏನು ಮಾಡುವಂತಿರಲ್ಲಿಲ್ಲ .. ವಯಸ್ಸಾದ ನಮಗೆ  ಮುಂದೆ ಅವರುಗಳೇ ನೋಡಿಕೊಳ್ಳಬೇಕು ಅಲ್ಲವ?

ಹಾಗಾಗಿ ಅವಳು ಅವತ್ತು ಕುಸಿದು ಬಿದ್ದು ಆಸ್ಪತ್ರೆ ಸೇರಿದಾಗ ನಾವು ಯಾವ ನೆಂಟರಿಗೂ ತಿಳಿಸಲ್ಲಿಲ್ಲ. ಮನೆಯಲ್ಲಿ ಉಳಿದ್ದಿದ್ದ ನಾಕು ಜನಕ್ಕೆ  ಪ್ರಿಯ ಸತ್ತಳು, ಎಂದು ಹೇಳಿ ಆಸ್ಪತ್ರೆಯಲ್ಲಿದ್ದ ಅನಾಥ ಶವವನ್ನು ತಂದು ಮುಖ ಸರಿಯಾಗಿ ಕಾಣದಂತೆ ಬಟ್ಟೆ ಮುಚ್ಚಿ, ಯಾರಿಗೂ ಸರಿಯಾಗಿ ವಿಷಯ ತಿಳಿಸದೇ, ಯಾರ ಬರುವಿಗೂ ಕಾಯದೆ, ಅವಸರ ಅವಸರವಾಗಿ ಅದನ್ನೇ ಪ್ರಿಯಳ ಶವವೆಂದು ಮಣ್ಣು ಮಾಡಿದೆವು. ಕರೆ ಮಾಡಿದವರಿಗೆ ದಯಮಾಡಿ ಬರಬೇಡಿ ನಮಗೆ ಮೊದಲೇ ದುಃಖವಾಗಿದೆ ಅಂತ ತಿಳಿಸುವುದರ ಜೊತೆಗೆ ನಿಮ್ಮ ಅಂಕಲ್ ನನಗೆ ಅಪರ ಕರ್ಮಗಳಲ್ಲಿ ನಂಬಿಕೆಯಿಲ್ಲ ದಯಮಾಡಿ ಯಾರು ತಿಥಿಗೆ, ವೈಕುಂಠಕ್ಕೆ, ಅದು ಇದು ಅಂತ ನಮ್ಮ ಮನೆಗೆ ಬರಬೇಡಿ ಅಂತ ಖಡಾಖಂಡಿತವಾಗಿ ಹೇಳಿಬಿಟ್ಟರು.

ಪ್ರಿಯ ಸ್ವಲ್ಪ ಚೇತರಿಸಿಕೊಂಡಾಗಲೇ ಅವಳನ್ನು ನೋಡುತ್ತಿದ್ದ  ಡಾ. ಸರೋಜಿನಿ  ಹೇಳಿದ್ದರು.. "ಈಗ ಪ್ರಿಯ ಇರೋ ಪರಿಸ್ತಿತಿಯಲ್ಲಿ ಅವಳನ್ನು ನಮ್ಮಲ್ಲಿ ಲಭ್ಯ ಇರೋ ಕೀಮೊತೆರಪಿ ಉಪಕರಣಗಳಿಂದ ಬದುಕಿಸಲು ಸಾಧ್ಯವಿಲ್ಲ. ಆದರೆ ನೀವು ಲಂಡನ್ನಿಗೆ ಹೋದರೆ ಖಂಡಿತ ಇನ್ನಾರು ತಿಂಗಳಲ್ಲಿ ಅವಳು ಸಂಪೂರ್ಣ ಗುಣಮುಖವಾಗುತ್ತಾಳೆ. ತಡ ಮಾಡಬೇಡಿ. ಸರಿಯಾಗಿ ಯೋಚಿಸಿ ಇಂದೇ ಒಂದು ತೀರ್ಮಾನಕ್ಕೆ ಬನ್ನಿ.. ನೀವು ಒಪ್ಪುವುದಾದರೆ ಲಂಡನ್ನಿನ ಲೈಫ್ ಗ್ರೋ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಬ್ಯಾಚ್ ಮೇಟ್  ಡಾ. ಶೀಲಾಗೆ ವಿಷಯ ತಿಳಿಸಿ ಅಲ್ಲೆಲ್ಲ ಏರ್ಪಾಟಾಗುವಂತೆ ಮಾಡುತ್ತೇನೆ."
ಮದುವೆಯಾಗಿ ಇಪ್ಪತ್ತನೆ ವರ್ಷದಲ್ಲಿ ಹುಟ್ಟಿದ್ದ ಒಬ್ಬಳೇ ಮಗಳನ್ನು ಉಳಿಸಿಕೊಳ್ಳಲು ಲಂಡನ್ ಏನು ಎಲ್ಲಿಗೆ ಬೇಕಾದರೂ ಕಳಿಸೋಕೆ ನಾವು ತಯಾರಾಗಿದ್ದೆವು. ಆಮೇಲೆ ನಮ್ಮ ಮನೆ ವಿಚಾರ ತಿಳಿಸಿ ಡಾ. ಸರೋಜಿನಿಯವರನ್ನೇ ಪ್ರಿಯಳನ್ನು ಕರೆದುಕೊಂಡು ಹೋಗೋಕೆ ಕೇಳಿಕೊಂಡೆವು. ೨-೩ ದಿನ ಬಿಟ್ಟು ಅಲ್ಲಿಗೆ ಬರುತ್ತೇವೆ ಎಂದು ತಿಳಿಸಿದ್ದೆವು. ಅದರಂತೆ ಡಾ. ಸರೋಜಿನಿಯವರು ಪ್ರಿಯಳ ಜೊತೆ ಅಲ್ಲಿಗೆ ಹೋಗಿ ಅವಳನ್ನು ಲೈಫ್ ಗ್ರೋ ಆಸ್ಪತ್ರೆಗೆ ಸೇರಿಸಿ ನಾವು ಅಲ್ಲಿಗೆ ಹೋಗುವ ತನಕ ಪ್ರಿಯಳನ್ನು ಮಗಳಂತೆ ನೋಡಿಕೊಂಡಿದ್ದರು. ನಾವು ಅವರಿಗೆ  ಈಗಲೂ ಚಿರಋಣಿಗಳು.

ಡಾ.ಶೀಲಾ ಪ್ರಿಯಳನ್ನು ನೋಡುತ್ತಿದ್ದರು. ಸತತ ೬ ತಿಂಗಳುಗಳ ಕಾಲ ಕೀಮೊತೆರಪಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಿಯ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಆಗ ಉದ್ದ ಕೂದಲನ್ನು ಇಷ್ಟ ಪಡುತ್ತಿದ್ದ ಅವಳ ತಲೆಯಲ್ಲಿ ಒಂದು ಕೂದಲು ಇರಲ್ಲಿಲ್ಲ.
Transplantation, Chemotherapy ಇನ್ನು ಏನೇನೋ ಮಾಡಿದ್ದರು. ಪ್ರಿಯ ಕಡ್ಡಿಯ ಹಾಗಾಗಿದ್ದಳು. ಎಲ್ಲಾ ರೀತಿಯ ಚಿಕಿತ್ಸೆ ಮುಗಿಯಿತು ಇನ್ನೇನು ಚೇತರಿಸಿಕೊಳ್ಳುತ್ತಾಳೆ ಅನ್ನುವಾಗಲೇ ಕೋಮಗೆ ಹೋಗಿಬಿಟ್ಟಳು. ಕೋಮ ಸ್ಥಿತಿ ತಲುಪುವ ಸಾಧ್ಯತೆಗಳಿದೆಯೆಂದು ಡಾಕ್ಟರ್ ಮೊದಲೇ ಇವರಿಗೆ ತಿಳಿಸಿದ್ದರಂತೆ. ಬದುಕಿದರೆ ಸಾಕೆನ್ನುತ್ತಿದ್ದ ನಾವು, ತೊಂದರೆಯಿಲ್ಲ ನೀವು ಚಿಕಿತ್ಸೆ ಮಾಡಿ ಎಂದು ಅಂಕಲ್ ಡಾಕ್ಟರ್ ಗೆ ಹೇಳಿದ್ದರಂತೆ.

ಬೃಂದಾ : ಏನ್ ಆಂಟಿ .. ಎಷ್ಟೊಂದ್  ವಿಷ್ಯ ನನ್ನಿಂದ ಮುಚ್ಚಿಟ್ಟಿದೀರ... ನಾನೇನ್ ಬೇರೆಯವಳ?
ಆಂಟಿ : ಹಾಗಲ್ಲಮ್ಮ.. ನಿಂಗೆ ಗೊತ್ತಲ .. ಅಂಕಲ್ ಹೇಗೆ ಅಂತ
ಬೃಂದಾ : ಸರಿ ಆಂಟಿ ... ನಂಗೆ ಪ್ರಿಯನ ನೋಡ್ಬೇಕು ಅನಿಸ್ತಿದೆ ... ಆದ್ರೆ ಏನ್ ಮಾಡೋದು.
ಆಂಟಿ : ಯೋಚನೆ ಮಾಡಬೇಡ... ನಾನು ನಾಡಿದ್ದು ಹೋಗ್ತಾ ಇದ್ದೀನಿ... ನಿಮ್ ಅಂಕಲ್ ಗೆ ನಾನೇ ಹೇಳಿ ನಿನ್ನು ಕರ್ಕೊಂಡು ಹೋಗ್ತೀನಿ .. ಸರಿನಾ
ಬೃಂದಾ : Thank you very much aunty.. ನಾನ್ ಈಗಲೇ ಹೊರೋಡೋಕೆ ಸಿದ್ದ ಮಾಡ್ಕೊತೀನಿ.



ನೋಡೋ ಎರಡು ವರ್ಷ.. ಆಂಟಿ ಇವತ್ ಹೇಳುದ್ರು... ನಾನು ನಾಡಿದ್ದು ಹೋಗ್ತಿದೀನಿ ಲಂಡನ್ನಿಗೆ. ನಿಂಗ್ ಗೊತ್ತಾ? ಅವಳು ನಿನ್ ಜೊತೆ ಮಾತಾಡಿರೋದೆಲ್ಲ ಈ ಮೊಬೈಲ್ ಲಿ ರೆಕಾರ್ಡ್ ಮಾಡಿದಾಳೆ.. ಇದುನ್ನು ಜೊತೆಗೆ ತೊಗೊಂಡು ಹೋಗ್ತೀನಿ.. ಅವಳಿಗೆ ಇದುನ್ನ ಕೇಳಿಸಿದರೆ ಎಚ್ಚರವಾಗಬಹುದೇನೋ?  ಮತ್ತೆ ನಿನ್ನ ಹೆಂಡತಿ ಫೋಟೋ ಕಳ್ಸೋ.. ನಿಮ್ಮಿಬ್ಬರ ಫೋಟೋ ನೋಡಿ ಶಾಕ್ ಆಗಿ ಎಚ್ಚರ ಆದ್ರೂ ಆಗಬಹುದೇನೋ?

ನಾನು : ಲೇ.. ನಿನ್ ತಲೇಲಿ ಇನ್ನು ಏನೇನ್ ಐಡಿಯಾಗಳು ಇಟ್ಕೊಂದಿದ್ಯ? ಸುಮ್ನೆ ಹೋಗಿ ನೋಡ್ಕೊಂಡು ಬಾ.. ಇಷ್ಟ್ ದಿನನೇ ಏಳದೆ ಇರೋಳು ಈಗ ನನ್ ಫೋಟೋ ನೋಡುದ್ರೆ ಎದ್ದು ಕೂತ್ಕೊತಾಳ? ನಿಂಗೆಲ್ಲೋ ಭ್ರಾಂತು... ಅಕಸ್ಮಾತ್ ಅವಳಿಗೆ ಎಚ್ಚರ ಆದ್ರೆ ಮಾತ್ರ ಕಾಲ್ ಮಾಡು.. ಇಲ್ಲ ಅಂದ್ರೆ ಇದೆ ಕಥೆ ಕೇಳೋಕೆ ಬೋರ್ ಆಗತ್ತೆ.
Wish you happy and safe journey :) ಅಂತ ಹೇಳುತ್ತಾ ಕಾಲ್ ಕಟ್ ಮಾಡಿದೆ.

ಇಷ್ಟೊತ್ತಿನ ತನಕ ತಲೆ ಮೇಲೆ ಕೈ ಇಟ್ಟು ಟೇಬಲ್ ಮೇಲೆ ಕೂತಿದ್ದ ಸಂಯುಕ್ತ ಬೈಟು ಸ್ಟ್ರಾಂಗ್ ಕಾಫಿ ತರ್ತೀನಿ ಅಂತ ಒಳ ಹೋದಳು.

Monday, December 17, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೧೦


ಪ್ರಿಯಾಳಿಗೆ ಕ್ಯಾನ್ಸರ್ ಖಾಯಿಲೆಯಿದೆ ಎಂದು ಕೇಳಿದ ಕ್ಷಣದಿಂದ ನನ್ನನ್ನು ಪಾಪಪ್ರಜ್ಞೆ ಕಾಡಲು ಶುರುಮಾಡಿತ್ತು. ಎರಡು ಏಟು ಹೊಡೆದುಬಿಟ್ಟರೂ ತಡೆದುಕೊಂಡು ಬಿಡಬಹುದು ಆದರೆ ಮನಸ್ಸಿಗಾದ ಪೆಟ್ಟನ್ನು ವಾಸಿಮಾಡಲು ಬಹಳ ಕಾಲ ಬೇಕು. ಪ್ರಿಯಾಳ ಮನಸಿಗೆ ನಾನು ಪೆಟ್ಟು ಮಾಡಿದ್ದೆ... ಆ ಪೆಟ್ಟನ್ನು ಗುಣಪಡಿಸಲು ನನ್ನಲ್ಲಿ ಸಮಯಾವಕಾಶ ಇದ್ದರೂ ಪ್ರಿಯಾಳಿಗೆ ಇರಲ್ಲಿಲ್ಲ. ಅಂದರೆ ಅವಳು ಸತ್ತೇ ಹೋಗುತ್ತಾಳ? ಅವಳು ಯಾವಾಗ ಸಾಯುತ್ತಳೆ? ಸಾಯುವ ಮುನ್ನ ನಾನು ಅವಳನ್ನು ನೋಡಬಹುದಾ? ಅವಳು ನಾನು ಮಾಡಿದ ಪೆಟ್ಟಿನಿಂದಲೇ ಸಾಯುತ್ತಾಳೆ. ಸತ್ತ ಮೇಲೆ ಅವಳು ನನ್ನನ್ನು ಕಾಡುವಳೇ?
ಹೀಗೆ ಏನೋನೋ ಯೋಚಿಸುತ್ತಾ ಇಡಿ ರಾತ್ರಿ ಹೊರಳಾಡುತ್ತಿದ್ದೆ.

ಮಾರನೆ ದಿನದಿಂದ ಬೃಂದಾಳ  ಸೂಚನೆಯಂತೆ ಪ್ರಿಯ ಚಾಟಿಗೆ ಬಂದಾಗ ಹಾಗು ಕರೆ ಮಾಡಿದಾಗ, ಮೊದಲು ಅವಳ ಜೊತೆ ಹೇಗೆ ಮಾತಾಡುತ್ತಿದ್ದೇನೋ ಅದೇ ರೀತಿ ಮಾತಾಡುತ್ತಿದ್ದೆ. ಯಾಕೆಂದರೆ ಪ್ರಿಯಾಳಿಗೆ ತನಗೆ ಕ್ಯಾನ್ಸರ್ ಖಾಯಿಲೆಯಿರುವುದು ನನಗೆ ತಿಳಿಸಲು ಇಷ್ಟವಿರಲ್ಲಿಲ್ಲ. ಈಗ ಮೊದಲಿನಂತೆ ಅವಳು ಗಂಟಾನುಗಂಟೆ ಮಾತಾಡಲು ಸಾಧ್ಯವಾಗುತ್ತಿರಲ್ಲಿಲ್ಲ. ಕೆಮ್ಮು ಬರುತ್ತಿತ್ತು. ತುಂಬಾ ಹೊತ್ತು ಕೂರಲು ಸಾಧ್ಯವಾಗುತ್ತಿರಲ್ಲಿಲ್ಲ. ಆಗೆಲ್ಲ ಅವಳು ಏನೋ ಕುಂಟು ನೆಪ ಹೇಳಿ ಆಮೇಲೆ ಫೋನ್ ಮಾಡ್ತೀನಿ ಅಂತ ಹೇಳುತ್ತಿದ್ದಳೆ ವಿನಃ ತಾನು ನರಳುತ್ತಿರುವುದನ್ನು ನನಗೆ ತಿಳಿಸುತ್ತಿರಲ್ಲಿಲ್ಲ. ನಾನು ಬಂದು ನೋಡುತ್ತೆನೆಂದರೂ ಪ್ರಿಯ ಒಪ್ಪಲ್ಲಿಲ್ಲ ಮತ್ತು ಎಂದಿಗೂ ಪ್ರಿಯಳನ್ನು ಯಾವ ಆಸ್ಪತ್ರೆಯಲ್ಲಿ ಸೇರಿಸಿದ್ದಾರೆ ಎಂಬುದನ್ನು ಬೃಂದಾ ನನ್ನ ಬಳಿ ಹೇಳಲೇ ಇಲ್ಲ.

ಇಷ್ಟೆಲ್ಲಾ ಆದರೂ ನನ್ನ ಮನಸಿಗೊಂದು ಸಮಾಧಾನವಿತ್ತು. ಅದು ಪ್ರಿಯಾಳ ಅಮ್ಮ ಹೇಳಿದ್ದ ಮಾತಿನಿಂದ. ಸಾಯುತ್ತಿದ್ದ ಅವಳನ್ನು ಇನ್ನು ಸ್ವಲ್ಪ ಕಾಲ ನಮ್ಮಲ್ಲಿ ಉಳಿಸಿಕೊಟ್ಟ ಪುಣ್ಯಾತ್ಮ ನೀನು ... ಇಷ್ಟೊತ್ತಿಗಾಗಲೇ ಸತ್ತಿರಬೇಕಿದ್ದ ಪ್ರಿಯ ಇನ್ನು ಬದುಕಿದ್ದಾಳೆಂದರೆ ಅದು ನಾನಾಡುತ್ತಿದ್ದ ಮಾತಿನಿಂದಲೇ. ಅಷ್ಟು ಸಾಕು. ಎಷ್ಟೋ ವರ್ಷದ ಕೆಳಗೆ ನನ್ನ ಮಾವನೊಬ್ಬರ ಮನೆಯಲ್ಲಿ ದೂರವಾಣಿ ಕರೆ ಸ್ವೀಕರಿಸಿ, ಸರಿಯಾಗಿ ಮಾತಾಡದೆ, ಅವರಿಗೆ ಲೋನ್ ಸಿಗದ್ದಿದ್ದಕ್ಕೆ ನಾನು ಸರಿಯಾಗಿ ಮಾತಾಡದ್ದಿದ್ದೆ ಕಾರಣ ಎಂಬ ಅಪವಾದ ಹೊತ್ತಿದ್ದ ನನಗೆ ಇಂದು ಸಮಾಧಾನವಾಗಿತ್ತು. ಅಂದು ನಾನು 'ಅವರು ಮನೆಯಲ್ಲಿ ಇಲ್ಲ' ಎಂದಷ್ಟೇ ಹೇಳಿದ್ದೆ. ಅದು ಹೇಗೆ ಅವರಿಗೆ ಲೋನ್ ಸಿಗದಂತೆ ಮಾಡಿತ್ತೋ? ನನಗೆ ಇಂದಿಗೂ ಅರ್ಥವಾಗಿಲ್ಲ. ಆದರೆ ಆ ಅಪವಾದ ಮಾತ್ರ ಇಂದಿಗೂ ನನ್ನ ಮೇಲಿದೆ. ನನ್ನ ಮಾತಿನಿಂದ ಒಬ್ಬರಿಗೆ ಲೋನ್ ಸಿಕ್ಕದೆ ಇರಬಹುದೇನೋ? ಆದರೆ ಸಾಯುತ್ತಿದ್ದವರನ್ನು ಅಲ್ಪ ದಿನದ ಮಟ್ಟಿಗೆ ಬದುಕಿಸುವ ಶಕ್ತಿಯಂತೂ ಇದೆ ಎಂಬುದು ಸಾಬೀತಾಗಿತ್ತು.

ಇದಾದ ಮೇಲೆ ಪ್ರಿಯ ೩-೪ ದಿನ ನನ್ನನ್ನು ಸಂಪರ್ಕಿಸಲೇ ಇಲ್ಲ. ಕೆಲಸದ ಒತ್ತಡದಲ್ಲಿ ನಾನು ಅವಳಿಗೆ ಕರೆ ಮಾಡುವ ಗೋಜಿಗೆ ಹೋಗಲ್ಲಿಲ್ಲ. ಅವತ್ತೊಂದು ದಿನ ಮಧ್ಯಾನ್ಹ ಬೃಂದಾ ಕರೆ ಮಾಡಿ ಪ್ರಿಯ ಇನ್ನಿಲ್ಲ, ನಿನ್ನೆ ರಾತ್ರಿ ಹೋಗಿಬಿಟ್ಟಳಂತೆ.. ಬೇಗ ಹೊರಟು ಬಾ ಅಂದಳು. ಇದೇನೇ ಹೀಗ್ ಹೇಳ್ತಿದ್ಯ? ನೀನ್ ಇರ್ಲ್ಲಿಲ್ವ ಅಲ್ಲಿ? ಈಗ ಎಲ್ಲಿದ್ಯ? ಅಂತ ಕೇಳಿದೆ. ಇಲ್ಲ ಕಣೋ.. ನಾನು ೨ ದಿನದಿಂದ ಆಸ್ಪತ್ರೆಯಲ್ಲೇ ಇದ್ದೆ.  ನಿನ್ನೆ ರಾತ್ರಿ ೧೧ರ ಸುಮಾರಿಗೆ ಅಂಕಲ್ ಬಂದಿದ್ದರು. ಏನಮ್ಮ ೨ ದಿನದಿಂದ ಇಲ್ಲೇ ಇದ್ಯ, ಇವತ್ತು ನಾನು ಇರ್ತೀನಿ. ನೀನು ಮನೆಗೆ ಹೋಗು ಅಂದರು. ನಾನು ಹೋಗಲು ನಿರಾಕರಿಸಿ ಅಲ್ಲೇ ಕುಳಿತ್ತಿದ್ದೆ. ಅದೇ ವೇಳೆ ರಾತ್ರಿ ಪ್ರಿಯಳಿಗೆ ಎಂದು ಜ್ಯೂಸ್ ತಂದರು. ಅಂಕಲ್ ಹೊರಹೋಗಿ ಮತ್ತೊಂದು ಲೋಟ ಜ್ಯೂಸ್ ತಂದು ನನಗೆ ಬಲವಂತ ಮಾಡಿ ಕುಡಿಸಿದರು. ಜ್ಯೂಸ್ ಕುಡಿದಾದ ಮೇಲೆ ನನಗೆ ನಿದ್ದೆ ಆವರಿಸುತ್ತಿತ್ತು. ಅದಕ್ಕೆ ಅಂಕಲ್ " ೨ ದಿನದಿಂದ ನಿದ್ದೆ ಮಾಡಿಲ್ಲ, ಹೋಗು ಹೋಗು ರೆಸ್ಟ್ ತೊಗೊಂಡು ನಾಳೆ ಬೆಳಗ್ಗೆ ಬಾ " ಎಂದು ಹೇಳಿ ನನ್ನನ್ನು ಬಲವಂತವಾಗಿ ಡ್ರೈವರ್ ರಂಗಣ್ಣನ ಜೊತೆ ಮಾಡಿ ಮನೆಗೆ ಕಳಿಸಿಬಿಟ್ಟರು.  ಈಗ ಅರ್ಧ ಗಂಟೆ ಹಿಂದಷ್ಟೇ ನನಗೆ ಎಚ್ಚರವಾಯಿತು. ಅಂಕಲ್ ಆಂಟಿ ಯಾರೂ ಫೋನ್ ರಿಸೀವ್ ಮಾಡಲ್ಲಿಲ್ಲ. ಡೈರೆಕ್ಟ್ ಆಸ್ಪತ್ರೆಗೆ ಹೋಗಿ ವಿಚಾರಿಸಿದೆ. ಆಗ ಡಾಕ್ಟರ್ ಹೇಳಿದರು. ನಿನ್ನೆ ರಾತ್ರಿನೇ ಬಾಡಿ ತೊಗೊಂಡುಹೋದರು ಅಂತ. ಬೇಗ ಬಾ.. ನಾನು ಅವರ ಮನೆಗೆ ಹೋಗಿರ್ತೀನಿ. ರೂಟ್ ಸರಿಯಾಗಿ ಗೊತ್ತಾಗದ್ದಿದ್ದರೆ ಕರೆ ಮಾಡು ಎಂದು ಪ್ರಿಯಳ ಮನೆಯ ಅಡ್ರೆಸ್ಸ್ ಕೊಟ್ಟಳು.

ನಾನು ನಮ್ಮ ಮ್ಯಾನೇಜರ್ ಗೆ ವಿಷಯ ತಿಳಿಸಿ ಅರ್ಧ ದಿನ ರಜೆ ಪಡೆದು ಪಾರ್ಕಿಂಗ್ ಕಡೆ ಧಾವಿಸುತ್ತಿರುವಾಗಲೇ ಬೃಂದಾ ಮತ್ತೆ ಕರೆ ಮಾಡಿದಳು. ಆಗಲೇ ಬಾಡಿ ತೆಗೆದುಬಿಟ್ಟಿದ್ದಾರೆ ಮನೆಯಲ್ಲಿ ಯಾರೂ ಇಲ್ಲ. ಅರ್ಧ ಗಂಟೆ ಆಯ್ತಂತೆ ಸ್ಮಶಾನದ ಕಡೆ ಹೊರಟು, ಪಕ್ಕದ ಮನೆಯವರು ಹೇಳಿದರು.. ನೀನು ಡೈರೆಕ್ಟ್ ಆಗಿ ಸ್ಮಶಾನಕ್ಕೆ ಬಾ... ಹುಳಿಮಾವು ಗೇಟ್ ಇಂದ ರಾಜಾಜಿ ನಗರದ ಸ್ಮಶಾನಕ್ಕೆ ಹೋಗಲು ಏನಿಲ್ಲವೆಂದರೂ ೯೦ ನಿಮಿಷ ಬೇಕು. ಅಷ್ಟರವರೆಗೆ ಅವರು ಕಾಯುತ್ತಾರ?  ಏನು ಮಾಡುವುದು ಎಂದು ಯೋಚಿಸುತ್ತಾ ಗಾಡಿ ತೆಗೆದೆ. ನಾನಿನ್ನು ಜೆ ಪಿ ನಗರದ ಹತ್ತಿರ ಬರುತ್ತಿದ್ದೆ. ಬೃಂದಾ ಮತ್ತೆ ಕರೆ ಮಾಡಿದ್ದಳು. ಜೋರಾಗಿ ಅಳುತ್ತಿದ್ದಳು. ನೋಡೋ ಹೇಗ್ ಮಾಡ್ಬಿಟ್ರು... ನಾನ್ ಸ್ಮಶಾನದ ಹತ್ತಿರ ಹೋದಾಗ ಅವರುಗಳು ಆಗಲೇ ವಾಪಸ್ಸಾಗುತ್ತಿದ್ದರು. ನನ್ನ ಪ್ರಿಯಳನ್ನು ನನಗೂ ನೋಡಲು ಆಗಲ್ಲಿಲ್ಲ. ಮಣ್ಣು ಮಾಡಿಬಿಟ್ಟಿದ್ದರು.. ಅವರಿಗೆ ಅಷ್ಟ್ ಅರ್ಜೆಂಟ್ ಏನಾಗಿತ್ತು ಗೊತ್ತಾಗ್ತಿಲ್ಲ... ಆಂಟಿ ನನ್ನನ್ನು ನೋಡಿದ ಕೂಡಲೇ ಬೃಂದಾ ಯಾಕಮ್ಮ ಇಷ್ಟ್ ಲೇಟ್ ಮಾಡಿದೆ. ನೀನ್ ಬರ್ತ್ಯ ಅಂತ ತುಂಬಾ ಕಾದೆವು. ನಿನಗೆ ಎಷ್ಟೋ ಸಲಿ ಕರೆ ಮಾಡಿದರೂ ನೀನು ತೆಗೆಯಲೇ ಇಲ್ಲ. ನಿನ್ನ ಜೊತೆ ಪ್ರಿಯ ಇಲ್ಲದಿರುವುದನ್ನು ನನ್ನಿಂದ ನೋಡಲು ಸಾಧ್ಯವಿಲ್ಲ. ದಯವಿಟ್ಟು ಹೊರಟುಹೋಗಮ್ಮ .. ಈಗ ನಮ್ಮ ಜೊತೆ ಬರಬೇಡ ಅಂತ ನನ್ನನ್ನು ವಾಪಸ್ ಕಳಿಸಿಬಿಟ್ಟರು. ಅಲ್ಲಿ ಏನ್ ನಡಿತಿದೆ ಅಂತಾನೆ ಅರ್ಥ ಆಗ್ತಿಲ್ಲ. ಬೃಂದಾ ಇನ್ನು ಅಳುತ್ತಲೇ ಇದ್ದಳು.

