ಮನಸ್ಸಿಗೆ ಅನ್ನಿಸಿದ್ದನ್ನು ಶೇಕಡ ೧೦೦ ರಷ್ಟು ಕಾರ್ಯಗತ ಮಾಡುವವನೇ ಮಹಾತ್ಮ .
ಯಾವ ಕೆಲಸವೇ ಆದರೂ ಇಷ್ಟವಿಲ್ಲದೇ ಬಿಟ್ಟು ಹೋಗುವುದಕ್ಕೂ ಹೆದರಿ ಬಿಟ್ಟು ಹೋಗುವುದಕ್ಕೂ ವ್ಯತ್ಯಾಸವೇ ಇಲ್ಲವೇ?
ಹೆಚ್ಚು ಮಾತು ಕಡಿಮೆ ಕೆಲಸ - ಮಾಡಿದರೆ ಆಗುವೆ ನೀ ಕಸ!
ಯಾರಿಗೆ ಯಾವ ಕೆಲಸದಲ್ಲಿ ಪ್ರಾವಿಣ್ಯತೆ ಇರುವುದೋ ಆ ಕೆಲಸ ಅವರೇ ಮಾಡಿದರೆ ಉತ್ತಮ.
ಹಣ ಸಂಪಾದನೆ ಜೀವನೋಪಾಯಕ್ಕೇ ಹೊರತು, ಹಣ ಸಂಪಾದನಯೇ ಜೀವನವಲ್ಲ! ಈ ಸತ್ಯದ ಅರಿವು ನನಗೆ ಇಷ್ಟು ಬೇಗ ಆದದ್ದು ಸಂತೋಷದ ವಿಷಯವಾದರೂ ಅದು ವಿಪರ್ಯಾಸವೇ ಸರಿ.
ಪರರಿಗೆ ಪರಿಚಯಿಸಿಕೊಡುವುದಕ್ಕೇ (ನಿನಗೆ ಬೇಡವಾಗಿದ್ದರೂ) ಹೆಸರು ಖ್ಯಾತಿ ಹೊಂದಿರು.
ಅಹಂಕಾರ ಸ್ವಾಭಿಮಾನ - ಎರಡೂ ಬಿಟ್ಟಿರು!
ನೌಕರಿಯಲ್ಲಿ ಪದೋನ್ನತಿ ಪಡೆದರೆ ಪಾರ್ಟಿ.. ಆಧ್ಯಾತ್ಮಿಕದಲ್ಲಿ ಪದೋನ್ನತಿ (ಆಚಾರ್ಯರ ಒಂದು ಗ್ರಂಥದ ಮಂಗಳ ಮಾಡಿದರೆ) ಪಡೆದರೆ ಜೀವನ ಪಲ್ಟಿ! [ಜೀವ ನ ಸಾಧನೆಗಿಂತ ಜೀವ ನ ಸಂಪಾದನೆಯೇ ಅತಿ ಮುಖ್ಯ! ಆಲ್ವಾ? ]
ಜನರು ಪ್ರೀತಿಸುವುದು ನಿನ್ನ ಸ್ವಭಾವವನ್ನಲ್ಲ! ಅವರು ಪ್ರೀತಿಸುವುದು ಜ್ಞಾನ ಸಂಪತ್ತು ಅಥವಾ ವಿತ್ತ ಸಂಪತ್ತು. ನಿನ್ನಲ್ಲಿರುವ ಜ್ಞಾನದಿಂದ ವಿತ್ತ ಆರ್ಜನೆಯಾಗುತ್ತಿದ್ದರೆ ಮಾತ್ರವೇ ಆ ಜ್ಞಾನಕ್ಕೆ ಬೆಲೆ. ಹಾಗಾಗಿ ಹೆಚ್ಚಾಗಿ ಜನ ನಿನ್ನ ಮೆಚ್ಚುವುದು ನಿನ್ನಲ್ಲಿರುವ ವಿತ್ತ ಸಂಪತ್ತಿನ ಸಲುವಾಗಿಯೇ!
ಮನಸ್ಸು ಒಳ್ಳೆಯ ದಾರಿಯನ್ನು ತೋರುತ್ತದೆ ಹಾಗೆಯೇ ಕೆಟ್ಟ ದಾರಿಯನ್ನು ತೋರುತ್ತದೆ. ಒಳ್ಳೆ ಕಡೆ ಹೋಗೋದಕ್ಕೆ ಪ್ರಚೋದನೆಯನ್ನು ಕೊಡುತ್ತದೆ. ಆದರೆ ಸನ್ಮಾರ್ಗದಲ್ಲಿ ನಡೆಯಲು ಹಾತೊರೆದಾಗ, ಸುತ್ತಲಿನ ಬಂಧು ಮಿತ್ರರ ಕೈಯಲ್ಲಿ ಉಪದೇಶವೆಂಬ ಹಗ್ಗ ಕೊಟ್ಟು ನಿನ್ನನ್ನು ಹಿಂದಕ್ಕೆ ಎಳೆಸುತ್ತದೆ.
ನಿನ್ನ ಬದುಕು ನಿನ್ನದಲ್ಲ, ಪರರದು - ಇದೇ ಇಂದಿನ ದಿನದ ಪರೋಪಕಾರಾರ್ಥಮಿದಂ ಶರೀರಂ!
