ಭಾನುವಾರ,
೪/೧/೨೦೧೫
ಬರೆಯಲು
ಕೂತರೆ ಏನೂ ತೋಚದು
ತಲೆಯಲಿ
ಎಲ್ಲೋ ಹಾಗೆ ಉಳಿವುದು ||
ಕೂತರೆ ನಿಂತರೆ ಅದೇ ಆಲೋಚನೆ
ಮಲಗಿದರಂತೂ
ಬಿಡದೀ ಯಾತನೆ
ಹಕ್ಕಿಯ ಗಾನಕೆ ಹೊಳೆಯಿತು ಘಕ್ಕನೆ
ಹಕ್ಕಿಯ ಗಾನಕೆ ಹೊಳೆಯಿತು ಘಕ್ಕನೆ
ಹಿಡಿದೆ
ಪೆನ್ನು ಬರೆಯಲು ಥಟ್ಟನೆ
ಖಾಲಿ ಶೀಶಾ ಕೂಗಿದ ಆಗಲೇ
ಬರೆವುದು
ಮರೆತೇ ಹೋಯಿತು ಒಮ್ಮೆಲೆ
ಮೌನ ಬಯಸಿ ಪಾರ್ಕಿಗೆ ಹೋದರೆ
ಆಗುವುದು ಪ್ರೇಮಿಗೆ ಬಹಳ ತೊಂದರೆ
ಮನೆಯಲಿ
ರಾತ್ರಿ ನಿಶ್ಯಬ್ದದ ಕೋಣೆ
ಆದರೆ ಮನಸ್ಸೆಲ್ಹೋಯ್ತೋ ನಾ ಕಾಣೆ
ಏಕಾಂತದಲ್ಲೂ
ಇಲ್ಲ ನೆಮ್ಮದಿ
ಆಗಿದೆ ಮನಸಿಗೆ ನೋವೇ ಇಮ್ಮಡಿ
ಕನವರಿಕೆಯಲೂ
ಅದರದೇ ಸದ್ದು
ಕನಸಲಿ ಬೆಚ್ಚಿ ಕೂರುವೆ ಎದ್ದು
ದಿನ ಕಳೆವುದು ಹೀಗೆ ಸುಮ್ಮನೆ
ಬೆಳಗಾದರೆ
ಆಫೀಸೇ ಮನೆ
ಬರೆಯಲು
ಕೂತರೆ ಏನೂ ತೋಚದು
ತಲೆಯಲಿ
ಎಲ್ಲೋ ಹಾಗೆ ಉಳಿವುದು ||
********************
No comments:
Post a Comment