ನಾನು ಇನ್ನು ಅಲ್ಲಿಗೆ ಹೋಗಿ ಏನು ಮಾಡೋದು? ಅವರೇನೋ ನನ್ನನ್ನು ನೋಡಿರಬಹುದು ಅದು ಫೋಟೋದಲ್ಲಿ .. ಆದರೆ ನಾನು ಅವರ್ಯಾರನ್ನು ನೋಡಿಲ್ಲ.. ಅದು ಅಲ್ಲದೆ ಬೃಂದಾನು ಈಗ ಬರಲು ಒಪ್ಪಲ್ಲ. ಏನು ಮಾಡೋದು ಎಂದು ಯೋಚಿಸುತ್ತಾ ಮನೆಗೆ ಬಂದೆ. ನಾನು ಬೇಗ ಬಂದಿದ್ದನ್ನು ಗಮನಿಸಿದ ಸಂಯುಕ್ತ ನನ್ನ ಹಿಂದೆಯೇ ಓಡಿಬಂದಳು. ನಾನು ಸಪ್ಪಗಿರುವುದನ್ನು ನೋಡಿ ಅನ್ನೋನ್ ಕೈ ಕೊಟ್ಟಳಾ? ಎಂದು ಕೇಳಿದಳು. ಅದಕ್ಕೆ ನಾನು ಕೈ ಕೊಟ್ಟಿದ್ದರೆ ಸಹಿಸಬಹುದಿತ್ತು ಬಿಟ್ಟೆ ಹೋದಳು ಎನ್ನುತ್ತಾ ಬಿಕ್ಕುತ್ತಿದ್ದೆ. ಸೀದಾ ಅಡುಗೆ ಮನೆಗೆ ಹೋಗಿ ಒಂದು ಲೋಟ ನೀರು ತಂದು ಕೊಟ್ಟ ಸಂಯುಕ್ತ, ಏನಾಯ್ತೋ? ಬಾ ಫಸ್ಟ್ ಕೂತ್ಕೋ ಬಾ ಇಲ್ಲಿ ಎಂದು ಈಜಿ ಚೇರ್ ಅನ್ನು ಬಿಡಿಸಿದಳು. ನಾನು ಕೂಡುತ್ತಿದ್ದಂತೆ ಸಂಯುಕ್ತ ನನ್ನ ಪಕ್ಕ ಕೂತು ತಲೆ ಕೂದಲನ್ನು ನೇವರಿಸುತ್ತಾ ಈಗ ಹೇಳು? ಯಾಕೆ ಒಂತರ ಸಪ್ಪುಗಿದ್ಯ? ಏನಾಯ್ತು? ಅಂತ.

ನಾನು ಹೇಳುವವರೆಗೂ ಇವಳು ಬಿಡುವಳಲ್ಲ ಎಂದು ಖಾತ್ರಿಯಾಯಿತು. ಅದೂ ಅಲ್ಲದೆ ದುಃಖವನ್ನು ಮತ್ತೊಬ್ಬರ ಬಳಿ ಹೇಳಿದರೆ ನನಗೂ ಕೊಂಚ ಸಮಾಧಾನ ಆಗುತ್ತೆ ಅಂತನಿಸಿ ಸಂಯುಕ್ತಳಿಗೆ ನಡೆದದ್ದೆಲ್ಲವನ್ನು ಹೇಳಿದೆ. ಕೊನೆ ಕೊನೆಗೆ ಛೆ ಪಾಪ ಆ ಹುಡುಗಿಗೆ ಹೀಗಾಗಬಾರದಿತ್ತು ಎಂದು ಸಂಯುಕ್ತಳೂ ಅಳಲು ಶುರುಮಾಡಿಬಿಟ್ಟಿದ್ದಳು .

ಸಂಯುಕ್ತಳ ಜಾಸ್ತಿಯಾದ ಒಡನಾಟದಿಂದ ಹಾಗು ಕೆಲಸದ ಒತ್ತಡದಿಂದ ೨-೩ ತಿಂಗಳಲ್ಲಿ ಪ್ರಿಯ ಹಾಗು ಬೃಂದಾ ಇಬ್ಬರನ್ನು ನಾನು ಮರೆತೇಬಿಟ್ಟೆ. ಎಲ್ಲೋ ಯಾವಾಗಲೋ ಒಮ್ಮೆ ನೆನಪಿಗೆ ಬಂದರೂ, ತಕ್ಷಣವೇ ಸಂಯುಕ್ತಳ ಬಳಿ ಓಡಿ ಬಿಡುತ್ತಿದ್ದೆ.

ಹೀಗೆ ೨ ವರ್ಷ ನೋಡ ನೋಡುತ್ತಿದ್ದಂತೆ ಕಳೆದುಹೋಗಿತ್ತು. ಅದೊಂದು ದಿನ ಇದೇ ಅನ್ನೋನ್ ನಂಬರಿಂದ ನನಗೆ ಕರೆ ಬಂದಿತು.

Wednesday, December 12, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೯


ಹಾ ಬೃಂದಾ ಹೇಳು .. ಈಗ ಅನ್ಕೊತಾ ಇದ್ದೆ ಯಾಕೋ ಇವಳು ಕರೆ ಮಾಡಲ್ಲಿಲ್ಲವೆಂದು. ನೂರ್ ವರ್ಷ ಆಯಸ್ಸು ನಿಂಗೆ. ಇಷ್ಟೇ ಮಾತಾಡಿದ್ದು ನಾನು ... ಇನ್ನು ಕೊನೆಯವರೆಗೂ ಬೃಂದಾ ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದೆಯಷ್ಟೇ. ಬಹುಶಃ ಬೃಂದಾಳ ಜೊತೆ ಫೋನಿನಲ್ಲಿ ಇಷ್ಟು ಕಡಿಮೆ ಮಾತಾಡಿದ್ದು ಇದೇ ಮೊದಲೇನೋ?


ಪ್ರಿಯಾಳ ಹುಟ್ಟುಹಬ್ಬ ಕ್ಯಾನ್ಸಲ್ ಆಯಿತು. ನೀನು ವಂಡರ್ ಲಾ ಗೆ ಬರಲ್ಲ ಅಂತ ಹೇಳಿದ್ದಕ್ಕೆ ಪ್ರಿಯ ತುಂಬಾ ಬೇಜಾರ್ ಮಾಡ್ಕೊಂಡಿದ್ದಳು. ಅವನು ಬರದ್ದಿದ್ದ ಮೇಲೆ ನಾನು ಬರೋಲ್ಲ ಅಂತ ಹಠ ಮಾಡಿ ವಂಡರ್ ಲಾ ಗೆ ಹೋಗೋದೇ ಬೇಡ ಅಂತ ಡಿಸೈಡ್ ಮಾಡಿದೆವು. ಆಮೇಲೆ ನೀ ಹೇಳಿದಂತೆ ಗಾಂಧೀ ಬಜಾರಿನ ಗೋಕುಲ್ ವೆಜ್ ರೆಸ್ಟೋರೆಂಟ್ ಅಲ್ಲೇ ಟೇಬಲ್ ಬುಕ್ ಮಾಡಿದ್ದೆವು. ಗೋಕುಲ್ ವೆಜ್ ಲಿ ಮಾಡಿದರೆ ನೀನು ಗ್ಯಾರಂಟಿ ಬರ್ತೀನಿ ಅಂತ ಹೇಳಿದ್ದಂತೆ. ಅದಕ್ಕೆ ನಿಂಗೆ ಸರ್ಪ್ರೈಸ್ ಕೊಡೋಣ, ಮುಂಚೆ ಹೇಳೋದು ಬೇಡ ಅಂತ ಪ್ರಿಯನೇ ನಂಗೆ ಹೇಳಿದ್ದಳು. ಆದರೆ ನಾವಂದುಕೊಂಡಂತೆ ಆಗಲ್ಲಿಲ್ಲ.

ನಿಂಗೆ ಗೊತ್ತಾ? ಪ್ರಿಯ ನಿನ್ನ ತುಂಬಾ ಇಷ್ಟ ಪಡ್ತಾಳೆ. ಅದುನ್ನ ಎಷ್ಟೋ ಬಾರಿ ನಿನ್ ಹತ್ರನು ಹೇಳಿದಾಳೆ ಅನ್ಕೋತೀನಿ. ನಿನ್ನ ಫ್ರೆಂಡು ಅಂತಾನು ಗುರುತಿಸದ ಅವನನ್ನು ನೀನು ಪ್ರೀತಿಸುತ್ತೀಯ? ಅಂತ ನಾವುಗಳು ಎಷ್ಟೋ ಬಾರಿ ಬುದ್ದಿ ಹೇಳಿದರೂ ನಮ್ಮ ಮಾತು ಕೇಳುತ್ತಿರಲ್ಲಿಲ್ಲ. ನೀ ಏನೋ ಮೋಡಿ ಮಾಡಿದ್ಯ ಅವಳಿಗೆ? ಎನಿಕ್ಕೆ ನಿಂಗೆ ಅವ್ನು ಅಷ್ಟೊಂದ್ ಇಷ್ಟ ಅಂತ ಕೇಳುದ್ರೆ, ನಂಗೆ ಅವನು ಮಾತಾಡೋ ರೀತಿ ಇಷ್ಟ, ಅವನ straight forwardness ಇಷ್ಟ. ನಿಮಗೆಲ್ಲರಿಗೂ ಗೊತ್ತು ನಾನೆಷ್ಟು ಬದಲಾದೆ ಅವನು ಸಿಕ್ಕ ಮೇಲೆ ಅಂತ ಇನ್ನು ಏನೇನೋ ಹೇಳ್ತಾನೆ ಇರ್ತಾಳೆ. ನಿನ್ನ ಬಗೆಗಿನ ಮಾತೆಂದರೆ ಅವಳಿಗೆಂತದೋ ಹುಮ್ಮಸ್ಸು ಬಂದುಬಿಡುತ್ತದೆ. ಮಾತಾಡಲು ಕಷ್ಟವಾದರೂ ನಿಲ್ಲಿಸೋದಿಲ್ಲ. ಪ್ಲೀಸ್ ನೀನು ಅವಳನ್ನ ಪ್ರೀತಿ ಮಾಡದಿದ್ದರೂ ಪರವಾಗಿಲ್ಲ. ಒಮ್ಮೆ ಅವಳಿಗೆ ನಾನು ನಿನ್ನ ಬೆಸ್ಟ್ ಫ್ರೆಂಡ್ ಆಗಿರ್ತೀನಿ ಅಂತ ಹೇಳೋ. ಆಮೇಲೆ ಕಾಫಿ ಕುಡಿಬೇಕಾದ್ರೆ ಅದೇನೋ ಹೇಳ್ತಿದ್ದಂತಲ? A lot coffee more.. A lot can happen over a coffee .. ಯಾರಾದ್ರು ಕಾಫಿ ಅಂದ್ರೆ ಸಾಕು ಅದುನ್ನ ಹೇಳ್ತಿರ್ತಾಳೆ. ನಿಂಗೆ ಕೈ ಮುಗಿದು ಕೇಳ್ಕೊತೀನಿ .. ಅವಳ ಜೊತೆ ಒಂದು ಕಪ್ ಬೇಡಪ್ಪ ಒಂದು ಸಿಪ್ ಆದ್ರೂ ಕಾಫಿ ಕುಡಿಯೋ ..

ಒಂದು ದಿನ ಅನಿರೀಕ್ಷಿತವಾಗಿ ಅವಳ ದೇಹ ಚಿಕಿತ್ಸೆಗೆ ಸ್ಪಂದಿಸ ತೊಡಗಿತ್ತು. ಅವಳಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ಗಳು ಸಹ ಆಶ್ಚರ್ಯ ಪಟ್ಟರು. ಈ ಬದಲಾವಣೆಗೆ ಮೂಲ ಕಾರಣ ಹುಡುಕಿದ ಡಾಕ್ಟರ್ ಗಳಿಗೆ ಗೊತ್ತಾದದ್ದು ಅವರು ಚಿಕಿತ್ಸೆಯನ್ನು ಬೆಳಗ್ಗೆ ಹತ್ತರ ಬದಲು ಸಂಜೆ ನಾಕಕ್ಕೆ ಶುರು ಮಾಡಿದ್ದರು. ಮಾರನೆ ದಿನ ಮತ್ತೆ ಬೆಳಗ್ಗೆ ಚಿಕಿತ್ಸೆ ಮಾಡಿದಾಗ ಆ ಬದಲಾವಣೆ ಕಾಣಲ್ಲಿಲ್ಲ. ಮತ್ತೆರಡು ದಿನ ಸಂಜೆ ಚಿಕಿತ್ಸೆ ಮಾಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಡಾಕ್ಟರ್ ಗಳು ಪ್ರಿಯಾಳ ಮನೆಯಲ್ಲಿ ವಿಚಾರಿಸಲಾಗಿ ಆಂಟಿ ಹೇಳಿದ್ದರು : - ಪ್ರಿಯ ಇಂಟರ್ನೆಟ್ ನಲ್ಲಿ ಯಾರದೋ ಜೊತೆ ಚಾಟ್ ಮಾಡುತ್ತಾಳೆ. ಅದಾದ ಮೇಲೆ ಅವಳು ತುಂಬಾ ಖುಷಿಯಾಗಿರುತ್ತಾಳೆ. ನಾವು ಅದಾರೆಂದು ಈವರೆಗೂ ವಿಚಾರಿಸಿಲ್ಲ. ಡಾಕ್ಟರ್ ಗಳು ನೀಡಿದ ಸಲಹೆಯಂತೆ ಪ್ರಿಯಳ ತಂದೆ ತಾಯಿ ಅವಳು ನಿನ್ನ ಜೊತೆ ಚಾಟ್ ಮಾಡೋದನ್ನ ತಡೆಯಲ್ಲಿಲ್ಲ. ಮತ್ತೆ ಮತ್ತೆ ಅವಳಿಗೆ ನಿನ್ನ ಜೊತೆ ಮಾತಾಡಲು, ಚಾಟ್ ಮಾಡಲು ಉತ್ತೇಜಿಸಿದರು. ಹೆತ್ತವರಿಗೆ ಮಗಳ ಆರೋಗ್ಯಕ್ಕಿಂತ ಮುಖ್ಯವಾದದ್ದು ಬೇರೇನಿದೆ??

ನಿಮಗೆ ಕುತೂಹಲವಿದ್ದರೆ ಅದಾರೆಂದು ತಿಳಿದುಕೊಳ್ಳಿ ಎಂದು ಡಾಕ್ಟರ್ ಹೇಳಿದ್ದರು. ಆ ಜವಾಬ್ದಾರಿಯನ್ನು ಅಂಕಲ್ ನನಗೆ ನೀಡಿದ್ದರು. ಹಾಗಾಗಿ ನಾನು ನಿನ್ನ ಜೊತೆ ಪ್ರಿಯಾಳಿಗಿಂತ ಹೆಚ್ಚಿಗೆನೆ ಮಾತಾಡುತ್ತಿದ್ದೆ. ನೀನ್ ಎಷ್ಟು ಚತುರ ಮಾತಿನಲ್ಲಿ .. ಎಲ್ಲ ಪ್ರಶ್ನೆಗಳಿಗೂ ಉಲ್ಟಾ ಉತ್ತರಾನೇ ಕೊಡ್ತಿದ್ದೆ. ಯಾವುದು ಸರಿ ಯಾವುದು ತಪ್ಪು ಎಂದು ಅರ್ಥ ಮಾಡಿಕೊಳ್ಳಲು ಆ ಚಾಟ್ ಹಿಸ್ಟರಿನ ನಾಕು ನಾಕು ಬಾರಿ ಮತ್ತೆ ಮತ್ತೆ ತಿರುವುತ್ತಿದ್ದೆ. ನಿನ್ನ ಬಗ್ಗೆ ಎಳ್ಳಷ್ಟು ವಿಚಾರ ಬಾಯಿಬಿಡಿಸಲು ನನಗೆ ಏಳು ಕೆರೆ ನೀರು ಕುಡಿಸುತ್ತಿದ್ದೆ... ಆಗೆಲ್ಲಾ ನನಗೆ ಪ್ರಿಯಾಳ ಮೇಲೆ ಅಸೂಯೆಯಾಗುತ್ತಿತ್ತು. ನನ್ನ ಪ್ರಿಯಾಳಲ್ಲದೆ ಬೇರ್ಯಾರಾದರೂ ಆ ಜಾಗದಲ್ಲಿದ್ದಿದ್ದರೆ ನಾನು ನಿನ್ನನ್ನು ಬಿಟ್ಟು ಕೊಡುತ್ತಿರಲ್ಲಿಲ್ಲ. ನನ್ನ ವಿಷಯ ಹಾಗಿರಲಿ. ನಿನ್ನ ಜೊತೆ ಮಾತಾಡಿಕೊಂಡು ನಗುಮುಖದಿಂದ ಹಾಸ್ಪಿಟಲ್ ಗೆ ಬರುತ್ತಿದ್ದ ಪ್ರಿಯ ಕಳೆದ ನಾಕಾರು ತಿಂಗಳುಗಳಿಂದ ಬಹಳ ಚೇತರಿಸಿಕೊಂಡುಬಿಟ್ಟಿದ್ದಳು. ಈ ಪ್ರೀತಿ ಎಂತ ಮಾಯೆ ಅಲ್ಲವ? ಸಾಯುತ್ತಿರುವವರನ್ನ ಬದುಕಿಸಿಬಿಡುತ್ತೆ ಬಾಳಿ ಬದುಕಬೇಕಾದವರನ್ನ ಸಾಯಿಸಿಬಿಡುತ್ತೆ.

ಅವಳು ಸರಿಯಾದ ಸಮಯಕ್ಕೆ ಚಿಕಿತ್ಸೆಗೆ ಸ್ಪಂದಿಸಿದ್ದರಿಂದ ಇನ್ನಾರು ತಿಂಗಳು ಯಾವುದೇ ಭಯವಿಲ್ಲ. ಆದರೆ ಅವಳಿಗೆ ಕೆಲವೊಂದು ಮಾತ್ರೆಗಳನ್ನು ಬೆಳಗ್ಗೆ ಮಧ್ಯಾನ್ಹ ರಾತ್ರಿ ತಪ್ಪದೆ ಕೊಡಬೇಕು. ತಪ್ಪಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿ ಡಾಕ್ಟರ್ ಗಳು ಅವಳಿಗೆ ಪ್ರತಿದಿನ ಮಾಡುತ್ತಿದ್ದ ಚಿಕಿತ್ಸೆಯನ್ನು ಒಂದು ತಿಂಗಳ ಹಿಂದೆ ನಿಲ್ಲಿಸಿದ್ದರು. ಮೊದ ಮೊದಲು ಮನೆಯಲ್ಲಿ ಕೆಲಸದವರಿಂದ ಹಿಡಿದು ಅವರ ತಾತನ ತನಕ ಎಲ್ಲ ವಿಚಾರಿಸಿಕೊಳ್ಳುವವರೆ.. ಆದರೆ ಅದು ಎಷ್ಟು ದಿನ.. ವಾರ ಹತ್ತು ದಿನ... ಅವಳಿಗೆ ಹೇಗೂ ಅಭ್ಯಾಸವಾಗಿಬಿಟ್ಟಿದೆ ನಾವು ಹೇಳದ್ದಿದ್ದರೂ ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳುತ್ತಾಳೆ ಅಂದುಕೊಳ್ಳುತ್ತಾ ಒಬ್ಬಬ್ಬರಾಗಿ ಅವಳನ್ನು ವಿಚಾರಿಸೋದೇ ಬಿಟ್ಟುಬಿಟ್ಟರು. ಅದೇ ಸಮಯದಲ್ಲೇ ನಾನು ನಿನ್ನ ಬಗ್ಗೆ ನನಗೆ ತಿಳಿದ್ಡಿದ್ದನ್ನು ಹಾಗು ಪ್ರಿಯ ಇಟ್ಟುಕೊಂಡಿದ್ದ ನಿನ್ನ ಫೋಟೋವನ್ನು ಅವರ ಮನೆಯವರಿಗೆಲ್ಲಾ ತೋರಿಸಿದ್ದೆ. ನಮ್ಮ ಮಗಳನ್ನು ನಮಗೆ ಇನ್ನಷ್ಟು ಕಾಲ ಬದುಕಿಸಿಕೊಟ್ಟ ಪುಣ್ಯಾತ್ಮನಪ್ಪ ನೀನು ಅಂತ ಅವರ ಅಮ್ಮ ನಿನ್ನ ಫೋಟೋಗೆ ಕೈ ಮುಗಿದ್ದಿದ್ದರು. ಇದನ್ನು ನೀನು ಬೇಕಾದರೆ ನಂಬು ಸಾಕಾದರೆ ಬಿಡು. ನನಗೇನೂ ನಷ್ಟ ಇಲ್ಲ.

ಮಾತ್ರೆ ತಿನ್ನಲು ಅಸಹ್ಯ ಪಡುತ್ತಿದ್ದ ಪ್ರಿಯ ಯಾರು ಕೇಳೋಲ್ಲ ಅಂತ ಗೊತ್ತಾದ ದಿನದಿಂದ ಅಂದರೆ ಕಳೆದೊಂದು ತಿಂಗಳಿನಿಂದ ಮಾತ್ರೆ ತೊಗೊಳೋದೇ ನಿಲ್ಲಿಸಿಬಿಟ್ಟಿದ್ದಳು. ಎಂಟು ದಿನದ ಹಿಂದೆ ಅವಳು ಮನೆಯಲ್ಲಿ ಕುಸಿದುಬಿದ್ದಾಗಲೇ ಗೊತ್ತಾದದ್ದು ಅವಳು ಮಾತ್ರೆ ನಿಲ್ಲಿಸಿದ್ದಾಳೆಂಬುದು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದಾಗ, ಅವಳಿಗೆ ಇಲ್ಲಿವರೆಗೂ ಏನಾಗಿಲ್ಲವೆಂದರೆ ಅದೊಂದು ಪವಾಡವೇ ಸರಿ ಎಂದು ಡಾಕ್ಟರ್ ಹೇಳಿದ್ದನ್ನು ನಾನು ಕೇಳಿಸಿಕೊಂಡಾಗ ನನಗನಿಸಿದ್ದು ಅವಳನ್ನು ಉಳಿಸಿದ್ದು ನೀನು.. ನಿನ್ನ ಜೊತೆಗಿನ ಆ ಮಾತುಕತೆ ಅವಳನ್ನು ಮೃತ್ಯುವಿನಿಂದಲೂ ಪಾರು ಮಾಡುತ್ತಿತ್ತು. ಯಾವಾಗ ಅವಳು ನೀನು ವಂಡರ್ ಲಾ ಗೆ ಬರಲ್ಲ ಅಂತ ಸಿಟ್ಟು ಮಾಡಿಕೊಂಡು ನಿನ್ನ ಜೊತೆ ಎರಡು ದಿನ ಮಾತಾಡೋದನ್ನ ಬಿಟ್ಟಳೋ .. ನೋಡು.. ಹೀಗಾಗಿಬಿಟ್ಟಿದೆ.

ನಾನು ಇಷ್ಟು ಹೇಳಿದಮೇಲೆ ಪ್ರಿಯಾಳಿಗೆ ಯಾವುದೋ ದೊಡ್ಡ ಖಾಯಿಲೆಯಿದೆಯೆಂದು ನಿನಗನಿಸಿದ್ಯೋ ಅಥವಾ ಇದು ಕೂಡ ಸುಳ್ಳು ಅಂತ ಅನಿಸ್ತಿದ್ಯೋ? ನಿನಗೇನನಿಸಿದರೂ ಪರವಾಗಿಲ್ಲ......

ಬೃಂದಾ ನೀನು ಕಲ್ಲಿನ ಜೊತೆ ಮಾತಾಡ್ತಿಲ್ಲ. ಯಾರನ್ನು ಯಾವ ಸಮಯದಲ್ಲಿ ನಂಬಬೇಕೆಂಬ ಅಲ್ಪ ಬುದ್ದಿಯನ್ನು ದೇವರು ಕರುಣಿಸಿದ್ದಾನೆ. ಅದೇನು ಹೇಳಬೇಕಂತಿದ್ಯ ಎಲ್ಲವನ್ನು ಹೇಳು. ಇನ್ನು ನನ್ನಿಂದ ಏನನ್ನು ಮುಚ್ಚಿಡುವ ಪ್ರಯತ್ನ ಮಾಡಬೇಡ. ನಾನು ನಿನ್ನ ಮಾತನ್ನ ನಂಬ್ತೀನಿ ಬೃಂದಾ..

ಹೌದಾ.. ಎಷ್ಟೋ ದಿನದಿಂದ ನಿನಗೆ ಹೇಳಬೇಕೆಂದುಕೊಂಡಿದ್ದನ್ನ ಈಗ ಹೇಳುತ್ತಿದ್ದೇನೆ. ಸರಿಯಾಗಿ ಕೇಳಿಸಿಕೋ .
Priya is a Cervical Cancer patient !!


Monday, December 10, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೮


ಅವಳ ಲಾಗ್ ಆನ್ ಪ್ರತೀಕ್ಷೆಯಲ್ಲಿಯೇ ಇದ್ದ ನಾನು ಅವಳು ಬರುತ್ತಿದ್ದಂತೆ ಉದ್ವೇಗದಿಂದ ಚಾಟ್ ವಿಂಡೋ ತೆರೆದು ಹಾಯ್ ಎಂದು ಟೈಪಿಸಿದೆ. ಆದರೂ ಎಂಟರ್ ಬಟನ್ ಒತ್ತದೆ ಅವಳೇ ಪಿಂಗ್ ಮಾಡಲಿ ಎಂದು ನಿರೀಕ್ಷಿಸಿ ಮಾನಿಟರಿನ ತುದಿಯನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ಐದು ಹತ್ತು ಹದಿನೈದು ನಿಮಿಷ ಕಳೆದರೂ ಅವಳು ಪಿಂಗ್ ಮಾಡಲ್ಲಿಲ್ಲ. ನಾನೇ ಮುಂದುವರಿದು ಹಾಯ್ ಮಾತಾಡೋಕೆ ಇಷ್ಟ ಇಲ್ಲವಾ? ಎಂದು ಕಳಿಸಿದೆ. ಅವಳು - ಹಾಯ್ ಸಾರಿ ನಾನು ಬೃಂದಾ. ಈಗ ಸ್ವಲ್ಪ ಬ್ಯುಸಿ ಇದ್ದೀನಿ. ಪ್ಲೀಸ್ ಏನು ತಿಳ್ಕೊಬೇಡ ನಾನೇ ನಿಂಗೆ ರಾತ್ರಿ ಕಾಲ್ ಮಾಡ್ತೀನಿ. ಪ್ಲೀಸ್ ಪ್ಲೀಸ್ ಓಕೆ. ಸಾರಿ ಅಗೈನ್ ಟಾಟಾ. ನಾನು ಪ್ರಿಯಾಳಿಗೆ (ಅನ್ನೋನಿಗೆ) ಏನಾಗಿದೆ ಎಂದು ಟೈಪಿಸುತ್ತಿರುವಾಗಲೇ  ಬೃಂದಾ ಲಾಗ್ ಆಫ್ ಆಗಿಬಿಟ್ಟಳು. ನಾನು ತಕ್ಷಣವೇ ಅನ್ನೋನ್ ನಂಬರಿಗೆ ಕರೆ ಮಾಡಿದೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು.