ಗೂಡಲ್ಲಿ ಚೇಳಿದೆ, ಕೈ ಇಟ್ಟಲ್ಲಿ ಅದು ಕಚ್ಚುತ್ತದೆ ಎಂದು ಗೊತ್ತಿದ್ದರೂ ಮತ್ತೊಬ್ಬರ ಸಂತೋಷಕ್ಕಾಗಿ ಗೂಡಲ್ಲಿ ಕೈಯಿಟ್ಟು ಚೇಳು ಬಳಿ ಕುಟುಕಿಸಿಕೊಳ್ಳುವುದು ಮೂರ್ಖತನದ ಪರಮಾವಧಿಯಾದರೂ, ಅದೇ ಇಂದಿನ ಜೀವನ ಶೈಲಿ!! ಕಚ್ಚಿಸಿಕೊಂಡವ ಬಾಗುಂದಿ ಎಂದೇ ಹೇಳಬೇಕು!
ಧರಿಸುವ ವಸ್ತ್ರ ಇರುವ ಜಾಗ ಬರುವ ಹಣ ಹುಟ್ಟುವ ಮಗು - ಸದಾ ಇದೇ ಚಿಂತೆ! ಇನ್ನೇಷ್ಟು ಜನ್ಮವೋ ಇದರಿಂದ ಹೊರಬರಲು??
ಎಲ್ಲವನ್ನೂ ಬಿಟ್ಟು ಹೋಗುವುದಕ್ಕೆ ಮಹಾಪರ್ವದ ವಿದ್ಯಾಧರನೊಬ್ಬನಿಂದಲೇ ಸಾಧ್ಯ![ಅದು ಧಾರಾವಾಹಿಯಲ್ಲಿ ಮಾತ್ರ].
ಜಾತಿ ಯಾವುದಾದರೇನು ರಾಶಿ ಬಲು ಮುಖ್ಯ!
ಕಾಲಿಗೆ ಬಿದ್ದಾದರೂ ಸರಿ ಕೆಲಸ ಗಿಟ್ಟಿಸುಕೋ - ಇಷ್ಟವಿದೆಯೋ ಇಲ್ಲವೋ ಕೇಳುವವರ್ಯಾರು ?
ತಂದೆ ತಾಯಿಯರ ವಚನವನ್ನು ಎಂದಿಗೂ ಕೇಳದೇ ಇರಬೇಡ. ಆ ಸಮಯಕ್ಕೆ ಅದು ನಿನಗೆ ಸರಿ ಕಂಡು ಬರದಿದ್ದರೂ ಭವಿಷ್ಯದಲ್ಲೊಂದು ದಿನ [ನನಗೆ ಸರಿಯಾಗಿ ಏಳು ವರ್ಷ ಬೇಕಾಯಿತು] ಅದು ಹೇಗೆ ಸರಿ ಎಂಬುದು ನಿನಗೆ ಅರ್ಥವಾಗುತ್ತದೆ!
'Dell'ಲ್ಲಿಯಲ್ಲಿ ಅತಂತ್ರ ಸ್ಥಿತಿ!
(೧). ಯಸ್ಯಾಸ್ತಿ ವಿತ್ತಂ ಸ ನರಃ ಸ ಕುಲೀನಃ ..... (೨)..... ಆಯೆ ದುಃಖಮ್ ವ್ಯಯೇ ದುಃಖಮ್ ಧಿಕ್ ಅರ್ಥಃ ಕಷ್ಟಸಂಶ್ರಯಃ (೩) ಗಾಳಿ ಬಂದ ಕಡೆ ತೂರಿಕೋ
ರಾಜ್ಯಪಾಲರಿಗಿರುವ ಬುದ್ದಿ ಹಂಸರಾಜರುಗಳಿಗೇಕಿಲ್ಲ ?
Last but not least,
ಜೀವನದ ಒಂದು ಘಟ್ಟದಲ್ಲಿ ನೀನು ಪರಾವಲಂಬಿ ಅರ್ಥಾತ್ ನಿನ್ನ ಯಾವ ಸ್ವಂತ ನಿರ್ಧಾರಕ್ಕೂ ಬೆಲೆಯಿರುವುದಿಲ್ಲ. [ಒಂದರ್ಥದಲ್ಲಿ ಇಡೀ ಜೀವನವೇ ಪರಾವಲಂಬನ - ಆ ಪರ ವ್ಯಕ್ತಿ ಭಗವಂತನಾಗಬೇಕೆಂಬುದೇ ನನ್ನಾಶಯ]
ಈಗ ಮತ್ತೊಮ್ಮೆ ಮೊದಲನೇ ವಾಕ್ಯ ಓದಿ !!
ಈಗ ಮತ್ತೊಮ್ಮೆ ಮೊದಲನೇ ವಾಕ್ಯ ಓದಿ !!
*******
Excellent !!! :)
ReplyDeleteThank you :-)
ReplyDeleteಎನಿತೆನಿತ್ತು ವಿಕಾರ ಪರಿಣಾಮಗಳ ನಮ್ಮ ।
ReplyDeleteಮನಕಾಗಿಪುವೊ ಲೋಕರೂಪಶಕ್ತಿಗಳು ॥
ಅನಿತನಿತು ಸತ್ಯತೆಯವಕ್ಕುಂಟು ಜೀವಿತದಿ ।
ಅನುಭವವೆ ದಿಟದಳತೆ - ಮಂಕುತಿಮ್ಮ ॥ ೩೯೩ ॥
Sambala Baruva Kelasa Hididu
ReplyDeleteSimbla Suriva Makkala Hadedu
Kumbalakaayi Halva Maadu Lifu Ishtene...
Odabeda Stagininda Partu Nindene..
Banna Hachchikonda Mele Lifu Hingene..
Life na simply enjoy maadu.