ರಾತ್ರಿ ಕರೆ ಮಾಡುತ್ತೇನೆಂದು ಅನ್ನೋನ್ ಹೇಳಿದ್ದರೆ ನಾನು ನಂಬುತ್ತಿರಲ್ಲಿಲ್ಲವೇನೋ? ಆದರೆ ಬೃಂದಾ ಹೇಳಿದ್ದರಿಂದ ನಾನು ನಂಬಿದ್ದೆ. ಹಾಗಾಗಿ ಕಳೆದೊಂದು ವಾರದಿಂದ ಈ ಅನ್ನೋನಿನ ಬಗೆಗಿದ್ದ ಸಂದೇಹಗಳೆಲ್ಲ ಇವತ್ತು ರಾತ್ರಿ ನನಗೆ ತಿಳಿದುಹೋಗತ್ತೆ. ಇನ್ನು ರಾತ್ರಿಯವರೆಗಾದರೂ ಈ ಅನ್ನೋನ್ ಅನ್ನು ಮನಸಿನಿಂದ ಆಚೆ ಓಡಿಸಲು ನಿರ್ಧರಿಸಿದೆ. ಸಮಯ ೩:೧೩ ಆಗಿತ್ತು. ಜಯನಗರದ ಸ್ವಾಗತ್ ಗರುಡ ಮಾಲಿನಲ್ಲಿರುವ ಐನಾಕ್ಸ ಚಿತ್ರಮಂದಿರಕ್ಕೆ ಕರೆ ಮಾಡಿ ೪:೧೫ ಶುರು ಆಗುವ ಪಂಚರಂಗಿ ಚಿತ್ರಕ್ಕೆ ಚೀಟಿ ಸಿಗುತ್ತದೆಯ ವಿಚಾರಿಸಿಕೊಂಡೆ.
ಸಂಯುಕ್ತಗೆ ಕರೆ ಮಾಡಿ : ಏನೇ ಮಾಡ್ತಿದ್ಯ?
ಸಂ : (ಆಕಳಿಸುತ್ತಾ) ಊಟ ಮಾಡಿ ಮಲಗಿದ್ದೆ. ಈಗ ಏಳ್ತಾ ಇದ್ದೀನಿ.
ನಾ : ಏನ್ ಮಾಡಬೇಕು ಅಂತ ಇದ್ದೀಯ ಈಗ? ಸಂಜೆಗೆ ಎಲ್ಲಾದರು ಹೋಗೋ  ಪ್ಲಾನ್ ಇದ್ಯ ?
ಸಂ : ಏನು ಇಲ್ಲ.. ನಿನ್ನೆ ನೀನ್ ಕೊಟ್ಟಿರೋ ಮನೆ ಪಾಠದ ಲೆಕ್ಕಗಳನ್ನು ಮಾಡಬೇಕು.
ನಾ : ಸರಿ.. ಇವತ್ತು ಮನೆ ಪಾಠ ಬೇಡ. ಈಗಲೇ ರೆಡಿ ಆಗಿ ಜಯನಗರದ ಸ್ವಾಗತ್ ಗರುಡಾಗೆ ಬಾ.. ಪಂಚರಂಗಿ ಸಿನಿಮಾ ನೋಡೋಣ ...
ಸಂ : ಉಮ್ಮ ಉಮ್ಮ ಉಮ್ಮ ... ಸೊ ಸ್ವೀಟ್ ಆಫ್ ಯು.
ನಾ : ಸರಿ ಸರಿ . .. ಆಮೇಲೆ ...
ಸಂ : ಅಮ್ಮನಿಗೆ ನಿಜ ಹೇಳಲೋ ? ಸುಳ್ಳು ಹೇಳಲೋ?
ನಾ : ನಿಜಾನೆ ಹೇಳು.
ಸಂ : ನಂ ಫ್ರೆಂಡ್ಸ್ ಜೊತೆ ಹೋಗ್ತೀನಿ ಅಂದ್ರು ಬೇಡ ಅಂತಾರೆ ಆದ್ರೆ ನಿನ್ ಜೊತೆ ಅಂದ್ರೆ ಅಮ್ಮ ಏನ್ ಬೇಡ ಅನ್ನಲ್ಲ
ನಾ : ಲೇ ಹೇಳೋದನ್ನ ಕೇಳುಸ್ಕೋ .. ಅತೀ ಬುದ್ದಿವಂತಿಕೆ ಉಪಯೋಗಿಸಿ ರಾತ್ರಿ ಊಟಕ್ಕೆ ಬರೋದಿಲ್ಲ ಅಂತ ಹೇಳಿ ಬರಬೇಡ. ಅಮ್ಮ ಏನ್ ಮಾಡ್ಬೇಕು ಅಂತ ಇದಾರೋ ಅದುನ್ನೇ ಸ್ವಲ್ಪ ಜಾಸ್ತಿ ಮಾಡೋಕೆ ಹೇಳು. ನಾನು ಅಲ್ಲೇ ಊಟ ಮಾಡ್ತೀನಿ. ಮನೆಗ್ ಬಂದು ಅಡಿಗೆ ಮಾಡ್ಕೊಳೋದಕ್ಕೆ ಬೇಜಾರು.
ಸಂ:  ಸರಿ ಆಯ್ತು .. ಹೇಳ್ತೀನಿ. ನಾನ್ ಈಗಲೇ ಹೊರುಡ್ಲಾ?
ನಾ : ಹು.. ಈಗ್ಲೇ ಹೊರಡು .. ೪:೧೫ ಕ್ಕೆ ಇರದು. ಟಾಟಾ
ಸಂ : ಸರಿ .. ಸೀ ಯು
ಮತ್ತೆ ಐನಾಕ್ಸ ಚಿತ್ರಮಂದಿರಕ್ಕೆ ಕರೆ ಮಾಡಿ ೨ ಚೀಟಿ ಕಾದಿರಿಸಲು ಸೂಚಿಸಿದೆ.

ನಾನು ಗಾಡಿ ಪಾರ್ಕ್ ಮಾಡಿ ಮಾಲಿನ ಮುಂಭಾಗಕ್ಕೆ ಬಂದಾಗ ಸಂಯುಕ್ತ ಆಟೋಯಿಂದ ಇಳಿದು, ಆಟೋದವನ ಹತ್ತಿರ ಏನೋ ಚೌಕಾಶಿ ನಡೆಸುತ್ತಿದ್ದಳು. ಇನ್ನು ಅಲ್ಲಿಗೆ ಹೋದರೆ, ನಾನ್ ಉಳುಸ್ಕೋಳೋ ಹತ್ತ್ ರೂಪಾಯಿ ಮೇಲು ನಿನಗ್ಯಾಕೆ ಕಣ್ಣು ? ಅಂತ ಅವಳ ಹತ್ತಿರ ಬೈಸ್ಕೊಳೋದು ಬೇಡ ಅನಿಸಿ ದೂರದಲ್ಲೇ ಅವಳನ್ನು ನೋಡುತ್ತಾ ನಿಂತೆ. ಆಟೋದವನ ವಿರುದ್ದದ ಯುದ್ದದಲ್ಲಿ ಅವಳೇ ಗೆದ್ದಳೆಂದು ಕಾಣತ್ತೆ... ಒಳಗೊಳಗೇ ಮುಸಿನಗುತ್ತಾ ನನ್ನ ಕಡೆ ಕೈಮಾಡಿ ಅಲ್ಲೇ ಬಂದೆ ಎನ್ನುತ್ತಾ ಓಡಿ ಬಂದಳು. ಬಂದವಳೇ ನನ್ನ ಎಡಗೈ ಅನ್ನು ಜಗ್ಗಿ ಅದಕ್ಕೆ ಜೋತುಬಿದ್ದು I cant believe it ನಾನ್ ಅಷ್ಟ್ ಸತಿ ಕರ್ಕೊಂಡು ಹೋಗು ಅಂದ್ರು ಇಲ್ಲ ಅಂದವನು ಇವತ್ತು ಇದ್ದಕ್ಕಿದ್ದ ಹಾಗೆ... ನಿನ್ನ ಅರ್ಥ ಮಾಡ್ಕೋಳೋಕೆ ಆಗ್ತಿಲ್ಲ. ಸರಿ.. ನೀನ್ ಏನ್ ಅರ್ಥ ಮಾಡ್ಕೋಬೇಡ.. ಸದ್ಯಕ್ಕೆ ನನ್ ಕೈಮೇಲ್ ಹಾಕಿರೋ ನಿನ್ ಬಾಡಿ ಭಾರಾನ ತೆಗೆದು ಬರಿ ಕೈ ಮಾತ್ರ ಹಿಡ್ಕೋ ಅಂದೆ. ಸಾರಿ ಅಂದವಳೇ stairs ಲಿ ಹೋಗೋಣ lift  ಬೇಡ ಅಂದಳು. ಇನ್ನು ಲಿಫ್ಟಿನ ಭಯ ಹೋಗಿಲ್ವ ನಿಂಗೆ? ನೀನ್ ಹತ್ಕೊಂಡು ಬಾ ನಾನ್ ಲಿಫ್ಟ್ ಲೇ ಬರ್ತೀನಿ ಅಂತ ಅವಳ ಕೈಬಿಟ್ಟು ಆ ಕಡೆ ಹೋಗುವವನ ಹಾಗೆ ನಟಿಸಿದೆ.  ಉಹು ಉಹು ಪ್ಲೀಸ್ ಕಣೋ ಅಂದ್ಲು.. ಅವೆಲ್ಲ ಆಗಕಿಲ್ಲ ಬೇಕಾದ್ರೆ ಲಿಫ್ಟ್ ಅಲ್ಲೇ ಬಾ.. ಕಣ್ಮುಚ್ಕೊಂಡು ಇರು. ಸರಿ ಅಂತ ಮತ್ತೆ ನನ್ನ ಕೈ ಹಿಡಿದು ಲಿಫ್ಟ್ ತನಕ ಬಂದು ಬಟನ್ ಅಮುಕಿದೆವು. ಲಿಫ್ಟ್ ಬಂದು ತೆರೆದು ನಿಂತಿತು. ಅವಳು ಕಣ್ಣು ಮುಚ್ಚಿ ಒಳ ಹೋದರೂ ನಾನು ಆಚೆ ನಿಂತಿದ್ದೆ. ಲಿಫ್ಟಿನ ಬಾಗಿಲು ಇನ್ನೇನು ಕ್ಲೋಸ್ ಆಗಬೇಕು ಅಷ್ಟರಲ್ಲಿ ಅವಳನ್ನು ಹೊರಗೆಳೆದುಕೊಂಡು ಇಬ್ಬರು ಕೈ ಕೈ ಹಿಡಿದು stairs ಹತ್ತುತ್ತಾ ಟಿಕೆಟ್ ಕೌಂಟರ್ ಸಮೀಪ ಬಂದೆವು.

ಸಮಯ ೪  ಗಂಟೆಯಾಗಿತ್ತು. ಸಿನೆಮಾ ಶುರುವಾಗಲು ಇನ್ನು ೧೫ ನಿಮಿಷ ಇದೆ. ಯಾರನ್ನು ಒಳಬಿಡುತ್ತಿರಲ್ಲಿಲ್ಲ. ನಾನು ಟಿಕೆಟ್ ಕೌಂಟರ್ ಬಳಿ ತೆರಳಿ ಟಿಕೆಟ್ ಪಡೆದು ಹಿಂತಿರುಗಿದಾಗ, ಸಂಯುಕ್ತಳ ಕಣ್ಣು ಅಲ್ಲೇ ಎದುರಿಗಿದ್ದ ಚಪ್ಪಲಿ ಅಂಗಡಿಯೆಡೆಗೆ ನೆಟ್ಟಿತ್ತು. ಇನ್ನು ಅವಳ ಹತ್ತಿರ ನಿಂತರೆ ಜೇಬಿಗೆ ೪೦೦-೫೦೦ಕ್ಕೆ ಮೋಸವಿಲ್ಲದೆ ಕತ್ತರಿ ಗ್ಯಾರಂಟಿ ಅನಿಸಿ, ಅವಳ ಬಳಿ ಹೋಗಿ ಟಿಕೆಟ್ ಕೊಟ್ಟು ಇಟ್ಕೊಂದಿರು, ಅಲ್ಲಿ ನನ್ನ ಫ್ರೆಂಡ್ ನ ಮಾತಡುಸ್ಕೊಂಡು ಬರ್ತೀನಿ ಅನ್ನುತ್ತಾ, ಅವಳ ಪ್ರತಿಕ್ರಿಯೆಗೆ ಕಾಯದೆ ಅತ್ತ ಕಡೆ ತಿರುಗಿ ಯಾರೋ ಗೊತ್ತಿಲ್ಲದವರ ಕಡೆ ಸುಮ್ಮನೆ ಕೈ ಬೀಸುತ್ತಾ ಪರಾರಿಯಾದೆ. ಕೆಳಗೆ ರೆಸ್ಟ್ ರೂಮಿಗೆ ಹೋಗಿ ನಾನು ಬರೋಷ್ಟರಲ್ಲಿ ಜನಗಳನ್ನು ಒಳಬಿಡುತ್ತಿದ್ದುದರಿಂದ, ಸಂಯುಕ್ತ ಗಲಿಬಿಲಿಯಾದವಳಂತೆ ಆ ಕಡೆ ಈ ಕಡೆ ತಿರುಗಿ ನಾನು ಕಾಣುತ್ತಿದ್ದೆನಾ? ನೋಡುತ್ತಿದ್ದಳು. ನಾನು ಕಂಡೊಡನೆ ಕೈಬೀಸಿ ಬೇಗ ಬಾ ಬೇಗ ಬಾ ಅನ್ನುತ್ತಾ ಜೋರಾಗಿ ಕೈಬೀಸಿ ಕರೆದಳು. ನಾನು ಹತ್ತಿರ ಹೋದೊಡನೆ ಚಪ್ಪಲಿ ಕೊಡ್ಸು ಅಂತೀನಿ ಅಂತ ತಪ್ಪುಸ್ಕೊಂಡ್ ಹೋಗ್ತ್ಯಾ? ಅಂದು ಸೊಂಟಕ್ಕೆ ಮೆಲ್ಲನೆ ಗಿಂಟಿದಳು.

ಇಡೀ ಸಿನಿಮಾವನ್ನು ನನ್ನ ಭುಜದ ಮೇಲೆ ತಲೆ ಇಟ್ಟುಕೊಂಡು ನೋಡಿದಳು ಸಂಯುಕ್ತ. ಲೈಫು ಇಷ್ಟೇನೆ ಹಾಡು ಬಂದಾಗ ಗಟ್ಟಿಯಾಗಿ ನನ್ನ ಕೈಗಳನ್ನು ಹಿಡಿದ್ದಿದ್ದಳು. ನಿನ್ನಯ ನಲುಮೆಯ ಲೋಕಕೆ ಹಾಡು ಮುಗಿದಾದ ಮೇಲೆ ನನ್ನ ಕಿವಿಯಲ್ಲಿ ನನ್ನನೇ ಪ್ರೀತಿಸು ಅಂದಳು.  ಅದಕ್ಕೆ ನಾನು ಉಡಿಸುವೆ ಬೆಳಕಿನ ಸೀರೆಯ ಹಾಡಿನ 'ಸದ್ದಿಲ್ಲದಾ ಈ ಅಲೆಯ ಈ ಸೆಳೆತಾ...ಕಾಣಿಸದೂ... ನನ್ನಾ ಸಹಿಸು...ಹೃದಯದ ಸಂಗಡ ನೋವು ಸಹಾ ಉಚಿತವಿದೆ' ಎಂದೆ. ಇನ್ನು ನೀನ್ ಅಮಲಳ ಗುಂಗಿಂದ ಹೊರಬಂದಿಲ್ಲ.. ಹಳೇ ಗರ್ಲ್ / ಬಾಯ್ ಫ್ರೆಂಡ್ ನ ಬರೇ ಪಾಸ್ ವರ್ಡ್ ಲಿ ಇಟ್ಕೊಬೇಕು ಕಣೆ ಅಂತ ಹೇಳ್ತ್ಯ ಆದ್ರೆ ನೀನೆ ಇನ್ನು ಅವಳ್ನ ಮನಸಿನಲಿ ಇಟ್ಕೊಂದಿದ್ಯ, ಹೋಗೋ ನಂಗೆ ಬೇಜಾರ್ ಆಗತ್ತೆ ಅಂದ್ಲು. ಬರೇ ಪಾಸ್ ವರ್ಡ್ ಲಿ ಎನಿಕ್ ಇಟ್ಕೋಳೋದು ಗೊತ್ತಾ? ಪ್ರತಿಸಲಿ ಆ ಪಾಸ್ ವರ್ಡ್ ಕುಟ್ಟೋವಾಗ ಅವರ ಜೊತೆ ನಾವು ಕಳೆದ ಮಧುರ ಕ್ಷಣಗಳನ್ನ ನೆನೆಯೋಕೆ. ಅವರಾಡಿದ್ದ ಒಂದೊಂದು ಮಾತನ್ನು ನೆನೆಯೋಕೆ. ಅವಳು ಹ ಹ ಹ ಎಂದು ನಕ್ಕಾಗ, ನಿನಗಿದೆಲ್ಲ ಈಗ ಅರ್ಥ ಆಗೋಲ್ಲ ನಾನು ಕೈ ಕೊಡ್ತೀನಲ ಆಗ ಗೊತ್ತಾಗತ್ತೆ ಅಂದೇ. ನೀನ್ ಕೈಕೊಟ್ರೆ ನಾನು ಕಾಲ್ ಕತ್ರುಸ್ತೀನಿ ಅಂದ್ಲು.
[ಅಮಲಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕೆಂದರೆ ನಾನು ಹಿಂದೆ ಬರೆದ್ದಿದ್ದ "ಅವಳ ಕಾಲ್ ಬರುತ್ತಾ?" ಧಾರವಾಹಿಯನ್ನು ನನ್ನ ಬ್ಲಾಗಿನಲ್ಲಿ ಓದಿ ]

ಸಿನೆಮಾ ಮುಗಿದಮೇಲೆ ಅವಳನ್ನು ಆ ಟಿಕೆಟ್ ಕೌಂಟರ್ ಎದುರಿದ್ದ ಚಪ್ಪಲಿ ಅಂಗಡಿಗೆ ಕರೆದೊಯ್ದೆ. ಅವಳಿಗೆ ಇಷ್ಟವಾದ ೩೯೦ ರೂಪಾಯಿಯ ಒಂದು ಜೊತೆ ಚಪ್ಪಲಿ ಕೊಡಿಸಿದೆ. ಹೊರಬಂದಾಗ ಮಳೆ ಜಿನುಗುತ್ತಿತ್ತು. ಮಳೆ ಬರುತ್ತಿರುವಾಗ ಐಸ್ ಕ್ರೀಮ್ ತಿನ್ನಲು ಸಂಯುಕ್ತಳಿಗೂ ಅಷ್ಟೇ ಏಕೆ ನನಗು ಇಷ್ಟಾನೆ, ಹಾಗಾಗಿ ಆ ಮಳೆಯಲ್ಲೇ ನಾವು ನಮ್ಮ MTR ಗೆ  ಹೋದೆವು. Hot chacolate fudge ಅವಳಿಗೆ ಇಷ್ಟವಾದ ಐಸ್ ಕ್ರೀಮ್. ಇಬ್ಬರೂ ಅದನ್ನೇ order ಮಾಡಿದೆವು. ಇನ್ನೇನು ತಿಂದದ್ದು ಮುಗಿಯಿತು ಅನ್ನಬೇಕಾದರೆ ಸಂಯುಕ್ತ ನನ್ನನ್ನೇ ದಿಟ್ಟಿಸುತ್ತಾ ನನ್ನ ಕಂಡರೆ ನಿನಗೆ ಇಷ್ಟ ಆದರೂ ಅದನ್ನ ಬಾಯಿ ಬಿಟ್ಟು ನನ್ನ ಹತ್ತಿರ ಹೇಳೋಲ್ಲ ಯಾಕೋ ಹೀಗ್ ಮಾಡ್ತ್ಯ ನೀನು? atleast ಒಂದ್ ಸತಿನಾದ್ರು ಹೇಳೋ I Love You ಅಂತ ಅಂತ ಗೋಗರೆದಳು. ಸಂಯುಕ್ತ please try to understand. ಹೌದು ನಿನ್ನ ಕಂಡರೆ ನಂಗೆ ಇಷ್ಟಾನೆ ಆದ್ರೆ ಇಷ್ಟು ಬೇಗಾನೆ ನಾನು ಕಮಿಟ್ ಆಗೋಕೆ ಸಾಧ್ಯ ಇಲ್ಲ. ಎನಿಕ್ಕೆ ಅಂತ ನಿಂಗು ಚೆನ್ನಾಗಿ ಗೊತ್ತು.

ಮನೆಗೆ ಬಂದಾಗ ಎಂಟು ಗಂಟೆಯಾಗಿತ್ತು. ಬಟ್ಟೆ ಬದಲಿಸಿ ಮುಖ ತೊಳೆದು ಸಂಯುಕ್ತಳ ಮನೆಗೆ ಊಟಕ್ಕೆ ಹೋದೆ. ಶಾಮರಾಯರು ನ್ಯೂಸ್ ಚಾನಲ್ ಗಳನ್ನು ವಾಶಿಂಗ್ ಮಿಶಿನ್ ತಿರುಗಿದಂತೆ ಹಿಂದಿನಿಂದ ಮುಂದಕ್ಕೆ ಮುಂದಿನಿಂದ ಹಿಂದಕ್ಕೆ ರಿಮೋಟ್ ಹಿಡಿದು ಬದಲಿಸುತ್ತಾ ಕೂತಿದ್ದರು. ಉತ್ತರ ಪ್ರದೇಶದ ಅಸೆಂಬ್ಲಿ ಚುನಾವಣೆ ಹಾಗು ಭಾರತ ಆಸ್ಟ್ರೇಲಿಯ ವಿರುದ್ದ ಟೆಸ್ಟ್ ಪಂದ್ಯ ಸೋತಿರುವ ಸುದ್ದಿಯೇ ಎಲ್ಲಾ ಚಾನಲ್ ಗಳಲ್ಲೂ ಬಿತ್ತರವಾಗುತ್ತಿತ್ತು. ಆಗಲೇ ಬರೆದದ್ದು ಕೆಳಗಿನ ಎರಡು ಚುಟುಕುಗಳನ್ನು :

ಪಾಂಟಿಂಗ್ ಹಸ್ಸಿ ಬ್ಯಾಟಿಂಗ್ ಭರ್ಜರಿ
ಕಪ್ತಾನ ಕ್ಲಾರ್ಕ್ ಗಂತೂ ತ್ರಿಶತಕದ ಗರಿ
ಸಿಡ್ನೀ ಮೈದಾನದಲ್ಲಿ ಸಚಿನ್ ರದು ೨೨೧ ಸರಾಸರಿ
ಆದರೂ ಬಾರಿಸಲಾಗಲ್ಲಿಲ್ಲ ನೂರನೇ ಸೆಂಚೂರಿ
ಲಕ್ಷ್ಮಣ್ ದ್ರಾವಿಡ್ ಮೇಲಿತ್ತು ಭರವಸೆ ಮಿತಿ ಮೀರಿ
ಕೊಹ್ಲಿ ಧೋನಿ ಅಂತೂ ಲೆಕ್ಕಕ್ಕೆ ಇರ್ಲ್ಲಿಲ್ಲಾರಿ
ಅಶ್ವಿನ ಒಬ್ಬನೇ ಮುಟ್ಟಿಸಲಾಗಲ್ಲಿಲ್ಲ ಬೃಹತ್ ಗುರಿ
ವಿದೇಶಿ ನೆಲದಲ್ಲಿ ಭಾರತ ಸೋತಿತು ಸತತ ಆರನೆ ಬಾರಿ

****

ಯು.ಪಿ ಯಲ್ಲಿ ಚುನಾವಣೆ ಎದುರಾಗಿದೆಯಂತೆ
ಆನೆ ಪ್ರತಿಮೆಗೆಲ್ಲ ಪ್ಲಾಸ್ಟಿಕ್ ಹೊದಿಕೆಯಂತೆ
ಅದಕ್ಕಾಗಿ ಒಂದು ಕೋಟಿ ರೂಪಾಯಿ ಖರ್ಚಂತೆ
ವಾಜಪೇಯಿ-ಮೋದಿ ಬಿ.ಜೆ.ಪಿ ಯ ಪ್ರಚಾರಕರಂತೆ
ರಾಹುಲ್ ಗಾಂಧಿಗೆ ಪ್ರತಿಷ್ಟೆಯ ಕಣವಂತೆ
ಟೀಮ್ ಅಣ್ಣರಿಂದ ಕೈ ವಿರುದ್ದ ಪ್ರಚಾರವಂತೆ
ಮುಲಾಯಂಗೆ ಕುರ್ಚಿ ಮೇಲೆ ಭಾಳ ಆಸೆಯಂತೆ
ಮತ ಎಣಿಕೆ  ಮಾರ್ಚ್ ನಾಕರ ಬದಲಾಗಿ ಆರಿಗಂತೆ
ಮತದಾರಿಗಂತೂ ದಿನಕ್ಕೊಂದು ಆಮಿಷವಂತೆ

ಊಟ ಮುಗಿಸಿ ಅವರ ಮನೆಯಿಂದ ಹೊರಬಂದಾಗ ಕಂಡುಕೊಂಡ ಸತ್ಯ ~ ನಾನು ಸಂಯುಕ್ತಳ ಜೊತೆಗಿದ್ದರೆ ಏನನ್ನೂ ಯಾರನ್ನೂ ಮರೆಯುತ್ತೀನಿ.. ಅಮಲಳ ನೆನಪಾದರೂ ಅದು ಕ್ಷಣಿಕ.. ಸಂಯುಕ್ತಳನ್ನು ಎದುರಿಗೆ ಇಟ್ಟುಕೊಂಡು ಅವಳನ್ನು ಹತ್ತಿರ ಬಿಟ್ಟುಕೊಳ್ಳದೆ.. ಛೆ ನಾನೆಷ್ಟು ಹೆಣಗಾಡಿದೆ ಒಂದು ವಾರದಿಂದ?

ಗೇಟ್ ಸರಿಸಿ ಮನೆಯೊಳಗೇ ಕಾಲಿಡುತ್ತಿದ್ದಂತೆ ಯಾವುದೋ ಲ್ಯಾಂಡ್ ಲೈನ್ ನಂಬರಿಂದ ಕರೆ ಬಂತು. ಎರಡನೆ ರಿಂಗಿಗೆ ನಾನು ಕರೆ ಸ್ವೀಕರಿಸಿ ಹಲೋ ಅಂದೇ .. ಆ ಕಡೆಯಿಂದ - ನಾನು ಕಣೋ ಬೃಂದಾ !

Sunday, December 9, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೭


ಅದಾದ ನಂತರ ೭ ದಿನ ಅನ್ನೋನ್ ಚಾಟಿಗೆ ಬರಲ್ಲಿಲ್ಲ. ಆ ೭ ದಿನಗಳೂ ನಾನು ಗಂಟೆಗೊಂದು ಸಾಲಿ "ನೀವು  ಪ್ರಯತ್ನಿಸುತ್ತಿರುವ ದೂರವಾಣಿ ಸಂಖ್ಯೆ ಸ್ವಿಚ್ ಆಫ್ ಆಗಿದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ" ಎನ್ನುವ ರೆಕಾರ್ಡೆಡ್ ಧ್ವನಿ ಕೇಳುತ್ತಿದ್ದೆ. ಇದರ ಪರಿಣಾಮವೋ ಏನೋ ಎಂಬಂತೆ ಗೆಳೆಯರ ಹತ್ತಿರ ಮಾತಾಡುವಾಗ ಒಂದೆರಡು ಬಾರಿ ನೀವು ಅಂದು ಇವನಿಗೆ ಏನೋ ಆಗಿದೆ ಅಂತಲೂ ಅನಿಸಿಕೊಂಡೆ. ಎಲ್ಲರು ರೇಗಿಸಿದಂತೆ ನಾನು ಅವಳನ್ನು ಮಿಸ್ ಮಾಡ್ಕೊತಿದಿನ? ಅನಿಸುತ್ತಿತ್ತು. ಆದರೆ ಯಾವತ್ತೂ ನೋಡಿಲ್ಲದ ಅವಳನ್ನು ಮಿಸ್ ಮಾಡ್ಕೋತಿದೀನಿ ಅಂತ ಒಪ್ಕೊಳೋ ಮನಸ್ಸು ಬರಲ್ಲಿಲ್ಲ. ಇನ್ನೆರಡು ದಿನ ಎಲ್ಲ ಸರಿಹೋಗಿಬಿಡುತ್ತದೆ ಅವಳ್ಯಾರೋ ಗೊತ್ತಿಲ್ಲದವಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ನನಗೆ ನಾನೇ ಸಾರಿ ಸಾರಿ ಹೇಳಿಕೊಳ್ಳುತ್ತಿದ್ದೆ.

ಅವಳು ತನ್ನ ಹುಟ್ಟುಹಬ್ಬಕ್ಕೆ ಬರಬೇಕೆಂದು ವಾರ ಮುಂಚಿತವಾಗಿ ಪ್ರತಿದಿನ ಚಾಟಿನಲ್ಲಿ ಹೇಳುತ್ತಿದ್ದಳು. ಮತ್ತೆ ಪ್ರತಿ ಬಾರಿ ಕರೆ ಮಾಡಿದಾಗಲೂ ಆಹ್ವಾನ ನೀಡುತ್ತಿದ್ದಳು. ನೀನು ಬರದ್ದಿದ್ದರೆ ನಾನು ಕೇಕ್ ಕಟ್ ಮಾಡೋಲ್ಲ ಅಂದಿದ್ದಳು. ಪ್ರತಿ ಬಾರಿ ಅವಳು ಕರೆದಾಗಲೂ ನಾನು - ನಾನ್ಯಾಕೆ ನಿನ್ನ ಹುಟ್ಟುಹಬ್ಬಕ್ಕೆ ಬರಬೇಕು? ನೀನ್ಯಾರೋ ನಂಗೊತ್ತಿಲ್ಲ ... ನಾನಂತೂ ಈ ಜನ್ಮದಲ್ಲಿ ನಿನ್ನ ಫ್ರೆಂಡ್ ಆಗೋಕೆ ಸಾಧ್ಯವಿಲ್ಲ ಅಂತ ದಬಾಯಿಸುತ್ತಿದ್ದೆ. ಈಗ ಅವಳು ಹೇಳುತ್ತಿದ್ದ ಹುಟ್ಟುಹಬ್ಬದ ಭಾನುವಾರ ಬಂದಿದೆ. ಆದರೆ ಅವಳೇ ಪತ್ತೆ ಇಲ್ಲ. ಹೋಗಲಿ ಅವರ ಮನೆಗೆ ಹೋಗೋಣ ಅಂದರೆ ಅವಳ ಮನೆ ವಿಳಾಸವಾಗಲಿ, ಅವಳ ಆಫಿಸ್ ವಿಳಾಸವಾಗಲಿ ನನ್ನ ಬಳಿ ಇಲ್ಲ. ನಾನು ಕೇಳಿದ್ದರೆ ಅವಳು ಕೊಡುತ್ತಿದ್ದಳೆನೋ ? ಆದರೆ ನಾನ್ಯಾವತ್ತು ಅವಳನ್ನು ನಂಬಲೇ ಇಲ್ಲ. ಇದ್ದಿದೊಂದು ಮೊಬೈಲ್ ನಂಬರ್. ಈಗ ಅದು ಸ್ವಿಚ್ ಆಫ್ ಆಗಿದೆ.ಇನ್ನ ಅವಳಾಗೇ ನನ್ನನ್ನು ಸಂಪರ್ಕಿಸಬೇಕು. ಅಲ್ಲಿವರೆಗೂ ನಾನೇನು ಮಾಡಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತೆ.

ಪ್ರತಿದಿನ ಅವಳ ಜೊತೆ ಚಾಟ್ ಮಾಡುವಾಗ  ಮಧ್ಯದಲ್ಲಿ ನಾನು ಕಾಫಿಗೆಂದು ಹೋಗುತ್ತಿದ್ದೆ. ಮರಳಿ ಬಂದಾಗ ನನಗಿಲ್ಲವಾ ಕಾಫಿ? ಅನ್ನುತ್ತಿದ್ದಳು. ಆಗೆಲ್ಲ ನಾನು ಕಾವ್ ಕಾವ್ ಹೋಗೆಲೇ ಅನ್ನುತ್ತಿದ್ದೆ. ಅದಕ್ಕವಳು ನನ್ನ ಕೆಫೆ ಕಾಫಿ ಡೇ ಗೆ ಕರ್ಕೊಂಡು ಹೋಗೋ ಅನ್ನುತ್ತಿದ್ದಳು. A lot can happen over coffee ಈಗಾಗಿರೋದೆ ಸಾಕು ಇನ್ನ ನಿನ್ನ ಅಲ್ಲಿಗ್ ಬೇರೆ ಕರ್ಕೊಂಡು ಹೋಗಬೇಕಾ? ಅದು ಅಲ್ದೆ ನನ್ನ ಮೀಟ್ ಮಾಡಕ್ಕೆ ಬರ್ದೆರೋ ನೀನು ಇನ್ನು ಕಾಫಿಗ್ ಬರ್ತ್ಯ? ಸುಮ್ನೆ ರೂಟ್ ನೋಡ್ಕೊಂಡು ರೈಟ್ ಹೇಳ್ತಾಯಿರಮ್ಮ ಅಂತ ಕಿಚಾಯಿಸುತ್ತಿದ್ದೆ. ಈಗ ಅವಳ ಜೊತೆ ಕಾಫಿ ಕುಡಿಬೇಕು ಅನಿಸುತಿದೆ ಆದರೆ ಅವಳೇ ಕಾಣೆಯಾಗಿದ್ದಾಳೆ. ಎದುರುಗಿದ್ದಾಗ ಯಾವುದನ್ನು ನಿರ್ಲಕ್ಷ್ಯ ಮಾಡುತ್ತೀವೋ ಅದೇ ನಮಗೊಂದು ದಿನ ಬಹಳ ಅವಶ್ಯಕವಾಗಿ ಬೇಕಾಗಿರತ್ತೆ. ನಾನು ಈ ಅನ್ನೋನ್ ಅನ್ನು ಈ ಪರಿ ಹಚ್ಚಿಕೊಂಡಿದ್ದೇನೆಂದು ಗೊತ್ತಿರಲ್ಲಿಲ್ಲ. ಈಗ ಗೊತ್ತಾದರೂ ಗೊತ್ತಾಗಿಸಿಕೊಳ್ಳದಿರುವುದಕ್ಕೆ ಮನಸ್ಸು ನೂರು ಕಾರಣ ಹೇಳುತ್ತಿತ್ತು.

ಹೀಗೆ ಒಮ್ಮೆ ಚಾಟ್ ಮಾಡ್ಬೇಕಾದ್ರೆ ಹೇಯ್ ನೀನ್ ಎಷ್ಟ್ ಚೆನ್ನಾಗಿದ್ಯ ಈ ಫೋಟೋದಲ್ಲಿ ಗೊತ್ತಾ?ನಾನು ನಿನ್ನ ಆಲ್ಬಮ್ಸ್ ನೋಡ್ತಾ ಇದ್ದೀನಿ ... ನಿನಿಗ್ ಗೊತ್ತಾ ನಾನ್ ನಿನ್ನೆ ನೀನ್  ಆ ಸ್ಕೈ ಬ್ಲೂ ಕಲರ್ ಶರ್ಟ್ ಹಾಕೊಂಡ್ ತೆಗುಸ್ಕೊಂಡಿರೋ  ಫೋಟೋನ ಪ್ರಿಂಟ್ ಮಾಡುಸ್ಕೊಂಡೆ. ಆಮೇಲೆ ಗೊತ್ತಿಲ್ದೆರೋರ್ ಹತ್ತಿರ ನಾನ್ ಚಾಟ್ ಮಾಡ್ತಿರೋದಕ್ಕೆ ನಾಳೆ ಏನಾದರೂ ಹೆಚ್ಚುಕಮ್ಮಿ ಆದರೆ ನನ್ ಭವಿಷ್ಯದ ಗತಿ ಏನು ಅಂತ ನೀನು ಎಷ್ಟ್ ಕೇರ್ ಮಾಡಿದ್ದಿ ? ಜ್ಞಾಪಕ ಇದೆಯಾ? ಅಂತ ಏನೇನೋ ಕೇಳಿದ್ದಳು. ಮತ್ತೊಂದು ಬಾರಿ ನಾನೀಗ ನಿನ್ನ ಫೋಟೋ ಇಟ್ಕೊಂಡಿದೀನಿ .. Potassium Iodine Double Sulphur ಅಂದ್ರೆ ಏನು ಹೇಳು ನೋಡೋಣ ಅಂದಾಗ ನಾನು ಲೇ ಬಿತ್ರಿ ನನ್ ಹತ್ರಾನೆ ಗಿಮಿಕ್ಕ, ಅದು KISS ಅಂತ ಹೇಳಿದ್ದೆ. ಅದಕ್ಕವಳು ನಾನೀಗ ಅದುನ್ನೇ ನಿನಗೆ ಮೀನ್ಸ್ ನಿನ್ನ ಫೋಟೋಗೆ ಕೊಟ್ಟೆ ಅಂದಳು. ನೀನೆಲ್ಲೋ ದೊಡ್ ಲೂಸು ಮೊದಲು ನಿಮ್ಹಾನ್ಸ್ ಗೆ ಸೇರ್ಕೊಹೋಗು. ನಂಗ್ ಯಾವಾಗ್ ತಗ್ಲಾಕೊಂಡೆ ನೀನು .. ತು ಪೀಡೆ ಅಂತ ಬೈದುಬಿಟ್ಟಿದ್ದೆ .

ಈ ಬೃಂದಾ ಆದರು ಎಲ್ಲಿ ಹಾಳಾಗಿಹೋದಳು? ಅದೊಂದು ದಿನ ಅನ್ನೋನ್ ಇವಳ ಪರಿಚಯ ಮಾಡಿಕೊಟ್ಟ ದಿನದಿಂದ ನಾನು ಅನ್ನೋನ್ನೊಂದಿಗೆ ಚಾಟಿಗೆ ಶುರು ಹಚ್ಚಿ ಐದ್ಹತ್ತು ನಿಮಿಷಕ್ಕೆ ಹಾಯ್ ಅನ್ನುತ್ತಾ ಅವಳ ಜೊತೆ ಸ್ಪರ್ಧೆಗೆ ಇಳಿದವಳಂತೆ ನನ್ನೊಂದಿಗೆ ಚಾಟ್ ಮಾಡಲು ಶುರುಮಾಡುತ್ತಿದ್ದ ಬೃಂದಾ ಎಲ್ಲಿ ಹೋದಳು? ನಾನು ಅನ್ನೋನ್ ಜೊತೆ ಮಾಡಿರುವ ಪ್ರತಿ ಸಂಭಾಷಣೆಯೂ ಬೃಂದಾಳಿಗೆ ಗೊತ್ತು. ಎಷ್ಟೋ ಬಾರಿ ನಾನು ಈ ಅನ್ನೋನ್ ಚಾಟ್ ವಿಂಡೋದಲ್ಲಿ ಟೈಪಿಸಿದ್ದನ್ನೇ ಕಾಪಿ ಮಾಡಿ ಬೃಂದಾಳ ಚಾಟ್ ವಿಂಡೋಲಿ ಪೇಸ್ಟ್ ಮಾಡಿದೀನಿ. ಬೃಂದಾಳ ಚಾಟಿನಲಿ ಮ್ಯಚುರಿಟಿ ಇರುತ್ತಿತ್ತು. ಹೇಳುವುದನ್ನು ಖಡಕ್ಕಾಗಿ ಹೇಳಿಬಿಡುತ್ತಿದ್ದಳು. ಅನ್ನೋನಿಗೆ ಕಾಲೆಳೆದಷ್ಟು ಸುಲಭವಾಗಿ ಬೃಂದಾಳಿಗೆ ರೇಗಿಸಲಾಗುತ್ತಿರಲ್ಲಿಲ್ಲ. ಎಷ್ಟೋ ದಿನ ನಾನು ಅನ್ನೋನ್ಗಿಂತ ಹೆಚ್ಚಾಗಿ ಬೃಂದಾಳ ಜೊತೇನೆ ಹೆಚ್ಚು ಚಾಟ್ ಮಾಡಿದ್ದೇನೆ. ಕೆಲವೊಂದು ಬಾರಿ  ಬೃಂದಾಳೆ - ಎಷ್ಟು ಸಾರಿನೊ ಅವಳು ನಿನಗೆ ನೋ ರಿಪ್ಲೈ ಅಂತ ಕಳಿಸೋದು.. ಬೇಜಾರ್ ಮಾಡ್ಕೊತಾಳೆ .. ಅವಳೊಂದಿಗೂ ಮಾತನಾಡು ಅಂತ ಹೇಳುತ್ತಾ ಲಾಗ್ ಆಫ್ ಆಗುತ್ತಿದ್ದಳು. ಅನ್ನೋನ್ ಕಾಲ್ ಮಾಡಿದಾಗ ಅವಳು ಮಾತಾಡಿ ಮುಗಿಸಿದ ಮೇಲೆ ಅವಳ ಹತ್ತಿರ ಮೊಬೈಲ್ ಇಸ್ಕೊಂಡು ನನ್ನ ಬಳಿ ಹರಟುತ್ತಿದ್ದ ಬೃಂದಾ ಇಂದಿಗೂ ಅವಳ ಮೊಬೈಲ್ ನಂಬರ್ ನನಗೆ ಕೊಟ್ಟಿಲ್ಲ.

ಈಗ ಇವಳೂ ಪತ್ತೆ ಇಲ್ಲ ಅಂದರೆ? ಅವರಿಬ್ಬರೂ ಮಾತಾಡಿಕೊಂಡು ನನ್ನ ಬಕ್ರ ಮಾಡಿಬಿಟ್ಟರ?  ಧ್ವನಿಯಲ್ಲಿ ಅಷ್ಟೇನೂ ವ್ಯತ್ಯಾಸವಿರದ ಅವರಿಬ್ಬರೂ ಒಬ್ಬರೆನಾ? ಇವರಿಗೆ ಆಟವಾಡಲು ನಾನೇ ಬೇಕಿತ್ತಾ? ನನ್ನ ಮಾತಿಗೆ ಮಾರುಹೊಗುತ್ತಿದ್ದ ಎಷ್ಟು ಹುಡುಗಿಯರಿಗೆ ನಾನು ಚೆಳ್ಳೆಹಣ್ಣು ತಿನ್ನಿಸಿಲ್ಲ? ಅದರ ಪ್ರತಿಫಲಾನ ಇದು? ಛೆ ಛೆ ನೋ ಚಾನ್ಸ್.. ನಾನು ಎಷ್ಟು ಎಚ್ಚರದಿಂದಿದ್ದೇನೆ ಅಷ್ಟು ಸುಲಭವಾಗಿ ಅವರು ನನ್ನನ್ನು ಮೋಸಗೊಳಿಸಲು ಸಾಧ್ಯವೇ ಇಲ್ಲ. ಎಲ್ಲೋ ಏನೋ ಎಡವಟ್ಟಾಗಿದೆ.

ಎಂಟನೆ ದಿನಕ್ಕೆ ಸರಿಯಾಗಿ ಅನ್ನೋನ್ ಲಾಗ್ ಇನ್ ಆಗಿದ್ದಳು .

Friday, December 7, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೬


ನಾನು : ಹುಡ್ಗೀರು ಒಂಬತ್ತು ಗಜದ ರೇಶಿಮೆ ಸೀರೆ ಉಟ್ಟು, ಉದ್ದ ಕುಂಕುಮ ಇಟ್ಟುಕೊಂಡು ,ಒಂದೆಳೆ ಸಿಂಪಲ್ಲಾಗಿ ಇರೋ ಚಿನ್ನದ ಸರ ಹಾಕೊಂಡು , ಕಿವಿಗೆ ನೇತಾಡುವ ಲೋಲಾಕ್ ಇಟ್ಟುಕೊಂಡು , ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕೈ ತುಂಬಾ ಬಳೆ ತೊಟ್ಟುಕೊಂಡಿದ್ದರೆ ಚೆಂದ ಕಾಣಿಸ್ತಾರೆ :P 
.......................................

ಅನ್ನೋನ್ : ಹಾಯ್ ಏನೋ ಮಾಡ್ತಿದ್ಯ?
ನಾನು : ಹಾ.. ದನ ಮೇಯಿಸ್ತಿದೀನಿ ... ನಾನ್ ಏನ್ ಮಾಡ್ತಿದೀನಿ ಅಂತ ತಿಳ್ಕೊಳಕ್ಕೆ ಚಾಟ್ ಮಾಡ್ತಿಯ?
ಅನ್ನೋನ್ : ಎಮ್ಮೆ ಕೊಡುಸ್ಲ ಎರಡು?
ನಾನು :ಬೇಡ.. ಹಸು ಕೊಡ್ಸು 
ಅನ್ನೋನ್ : ಆಯ್ತು .. ಅದೇ ಕೊಡುಸ್ತೀನಿ..
ನಾನು : ಕೊಡ್ಸುದ್ಮೇಲೆ ಹಾಲ್ ಕೊಡು ಅಂದ್ರೆ ಗಂಜಲದಲ್ಲಿ ಸ್ನಾನ ಮಾಡ್ಸಿ ಮುಖಕ್  ಸೆಗಣಿ ಮೆತ್ತುತೀನಿ :P
ಅನ್ನೋನ್ : eeeeeeeeeeeeeee
ನಾನು : ಹಲ್ಲುಜ್ಜಿದ್ಯೋ ಇಲ್ವೋ ಅಂತ ಕೇಳಲ್ಲಿಲ್ಲ ನಾನು :P
.................................

ಅನ್ನೋನ್ : Which is your native? tell me what else
ನಾನು : ಏನಮ್ಮ ನಿನ್ ಪ್ರಾಬ್ಲೆಮ್ಮು ?
ಅನ್ನೋನ್ : ಏನ್ ಇಲ್ಲ ..
ನಾನು : ಮತ್ತೆ ನನ್ನ ನೇಟಿವ್ ಕಟ್ಟಿಕೊಂಡು ನಿಂಗೇನ್ ಆಗ್ಬೇಕು?
ಅನ್ನೋನ್ : Sorry, my friend asked you that question
ನಾನು : oho.. ನಿಮ್ ಫ್ರೆಂಡ್ಸ್ ಡೌಟ್ ಎಲ್ಲಾ ಕ್ಲಿಯರ್ ಮಾಡಕ್ ನಾನೇನ್ ನಿಮ್ ಕ್ಲಾಸ್ ಟೀಚರ?
ಅನ್ನೋನ್ : ಇಲ್ಲ ಕಣೋ.. She was chatting with you.
ನಾನು : ಒಂದೇ ID ಲಿ ಇಬ್ರು... ಇರ್ಲಿ ಇರ್ಲಿ ... ಏನಮ್ಮ ಅವಳ ನಾಮಧೇಯ?
ಅನ್ನೋನ್ : ಬೃಂದಾ !!
ನಾನು : ಸರಿ.. ಟಾಟಾ... ನಾನ್ ಹೊರಟೆ
ಅನ್ನೋನ್ : ಯಾಕೋ? ಇನ್ನು ೫ ಗಂಟೆ
ನಾನು : ಹು.. ಇವತ್ತು ಗುರುವಾರ... ರಾಯರ ಮಠಕ್ಕೆ ಹೋಗಬೇಕು
........................................

ಆರು ಗಂಟೆಗೆಲ್ಲ ಮನೆಲಿದ್ದೆ. ಕಾಫಿ ಬೆರೆಸಿಕೊಂಡು ಹೀರುತ್ತಾ , ಆರ್ಕುಟ್ ನ ಮೈಸೂರ್ ಕಮ್ಯುನಿಟಿಯಲ್ಲಿ ಹರಟುತ್ತಾ [ಕಾಲೆಳೆಯುತ್ತಾ :P ] ಕೂತಿದ್ದೆ. ಕಾಫಿ ಹೀರಿ ಹತ್ತು ನಿಮಿಷದಲ್ಲೇ ಪ್ರೆಷರ್ ಬಿಲ್ಡ್ ಆಗಿ, ಸಂಜೆಯ ಪಾಕಿಸ್ತಾನ ಪ್ರವಾಸ ಮುಗಿಸಿ ಬರೋಷ್ಟರಲ್ಲಿ ಸಂಯುಕ್ತ ತನ್ನ ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ಬುಕ್ಕನ್ನು ಪಕ್ಕಕ್ಕಿಟ್ಟು ನನ್ನ ಲ್ಯಾಪ್ ಟಾಪ್ ಹಿಡಿದು ಕೂತಿದ್ದಳು.
ಒಹೋ.. ಪಾಠ ಹೇಳಿಸಿಕೊಳ್ಳುವ ನೆಪದಲ್ಲಿ ಬಂದು ಮಠಕ್ಕೆ ಕರೆದುಕೊಂಡು ಹೋಗು ಅಂತ ಹಠ ಮಾಡಲು ಬಂದು ಕೂತಿದ್ದಾಳೆ ಅನ್ನೋದು ನನಗೆ ಸ್ಪಷ್ಟವಾಗಿತ್ತು. ಇವಳನ್ನು ಮಠಕ್ಕೆ ಕರೆದುಕೊಂಡು ಹೋದರೆ ನಮ್ಮ ಉದ್ದೇಶ ಈಡೇರದು ಅನಿಸಿ ಅವಳನ್ನು ಸಾಗಿಹಾಕಲು ಯೋಚಿಸುತ್ತಾ - ಏಯ್ ಲ್ಯಾಪ್ ಟಾಪ್ ಹಿಡ್ಕೊಂಡ್ ಏನೇ ಮಾಡ್ತಿದ್ಯ? ಓದೋದು ಬರೆಯೋದು ಏನು ಇಲ್ವಾ?

ಸಂ : ನೀನ್ ಬರ್ದಿರೋದನ್ನೇ ನಾನು ಓದುತ್ತಾ ಇದೀನಲ್ಲ ...
ನಾ : ಏನ್ ಓದ್ತಿದ್ಯೆಲೆ ?
ಸಂ : ನಿನ್ನ ಮತ್ತೆ ಅನ್ನೋನ್ ಚಾಟು .. ಡೇ ೧ ದು ಈಗ ಶುರು ಮಾಡಿದೀನಿ
ನಾ : ಲೇ.. ಅದೆಲ್ಲ ನಿಂಗ್ಯಾಕೆ ? 1st ಲ್ಯಾಪ್ ಟಾಪ್ ಕೊಡಿಲ್ಲಿ ಅಂತ ಕಿತ್ತುಕೊಂಡು , ಎಲ್ಲಾ ಓದಿ ಬಿಟ್ಟೆಯ?
ಸಂ : ಏ.. ಯಾಕ್ ಹಾಗ್ ಆಡ್ತ್ಯ? ಇನ್ನು ಈಗ ಓಪನ್ ಮಾಡ್ದೆ?
ನಾ : ಸದ್ಯ.. ಏನೇ ನೀನು ಒಂಚೂರು ಗೊತ್ತಾಗಲ್ವಾ? ಪರ್ಸನಲ್ ಚಾಟ್ಸ್ ಎಲ್ಲ ಓದಬಾರದು ಅಂತ..
ಸಂ : ಓ ಓ .. ಬಾರಿ.. ನಂಗೊತ್ತಿಲ್ಲದೆ ಇರೋದಾ? ನಿನ್ ಪರ್ಸನಲ್ ಚಾಟ್ ಗಳು
ನಾ : ಇವತ್ತಿನ್ ಚಾಟ್ ಓದಿಲ್ಲ ತಾನೇ? [ ನಾನು ಮಠಕ್ಕೆ ಹೋಗ್ತಿರೋ ವಿಚಾರ ಇವಳಿಗೆ ಗೊತ್ತಾಗಿ ಬಿಟ್ಟಿದ್ಯೇನೋ confirm ಮಾಡಿಕೊಳ್ಳಲು ನಾನು ಹಾಗೆ ಕೇಳಿದ್ದು ]
ಸಂ : ಒಹೋ.. ಇವತ್ತಿಂದ್ ಏನ್ ವಿಶೇಷ ?
ನಾ : ಏನೋ ಇದೆ .. ನಿಂಗ್ ಯಾಕ್ ಅವೆಲ್ಲ? ಸರಿ ಈಗ ಬಿಡು ಗಾಡಿ ಮನೆ ಕಡೆಗೆ  .. ನಂಗೊಚೂರು ಕೆಲಸ ಇದೆ ಆಚೆ..
ಸಂ : ಇನ್ ಏನ್ ಮಹಾ ಹೇಳಿರ್ತಾಳೆ? I Love You ಅಂದ್ಲಾ? ಅದ್ಯಾಕ್ ಹುಡ್ಗೀರು ನಿನ್ ಹಿಂದೆ ಬೀಳ್ತಾರೋ ?
ನಾ : ಹು .. ಈಗ ನೀನ್ ಬಿದ್ದಿದ್ಯಲ .. ಹಾಗೆ
ಸಂ : ಯಾರ್ ಹಿಂದೆ ಬಿದ್ದಿದಾರೋ ಬಿಟ್ಟಿದಾರೋ ಗೊತ್ತಿಲ್ಲ.. ನಾನಂತು I Love You !
ನಾ : ಏನಂದೆ..? ತಡಿ ಇದುನ್ನ ನಿಮ್ಮಮ್ಮನಿಗೆ ಹೇಳ್ತೀನಿ
ಸಂ : ಹ ಹ .. ಅದುನ್ನ ಅವರಿಗೆ ಹೇಳಿ ಏನು ಪ್ರಯೋಜನ ..? ಅವರಿಗೆ ಆಗ್ಲೇ ಮದುವೆಯಾಗಿದೆ :P
ನಾ: ಏನಂದಿ? ಮಾಡ್ತೀನಿ ಇರು ಅನ್ನುತ್ತಾ ಲ್ಯಾಪ್ ಟಾಪ್ ಪಕ್ಕಕ್ಕಿಟ್ಟು ಏಳೋಷ್ಟರಲ್ಲಿ, ಸಂಯುಕ್ತಾ ಬುಕ್ ಎತ್ತಿಕೊಂಡು - ಆಚೆ ಹೋಗಿಬಾ ಅಮೇಲ್ ವಿಚಾರುಸ್ಕೊತೀನಿ ನಿನ್ನ ಮತ್ತೆ ಆ ಅನ್ನೋನ್ನ ಅನ್ನುತ್ತಾ ಓಡಿದಳು.

ಅಬ್ಬ.. ಸದ್ಯ ಹೋದ್ಲು ಅನ್ಕೊತಾ ಗಡಿಯಾರದ ಕಡೆ ತಿರುಗಿದೆ.. ಒಹ್ ಆಗಲೇ ೭ ಗಂಟೆ.. ಗೆಳೆಯ ಪದ್ದು ಯಾಕೆ ಇಷ್ಟೊತ್ತಾದರೂ ಬಂದಿಲ್ಲ ಅನಿಸಿ ಅವನಿಗೆ ಫೋನಿಸಿದೆ.. ನಾನ್ ಡೈರೆಕ್ಟ್ ಆಗಿ ಮಠಕ್ಕೆ ಬರ್ತೀನಿ ನೀನು ಹೊರಡು ಅಂದ ಪದ್ದು. ತಕ್ಷಣವೇ ಹೊರಟೆ. ಮಠದಲ್ಲಿ ರಾಯರ ಸ್ತೋತ್ರ ಹೇಳುತ್ತಾ ಪ್ರದಕ್ಷಿಣೆ ನಮಸ್ಕಾರ ಹಾಕಿ ನಾವು ತೀರ್ಥ ತೊಗೊವಾಗ ಅವಳ ಆಗಮನವಾಯಿತು. ನಾಕು ವಾರದಿಂದ ೭:೨೫ ಕ್ಕೆ ಬರುತ್ತಿದ್ದ ಅವಳು ಇಂದೂ ಕೂಡ ಸರಿಯಾಗಿ ೭:೨೫ ಕ್ಕೆ ಬಂದಿದ್ದಳು.
ನಾಕು ವಾರದಿಂದ ನೋಡಲು ಸುಂದರವಾಗಿದ್ದ ಅವಳನ್ನು ಬರೀ ನೋಡುತ್ತಲೇ ಕಾಲ ಕಳೆದಿದ್ದ ನಾವು, ಇಂದು ಅವಳನ್ನು ಮಾತನಾಡಿಸಲೇ ಬೇಕು ಅಂದುಕೊಳ್ಳುತ್ತಾ ಮಠದಲ್ಲಿ ಅವಳ ಹಿಂದೇನೆ ಸುತ್ತುತ್ತಾ ಮತ್ತೆ ಮತ್ತೆ ಪ್ರದಕ್ಷಿಣೆ ಬಂದೆವು. ಆದರೂ ಎಲ್ಲರೆದುರು ಮಾತಾಡಿಸಲು ಧೈರ್ಯ ಬರಲ್ಲಿಲ್ಲ.

ಅವಳು ಹೊರ ಬರುತ್ತಿದ್ದಂತೆ ನಾನು ಪದ್ದು ಅವಳನ್ನು ಹಿಂಬಾಲಿಸಿದೆವು. ಸ್ವಲ್ಪ ದೂರ ಸಾಗುವಷ್ಟರಲ್ಲಿ,
ಪದ್ದು  : ಲೇ ನನಗ್ಯಾಕೋ ಕಾಲು ನಡಗುತ್ತಿದೆ ಹೊರಟುಹೋಗೋಣ ವಾಪಸ್ಸು ನಡಿ ..
ನಾ : ಥು .. ಪುಕಲ ..ಇಷ್ಟ್ ದೊಡ್ ಆಕಾರ ಇಟ್ಕೊಂಡು ಮಾತಾಡ್ಸಕ್ ಹೆದರುಕೊತ್ಯ ? ಸುಮ್ನೆ ಬಾ ನಂ ಜೊತೆ
ಅನ್ನುತ್ತಾ ಅವಳ ಹಿಂದೆ ಹಿಂದೆ ಬಂದು
ನಾ : ರೀ .. ನಿಂತ್ಕೊಲ್ರಿ
ಅ : ಏನು?
ನಾ : You look very beautiful. ಏನ್ರಿ ನಿಮ್ ಹೆಸರು.. ?
ಅ : ಹೇಳಲ್ಲ ..
ನಾ : ಪರ್ವಾಗಿಲ್ಲ ಬಿಡಿ.. ನಾವೇ ನಿಮಗೆ ಈಗಾಗಲೇ ೨ ಹೆಸರು ಇಟ್ಟಿದೀವಿ .. ನಿಮ್ಗೆ ಯಾವುದು ಇಷ್ಟ ಅಂತ ಹೇಳಿ
ಪದ್ದು [ನನ್ನ ಕಿವಿಯಲ್ಲಿ ] - ಲೇ.. ಬೇಡ ಕಣೋ ನಂಗೆ ಭಯ ಆಗ್ತಿದೆ.. ವಾಪಸ್ ಹೋಗೋಣ 
ನಾ : ನೋಡ್ರಿ ಇವ್ನು [ ಪದ್ದು ಕಡೆ ಕೈ ಮಾಡಿ ] ನಿಮಗೆ ಚಂದನ ಅಂತ ಮತ್ತೆ ನಾನು ಸುಚಿತ್ರ ಅಂತ ಹೆಸರ್ ಇಟ್ಟಿದೀವಿ.
ಅ : ಒಹೋ.. ನಂಗೆ ಬಾಯ್ ಫ್ರೆಂಡ್ ಇದಾನೆ .
ನಾ : ಇದ್ರೆ ಏನ್ ಮಾಡ್ಬೇಕು ? How about a cup of coffee in ccd?
ಅ : ಇಲ್ಲಪ್ಪ .. ನಾನ್ ಎಲ್ಲು ಬರಲ್ಲ ಅಂತ ಸರ ಸರ ನಡೆಯಲು ಶುರು ಮಾಡಿದಳು. ನಾವು ಅವಳ ಹಿಂದೇನೆ ನಡೆದೆರಾದವೂ ಯಾವುದೋ ಸಂದಿಯಲ್ಲಿ ನಮಗೆ ಕಾಣಿಸದ ಹಾಗೆ ಮಾಯವಾಗಿಬಿಟ್ಟಳು.

ನಾನು ಪದ್ದು ಮನೆಗೆ ಬರೋಷ್ಟರಲ್ಲಿ ಮನೆಯ ಹತ್ತಿರ ಗೆಳೆಯರಾದ ಅಚ್ಚಿ, ರಾಜಿ, ಗೋಸಿ ಮತ್ತು ಸಂತು ಬಂದಿದ್ದರು. ಅವರೆಲ್ಲರನ್ನು ನೋಡಿದ ಕೂಡಲೇ ಸಂಯುಕ್ತಳು ಓಡಿಬಂದಳು. ನಾವೆಲ್ಲಾ ಪದ್ದುಗೆ ಹೆದರು ಪುಕ್ಕಲ ಅಂತ ಕಾಲೆಳೆಯುತ್ತಾ ಕೂತಿರುವಾಗ, ಸಂಯುಕ್ತ ಗೆಳೆಯರಾರಿಗೂ ಗೊತ್ತಿಲ್ಲದ ನನ್ನ ಮತ್ತೆ ಅನ್ನೋನ್ ವಿಚಾರ ಎಲ್ಲರಿಗೂ  ಟಾಂ ಟಾಂ ಮಾಡಿದಳು. ಇಬ್ಬರು ನನ್ನನ್ನು ಹಿಡಿದುಕೊಂಡು ಮತ್ತಿಬ್ಬರು ಲ್ಯಾಪ್ ಟಾಪ್ ಓಪನ್ ಮಾಡಿ ನನ್ನ ಅನ್ನೋನ್ನ ಚಾಟ್ಸ್ ಓದಿ ಏನೋ ಇದೆ ಏನೋ ಇದೆ ಎಂದು ಹಾಡಲು ಶುರು ಮಾಡಿದರು. ನನ್ನ ರೇಗಿಸಲು ಕಾಯುತ್ತಿದ್ದ ಪದ್ದು, ಸಿಕ್ಕಿದ್ದೇ ಚಾನ್ಸ್ ಅಂತ ಮಿಂಚಾಗಿ ನೀನು ಬರಲು ಹಾಡಿಗೆ ಚಾಟಲ್ಲಿ ನೀನು ಸಿಗಲು .. ಅಂತ  ಯದ್ವಾ ತದ್ವಾ  ರೀಮಿಕ್ಸ್ ಮಾಡಿ ಕಾಡಿಸಿದ.

ಅದೇ ಸಮಯಕ್ಕೆ ಅನ್ನೋನ್ ಕರೆ ಮಾಡಿದ್ದಳು. ಫೋನ್ ಎತ್ತಿಕೊಂಡು ಆಚೆ ಹೋಗಲು ಏಳುತ್ತಿದ್ದಾಗ ಇವರುಗಳು ಎಳೆದು ಎಳೆದು ಕೂಡಿಸಿಕೊಂಡು ಟೆಲಿಫೋನ್ ಗೆಳತಿ ವೆಲ್ಕಂ ವೆಲ್ಕಂ ಎಂದು ಹಾಡುತ್ತಿದ್ದರು.

ಅತ್ತ ಆ ಅನ್ನೋನ್ ಮಾತನಾಡಲಾಗದೆ ಬಿಕ್ಕಳಿಸುತ್ತಾ ಜೋರಾಗಿ ಕೆಮ್ಮುತ್ತಿದ್ದಳು. ಅವಳನ್ನು ಯಾರೋ  ಸಾಂತ್ವನಗೊಳಿಸುತ್ತಾ  ಈಗ ಬೇಡಮ್ಮ, ಆಮೇಲೆ ಮಾತನಾಡು ಈಗ ರೆಸ್ಟ್ ತೊಗೋಬೇಕು ನೀನು ಅನ್ನುತ್ತಿದ್ದರು. ಅಷ್ಟರಲ್ಲಿ ಕಾಲ್ ಕಟ್ ಆಯಿತು. ನನಗೆ ಅಲ್ಲಿ ಏನು ನಡೆಯುತ್ತಿದೆ ಅಂತಾನೆ ಗೊತ್ತಾಗಲ್ಲಿಲ್ಲ. ನಾನು ಮತ್ತೆ ಕಾಲ್ ಮಾಡಿದಾಗ ಆ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಬುದ್ದಾವತಾರದ ಬಗ್ಗೆ ಒಂದಿಷ್ಟು

ಮೊದಲಿಗೆ ಭಗವಂತನ ಹತ್ತು ರೂಪಗಳು ಯಾವುವೆಂದರೆ
೧. ಮತ್ಸ ೨. ಕೂರ್ಮ ೩. ವರಾಹ ೪. ನಾರಸಿಂಹ ೫. ವಾಮನ ೬. ಪರಶುರಾಮ ೭. ರಾಮ ೮. ಕೃಷ್ಣ ೯.ಬುದ್ದ ೧೦. ಕಲ್ಕಿ

ಬುದ್ದಾವತಾರದ ಬಗ್ಗೆ ಒಂದಿಷ್ಟು.

ತತಃ ಕಲೌ ಸಂಪ್ರವೃತ್ತೇ ಸಂಮೋಹಾಯ ಸುರದ್ವಿಷಾಂ।
ಬುದ್ದೋ ನಾಮ್ನಾಜಿನಸುತಃ ಕೀಕಟೇಷು  ಭವಿಷ್ಯತಿ ।।

ಕಲಿಯುಗವು ಪ್ರವೃತ್ತವಾಗಿ, ಅಯೋಗ್ಯರು , ವೇದಮಾರ್ಗದಲ್ಲಿ ಪ್ರವೃತ್ತರಾದ, ತ್ರಿಪುರವಾಸಿಗಳಾದ ದೈತ್ಯರನ್ನು ಸಂಪೂರ್ಣವಾಗಿ ಮೋಹಗೊಳಿಸಿ, ಅವರ ಪತ್ನಿಯರ ಪಾತಿವ್ರತ್ಯವನ್ನು ಭಂಗಗೊಳಿಸಲೆಂದು "ಬುದ್ದ" ಎಂಬ ಹೆಸರಿನಿಂದ ಗಯಾ ಕ್ಷೇತ್ರದಲ್ಲಿ ಜಿನನ ಮಗನಾಗಿ ಅಂದರೆ ಶಿಶುರೂಪಿಯಾಗಿ ದಾರಿಯಲ್ಲಿ ಕಾಣಿಸಿಕೊಂಡಾಗ ಜಿನನು ತನ್ನ ಮಗನೆಂದು ಭಾವಿಸಿ ಮನೆಗೆ ತಂದಾಗ ಶಿಶು ರೂಪದಿಂದಲೇ ವೇದ ವಿರುದ್ದ ಮಾತುಗಳಿಂದ ಅಸುರರನ್ನು ಮೋಹಗೊಳಿಸಿದನು.

ಬುದ್ದ ರೂಪದಿಂದ ಅಸುರರನ್ನು ವಂಚಿಸಿ, ನಾಶಪಡಿಸಿ, ದೇವತೆಗಳಿಗೆ ಮೊಕ್ಷದಾಯಕವಾದ ಜ್ಞಾನವಿತ್ತವನೆ ಬುದ್ದರೂಪಿ ಪರಮಾತ್ಮ. ಇದು ಅಸುರ ಜನ ಮೋಹನ ರೂಪ.
"ಗೌತಮಬುದ್ದ" ಎಂದು ಪ್ರಸಿದ್ದನಾದ ಸಿದ್ದಾರ್ಥನು ಪರಮಾತ್ಮನ ಅವತಾರವಲ್ಲ. ಅವನು ಹಿಂದೆ ರುದ್ರದೇವರಿಂದ ವಧಿಸಲ್ಪಟ್ಟಿದ್ದ  ತ್ರಿಪುರಾಸುರರಲ್ಲಿ ಮೊದಲಿಗನಾದ ದೈತ್ಯ.

ಭಗವಂತನು ಬುದ್ದನಾಗಿ ಅವತರಿಸಿ ಕ್ಷಣಿಕ , ಅಸತ್ , ಶೂನ್ಯ , ಅಭಾವ ಇತ್ಯಾದಿಗಳನ್ನು ಬೋಧಿಸಿದನು. ಅವರಾದರೋ ವೈದಿಕ ಮತವನ್ನು ಬಿಟ್ಟು ಬೌದ್ದ ಮತವನ್ನು ಹಿಡಿದರು.
ಬುದ್ದನ ಮಾತಿನ ಅರ್ಥವಾದರೂ ಹೀಗೆ:

ವೇದಃ ಅಪ್ರಮಾಣಂ = ವೇದವು ಆಕಾರವಾಚ್ಯನಾದ ಭಗವಂತನ ವಿಷಯದಲ್ಲಿ ಪ್ರಮಾಣವು. ಭಗವಂತನು ಶಾಸ್ತ್ರೈಕಸಮಧಿಗಮನ್ಯು ಎಂದರ್ಥ.

ಶೂನ್ಯಂ = ಶಂ- ಸುಖ, ಉ - ಉಚ್ಚವಾದದ್ದು, ಇನ್ನೊಂದು ಉ - ಸ್ವಭಾವ ಹಾಗಾದರೆ ಯಾರ ಸುಖವು ಸ್ವಭಾವವಾದದ್ದು, ಉಚ್ಚವಾದದ್ದು ಅವನು, ಶೂ - ಅವನಿಂದ , ನೀಯತೆ - ನಿಯಮ್ಯತೆ ಇತಿ ಶೂನ್ಯಂ - ಭಗವಂತನಿಂದ ನಿಯಮಿತವಾದದ್ದು ಈ ಜಗತ್ತು ಎಂದರ್ಥ.

ಅಭಾವ = ಆಕಾರ ವಾಚ್ಯ ಭಗವಂತನಿಂದ ಉತ್ಪತ್ತಿ ಹೊಂದುವುದು.

ಅಸತ್ = ಆಕಾರ ವಾಚ್ಯ ಭಗವಂತನಿಂದ ನಾಶ ಹೊಂದುವಂತದ್ದು.

ಕ್ಷಣಿಕ = ಅಶಾಶ್ವತವಾದದ್ದು.

ಹೀಗೆ ಪರಮಾತ್ಮನ ಅಭಿಪ್ರಾಯವಾದ್ದರಿಂದ ಭಗವಂತನ ಮಾತು ಎಂದಿಗೂ ಸುಳ್ಳಾಗುವುದಿಲ್ಲ. ಪ್ರಮೇಯಸಿದ್ದವಾಗುತ್ತದೆ.

                                        *******************************************

Please note there are two buddhaas.   The one who preached Shoonya Vaada and the one who preached the correct version for the sajjanaas.     After Dwapara yuga, devataas had gone back to their respective lokaas.    Sri Vedavyasa Devaru was invisible.

Then Tripuraas who were killed by Rudradevaru were born again in the disguise of Vaidikaas and as such they had access to Shastras.

One among these Tripuraas was again born as the son of Shuddodhana.  This Shuddodhana got a baby and he was performing vedic jata karma to the baby.   At the same time, Srihari made that Baby to disappear and he himself came to that place.

The new child (Srihari) who replaced Siddartha did the upadesha which were against Vedaas.  To further convince them about the same, he told devataas to throw weapons on the child.    He swallowed all the weapons including Rudradevara Trishula and sat on Vishnu Chakra.   Then he started preaching “Shunya vaada”  (The same shunyavaada is represented by Advaitees in a different manner).    As Srihari’s budha roopa sat on the Vishnu Chakra, they thought that this child superior to Vishnu and followed his preachings.

Please note :  The preachings by Srihari’s Buddha roopa is only for asura jana mohanaartha.

Some of the teachings by Buddhavatara roopi paramathma with dual meanings, one for the asuraas and one for the sajjanaas

Veda: apramanam

meaning vedaas are not having any pramanam   (for the asuraas)

meaning “a”karachavachya paramathma’s is pramana as per veda (for sajjanaas)

Shoonyam

The world is shoonya (for asuraas)

Sham – sukha;  u + u = of high relevance + svaabhivika, shoo – That god

Neeyate – niyamana ( Srihari does the niyamana of the entire world and he has sukha, which is svaabhivika) (This is for sajjanaas).

abhaava -  The entire world is brought up by akaara vaachya paramathma

asat - The entire world is destroyed by akaara vachya paramathma

kShaNika – ashaashwata .. Srihari’s word are prameya siddha

The words Shoonya, abhaava, asat, kshaNika were misrepresented to asuraas and represented to sajjanaas in a different way.

                                            ಶ್ರೀ ಕೃಷ್ಣಾರ್ಪಣಮಸ್ತು 

                       ******************************************


Thursday, December 6, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೫


ನಾನು : ಹೇಳಿ ಎರಡು ಯುಗ ಕಳಿತು :P ನಿಂಗ್ ಎಲ್ ಕೇಳ್ಸತ್ತೆ? ಹೋಗಿ ಚೆಕ್ ಅಪ್ ಮಾಡುಸ್ಕೋ.. ಸರಿಯಾಗಿ ಕೇಳಿಸದಿರುವುದು ಒಂದು H1N1 ಸಿಮ್ ಟಂ :P
ಅನ್ನೋನ್ : ನೀನೆ ಬಾ.. H1N1 ಸಿಮ್ ಟಂ ಟೆಸ್ಟ್ ಮಾಡಿಸುತ್ತೇನೆ .. ಅದು ಫ್ರೀ ಆಗಿ
ನಾನು : ಹು ಈಸ್ ನೀನೆ? :P 
ಅನ್ನೋನ್ : ನೀನೆ ಮೀನ್ಸ್ ಯು .. ಯುವರ್ ಸೆಲ್ಫ್ ಓನ್ಲಿ
ನಾನು : ಇಂಗ್ಲಿಷ್ ಬರಲ್ಲ ಅಂತ ಗೊತ್ತಿತ್ತು... ಈಗ ಕನ್ನಡಾನು ಬರಲ್ಲ ಅಂತ ಪ್ರೂವ್ ಆಯ್ತು :P
ಅನ್ನೋನ್ : ಥ್ಯಾಂಕ್ ಯು
ನಾನು : ಹೋಗಿ ವಯಸ್ಕರ ಶಿಕ್ಷಣ ಅಭಿಯಾನಕ್ಕೆ ಸೇರಿಕೋ :P
ಅನ್ನೋನ್ : ಫಸ್ಟು ನೀನ್ ಹೋಗು.. ಆಮೇಲೆ ನನ್ನ ಸರದಿ
ನಾನು : ನಾನ್ ಹೋಗ್ ಬಂದ್ ಆಯ್ತು... ಈಗ ನಿಂದೆ ಸರದಿ :P
ಅನ್ನೋನ್ : ನಾನ್ ಹೋಗಲ್ಲ ..
ನಾನು : ಹೋಗಿಲ್ಲ ಅಂದ್ರೆ ಬಂದು ಎತ್ತಾಕೊಂಡು ಹೋಗ್ತಾರೆ.. ಭಿಕ್ಷುಕರ ವ್ಯಾನಲ್ಲಿ :P
ಅನ್ನೋನ್ : ನಂಗೆ ಸದ್ಯದಲ್ಲೇ ೫೦೦ ರೂ. ಸಿಗತ್ತೆ.. ಹೇಗೆ ಅಂದ್ರೆ ನಿನ್ನ ನಿಮ್ಹಾನ್ಸ್ ಗೆ ಸೇರುಸ್ತೀನಿ.. ಆಗ ಫುಲ್ ಪಾರ್ಟಿ
ನಾನು : ಹ ಹ ... ಅಷ್ಟೊಂದ್ ಕಷ್ಟ ಪಡಬೇಡ.. ಯಾವುದಾದರು ದೇವಸ್ಥಾನದ ಮೂಲೇಲಿ ಕೂತ್ಕೋ... ಸಾವಿರಾನೆ ಸಿಗತ್ತೆ :P ಟವೆಲ್ ಹಾಸೋದು ಮರಿಬೇಡ :P
..............................
ಅನ್ನೋನ್ : ಎಷ್ಟ್ ರೆಗುಸ್ತ್ಯ ಅಲ್ವ ನೀನು
ನಾನು : ಸರಿ... ಯಾವಾಗ ಸಿಗ್ತಿಯ?
ಅನ್ನೋನ್ : ನೀನೆ ಹೇಳು ..
ನಾನು : ಇವತ್ತು ಸಂಜೆ ೭ರ ಸುಮಾರಿಗೆ
ಅನ್ನೋನ್ : ಸಾರಿ ಕಣೋ... ಹೌ ಅಬೌಟ್ ಸಂಡೇ ?
ನಾನು : ವೈ ಕಾಂಟ್ ಯು ಟುಡೇ?
ಅನ್ನೋನ್ : ನೋ... ಐ ಹ್ಯಾವ್ ಟು ಅಟೆಂಡ್ ಸಂ ಪಾರ್ಟಿ
ನಾನು : I know ... ಯು ವಿಲ್ ಗೀವ್ ಎನ್ ರೀಸನ್ಸ್ ಫಾರ್ ನಾಟ್ ಟು ಮೀಟ್. ಯು ಆರ್ ಆಫ್ರೈಡ್
ಅನ್ನೋನ್ : ನೋ.. ಯು ಆರ್ ರಾಂಗ್ ... ವೀ ವಿಲ್ ಮೀಟ್ ಆನ್ ಸಂಡೇ.
ನಾನು : ನಾನ್ ಫ್ರೀ ಇಲ್ಲ ಸಂಡೇ..
ಅನ್ನೋನ್ : ಓಕೆ.. ವಾಟ್ ಅಬೌಟ್ ಟುಮಾರೋ?
ನಾನು : ಎಲ್ಲಿ?
ಅನ್ನೋನ್ : ನೀನೆ ಹೇಳು
ನಾನು : NR ಕಾಲೋನಿ @ ೭.. ಶ್ರೀನಿವಾಸ ಕೂಲ್ ಕಾರ್ನರ್ ಹತ್ತಿರ
ಅನ್ನೋನ್ : ನೋ.. ಇಟ್ಸ್ ವೆರಿ ಫಾರ್.
ನಾನು : ಡೋಂಟ್ ವರಿ.. ಐ ವಿಲ್ ಡ್ರಾಪ್ ಯು ವೈಲ್ ಗೋಯಿಂಗ್ ಬ್ಯಾಕ್ ..
ಅನ್ನೋನ್ : ಶಲ್ ಐ ಟೆಲ್ ಯು ಸಂ ಪ್ಲೇಸ್ ?
ನಾನು : ಗೋ ಅಹೆಡ್
ಅನ್ನೋನ್ : ಭಾಷ್ಯಂ ಸರ್ಕಲ್ ... MTR  moments
ನಾನು : ನೋ.. ಇಟ್ಸ್ ಟೂ ಫಾರ್ ಫಾರ್ ಮಿ.. ಐ ಕಾಂಟ್ ಕಮ್ ದೇರ್
ಅನ್ನೋನ್ :ಡೋಂಟ್ ವರಿ.. ಐ ವಿಲ್ ಡ್ರಾಪ್ ಯು ವೈಲ್ ಗೋಯಿಂಗ್ ಬ್ಯಾಕ್ ..
ನಾನು : ನೋ ಥ್ಯಾಂಕ್ಸ್ ... ಮೋರ್ ಓವರ್ ಐ ಡೋಂಟ್ ನೋ ದಟ್ ಏರಿಯ
ಅನ್ನೋನ್ : ಐ ವಿಲ್ ಗೈಡ್ ಯು..
ನಾನು : ನೋ ಚಾನ್ಸ್
ಅನ್ನೋನ್ : ಸೊ ಯು ಟೆಲ್ ಮಿ ಸಮ್ ಏರಿಯ ವಿಚ್ ಇಸ್ convenient ಟು ಬೋಥ್ ಆಫ್ ಅಸ್
ನಾನು : ಗಾಂಧೀ ಬಜಾರ್.. ಶಿವ್ ಸಾಗರ್
ಅನ್ನೋನ್ : ಮಲ್ಲೇಶ್ವರಂ
ನಾನು : ಪೋರೆರೆ :P
.........................................

ಅನ್ನೋನ್ : ಹಾಯ್ Whatz up?
ನಾನು : Roof :P
ಅನ್ನೋನ್ : Tell me about yourself
ನಾನು : What u want to know about me?
ಅನ್ನೋನ್ : Fav. color, movie, place, past time, hobby
ನಾನು : ಬ್ಲೂ ಬ್ಲಾಕ್ , ರಾಜಣ್ಣ ನವರ ಎಲ್ಲಾ ಚಿತ್ರಗಳು, ಬೆಂಗಳೂರು ಬಿಟ್ಟು ಮಿಕ್ಕಿದ್ದೆಲ್ಲ, ಪಾಸ್ಟ್ ಟೈಮ್ ಬಗ್ಗೆ ಪ್ರೆಸೆಂಟ್ ಮಾಡಲ್ಲ ನಾನು :p  ಕಥೆ ಕವನ ಬರಿಯೋದು, ಹುಡುಗಿಯರನ್ನ ಚುಡಾಯಿಸೋದು ಇನ್ನು ಏನೇನೋ ...
ಅನ್ನೋನ್ :ರಾಜ್ ಕುಮಾರ್ Fan ನ? AC ನ?
ನಾನು : ಬೀಸಣಿಕೆ
ಅನ್ನೋನ್ : ವೇರ್ ಡು ಯು ಸ್ಟೇ ?
ನಾನು : ಹನುಮಂತ ನಗರ
ಅನ್ನೋನ್ : ಅದಿಕ್ಕೆ ಕೋತಿ ತರಾನೆ ಆಡ್ತಿಯ
ನಾನು : ಹನುಮ ನಮ್ಮ ತಾಯಿ ತಂದೆ ಭೀಮ ನಮ್ಮ ಬಂಧು ಬಳಗ
ಅನ್ನೋನ್ : ನಿಮ್ಮ ಅಜ್ಜಿ ತಾತ ಯಾರೋ
ನಾನು : ಜಗತ್ಪಾಲಕನೆ ನನ್ನ ಪಿತಾಮಹ :P
ಅನ್ನೋನ್ : ಯಾರೋ ಅದು?
ನಾನು : ಮಂದಮತಿ , ಮೂಡೇ
ಅನ್ನೋನ್ : ಹಾಗಾದ್ರೆ ನೀನು ಯಾರೋ?
ನಾನು : ನಾನು ಭಗವಂತನ ಪ್ರತಿಬಿಂಬ
ಅನ್ನೋನ್ : ಹಾಗಂತ ಕನಸು ಕಾಣಬೇಡ
ನಾನು : ನಿಜಾನೆ ಆಗಿರಬೇಕಾದರೆ ಕನಸು ಯಾಕೆ ಕಾಣಬೇಕು?
ಅನ್ನೋನ್ : ನಿಜಾನ?
ನಾನು : ಅವನು ಬಿಂಬ ನಾವೆಲ್ಲಾ ಅವನ ಪ್ರತಿಬಿಂಬ
ಅನ್ನೋನ್ : ಅಬ್ಬಾ .. ಸಾಕು.. ಫಿಲಾಸಫಿ ಶುರು ಮಾಡಬೇಡ
ನಾನು : ಹ ಹ
ಅನ್ನೋನ್ : ನೀವು ಬ್ರಾಹ್ಮಣರ ?
ನಾನು : ಸಂಶಯನೇ ಇಲ್ಲ... ನೀವು?
ಅನ್ನೋನ್ : ಗೌಡಾಸ್
ನಾನು : ದೇವೇಗೌಡರಿಗೆ  ಏನಾದ್ರೂ ಸಂಬಂಧನ ? :P
ಅನ್ನೋನ್ : ಛೆ ಛೆ ಇಲ್ಲಪ್ಪ..
......................................

ಅನ್ನೋನ್ : Do you have gf?
ನಾನು : ಎಸ್ .. ಐ ಹ್ಯಾವ್ ಮೆನಿ GF's
ಅನ್ನೋನ್ : ಹೋ ಹೋ .. ಬಿಕಾಸ್ ಯು ಆರ್ ಕೃಷ್ಣ ಪರಮಾತ್ಮ
ನಾನು : ಹಹ .. GF ಅಂದ್ರೆ ಏನು?
ಅನ್ನೋನ್ : Girl Friend
ನಾನು : ದಟ್ ಈಸ್ ವೇರ್ ಯು ಹ್ಯಾವ್ ಮಿಷ್ಟೇಕನ್ ಮಿ .. ಗಲ್ಸ್ ಆಲ್ವೇಸ್ ಟೇಕ್ ಮಿ ರಾಂಗ್ ವೈ? :P
ಅನ್ನೋನ್ : ವೈ? ವಾಟ್ ಹ್ಯಾಪನ್ಡ್ ?
ನಾನು : ಫಾರ್ ಮಿ , GF means Good Friend :P
ಅನ್ನೋನ್ : ಹೋ .. ಗ್ರೇಟ್ 
ನಾನು : ಐಯಾಮ್ ಆಲ್ವೇಸ್ :P
ಅನ್ನೋನ್ : Do you want to ask me anything?
ನಾನು : I know you'll not tell anything
ಅನ್ನೋನ್ :No.. trust me
ನಾನು : then give me your mobile number
ಅನ್ನೋನ್ : 9448094480

ನಾನು : ಯಾವುದೋ ಕಸ್ಟಮರ್ ಕೇರ್ ನಂಬರ್ನಲ್ಲ ಕೇಳಿದ್ದು ನಾನು
.............................................

ಅನ್ನೋನ್ : Do you have gf?
ನಾನು : ಒಂದ್ ಸತಿ ಹೇಳುದ್ರೆ ಅರ್ಥ ಆಗಲ್ವಾ? ಎಷ್ಟೋ ಜನ ಇದಾರೆ. ನಿಂಗೆ ಬಾಯ್ ಫ್ರೆಂಡ್ ಇಲ್ವಾ?
ಅನ್ನೋನ್ : ಇಲ್ಲ :(
ನಾನು : ದುಡ್ಡು ಇಲ್ದೆರೋ ಪರ್ಸು, ಎಲೆ ಇಲ್ದೆರೋ ಮರ, ಚಟ್ನಿ ಇಲ್ದೆರೋ ಇಡ್ಲಿ, ಚಿಲ್ರೆ ಇಲ್ದೆರೋ ಕಂಡಕ್ಟರ್ ಬಾಯ್ ಫ್ರೆಂಡ್ ಇಲ್ದೆರೋ ಹುಡುಗಿ ಎಲ್ಲಾ ಒಂದೇ ತರ :P
ಅನ್ನೋನ್ : ನೀನೆ ನನ್ನ ಬಾಯ್ ಫ್ರೆಂಡ್
ನಾನು : ... ಹು ನಿನ್ನ ಬಾಯಿಗೆ ನಾನೇ ಫ್ರೆಂಡ್ :P
ಅನ್ನೋನ್ : ನಾನು ನಿನ್ನ ಮೀಟ್ ಮಾಡ್ಬೇಕು
ನಾನು : ಮಾಡು ಯಾರ್ ಬೇಡ ಅಂದಿದಾರೆ ? ಆದ್ರೆ ಈಗಾಗಲೇ ಹೇಳಿದೀನಿ ನಾನ್ ತುಂಬಾ ಕೆಟ್ಟವನು
ಅನ್ನೋನ್ : ಈ ಸಂಡೆ ಮೀಟ್ ಮಾಡೋಣ?
ನಾನು : ಮಾಡೋಣ .. ಆದ್ರೆ ಅಲ್ಲಿವರೆಗೂ ನೋ ಚಾಟ್ ನೋ ಕಾಲ್
ಅನ್ನೋನ್ :please kano.. why is that so?
ನಾನು :  ಟೆಲ್ ಮಿ ವೈ ಆರ್ ಯು ಬಿಹೈಂಡ್ ಮಿ? ವಾಟ್ ಡು ಯು ವಾಂಟ್?
ಅನ್ನೋನ್ : ಓಕೆ ಫೈನ್... If you think i am troubling you, i'll not chat or mess you.
ನಾನು : tats gud for both of us.
ಅನ್ನೋನ್ :fine.. as you wish.
ನಾನು : Its not good for a gal to chat with unknown person, if something goes wrong, it'll affect your future.
ಅನ್ನೋನ್ :I know the limits of a girl.
ನಾನು : better you know that. You may be good at heart, but our society is not good.
ಅನ್ನೋನ್ :Don't worry about my future. I trust god, nothing goes wrong with me.
ನಾನು : Who am i to worry about your future? Its just a suggestion
ಅನ್ನೋನ್ : Thanks for your concern.
ನಾನು : welcome
ಅನ್ನೋನ್ :where to come?
ನಾನು : ಏನ್ PJ  ನ?
...............................................................................

ಅನ್ನೋನ್ : You have bright eyes
ನಾನು : ಆಮೇಲೆ
ಅನ್ನೋನ್ :I want your friendship
ನಾನು : I am repeatedly telling you, if something goes wrong, i am not responsible.
ಅನ್ನೋನ್ :What goes wrong?
ನಾನು : I dont know, it may be anything?
ಅನ್ನೋನ್ :I know you are a good boy.
ನಾನು : ಯು ಆರ್ ರಾಂಗ್ .
ಅನ್ನೋನ್ : ವೈ?
ನಾನು : I am not a good boy.
ಅನ್ನೋನ್ : ಒಹ್.. ಐ ವಿಲ್ ಚೇಂಜ್ ಯು.. ಪರ್ಮಿಟ್ ಮಿ..
ನಾನು : There are two criminal cases are filed against me. I am supposed to be in jail.
ಅನ್ನೋನ್ : Don't worry, my  mama is a lawyer.
ನಾನು : ನೆಕ್ಸ್ಟ್ ಮಂತ್ ಬೈಲ್ ಮುಗ್ಯತ್ತೆ .. ಅಮೇಲ್ ಮತ್ತೆ ಒಳಕ್ಕೆ ..
ಅನ್ನೋನ್ :  ಒಹ್... ಜೈಲಿಗೆ ಹೋಗಬೇಕಾದರೆ ಹೇಳು
ನಾನು : ಯಾಕೆ?
ಅನ್ನೋನ್ :  ನಿಂಗೆ ಲ್ಯಾಪ್ ಟಾಪ್ ಗಿಫ್ಟ್ ಕೊಡ್ತೀನಿ
ನಾನು :  ಯಾಕೆ? ಖೈದಿಗಳಿಗೆ ಅದುನ್ನ ಯೂಸ್ ಮಾಡದು ಹೇಗೆ ಅಂತ ಹೇಳಿಕೊಡಬೇಕಾ?
ಅನ್ನೋನ್ : ಅಲ್ಲ.. ನೀನ್ ಜೈಲಲಿದ್ರು ನಾನ್ ನಿನ್ ಜೊತೆ ಚಾಟ್ ಮಾಡ್ಬೇಕು ಅದಿಕ್ಕೆ
ನಾನು : why do you want to chat with me?
....................................................

ಅನ್ನೋನ್ : what is ur nick name?
ನಾನು : ಏನು ಇಲ್ಲ ..
ಅನ್ನೋನ್ : NANDU CHINNU
ನಾನು : caps lock off ಮಾಡ್ಕೋ :P
ಅನ್ನೋನ್ : ಓಕೆ.. Which dress you like to wear most?
ನಾನು : ಕಚ್ಚೆ ಪಂಚೆ :P
ಅನ್ನೋನ್ : ಒಹ್.. Really ?
ನಾನು : Yes
ಅನ್ನೋನ್ : According to you , which dress is good for gals?
ನಾನು : ಅಮ್ಮ ತಾಯಿ.. ದಯವಿಟ್ಟು ಬಿಟ್ಟು ಬಿಡು ನನ್ನ..
ಅನ್ನೋನ್ : ಯಾಕೋ? ನೀನ್ ಹೇಳಿದ್ ಡ್ರೆಸ್ ಹಾಕೊತೀನಿ ಇವತ್ತು..
ನಾನು :  ಯಾಕೆ? ಅಣ್ಣಮ್ಮನ ಡಾನ್ಸ್ ಇದ್ಯ ಇವತ್ತು? :P
ಅನ್ನೋನ್ : ಏ.. ಸುಮ್ನೆ ಕರಕ್ಟಾಗಿ ಹೇಳು
ನಾನು : ಹುಡ್ಗೀರು ಒಂಬತ್ತು ಗಜದ ರೇಶಿಮೆ ಸೀರೆ ಉಟ್ಟು, ಉದ್ದ ಕುಂಕುಮ ಇಟ್ಟುಕೊಂಡು ,ಒಂದೆಳೆ ಸಿಂಪಲ್ಲಾಗಿ ಇರೋ ಚಿನ್ನದ ಸರ ಹಾಕೊಂಡು , ಕಿವಿಗೆ ನೇತಾಡುವ ಲೋಲಾಕ್ ಇಟ್ಟುಕೊಂಡು , ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕೈ ತುಂಬಾ ಬಳೆ ತೊಟ್ಟುಕೊಂಡಿದ್ದರೆ ಚೆಂದ ಕಾಣಿಸ್ತಾರೆ :P  

Wednesday, December 5, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೪


ಈ ಅನ್ನೋನ್ ಆ ಮೂವರಲ್ಲಿ ಯಾರು ಅಲ್ಲ ಅನ್ನೋದು ಗಟ್ಟಿಯಾದಮೇಲೆ ಮನಸ್ಸಿಗೆ ನಿರಾಳವಾಯಿತು. ಆ ಮೂವರ ಎದುರು ನಾನು ನಡೆದುಕೊಂಡ ರೀತಿ ಅಂದಿಗೆ ಆ ಸಂದರ್ಭಕ್ಕೆ ಸರಿಯಿರಬಹುದೇನೋ. ಆದರೆ ಮತ್ತೊಂದು ದೃಷ್ಟಿಕೋನದಿಂದ ಅದು ತಪ್ಪಾಗಿರಲೂ ಸಾಧ್ಯತೆಯಿತ್ತು. ಅವರುಗಳ ಬಗ್ಗೆ ಯಾವುದೇ ತಪ್ಪು ರೀತಿ ನಡೆದುಕೊಂಡಿಲ್ಲ ಅಂತ ನನಗೆ ನಾನು ಎಷ್ಟು ಬಾರಿ ಹೇಳಿಕೊಂಡರೂ ನನ್ನ ಮನಸ್ಸು ಅದನ್ನೊಪ್ಪುತ್ತಿರಲ್ಲಿಲ್ಲ. ಅವರುಗಳು ನನ್ನ ಮರೆತುಬಿಟ್ಟಿದ್ದರೆನೋ? ನಾನು ಮಾತ್ರ ಕೆಲವೊಂದು ಸಂದರ್ಭಗಳಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಲೇ ಇದ್ದೆ.

ಇನ್ನ ಅವಳು ಯಾರಾಗಿದ್ದರೆ ನನಗೇನು? ನನ್ನ ಎಚ್ಚರದಲ್ಲಿ ನಾನಿದ್ದರೆ ಸಾಕು. ಟೈಮ್ ಪಾಸಿಗೊಂದು ಸರಕು ಸಿಕ್ಕಿತು ಎಂದು ವಿಚಿತ್ರವಾದ ಖುಷಿಪಟ್ಟೆ. ಬೇರೆ ಯಾವುದೇ ಯೋಚನೆಗಳಿಲ್ಲದೆ ರಾತ್ರಿ ಕಣ್ಣು ತುಂಬಾ ನಿದ್ದೆ ಮಾಡಿದೆ. ಬೆಳಗ್ಗೆ ಆಫೀಸಿನಲ್ಲಿ ಮಾಡಿದ ಮೊದಲ ಕೆಲಸ ಅವಳ IDಯನ್ನ ಅನ್ ಬ್ಲಾಕ್ ಮಾಡಿದ್ದು. ಅಂದಿನಿಂದ ನನ್ನ ದಿನಚರಿಯಲ್ಲೇ ಬದಲಾಗಿಹೋಯಿತು.೧:೩೦ಕ್ಕೆ ಊಟಕ್ಕೆ ಹೋಗುತ್ತಿದ್ದ ನಾನು ಅವಳು ೨ಕ್ಕೆ ಆನ್ಲೈನ್ ಬರುವಳೆಂದು ೧ ಗಂಟೆಗೆನೆ ಊಟ ಮಾಡಲು ಶುರು ಮಾಡಿದೆ. ೨೦-೩೦ ನಿಮಿಷಗಳಿರುತ್ತಿದ್ದ ನಿದ್ದೆ ೧೦-೧೫ ನಿಮಿಷಗಳಿಗೆ ಸೀಮಿತವಾಯ್ತು. ಅವಳು ಹೇಳಿದಂತೆ ಪ್ರತಿದಿನ ಸರಿಯಾಗಿ ೨ ಗಂಟೆಗೆ ಚಾಟಿಗೆ ಬಂದು ಬಿಡುತ್ತಿದ್ದಳು ಹಾಗು ರಾತ್ರಿ ಒಂಬತ್ತರ ಮೇಲೆ ಕರೆ ಮಾಡುತ್ತಿದ್ದಳು. ಮೊದಲ ಕೆಲವು ದಿನಗಳ ಚಾಟು ಮತ್ತು ಕರೆಗಳ ಒಟ್ಟು ಸಾರಾಂಶ :

ಅನ್ನೋನ್ : ಹಾಯ್
ನಾನು : ಯಾರಿದು?
ಅನ್ನೋನ್ : ನಾನು
ನಾನು : ನಿಮ್ ತಾತ
ಅನ್ನೋನ್ : ನಿಮ್ ಅಜ್ಜಿ
ನಾನು : ಸರಿ.. ಸ್ಟಾಪ್ ಇಟ್ .. ಟೆಲ್ ಮಿ ಹೂ ಆರ್ ಯು?
ಅನ್ನೋನ್ : ಐಯಾಮ್ ಸ್ವಾತಿ
ನಾನು : ವಿಚ್ ಸ್ವಾತಿ?
ಅನ್ನೋನ್ : ಸ್ವಾತಿ ಹೋಟೆಲ್
ನಾನು : ಅಲ್ಲೇ ಹೋಗಿ ಇಡ್ಲಿ ವಡೆ ತಿಂದು ಮನೆಗ್ ಹೋಗಿ ಮಲ್ಕೋ :P ಈಗ ನಾನ್ ಹೋಗಬೇಕು.. ಬೈ
ಅನ್ನೋನ್ : ವೈ ಡಾ ? ಜಸ್ಟ್ ಕಿಡ್ಡಿಂಗ್... ಸಿಟ್ ಅಂಡ್ ಚಾಟ್ ಫಾರ್ ಸಂ ಟೈಮ್
ನಾನು : ಡೋಂಟ್ ಯು ಹ್ಯಾವ್ ಎನಿ ಅದರ್ ಬೆಟರ್ ವರ್ಕ್ ?
ಅನ್ನೋನ್ : ನೋ.. ನನಗೇನು ಕೆಲಸ ಇಲ್ಲ..
ನಾನು : ಒಹ್ .. ಹಾಗಿದ್ರೆ ನಮ್ ಮನೇಲಿ ಬಹಳ ಕೆಲಸ ಇದೆ.. ಬಂದು ಮಾಡಿಕೊಡು. ಸುಮ್ನೆ ಕೂತಿರದು ದೇಹಕ್ಕೆ ಒಳ್ಳೇದಲ್ಲ.
ಅನ್ನೋನ್ : ನಮ್ ಮನೇಲಿ ಮಾಲಿ ಕೆಲಸ ಖಾಲಿ ಇದೆ ಬಾ ..
ನಾನು : ಒಹ್ ಹೌದಾ?? ಫ್ರೀ ಇದ್ದಾಗ ಬರ್ತೀನಿ ಬಿಡು.. ಎಷ್ಟ್ ಕೊಡ್ತಿಯ ಸಂಬಳ?
ಅನ್ನೋನ್ : ನೋ .. ಟೆಲ್ ಮಿ ವೇರ್ ಆರ್ ಯು ಫ್ರಂ?
ನಾನು : ಟೆಲ್ ಮಿ ಹು ಆರ್ ಯು?
ಅನ್ನೋನ್ :ಯುವರ್ ಫ್ರೆಂಡ್ ಡಾ...
ನಾನು : ಬಟ್ ನನಗೆ ನೀನ್ಯಾರೋ ಗೊತ್ತಿಲ್ಲ ...
ಅನ್ನೋನ್ : then try to know na..
ನಾನು : ಅದರ ಅವಶ್ಯಕತೆ ನನಗಿಲ್ಲ ..
ಅನ್ನೋನ್ : ವೈ? am i so bad?
ನಾನು : ಯಾರಿಗ್ ಗೊತ್ತು
ಅನ್ನೋನ್ : god knows
ನಾನು : then send friend request to god :P
ಅನ್ನೋನ್ : what request?
ನಾನು : ಗೊತ್ತಿಲ್ಲದೇ ಇರುವವರ ಹತ್ತಿರ ಚಾಟ್ ಮಾಡೋಷ್ಟು ಪುರುಸೊತ್ತು ನನಗಿಲ್ಲ... ನೀನ್ಯಾರೆಂದು ಹೇಳು ಇಲ್ಲ ಅಂದ್ರೆ get lost.
ಅನ್ನೋನ್: I will be a very good friend for you.
ನಾನು : fine.. Be a good friend. Bye.
..........

ಅನ್ನೋನ್ : ಹಾಯ್.. ವಾಟ್ ಡೂಯಿಂಗ್? ಯು ಲುಕ್ ವೆರಿ ಸ್ಮಾರ್ಟ್ ಇನ್ ಬ್ಲೂ ಕಲರ್
ನಾನು : ಒಹ್ .. ಇಸ್ ಇಟ್? ಥ್ಯಾಂಕ್ಸ್ ಅ ಟನ್
ಅನ್ನೋನ್ : ವೆಲ್ಕಮ್ ಅ ಲಾಟ್ಸ್
ನಾನು : ಏನು? ಫ್ರೀ ನಾ ಇವತ್ತು?
ಅನ್ನೋನ್ : ಹು ಕಣೋ. ನೀನು ಬ್ಯುಸಿ ನಾ?
ನಾನು : ಹೇ.. ನಿನ್ನ ಪ್ರೀವ್ ಕಂಪ್ ಹೆಸರೇನು? [ ಈಗಿನದು ಕೇಳಿದರೆ ಸುಳ್ಳು ಹೇಳುವ ಸಾಧ್ಯತೆ ಜಾಸ್ತಿಯೆಂದು ಸ್ವಲ್ಪ ಬುದ್ದಿವಂತಿಕೆಯಿಂದ ಹಾಗೆ ಕೇಳಿದೆ]
ಅನ್ನೋನ್ : ವಾಟ್?
ನಾನು : ಪ್ರೀವಿಯಸ್ ಕಂಪನಿ?
ಅನ್ನೋನ್ : Mediscript & C Bay
ನಾನು : ಓಕೆ.
ಅನ್ನೋನ್ : ವೈ? ಟೈಪಿಂಗ್ ಕಲಿಯೋ..
ನಾನು : ಆಯಿತು ಕಲಿತೀನಿ.. ನೀನೆ ಹೇಳ್ಕೊಡು.
ಅನ್ನೋನ್ : Shore
.....................
ಅನ್ನೋನ್ : ಬ್ಯುಸಿ ನ?
ನಾನು : ಇಲ್ಲ .. ನಿನ್ನ ಇಂಗ್ಲಿಷ್ ನೋಡಿ ತಲೆ ತಿರುಗಿ ಬಂತು. [Sure  ಗೆ Shore ]
ಅನ್ನೋನ್ : ಯಾಕೆ?
ನಾನು : ಯಾವಾಗ ಮೀಟ್ ಮಾಡ್ತಿಯ?
ಅನ್ನೋನ್ : ನೀನೆ ಹೇಳು
ನಾನು : ಈಗ
ಅನ್ನೋನ್ : ದೆನ್ ಕಂ ಸೂನ್
ನಾನು : ಸೂನ್ ಯಾಕೆ?
ಅನ್ನೋನ್ : ಸುಮ್ಮನೆ
ನಾನು : ಯಮ ಭಟರು ಕಾಯ್ತಿದಾರ ನಿನ್ನ ಕರ್ಕೊಂಡು ಹೋಗಕ್ಕೆ? :P
ಅನ್ನೋನ್ : ಓಕೆ.. ಹಾಗಾದ್ರೆ ನೀನು ನನಗೆ ಸೆಂಡ್ ಆಫ್ ಕೊಡೋಕೆ ಬರ್ತೀಯ?
ನಾನು : ನನ್ನ ನೋಡಿದಮೇಲೆ  ನಿಂಗೆ ಸೆಂಡ್ ಆಫೇ
ಅನ್ನೋನ್ : ಯಾಕೆ? ಸೆಂಡ್ ಆಫ್ ಮಾಡೋಕೆ ಇಷ್ಟಾನ ?
....................
ಅನ್ನೋನ್: ಒನ್ ಮೆಸೇಜ್ ಟೈಪ್ ಮಾಡೋಕೆ ಇಷ್ಟು ಹೊತ್ತಾ?
ನಾನು : ಏನ್ ಮಾಡೋದು.. ತುಂಬಾ ಸ್ಲೋ ನಾನು.
ಅನ್ನೋನ್ : ಎಲ್ಲದರಲ್ಲೂ ಸ್ಲೋ ನಾ,,,,,
ನಾನು : ಇಲ್ಲ..
ಅನ್ನೋನ್ : ಓಕೆ.
....................
ಅನ್ನೋನ್ : ಆರ್ ಯು ದೇರ್?
ನಾನು : ವೆರಿ ಮಚ್ ಹಿಯರ್
ಅನ್ನೋನ್ : ದೆನ್ ವೈ ಸೊ ಲೇಟ್?
ನಾನು : ನಿನ್ ಹೆಸರು ಏನು?
ಅನ್ನೋನ್ : ಪ್ರಿಯ
ನಾನು : ಸುಳ್ಳು
ಅನ್ನೋನ್ : ನಿನಗೆ ಗೊತ್ತಿದ್ರೆ ನೀನೇ ಹೇಳು.
ನಾನು : ಟೈಮ್ ಬಂದಾಗ ಹೇಳ್ತೀನಿ.
ಅನ್ನೋನ್ : ಯಾವ ಟೈಮ್? ಯಮನ ಜೊತೆ ಕಳಿಸೋ ಟೈಮ????
ನಾನು : ಐಯಾಮ್ ಶ್ಯೂರ್.. ಯುವರ್ ರಿಯಲ್ ನೇಮ್ ಇಸ್ ನಾಟ್ ಪ್ರಿಯ.
ಅನ್ನೋನ್ : ದೆನ್ ಟೆಲ್ ಮೈ ನೇಮ್
ನಾನು : ಪಿಶಾಚಿ :P
ಅನ್ನೋನ್ : ಪಿಶಾಚಿನ? ಥ್ಯಾಂಕ್ಯು 
ನಾನು : ಹೌದು... ಕಾಣಿಸದೆ ಇರೋರಿಗೆ ನಾವು ಪಿಶಾಚಿ ಅಂತಾನೆ ಕರಿಯೋದು.
ಅನ್ನೋನ್ : ನನ್ನ ಫ್ರೆಂಡ್ ನೀನು ಪಿಶಾಚಿನೆ.
ನಾನು : ನಿನ್ನ ಫ್ರೆಂಡ್ ಅಂತ ಯಾರು ಹೇಳಿದ್ದು.. ಮಂಕು ಗೂಬೆ :P
ಅನ್ನೋನ್ : ಅಯ್ಯೋ ಗೂಬೆ ಹಾಗಾದ್ರೆ ನೀನು ಯಾರೋ?
ನಾನು : ನಿನ್ ಮೊಖಕ್ಕೆ ಬೆರಣಿ ತೊಟ್ಟ :P  ನಿನ್ ಫ್ರೆಂಡ್ ಅಂತು ಅಲ್ಲ :P
ಅನ್ನೋನ್ : ನಿಂಗೆ ಕರಿ ನಾಗರ ಹಾವು ಕಚ್ಚಾ
ನಾನು : ನನ್ನ ಕೈಮೇಲೆ ಗರುಡ ಮಚ್ಚೆ ಇದೆ.. ನೋ ನಾಗರ ಕ್ಯಾನ್ ಡು ಎನಿ ಥಿಂಗ್ ಫಾರ್ ಮಿ :P
ಅನ್ನೋನ್ : ಫಷ್ಟು ಸರಿಯಾಗಿ ನೋಡ್ಕೋ.. ಅದು ಗರುಡ ಮಚ್ಚೆ ಅಲ್ಲ.. ಗೂಬೆ ಮಚ್ಚೆ.
ನಾನು : ಯಾವುದಾದರೂ ನನಗೇನೂ ಮಾಡೋಕೆ ಆಗಲ್ಲ .
ಅನ್ನೋನ್ : ನಿನಗೆ ಸದ್ಯದಲ್ಲೇ H1N1 ಬರುತ್ತೆ.
ನಾನು : ನಾನ್ ಏನ್ ನಿನ್ ತರ ಹಂದಿ ತಿನ್ನಲ್ಲ :P ನಿಂಗ್ ಈಗಾಗ್ಲೇ H1N1 ಬಂದಿದೆ. ಹೋಗಿ ಚೆಕ್ ಮಾಡುಸ್ಕೋ :P
ಅನ್ನೋನ್ : ಇಲ್ಲ ಕಣೋ ಗೂಬೆ.. ಬಂದಿರೋದು ನಿಂಗೆ.. ಅದಿಕ್ಕೆ ಗೊತ್ತಾಗ್ತಿಲ್ಲ ... ನಿನಗೆ ಹಾವು ಕಚ್ಚಲ್ಲ ಆಲ್ವಾ? ಅದಿಕ್ಕೆ ಹುಚ್ಚು ನಾಯಿ ಕಚ್ಚಲಿ .....
ನಾನು : ರೇಬೀಸ್ ಕಂಡು ಹಿಡಿದ್ದದ್ದೆ ನಾನು... ಸೂರ್ಯನಿಗೇ ಟಾರ್ಚಾ? ರೈಟ್ ಹೇಳಮ್ಮ :P
ಅನ್ನೋನ್ : ಕೋಳಿಗೆ ಮೊಟ್ಟೆ ನಾ? ಹೇಳಪ್ಪ
ನಾನು : ನಿಮ್ ಅಪ್ಪ ಹೇಳುದ್ರಾ? :P
ಅನ್ನೋನ್ : ಏನಂತ?
ನಾನು : ಕೋಳಿಗೆ ಮೊಟ್ಟೆ ನಾ? ಅಂತ :P
ಅನ್ನೋನ್ : ಸೂರ್ಯನಿಗೇ ಟಾರ್ಚಾ? ಅಂತ ನಿಮ್ಮಮ್ಮ ಹೇಳುದ್ರಾ?
ನಾನು : ಹೇಳಿ ಎರಡು ಯುಗ ಕಳಿತು :P ನಿಂಗ್ ಎಲ್ ಕೇಳ್ಸತ್ತೆ? ಹೋಗಿ ಚೆಕ್ ಅಪ್ ಮಾಡುಸ್ಕೋ.. ಸರಿಯಾಗಿ ಕೇಳಿಸದಿರುವುದು ಒಂದು H1N1 ಸಿಮ್ ಟಂ :P
                                                                                             ಮುಂದುವರೆಯುವುದು ......

Tuesday, December 4, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೩


ಮೆಂತ್ಯೆ ಬೇಳೆ ಹುಳಿ ಸೊಗಸಾಗಿತ್ತು. ಸರಸು ಅತ್ತೆ ಕೈ ಅಡುಗೆನೆ ಹಾಗೆ... [ಸಂಬಂಧದಲ್ಲಿ ಅವರು ನನ್ನ ಅತ್ತೆಯಲ್ಲ. ಅವರಿಗೆ ನನ್ನ ತಾಯಿ ವಯಸ್ಸಿರಬಹುದು. ನಾನು ಬೆಂಗಳೂರಿಗೆ ಹೊಸದಾಗಿ ಬಂದಾಗ ಅವರು ತಮ್ಮನ್ನು ಸರಸ್ವತಿ ಬಾಯಿ ಎಂದು ಪರಿಚಯಿಸಿಕೊಂಡರು.  ಕರೆಯಲು ಉದ್ದ ಹಾಗು ವಯಸ್ಸಿನಲ್ಲಿ ಹಿರಿಯರಾದ ಅವರನ್ನು ನಾನು ಅತ್ತೆ ಅಂತ ಕರೆದೆ.  ಹಾಗೆ ಕರೆದ್ದಿದ್ದಕ್ಕೆ ಅವರಿಗೆ ಬೇಸರವಾಯಿತೇನೋ ಅನಿಸಿ ತಕ್ಷಣವೇ, ಕ್ಷಮಿಸಿ ಆಂಟಿ, ನಾವು ಚಿಕ್ಕಂದಿನಿಂದ ಆಂಟಿ ಅಂಕಲ್ ಅಂತ ಯಾರನ್ನೂ ಕರೆದಿಲ್ಲ. ಹಿರಿಯರಿಗೆಲ್ಲ ನಾವು ಅಣ್ಣ ಅಕ್ಕ ಅತ್ತೆ ಮಾವ ಅಂತಾನೆ ಕರೆಯೋದು. ಹಾಗಾಗಿ ನಿಮ್ಮನ್ನು ಹಾಗೆ ಕರೆದೆ. ಬೇಜಾರು ಮಾಡ್ಕೋ... ಅಯ್ಯೋ ಇಷ್ಟಿಕ್ಕೆಲ್ಲ ಬೇಜಾರ್ ಯಾಕಪ್ಪ? ಸಂಬಂಧಗಳ ಅರ್ಥಾನೆ ಗೊತ್ತಿಲ್ಲದೆ ಬದುಕುತ್ತಿರುವ ಈ ಕಾಲದಲ್ಲಿ ನೀನು ಹಾಗೆ ಕರೆದರೆ ನನಗ್ಯಾಕೆ ಬೇಜಾರ್ ಆಗತ್ತೆ ಹೇಳು? ನೀನ್ ಇನ್ಮೇಲೆ ನನ್ನ ಸರಸು ಅತ್ತೆ ಅಂತಾನೆ ಕರಿ ಅಂದಿದ್ದರು. ಆ ಹೊತ್ತಿಗೆ ಇವರಿಗೆ ವಯಸ್ಸಿಗೆ ಬಂದ  ಸಂಯುಕ್ತ ಎಂಬ ಮುದ್ದಾದ ಹೆಣ್ಣು ಮಗಳಿದ್ದಾಳೆ ಎಂದು ಸತ್ಯವಾಗಿಯೂ ನನಗೆ ತಿಳಿದಿರಲ್ಲಿಲ್ಲ.]

ಸಮಯ ೯:೩೦. ಹಾಸಿಗೆ ಹಾಸಿ ಮಲಗಲು ಅಣಿಯಾಗುತ್ತಿದ್ದೆ. ಯಾವುದೋ ಗೊತ್ತಿಲ್ಲದ (BSNL) ಸಂಖ್ಯೆಯಿಂದ ಕರೆ ಬಂತು. ನಾನು ಹಲೋ ಅಂದೆ ಅಷ್ಟೆ.. ಆ ಕಡೆಯಿಂದ ಹೆಣ್ಣು ಧ್ವನಿ. ನನ್ನ ನಂಬರ್ನು ಬ್ಲಾಕ್ ಮಾಡಬೇಡ. ನಾನು ನಿನ್ನ ಫ್ರೆಂಡ್. ನಿನಗೆ ನನ್ನ ಮೇಲೆ ನಂಬಿಕೇನೆ ಇಲ್ಲ. ಈಗ ಮನೆಗೆ ಬಂದೆ. ಅರ್ಧ ಗಂಟೆ ಟೈಮ್ ಕೊಡು..  ಮತ್ತೆ ಕಾಲ್ ಮಾಡ್ತೀನಿ. ಮಲ್ಕೊಬೇಡ ನೋಡು ಮತ್ತೆ...ನಾನು ಏನೂ ಮಾತನಾಡದ್ದಿದ್ದನ್ನು ಗಮನಿಸಿದವಳು ಓಹೋ ನಿನ್ನ ನಂಬರ್ ಹೇಗೆ ಸಿಕ್ಕಿತು ಅಂತ ಯೋಚಿಸ್ತಿದ್ಯ? ಆರ್ಕುಟ್ ಲಿ ಹಾಕಿದ್ಯ ಜ್ಞಾಪಕ ಇಲ್ವಾ? ಸರಿ ಅಮೇಲ್ ಮಾಡ್ತೀನಿ ಅಮ್ಮ ಕರಿತಿದಾರೆ ಅಂತ ಡಿಸ್ಕನೆಕ್ಟ್ ಮಾಡಿದಳು.

ಆರ್ಕುಟ್ ಅಕೌಂಟಿನ ಪ್ರೈವೆಸಿ ಸೆಟ್ಟಿಂಗ್ಸ್ ಬದಲಾಯಿಸಬೇಕೆನಿಸಿದರೂ ಈಗಾಗಲೇ ಅವಳು ನನ್ನ ಇಡೀ ಜಾತಕ ಜಾಲಾಡಿರ್ತಾಳೆ ಅನಿಸಿ ಸುಮ್ಮನಾದೆ. ಅವಳ ಧ್ವನಿ ಅಥವಾ ಅದೇ ಹೋಲಿಕೆಯದೋ.. ಎಂದೋ ಯಾವಾಗಲೋ ಕೇಳಿದೀನಿ ಅನಿಸಿ ಯಾರಿರಬಹುದು ಎಂದು ಅವಳ ಧ್ವನಿಯನ್ನು ಮನಸಿನಲ್ಲೇ ರೀವೈಂಡ್ ಮಾಡಿಕೊಂಡು ಕೇಳತೊಡಗಿದೆ. ಹದಿನೈದು ನಿಮಿಷಗಳ ಕಾಲ ದೀರ್ಘಾಲೋಚನೆಯಲ್ಲಿ ಮುಳುಗಿದ್ದ ಮನಸ್ಸು, ೩ ಜನರ ಪಟ್ಟಿಯನ್ನು ಸಿದ್ದಪಡಿಸಿತ್ತು. ಆ ಪಟ್ಟಿಯಲ್ಲಿದ್ದ ಮೊದಲ ಹೆಸರು ತಿಕ್ಲಿ, ಎರಡನೆಯದು ಸಂಗೀತ, ಮೂರನೇ ಹೆಸರು ಶೈಲಾ.

ನನ್ನ ಇಂಜಿನಿಯರಿಂಗ್ ಕೋರ್ಸಿನ ಕಡೆಯ ವರ್ಷದಲ್ಲಿ ಮೈಕ್ರೋಕಂಟ್ರೋಲರ್ ಪಾಠ ಮಾಡುತ್ತಿದ್ದ ಮೇಡಂ ತಿಕ್ಲಿ. ಅವಳ ಹೆಸರು ಸೌಮ್ಯ.. ಅವಳಾಡುತ್ತಿದ್ದ ರೀತಿ, ನಡೆಯುತ್ತಿದ್ದ ಹಾವಭಾವ, ಮಾತಾಡಿದರೆ ಮುಂಗೋಪ ಇವೆಲ್ಲ ನೋಡಿ ನಾವಿಟ್ಟಿದ್ದ ಹೆಸರು ತಿಕ್ಲಿ. ವಾರಕ್ಕೆ ನಾಕು ದಿನ ಎಂಟಕ್ಕೆ ಶುರು ಆಗ್ತಿದ್ದ ಮೊದಲ ಪೀರಿಯಡ್ ಅವಳದೇ. ಸರಿಯಾಗಿ ಎಂಟಕ್ಕೆ ಬಂದು ಬಾಗಿಲು ಮುಚ್ಚಿಬಿಡುತ್ತಿದ್ದಳು. ೮:೦೧ಕ್ಕೆ ಬಂದರೂ ಒಳ ಸೇರಿಸುತ್ತಿರಲ್ಲಿಲ್ಲ. ಸಾರಿ ಗೀರಿ ಅಂತ ಗೋಗರೆದರೆ ಒಳ ಬಿಡುತ್ತಿದ್ದರೂ ಜಪ್ಪಯ್ಯ ಅಂದರೂ ಪ್ರೆಸೆಂಟ್ ಮಾರ್ಕ್ ಹಾಕುತ್ತಿರಲ್ಲಿಲ್ಲ. ಮೂರು ವರ್ಷದಲ್ಲಿ ಒಂದು ದಿನವೂ ಸರಿಯಾದ ಸಮಯಕ್ಕೆ ಹೋಗದ ನಾವುಗಳು ಈಗ ಬೇಗ ಬರಲು ಸಾಧ್ಯವೇ ಇರಲ್ಲಿಲ್ಲ. ಒಂದು ತಿಂಗಳು ಕಳೆದರೂ ನಮ್ಮ ನಾಕೈದು ಮಂದಿಗೆ ಮೈಕ್ರೋಕಂಟ್ರೋಲರ್ ಸಬ್ಜೆಕ್ಟಿನಲಿ ಝೀರೋ ಪರ್ಸೆಂಟ್ ಅಟೆಂಡನ್ಸ್ ಇತ್ತು. ಇವಳಿಗೆ ಸರಿಯಾದ ಪಾಠ ಕಲಿಸಬೇಕೆಂದು ನಾವೆಲ್ಲಾ ಕಾಯುತ್ತಿದ್ದೆವು.

ಒಂದು ದಿನ ನಮ್ಮ ರೆಗ್ಯುಲರ್ ಸಮಯ ೮:೨೫ಕ್ಕೆ ಬಂದು ಕ್ಲಾಸಿನ ಬಾಗಿಲ್ಲಲ್ಲಿ ಇಣುಕಿದೆವು. VLSI ನ ಡ್ರಾಕುಲ ಪಾಠ ಮಾಡುತ್ತಿದ್ದಳು. [ಡ್ರಾಕುಲ ಫೇಸ್ ಕಟ್ ಇದ್ದ ಮಾನಸಾಳಿಗೆ ನಾವಿಟ್ಟಿದ್ದ ಅಡ್ಡ ಹೆಸರು]. ನಾವೆಲ್ಲಾ ಒಳ ತೂರಿದಾಗ ಸಂಗೀತ ಎದ್ದು ಬಂದು ನನ್ನ ಪಕ್ಕಕ್ಕೆ ಕೂತು, ಡಾರ್ಲಿಂಗ್ ಗೊತ್ತಾಯ್ತ ವಿಷ್ಯ ಅಂದ್ಲು. ಏನೇ ಅದು ಅಂದೆ .. ಇವತ್ತು ತಿಕ್ಲಿ ಕಾಲೇಜಿಗೆ ಬರೋದು ಲೇಟ್ ಆಯ್ತಂತೆ ಅದಿಕ್ಕೆ ಎರಡನೇ ಪೀರಿಯಡ್ ಬರಬೇಕಿದ್ದ ಡ್ರಾಕುಲ ಈಗ ಬಂದಿದೆ. ತಿಕ್ಲಿ ಡ್ರಾಕುಲಳ  ಕ್ಲಾಸ್ ತೊಗೊತಾಳಂತೆ. ಆಹಾ.. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ನಾನು, ಇವತ್ತಿದೆ ತಡಿ ಮಾಡ್ತೀನಿ ಅವ್ಳಿಗೆ ಸರಿಯಾಗಿ ಅಂತ ನನ್ನ ಗೆಳೆಯರಿಗೆ, ಇವತ್ ಅವ್ಳಿಗೆ ನಾನ್  ಬಾಗ್ಲ್ ಹಾಕ್ತೀನಿ ಅದೇಗೆ ಒಳಕ್ ಬರ್ತಾಳೋ ನೋಡ್ತೀನಿ ನೀವ್ ಏನಂತೀರ? ಅಂದೆ. ಹೇ ಹೇ ಸೂಪರ್ ಗುರು ಹಾಗೆ ಮಾಡು ನಾವು ಸಪೋರ್ಟ್ ಮಾಡ್ತೀವಿ ಅಂತ ಭರವಸೆ ಕೊಟ್ರು.

ನಾ ಹೇಳಿದಂತೆ ಮಾಡಿದೆ. ಅವಳಿಗೆ ಇದು ನಿನ್ನ ಕ್ಲಾಸ್ ಅಲ್ಲ ಸೊ ನಾನು ನಿನ್ನ ಒಳಕ್ಕೆ ಬಿಡೋಲ್ಲ.. ನಾಳೆಯಿಂದ ಸರಿಯಾದ ಟೈಮಿಗೆ ಬಂದು ಕ್ಲಾಸ್ ತೊಗೊ ಅಂತ ದಬಾಯಿಸಿದೆ. ಆ ದಿನ ಸಂಜೆಯೇ ಬಂದ ಬದಲಾದ ಟೈಮ್ ಟೇಬಲ್ ನಲ್ಲಿ ತಿಕ್ಲಿಗೆ ಎರಡನೇ ಪೀರಿಯಡ್ ನೀಡಿದ್ದರು. ಅಂದಿನಿಂದ ನನ್ನ ಮೇಲೆ ಹಗೆ ಸಾಧಿಸಲು ಶುರು ಮಾಡಿದ್ದ ತಿಕ್ಲಿ ನನ್ನನ್ನು ಒಂದಿಲ್ಲೊಂದು ಇಕ್ಕಟ್ಟಿಗೆ ಸಿಕ್ಕಿಸಬೇಕೆಂದು ಕಾಯುತ್ತಿದ್ದಳು. ಅವಳ ಬುದ್ದಿ ಅರಿತಿದ್ದ ನಾನು, ಅವಳ ಯಾವ ತಂತ್ರಗಳಿಗೂ ಸೋಲಲ್ಲಿಲ್ಲ. ಕಾಲೇಜಿನ ಕಡೆಯ ದಿನ ಆಕೆ ನನ್ನ ಬಳಿ ಬಂದು ನಿನ್ನ ಬಿಡಲ್ಲ ನೋಡ್ತಿರು ನಿಂಗೇನ್ ಮಾಡ್ತೀನಿ ಅಂತ ನನ್ನ ಕಡೆ ಅಂಗುಷ್ಠವನ್ನಾಡಿಸುತ್ತಾ ಹೋಗಿದ್ದಳು.

ಈಗಷ್ಟೇ ಫೋನಿನಲ್ಲಿ ಕೇಳಿದ ಧ್ವನಿ ತಿಕ್ಲಿಯ ಧ್ವನಿ ತರಾನೆ ಇತ್ತು. ಅವಳೇನಾ ಈ ಕೆಲಸ ಮಾಡ್ತಿರೋದು? ಅಂತ ಯೋಚಿಸುತ್ತಿರುವಾಗಲೇ, ನಾಕು ದಿನದ ಹಿಂದಷ್ಟೇ ಗೆಳೆಯ ಸಂತು ಹೇಳಿದ್ದ [" ಲೇ ತಿಕ್ಲಿಗೆ ಮದ್ವೆ ಆಯ್ತಂತೆ.. ಹೋದವಾರ ಅಷ್ಟೇ ಅಮೆರಿಕಗೆ ಹೋದಳಂತೆ. ನನ್ನ ಚಿಕ್ಕಮ್ಮ ಹೇಳುದ್ರು "] ಮಾತು ನೆನಪಾಗಿ,  ಅವಳಲ್ಲ ಸದ್ಯ. ಉಫ್ ಅಂತ ನಿಟ್ಟುಸಿರು ಬಿಟ್ಟೆ.

ಎಂಟನೆ ಸೆಮಿಸ್ಟರ್ ರಿಸಲ್ಟ್ ಬಂದ ದಿನ ಐ ಲವ್ ಯು ಅಂತ ಹೇಳಿ ನನ್ನ ಬೆಚ್ಚಿ ಬೀಳಿಸಿದ್ದ ಸಂಗೀತ ಏನಾದರೂ ಆಟವಾಡಲು ಈ ರೀತಿ ಮಾಡ್ತಿದಾಳ ಅನಿಸಿ ಏಕಕಾಲಕ್ಕೆ ಸಂಗೀತಾಳಿಗೂ ಹಾಗು ಇನ್ನೊಂದು ಮೊಬೈಲಿಂದ ಈ ಅನ್ನೋನಿಗೂ ಕರೆ ಮಾಡಿ, ಎರಡು ಕಿವಿಯಲ್ಲೂ ಒಂದೊಂದು ಫೋನ್ ಇಟ್ಟುಕೊಂಡೆ. ಮೂರನೇ ರಿಂಗಿಗೆ ರಿಸೀವ್ ಮಾಡಿದ ಸಂಗೀತ - ಏ ಗೂಬೆ ಯಾಕೋ ಇಷ್ಟೊತ್ತಲ್ಲಿ ಕಾಲ್ ಮಾಡಿದ್ಯ? ಆಯ್ತಾ ಊಟ? .. ಅವಳ ಧ್ವನಿ ಕಡೆಗೆ ಲಕ್ಷ್ಯ ಇಟ್ಟಿದ್ದ ನಾನು ಏನೂ ಮಾತಾಡದ್ದಿದ್ದಾಗ, ಏನಾಯ್ತೋ? ಅಂತ ಜೋರಾಗಿ ಕಿರುಚಿದಳು. ಎಚ್ಚೆತ್ತ ನಾನು - ಏನಿಲ್ಲ ಸುಮ್ನೆ ಮಾಡ್ದೆ. ಹು ಊಟ ಆಯ್ತು. ನಿಂದು? ಆ ಅನ್ನೋನ್ ನ ಮೊಬೈಲ್ ಇನ್ನು ರಿಂಗ್ ಆಗುತ್ತಿತ್ತು.  ಸಂಗೀತ - ನಂದು ಊಟ ಆಯ್ತು.. ನಿದ್ದೆ ಬರ್ತಿದೆ.. ಮಲ್ಕೊಬೇಕು ನಾಳೆ ಮಾಡ್ತೀನಿ ಗು.. ಅಂತ ಹೇಳೋಷ್ಟರಲ್ಲಿ ನಾನು ತಡ್ಯೆ ಅನ್ನಕ್ಕು ಈ ಅನ್ನೋನ್ ಕಾಲ್ ರಿಸೀವ್ ಮಾಡಕ್ಕು ಸರಿ ಹೊಂದಿತು.
ಅನ್ನೋನ್ - ನಾನೇ ಕಾಲ್ ಮಾಡ್ತೀನಿ ಅಂದ್ರು ನೀನೆ ಯಾಕೋ ಮಾಡ್ದೆ?
ಸಂಗೀತ - ಯಾಕೋ.. ನಂಗೆ ನಿದ್ದೆ ಬರ್ತಿದೆ. ನಾಳೆ ಮಾತಾಡೋಣ
ನಾನು - ಸರಿ
ಸಂಗೀತ - ಗುಡ್ ನೈಟ್. ಟೇಕ್ ಕೇರ್
ಅನ್ನೋನ್ - ಓಕೆ. ಟೆನ್ ಮಿನಿಟ್ಸ್....  ಮಾಡ್ತೀನಿ. ಬೈ.

ಅಬ್ಬಾ.. ಸಂಗೀತಾನು ಅಲ್ಲ.. ಇನ್ನ ನನ್ನ ಸಂಶಯ ಏನಿದ್ದರೂ ಶೈಲಾ ಮೇಲೆಯೇ. ಅದು ಪರಿಹಾರ ಆಗಬೇಕೆಂದರೆ ಹತ್ತಿರದಲ್ಲೇ ಇದ್ದ ಗೆಳೆಯ ಕಿಟ್ಟಿ ಮನೆಗೆ ಹೋಗಬೇಕು. ತಕ್ಷಣವೇ ಮನೆ ಬೀಗ ಹಾಕಿ ಗಾಡಿ ಹೊರ ತೆಗೆದೆ. ಸಂಯುಕ್ತ ಹೊರ ಬಂದು ಎಲ್ಲಿಗೆ ಅಂತ ಕೈ ಸನ್ನೆ ಮಾಡಿದರೂ ಆಮೇಲೆ ಹೇಳ್ತೀನಿ ಅಂತ ಸನ್ನೆ ಮಾಡಿ ಗಾಡಿ ಏರಿದೆ. ಉದಯ ಭಾನು ಕಲಾ ಸಂಘದ ಹತ್ತಿರದಲ್ಲೇ ಇದ್ದ ಕಿಟ್ಟಿ ಮನೆ ಕಡೆ ಗಾಡಿ ಓಡಿಸಿದೆ. ಶೈಲಾ ತೀರ ಇತ್ತೀಚಿನವರೆಗೂ ನಮ್ಮಲ್ಲೇ ಕೆಲಸ ಮಾಡುತ್ತಿದ್ದಳು.
ನನ್ನ ಟೀಮಿನಲಿ ಒಂದು ಓಪನಿಂಗ್ ಇದ್ದಾಗ ಆ ಜಾಗಕ್ಕೆ ಹುಡುಗಿಯನ್ನೇ ತರಬೇಕೆಂದು ನನ್ನ ಟೀಂ ಮೇಟ್ಸ್ ಟೀಂ ಲೀಡ್ ಆಗಿದ್ದ ನನಗೆ ಒತ್ತಡ ಹಾಕಿದ್ದರು. ೩-೪ ಹುಡುಗಿಯರ ಪ್ರೊಫೈಲ್ ಗಳನ್ನು HR ಕಳುಹಿಸಿದ್ದರೂ ಅವರ್ಯಾರೂ ಇಂಟರ್ವ್ಯೂ ಕ್ಲಿಯರ್ ಮಾಡಲ್ಲಿಲ್ಲ.

ಅದೇ ಸಮಯದಲ್ಲಿ ಗೆಳೆಯ ಕಿಟ್ಟಿ ರೆಫರ್ ಮಾಡಿದ ಹುಡುಗಿಯೇ ಶೈಲಾ. ನೋಡಲು ಸುಂದರವಾಗಿದ್ದರೂ ತಲೆಯಲ್ಲಿ ಬುದ್ದಿ ಅಷ್ಟೇನೂ ಇರಲ್ಲಿಲ್ಲ. ಕಿಟ್ಟಿಯ ಗೆಳತಿ ಹಾಗು ಅವಳ ಮನೆಯ ಪರಿಸ್ಥಿತಿ ನೋಡಿ ನಾನೇ ಸೆಲೆಕ್ಟ್ ಮಾಡಿದ್ದೆ. ಹುಡುಗಿ ಹೇಗೋ ಆಮೇಲೆ ಕಿರಿಕ್ ಆಗಬಾರದೆಂದು ಮುನ್ನೆಚ್ಚೆರಿಕೆ ವಹಿಸಿ ೩ ತಿಂಗಳು ಟ್ರೈನಿ ನಂತರ ಪರ್ಫಾರ್ಮೆನ್ಸ್ ನೋಡಿ ಪರ್ಮನೆಂಟ್ ಮಾಡ್ತೀವಿ ಅಂತ ಹೇಳಿ ಆಫರ್  ಲೆಟರ್ ಕೊಡಿಸಿದ್ದೆ. ನೋಡನೋಡುತ್ತಿದ್ದಂತೆ ೩ ತಿಂಗಳು ಕಳೆಯಿತು. ತನ್ನ ವಯ್ಯಾರದಿಂದ ಎಲ್ಲರನ್ನ ಬುಟ್ಟಿಗೆ ಹಾಕಿಕೊಂಡಿದ್ದ ಶೈಲಾ, ತನ್ನ ಕೆಲಸವನ್ನು ಬೇರೆಯವರ ಕೈಲಿ ಮಾಡಿಸಿಕೊಳ್ಳುವುದರಲ್ಲಿ ನಿಪುಣೆಯಾಗಿಬಿಟ್ಟಿದ್ದಳೆ ವಿನಃ ತಾನು ಸ್ವತಃ ಏನನ್ನೂ ಕಲಿತಿರಲ್ಲಿಲ್ಲ. ಹಾಗಾಗಿ ನಾನು ಅವಳ ಟ್ರೈನಿಂಗ್ ಪೀರಿಯಡ್ ಅನ್ನು ಇನ್ನು ಮೂರು ತಿಂಗಳ ಕಾಲ ವಿಸ್ತರಿಸಿದೆ. ಇದನ್ನು ಸಹಿಸದ ಅವಳು ನನ್ನ ವಿರುದ್ದವೇ ತಿರುಗಿಬಿದ್ದಳು. ಎಲ್ಲರ ಹತ್ತಿರ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರುವಂತೆ ಮಾತಾಡಲು ಶುರು ಮಾಡಿದ್ದಳು. ಕೇವಲ ೩ ತಿಂಗಳಲ್ಲಿ ತಾನು ಎಲ್ಲರ ವಿಶ್ವಾಸ ಗಳಿಸಿದ್ದೀನಿ ನನ್ನ ಮಾತನ್ನು ಎಲ್ಲರೂ ನಂಬುತ್ತಾರೆ ಅನ್ನೋ ಅಹಂ ಭಾವ ತುಂಬಿಕೊಂಡು ನನ್ನ ವಿರುದ್ದ ಹಗೆ ಬೆಳಿಸಿಕೊಂಡಳು.  ಮೂರು ವರ್ಷದಿಂದ ನನ್ನ ಕೆಳಗೆ ಕೆಲಸ ಮಾಡುತ್ತಿದ್ದ ಹುಡುಗರಿಗೆ ನಾನು ಎಂತವನೆಂದು ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಶೈಲಾ ಅವರುಗಳ ಬಳಿ ಆಡುತ್ತಿದ್ದ ಒಂದೊಂದು ಮಾತು ನನಗೆ ತಲುಪುತ್ತಿತ್ತು. ೨-೩ ಬಾರಿ ಕರೆದು ಅವಳಿಗೆ ಬುದ್ದಿ ಹೇಳಿದರೂ ಪ್ರಯೋಜನವಾಗಲ್ಲಿಲ್ಲ. ೩ ತಿಂಗಳು ಕಳೆಯುವುದರೊಳಗೆ ನನ್ನ ಸಹನೆಯೂ ಮೀರಿತ್ತು. ಹಾಗಾಗಿ ಅವಳನ್ನು ಕಂಪನಿಯಿಂದ ಫೈರ್ ಮಾಡಲು ಮ್ಯಾನೆಜ್ ಮೆಂಟಿಗೆ ಶಿಫಾರಸ್ಸು ಮಾಡಿ ಅವಳನ್ನು ಕೆಲಸದಿಂದ ತೆಗೆಸಿ ಹಾಕಿದೆ. ತನ್ನ ಕೆಲಸದ ಕಡೆಯ ದಿನ ನನ್ನ ಟೇಬಲ್ ಗೆ  ಬಂದು ನಿನ್ನ ನೋಡ್ಕೋತೀನಿ ಅಂತ ಹೇಳಿದ್ದಳು.

ಕಿಟ್ಟಿ ಆಗ ತಾನೇ ಊಟ ಮುಗಿಸಿ ಕಾಂಪೌಂಡ್ ನಲ್ಲಿ ಬಂದು ನಿಂತಿದ್ದವ ನನ್ನ ನೋಡಿದ ಕೂಡಲೇ ಏನ್ಲಾ ಈ ಕಡೆ ಇಷ್ಟೊತ್ತಿಗೆ? ಅಂದ. ನಿನ್ನೆ ನೋಡಕ್ಕೆ ಬಂದೆ ಒಂದ್ ಹೆಲ್ಪ್ ಆಗಬೇಕಿತ್ತು ಅಂದೇ.ಏನೋ ಅದು ಬಾ ಒಳಗೆ ಅಂತ ಅವನ ರೂಮಿಗೆ ನಡೆದೆವು. ನನ್ನ ಮೊಬೈಲ್ ನೋಡಿದರೆ ಆ ಅನ್ನೋನ್ ಇಂದ ಮಿಸ್ಡ್ ಕಾಲ್ ಇತ್ತು. ಇದೆ ಸರಿಯಾದ ಸಮಯವೆಂದು ಭಾವಿಸಿ, ಕಿಟ್ಟಿಗೆ ನೀನು ಈಗಲೇ ಶೈಲಾಳಿಗೆ ಕಾಲ್ ಮಾಡೆಂದು ಹೇಳಿ ನಾನು ಅನ್ನೋನ್ ನಿಗೆ ಕಾಲ್ ಮಾಡಿದೆ. ಶೈಲಾ ರಿಸೀವ್ ಮಾಡುತ್ತಿದ್ದಂತೆ ಸ್ಪೀಕರ್ ಆನ್ ಮಾಡುವಂತೆ ಕಿಟ್ಟಿಗೆ ಹೇಳಿದೆ. ಇಬ್ಬರೂ ಒಟ್ಟಿಗೆ ರಿಸೀವ್ ಮಾಡಿದರು. ಇಬ್ಬರ ಧ್ವನಿಯೂ ಆಲ್ಮೋಸ್ಟ್ ಸೇಮ್.. ಆದರೆ ಅವರು ಬೇರೆ ಬೇರೆ. ಕಿಟ್ಟಿಗೆ ನಡೆದ್ದದ್ದನ್ನು ತಿಳಿಸಿ ಗುಡ್ ನೈಟ್ ಹೇಳಿ ಮನೆಗೆ ಬಂದೆ.

ಅನ್ನೋನ್ ಮತ್ತೆ ಕಾಲ್ ಮಾಡಿ ಆಗ್ಲೇ ಯಾಕೋ ಕಟ್ ಮಾಡಿದೆ? ಅಂತ ಕೇಳುತ್ತಿದ್ದಳು.
ನಾನು - ನನಗೆ ನಿದ್ದೆ ಬರ್ತಿದೆ ಮಲ್ಕೊಬೇಕು ದಯವಿಟ್ಟು ಕಾಟ ಕೊಡಬೇಡ ಫೋನ್ ಇಡು.
ಅನ್ನೋನ್ - ನಾನು ನಿನ್ ಜೊತೆ ಮಾತಾಡಬೇಕು.
ನಾನು - ನೀನ್ಯಾರಂತಾನೆ ನಂಗೊತ್ತಿಲ್ಲ ನಿನ್ ಜೊತೆ ನಂ ಮಾತೇನು ಇಲ್ಲ.
ಅನ್ನೋನ್ - ನಾನು ನಿನ್ನ ಫ್ರೆಂಡ್.
ನಾನು - ಸರಿ. ನಾಳೆ ಚಾಟ್ ಮಾಡೋಣ.
ನನ್ನ ಮೊಬೈಲ್ ನಂಬರ್ ಸಿಕ್ಕಿರುವಾಗ ಚಾಟ್ ಲಿ ಬ್ಲಾಕ್ ಮಾಡಿದರೆ, ಅದರಿಂದ ನನಗೆ ಕಿರಿಕಿರಿ ಜಾಸ್ತಿ ಆಗುತ್ತೆ ಅನಿಸಿ ಅನ್ ಬ್ಲಾಕ್ ಮಾಡಲು ತೀರ್ಮಾನಿಸಿದ್ದೆ.
ಅನ್ನೋನ್ - ಚಾಟ್ ಬ್ಲಾಕ್ ಮಾಡಿದ್ಯಲ? ಒಳ್ಳೇದೆ ಆಯಿತು. ಡೈರೆಕ್ಟ್ ಆಗಿ ಫೋನಲ್ಲೇ ಮಾತಾಡಬಹುದು.
ನಾನು - ಇಲ್ಲ ಇಲ್ಲ .. ನಾಳೆ ಅನ್ ಬ್ಲಾಕ್ ಮಾಡ್ತೀನಿ. ಅಲ್ಲೇ ಚಾಟ್ ಮಾಡು. ಕಾಲ್ ಮಾಡ್ಬೇಡ.
ಅನ್ನೋನ್ - ಗುಡ್ ಬಾಯ್. ನಾಳೆ ೨ ಗಂಟೆಗೆ ಆನ್ಲೈನ್ ಬರ್ತೀನಿ. ಅನ್ ಬ್ಲಾಕ್ ಆಗಿಲ್ಲ ಅಂದ್ರೆ ಮತ್ತೆ ಕಾಲ್ ಮಾಡ್ತೀನಿ.
ನಾನು - ಸರಿ ಸರಿ. ಗುಡ್ ನೈಟ್
ಅನ್ನೋನ್ - ಗುಡ್ ನೈಟ್. ಸ್ವೀಟ್ ಡ್ರೀಮ್ಸ್

ಗಂಟಲು ಕೆರೆತದ ಜೊತೆಗೆ ಸ್ವಲ್ಪ ಮೈ ಕೈ ನೋವು ಇತ್ತು. ಒಂದು ವಿಕೊರಿಲ್ ಮಾತ್ರೆ ನುಂಗಿ ಮಲಗಿದೆ. ಮಾತ್ರೆಯ ಪ್ರಭಾವಕ್ಕೆ ರಾತ್ರಿ ನಿದ್ದೆ ಬಂದಿತ್ತು. ನಾನು ಅವಳ ಮೊಬೈಲ್ ನಂಬರ್ನ ಬ್ಲಾಕ್ ಮಾಡಬಹುದಿತ್ತು.
ಆದರೂ ನಾನ್ಯಾಕೋ ಅವಳ ನಂಬರ್ನ ಬ್ಲಾಕ್ ಲಿಸ್ಟಿನಲಿ ಸೇರಿಸುವ ಕೆಲಸ ಮಾಡಲ್ಲಿಲ್ಲ ಬದಲಾಗಿ ಆ ನಂಬರ್ನ Unknown ಅಂತ ಸೇವ್ ಮಾಡಿಕೊಂಡೆ ಹಾಗು ಅವಳ ಇಮೇಲ್ ID  ಸಹ Unknown ಎಂದು ಬದಲಾಯಿಸಿಕೊಳ್ಳಲು ತೀರ್ಮಾನಿಸಿದೆ. 

Monday, December 3, 2012

ಜೀಟಾಕ್ ಗೆಳತಿ : ಬದುಕಿ ಬಂದಾಗ - ಭಾಗ ೨


ತಲೆ ಆಡಿಸುತ್ತಾ ಆಡಿಸುತ್ತಾ SJR ಕಾಲೇಜ್ ಸಿಗ್ನಲ್ ಬಳಿ ಜೋರಾಗಿ ಕ್ರಮಿಸುತ್ತಿದ್ದೆ. ಹಾಗೆ ನುಗ್ಗುತ್ತಿದ್ದಾಗ ಯಾವುದೊ ಹುಡುಗಿ ಕೈ ಅಡ್ಡ ಹಿಡಿದಳು. ಆಗಲೇ ನಾನು ಎಚ್ಚರಗೊಂಡಿದ್ದು. ಗಾಡಿ ನಿಲ್ಲಿಸಿದಾಕ್ಷಣ ಏರಲು ಬಂದ ಹುಡುಗಿಯನ್ನು ತಡೆದು ಬೃಂದಾನ ನೀವು? ಅಂದೆ. ಹು ನಾನೇ ಬೃಂದಾ ನಡಿ ಈಗ ಎಂದು ತಲೆ ಚಚ್ಚಿಕೊಳ್ಳುತ್ತಾ ಹಿಂದೆ ಕೂತಳು. ಬೃಂದಾಳ  ಜೊತೆ ದಿನಗಟ್ಟಲೆ ಹರಟಿದ್ದರೂ (ಚಾಟಿನಲ್ಲೂ ಫೋನಿನಲ್ಲೂ) ನಾನು ಆಗಲೇ ಅವಳನ್ನು ಮೊದಲ ಬಾರಿ ನೋಡಿದ್ದು.

೫ ಅಡಿ ೬ ಇಂಚಿರಬಹುದಾದ ಕಾಯ. ಬಳಕುವ ಸೊಂಟ, ದೇಹಕ್ಕೆ ಒಪ್ಪುವ ತಬ್ಬು ಉಬ್ಬುಗಳು. ತೀಕ್ಷ್ಣವಾದ ನೀಲಿ ಕಣ್ಣುಗಳು. ಇಷ್ಟು ನೋಡುವಷ್ಟರಲ್ಲಿ ಅವಳು ಹಿಂದೆ ಕೂತುಬಿಟ್ಟಳು. ನೀನಾ ಈಗ ನನ್ನನ್ನು ನೀವು ಅಂದಿದ್ದು ಅಂತ ಪ್ರಶ್ನಿಸಿ ಸಿಗ್ನಲ್ ನಲ್ಲಿ ಬಲಕ್ಕೆ ತಿರುಗಿಸುವಂತೆ ಹೇಳಿದಳು. ಗಾಡಿ ಬಲಕ್ಕೆ ತಿರುಗಿಸಿ ಮೌನವಾಗಿ ಮುನ್ನಡೆಸುತ್ತಿದ್ದೆ. ಯಾಕೋ ಹುಡ್ಗ ತುಂಬಾ ಸೈಲೆಂಟ್ ಆಗ್ಬಿಟ್ಟಿರೋ ಹಾಗಿದೆ ಏನ್ ವಿಷ್ಯ ಅಂದ್ಲು ಬೃಂದಾ. ನಾನು ಏನೂ ಇಲ್ಲವೆಂಬಂತೆ ಸುಮ್ಮನೆ ತಲೆಯಾಡಿಸಿದೆ. ಏನೇ ಟ್ರಾಫಿಕ್ ಇಲ್ಲದಿದ್ದರೂ ಕೇವಲ ಹತ್ತು ನಿಮಿಷದಲ್ಲಿ ಹನುಮಂತ ನಗರದಿಂದ ರಾಜಾಜಿ ನಗರಕ್ಕೆ ಬಂದಿದ್ಯ ಅಂದ್ರೆ ಪ್ರಿಯಾಳನ್ನು ನೋಡೋ ತವಕ ನಿನಗೆಷ್ಟಿದೆ ಗೊತ್ತಾಗ್ತಿದೆ ಅಂತ ಕಿಚಾಯಿಸುತ್ತಾ ಭುಜಕ್ಕೆ ಜಿಗುಟಿದಳು.

ಸುಗುಣ ಡಯಾಗ್ನೋಷ್ಟಿಕ್ಸ್ ಬಳಿ ಬಂದೊಡನೆ ಮುಂದೆ ಬರುವ ಬಲ ತಿರುವಿನಲ್ಲಿ ಹೋಗಲು ಸೂಚಿಸಿದಳು. ಬಲ ತಿರುಗಿ ಸ್ವಲ್ಪ ಚಲಿಸಿ ಎಡ ತಿರುಗಿ ಮತ್ತೆ ಬಲ ತಿರುಗಿದಾಗ ಗಾಡಿ ವಿಶಾಲವಾದ ಬಂಗಲೆಯ ಮುಂದೆ ನಿಂತಿತ್ತು. ಬಂಗ್ಲೆಯ ಕಾಂಪೌಂಡ್ ಗೇಟಿನ ಎರಡು ಬದಿಯಲ್ಲಿ ಬಂದೂಕು ಹಿಡಿದು ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳು ನಿಂತಿದ್ದರು. ಗಾಡಿ ಇಳಿದು ಅತ್ತಿತ್ತ ನೋಡುತ್ತಿದ್ದ ನನ್ನನ್ನ ಆಗಲೇ ನಾಕಾರು ಹೆಜ್ಜೆ ಮುಂದೆ ಹೋಗಿದ್ದ ಬೃಂದಾ ತಿರುಗಿ ಬಂದು ಕೈ ಹಿಡಿದು ಬಂಗಲೆ ಕಡೆಗೆ ಎಳೆದೊಯ್ದಳು. ಬೃಂದಾಳನ್ನು ನೋಡುತ್ತಲೇ ಸಲ್ಯೂಟ್ ಹೊಡೆದ ಸೆಕ್ಯೂರಿಟಿ ಗಾರ್ಡ್ ಗಳು ನನ್ನನ್ನೇ ತಲೆಯಿಂದ ಕಾಲಿನವರೆಗೂ ದಿಟ್ಟಿಸಿ ನೋಡುತ್ತಿದ್ದರು. ಬೃಂದಾ ಅವರಿಗೆ ಏನೋ ಹೇಳಿದ ತಕ್ಷಣ ಅವರಿಬ್ಬರೂ ನನಗೂ ಸಲ್ಯೂಟ್ ಮಾಡಿದರು. ನಾನು ಅವರಿಗೆ ತಿರುಗಿ ಸಲ್ಯೂಟ್ ಮಾಡಲು ಕೈ ಎತ್ತಿದಾಕ್ಷಣ ಬೃಂದಾ ನನ್ನ ಕೈ ಹಿಡಿದು ಓಹ್  ನೀನ್ ಏನ್ ಚಿಕ್ ಮಗುನಾ ಸದಾ ಕೈ ಹಿಡ್ಕೊಂಡಿರಕ್ಕೆ ಅಂತ ಎಳೆದುಕೊಂಡು ನಡೆದಳು. ನಾನು ನನ್ನ ಕೈ ಬಿಡಿಸಿಕೊಳ್ಳಲು ಮಾಡಿದ ಪ್ರಯತ್ನ ವಿಫಲವಾಯಿತು.

ಲಾನ್ ದಾಟಿ ಬಂಗಲೆಯ ಒಳಕ್ಕೆ ಬಂದರೂ ಯಾವ ನರಪಿಳ್ಳೆನೂ ಕಾಣಲ್ಲಿಲ್ಲ. ಬೃಂದಾಳೂ ಗಾಬರಿಗೊಂಡಂತೆ ಕಂಡುಬಂದರೂ ಅದನ್ನು ತೋರ್ಪಡಿಸದೆ ನನ್ನನ್ನು ಅಲ್ಲೇ ಸೋಫಾ ಮೇಲೆ ಕೂಡಿಸಿ ಒಳ ಹೋದಳು. ಎರಡು ನಿಮಿಷವಾದರೂ ಅವಳು ಬರದ್ದಿದ್ದನ್ನು ನೋಡಿ ನಾನು ಅವಳೋದ ದಾರಿಯಲ್ಲೇ ನಡೆದೆ. ಅಡುಗೆ ಮನೆಯ ಬಾಗಿಲಿನ ಹತ್ತಿರ ಬೃಂದಾ ನಡು ವಯಸ್ಸಿನ ಮಹಿಳೆಯೊಂದಿಗೆ ಮಾತಾಡುತ್ತಿದ್ದುದು ಕಾಣಿಸಿದರೂ ಏನು ಮಾತಾಡುತ್ತಿದ್ದರೋ  ಗೊತ್ತಾಗಲ್ಲಿಲ್ಲ. ಇನ್ನೂ ಹತ್ತಿರ ಹೋದಾಗ ಏರ್ಪೋರ್ಟ್ ಅಂತ ಹೇಳಿದ್ದು ಮಾತ್ರ ಕೇಳಿಸಿತು. ಬೃಂದಾ ಆ ಹೆಂಗಸಿಗೆ ಏನೋ ಹೇಳಿ ಅಡುಗೆ ಮನೆಯಿಂದ ಆಚೆ ಬಂದಳು. ನಡೆ ಹೋಗೋಣ ಅನ್ನುತ್ತಾ ಮಹಡಿಯ ಮೇಲಿನ ಒಂದು ಕೋಣೆ ಕಡೆ ಕೈ ತೋರಿಸುತ್ತಾ ನೋಡೋ ಅದೇ .... ಅಂತ ಏನೋ ಹೇಳಲು ಹೊರಟವಳು ಈಗ ಬೇಡ ಆಮೇಲೆ ಹೇಳ್ತೀನಿ ಇಲ್ಲ ನಿಂಗೆ ಗೊತ್ತಾಗತ್ತೆ ಬಿಡು ಎಂದಳು.
ನಡು ಮನೆಗೆ ಬಂದಾಗ ವ್ಯಾನಟಿ ಬ್ಯಾಗಿಂದ ಐದುನೂರರ ನೋಟು ತೆಗೆದು ನನ್ನ ಕೈಲಿಡುತ್ತಾ ಗಾಡಿಗೆ ಹತ್ತಿರದಲ್ಲಿ ಎಲ್ಲಿಯಾದರೂ ಪೆಟ್ರೋಲ್ ತುಂಬಿಸಿಕೊ ಈಗ ಏರ್ಪೋರ್ಟ್ ಗೆ ಹೋಗಬೇಕು ಎಂದಳು.

ನಾನು ತಟಸ್ಥನಾಗಿ ನಿನಗೇನೂ ತಲೆ ಕೆಟ್ಟಿದ್ಯ? ಅಲ್ಲಿ ತನಕ ಗಾಡಿ ಓಡಿಸಲು ಈಗ ನನ್ನಿಂದ ಸಾಧ್ಯ ಇಲ್ಲ. ಏನ್ ಅಂದ್ಕೊಡಿದ್ಯ
ನನ್ನ .... ಹೇಯ್ ಚಿಲ್ ಮ್ಯಾನ್ .. ಡೋಂಟ್ ವರಿ... ಓಡಿಸೋದಿಕ್ಕೆ ಆಗೋಲ್ಲ ಅಷ್ಟೆ ತಾನೇ? ಎಂದವಳೇ ಯಾರಿಗೋ ಡಯಲ್ ಮಾಡಿ ಸಾರಿ ಅಂಕಲ್ ಸ್ವಲ್ಪ ಲೇಟ್ ಆಯಿತು ಏನ್ ಮಾಡೋದು ಈಗ ಅಂತ ಕೇಳುತ್ತಿದ್ದಳು. ಆ ಕಡೆ ಧ್ವನಿ ಕೇಳಿಸಲ್ಲಿಲ್ಲ. ಬೃಂದಾ ಪ್ರಶ್ನಾರ್ಥಕವಾಗಿ ಮುಖಮಾಡಿ ಮ್ಯಾಟಿನ? ಅಂಕಲ್  ನೀವ್ ತೊಗೊಂಡು ಹೋಗಿಲ್ವಾ? ಅಂದಳು.
ಆ ಕಡೆ ಧ್ವನಿ ಕೇಳಿಸಿಕೊಳ್ಳಲು ಬೃಂದಾಳ ಕಿವಿಗೆ ನನ್ನ ಕಿವಿ ತಾಗಿಸಿದೆ.. ಇಲ್ಲ ನಾವು ಫಾರ್ಚಿಲಿ ಹೊರಟಿದ್ದೀವಿ. ಡ್ರೈವರ್ ರಂಗಣ್ಣನಿಗೆ ಹೇಳ್ತೀನಿ. ಇನ್ನ ಹತ್ತ್ ನಿಮಿಷಕ್ಕೆ ಅಲ್ಲಿರ್ತಾನೆ. ನೀವು ಮ್ಯಾಟಿಲೇ  ಬನ್ನಿ. ಓಕೆ ಥ್ಯಾಂಕ್ಯು ಅಂಕಲ್ ಅಂದ ಬೃಂದಾ ನನ್ನ ಕೆನ್ನೆ ಹಿಂಡುತ್ತಾ  Benz ಕಾರ್ ಏರಲು ಸಿದ್ದರಾಗಿ ಗುರುಗಳೇ ಎಂದು ಹಾಸ್ಯ ಮಾಡಿದಳು.

ಸೋಫಾ ಮೇಲೆ ಕುಳಿತು ಸುತ್ತಾ ಮುತ್ತಾ ಕಣ್ಣಾಡಿಸುತ್ತಿದ್ದೆ. ಗೋಡೆಗೆ ನೇತಾಗಿದ್ದ ಡಿಜಿಟಲ್ ಗಡಿಯಾರ ಕೆ೦ಪು ಬಣ್ಣದಲ್ಲಿ ೪:೪೦ ತೋರಿಸುತ್ತಿತ್ತು. ಎರಡು ನಿಮಿಷದಲ್ಲೇ ಘಮ ಘಮ ಪರಿಮಳ ಬೀರುತ್ತಿರುವ ಫಿಲ್ಟೆರ್ ಕಾಫಿ ಬ೦ತು. ಒ೦ದು ಗುಟುಕು ಕಾಫಿ ಹೀರುತ್ತಿದ್ದ೦ತೆ ಮನಸಿಗೆ ಆಹ್ಲಾದದ ಜೊತೆಗೆ ಹಿ೦ದೆ೦ದೊ ನನ್ನ ಮೊಬೈಲಿಗೆ ಉದ್ದ ನ೦ಬರಿನಿ೦ದ ಬ೦ದಿದ್ದ ಕರೆಯೊ೦ದರ ನೆನೆಪು ಬ೦ದ೦ತೆ ಭಾಸವಾಯಿತು. ಮಿ೦ಚು ಹುಳದ ಮಿ೦ಚಿನ೦ತೆ ಬಡಿದು ಹೊರಟೋದ ಆ ವಿಷಯವನ್ನು ಕಣ್ಣು ಮುಚ್ಚಿ ನೆನಪಿಸಿಕೊಳ್ಳವ ನನ್ನ ಶತಾಯ ಗತಾಯ ಪ್ರಯತ್ನಕ್ಕೆ ಬೃ೦ದಾ ಅಡ್ಡಿಪಡಿಸಿದಳು. ಏ ಕಣ್ಣು ಬಿಡೊ.. ಕಾಫಿ ಕಪ್ ಕೈಲಿ ಹಿಡಿದು ನಿದ್ದೆನಾ? ನೋಡಿಲ್ಲಿ ಅ೦ತ ತಲೆ ಸವರುತ್ತಾ ಎದುರಿಗೆ ನಿ೦ತಿದ್ದ ೩-೪ ಜನರ ಪರಿಚಯ ಮಾಡಿಸಿದಳು. ಅವರೆಲ್ಲಾ ಆ ಬ೦ಗಲೆಯ ಕೆಲಸದಾಳುಗಳು. ನೀವುಗಳು ಕೂಡ ಕಾಫಿ ಕುಡಿಯಿರಿ ಎ೦ದು ಹೇಳಿದೆ. ಅವರೆಲ್ಲಾ ತಲೆ ತಗ್ಗಿಸಿಕೊ೦ಡು ಒಬ್ಬಬ್ಬರೆ ಜಾಗ ಖಾಲಿ ಮಾಡಿದರು. 

ನನಗೇನೋ ವಿಚಿತ್ರವೆನಿಸಿತು. ಕಾಫಿ ಕಪ್ ಟೀಪಾಯಿ ಮೇಲಿಟ್ಟು ಎದ್ದು ನಿ೦ತೆ. ಅತ್ತ ಕಡೆ ಹೋಗುತ್ತಿದ್ದ ಅಡುಗೆ ಕೆಲಸದವಳು ಇದ್ದಕ್ಕಿದ್ದ೦ತೆ ತಿರುಗಿ ಓಡಿಬ೦ದು ನನ್ನ ಕಾಲು ಹಿಡಿದುಬಿಟ್ಟಳು. ನಾನು ಗಾಬರಿಗೊ೦ಡು ಭಯಗ್ರಸ್ತನಾಗಿ ಬಿಡಿ ಬಿಡಿ ಅ೦ತ ನನ್ನ ಕಾಲನ್ನು ಬಿಡಿಸಿಕೊ೦ಡು ಬೃ೦ದಾಳ ಹಿ೦ದೆ ಸರಿದು ಅವಳನ್ನು ಗಟ್ಟಿಯಾಗಿ ಹಿಡಿದು ನಿ೦ತುಬಿಟ್ಟೆ. ಆ ಕೆಲಸದವಳು ನನಗೆ ಏನೋ ಹೇಳಲು ಬಯಸುತ್ತಿದ್ದಳು ಆದರೆ ಆಕೆಗೆ ಮಾತು ಹೊರಡುತ್ತಿರಲ್ಲಿಲ್ಲ ಅಷ್ಟರಲ್ಲಿ ಸೆಕ್ಯುರಿಟಿ ಗಾರ್ಡ್ ಒಬ್ಬ ಬ೦ದು ಕಾರ್ ಬ೦ದಿದೆ ಎ೦ಬ ಸ೦ದೇಶ ಕೊಟ್ಟ. ನಾನು ಆ ಕೆಲಸದವಳ ಬಲಗೈಯನ್ನು ನನ್ನ ಕೈಗಳಲ್ಲಿ ಹಿಡಿದು ತಲೆಬಾಗಿ ನಮಸ್ಕರಿಸಿದವನ೦ತೆ ಮಾಡಿದೆ. ಆಕೆ ತನ್ನ ಕೈ ಹಿ೦ದಕ್ಕೆ ಪಡೆದು ಓಡಿಬಿಟ್ಟಳು. ಬೃ೦ದಾ ನನ್ನನ್ನು ಬಾಗಿಲಿನ ಕಡೆ ತಿರುಗಿಸಿ ಎಡಗೈ ಹೆಗಲ ಮೇಲೆ ಹಾಕಿ ಬಲಗೈಯಿ೦ದ ಎದೆಯ ಮೇಲೆ ಸವರುತ್ತಾ ನಡಿ ಹೊರಡೋಣ ಎನ್ನುತ್ತಾ ಕರೆದೊಯ್ದಳು. ಹೊರಗಡೆ ಬ೦ದ ತಕ್ಷಣ ಸೆಕ್ಯುರಿಟಿ ಗಾರ್ಡ್ ಗಳು ಸೆಲ್ಯುಟ್ ಮಾಡುತ್ತಿದ್ದರೂ ನನ್ನ ಲಕ್ಷ್ಯವೆಲ್ಲ ಎದುರಿಗೆ ನಿಲ್ಲಿಸಿದ್ದ ಕಾರಿನ ಮೇಲಿತ್ತು.

ಅದು ನನ್ನ ಕನಸಿನ ಕಾರಾದ ಮೆರ್ಸಿಡಿಸ್ ಬೆಂಜ್ ನ M - ಕ್ಲಾಸ್ 4Matic SUV. ಆ ಕಾರಿಗೆ ಕನಿಷ್ಠವೆಂದರೂ ೭೦ ಲಕ್ಷ ರೂ. ಸಮೀಪ ಬರುತ್ತಿದ್ದಂತೆ ಡ್ರೈವರ್ ಕಾರಿನ ಬಾಗಿಲು ತೆಗೆದನು. ಒಳಗೆ ಕೂರುತ್ತಿದ್ದಂತೆ ಮೈಯಲ್ಲಿ ವಿದ್ಯುತ್ತಿನ ಸಂಚಾರವಾದಂತಾಯಿತು. ಇಷ್ಟು ದುಬಾರಿ ಬೆಲೆಯ ಕಾರನ್ನು ನನ್ನ ಜೀವಮಾನದಲ್ಲೇ ಕೊಳ್ಳಲು ಸಾಧ್ಯವಿಲ್ಲ ಎನಿಸಿದ ತಕ್ಷಣವೇ ಕಾಲು ಮೇಲೆ ಕಾಲು ಹಾಕಿ ರಾಜನ ಹಾಗೆ ಕೂತು ಕಾರು ನನ್ನದೇ ಏನೋ ಎಂಬಂತೆ ಬೀಗುತ್ತಿದ್ದೆ. ಬೃಂದಾ ಒಳ ಬಂದು ಮಹಾರಾಜರ ಪಕ್ಕ ರಾಣಿಗೂ ಸ್ವಲ್ಪ ಜಾಗ ಬಿಡಿ ಎನ್ನುತ್ತಾ ನನ್ನನ್ನು ಪಕ್ಕಕ್ಕೆ ತಳ್ಳಿ ಆಸೀನಳಾದಳು. ಅದು ಇದು ಲೋಕಾಭಿರಾಮ ಮಾತಿಂದ ತಿಳಿದದ್ದು ಬೃಂದಾ ಈಗ ಸುಗುಣದಲ್ಲೇ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಕಾರು ಮೇಖ್ರಿ ಸರ್ಕಲ್ ಬಳಿ ಧಾವಿಸುತ್ತಿತ್ತು. ಬೃಂದಾಳ ಹೆಗಲಿಗೆ ತಲೆ ಇಟ್ಟು ಮಲಗಿದೆ. ರಂಗಣ್ಣ ಇನ್ನು ಟೈಮ್ ಇದ್ಯಲ, ಗಾಡಿ ನಿಧಾನಕ್ಕೆ ಓಡ್ಸಿ ಸಾಹೇಬರು ಮಲ್ಗಿದಾರೆ ಅಂತ ಡ್ರೈವರ್ ಗೆ ಸೂಚಿಸಿದಳು ಬೃಂದಾ. ನಿದ್ದೆ ಬರ್ತಿದ್ಯೇನೋ, ಬಾ ಇಲ್ಲಿ ಮಲಕ್ಕೋ ಎಂದು ನನ್ನ ತಲೆಯನ್ನು ಅವಳ ತೊಡೆಮೇಲೆ ಹಾಕಿ ಹಣೆಗೆ ಮೆಲ್ಲನೆ ತಟ್ಟಿದಳು. ಮನದ ಗಡಿಯಾರ ಹಿಂದಕ್ಕೆ ಓಡಿತ್ತು.
                          ***********************************************