Pages

Tuesday, January 31, 2012

Aus Open 2012

ನಡಾಲನ ನಡು ಮುರಿದು ಪ್ರಶಸ್ತಿ ಗೆದ್ದ ಜೋಕರ್
ಸೆಮೀಸ್ನಲ್ಲೆ ಸೋತು ಸುಣ್ಣವಾದ ಮರ್ರೆ ಫೆಡರರ್
ಶರಪೋವಳನ್ನು ಪೋಯ ಮಾಡಿದ ಮರಿಯ ಅಜ಼ರ್
ರಾಡೆಕ್ ಜೊತೆ ಪುರುಷರ ಡಬಲ್ಸ್ ಗೆದ್ದ ಲಿಯಾಂಡರ್
ಸ್ವೇಟ್ಲಾನ - ವೆರ ಮಹಿಳೆಯರ ಡಬಲ್ಸ್ ವಿನ್ನರ್ಸ್
ಮಿಕ್ಸೆಡ್ ಡಬಲ್ಸ್ ನಲಿ ವೆಸ್ನಿನ-ಲಿಯಾಂಡರ್ ರನ್ನರ್ಸ್
ಪ್ರಶಸ್ತಿ ಗಳಿಸಿದ ಎಲ್ಲರಿಗೂ ಬಹುಮಾನ ಬಂಪರ್
ಒಟ್ನಲ್ಲಿ ಈ ಬಾರಿಯ Aus open ಸಕತ್ ಸೂಪರ್

Saturday, January 28, 2012

ಮನಸಿನ ಮಾತು

ಅಪ್ಪನ ಮಾತು - ಲೆಕ್ಕಕ್ಕೆ ಇಲ್ಲ
ಅಮ್ಮನ ಮಾತು - ಮೀರೋ ಹಾಗಿಲ್ಲ
ಹೆಂಡತಿ ಮಾತು - ತಪ್ಪೋ ಹಾಗಿಲ್ಲ
ತಮ್ಮ-ತಂಗಿಯರ ಮಾತು - ಬಿಡೋ ಹಾಗಿಲ್ಲ
ಅಣ್ಣ-ಅಕ್ಕಂದಿರ ಮಾತು - ನಡಿದೆ ಇರೋ ಹಾಗಿಲ್ಲ
ಮಕ್ಕಳ ಮಾತು - ಕೇಳಲೇಬೇಕಾದಂತ ಪರಿಸ್ಥಿತಿ
ಇಷ್ಟರ ನಡುವೆ
ಮನಸಿನ ಮಾತು - ಫೇಸ್ ಬುಕ್ ಗೋಡೆ ಮೇಲೆ!!

Sunday, January 22, 2012

ಕನಸು

ಕನಸು ಕಾಣುವುದು ಪ್ರತಿಯೊಬ್ಬರ ಸಹಜಗುಣ. ಆದರೆ ಕಂಡ ಕನಸನ್ನೆಲ್ಲ ನಿಜ ಜೀವನದಲ್ಲಿ ನನಸಾಗಿಸುವುದು ಅಸಾಧ್ಯವೇ .
ಯಾಕೆಂದರೆ ಕೆಲವೊಮ್ಮೆ ನಮ್ಮ ಕನಸುಗಳು ಕೇವಲ ನಮ್ಮ ಮೇಲೆ ಅವಲಂಬಿತವಾಗಿರುವುದಿಲ್ಲ.
ಉದಾಹರಣೆಗೆ ಮಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್‍ಯಾಂಕ್ ಬಂದಂತೆ ಅಪ್ಪ ಕನಸು ಕಾಣುವುದು. 
ದೇಶದಲ್ಲಿ ಭ್ರಷ್ಟಾಚಾರವೇ ಇಲ್ಲದಂತೆ / ನಿರ್ಮೂಲವಾದಂತೆ ಕನಸು ಕಾಣುವುದು.
ಮಗ ಬುದ್ದಿವಂತನಾಗಿದ್ದು ಅಪ್ಪ ಅಂತ ಕನಸು ಕಂಡರೆ ಅದು ಹೇಗೋ ನನಸಾದೀತು.
ಆದರೆ  ಭ್ರಷ್ಟಾಚಾರ ನಿರ್ಮೂಲನೆಯ ಕನಸಿಗೆ ಕನಸಿಗ ಇಡೀ ದೇಶದ ಜನರನ್ನು ಅವಲಂಬಿಸಬೇಕಾಗುತ್ತದೆ.
ನನ್ನ ಪ್ರಕಾರ ಕನಸುಗಳಲ್ಲಿ ಎರಡು ಬಗೆ. ಒಂದು ಸ್ವಾವಲಂಬಿತ ಕನಸುಗಳು ಮತ್ತೊಂದು ಪರಾವಲಂಬಿತ ಕನಸುಗಳು.  
ಹಾಗಂತ ಕನಸನ್ನ ಕನಸಿನಲ್ಲೇ ನನಸಾಗಿಸಿಕೊಂಡು ಸಂತೋಷ ಪಡುವುದಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ.

Wednesday, January 18, 2012

ಬೇಸಿಗೆಯೋ ಮಳೆಗಾಲವೋ

ಸಮಯದ ಅರಿವಿಲ್ಲದೆ ಕೆಲಸದಲ್ಲಿ ನಿರತನಾಗಿದ್ದ ನನಗೆ
ಗೆಳೆಯ : ಹೊರೊಡೊದಿಲ್ಲವೊ?
ನಾನು: ಮನೆಗಲ್ಲವೋ :)
ಗೆಳೆಯ : ವೀಕೆಂಡ್ ಅರಿವಿಲ್ಲವೋ?
ನಾನು: ನಡೆಯೋ.... ಎನ್ನುತ್ತಾ ಹೊರಬಂದಾಗ ಅನ್ನಿಸಿದ್ದು..
ಇದು ಬೇಸಿಗೆಯೋ ಮಳೆಗಾಲವೋ !

Wednesday, January 11, 2012

ಯು.ಪಿ ಚುನಾವಣೆ

ಯು.ಪಿ ಯಲ್ಲಿ ಚುನಾವಣೆ ಎದುರಾಗಿದೆಯಂತೆ
ಆನೆ ಪ್ರತಿಮೆಗೆಲ್ಲ ಪ್ಲಾಸ್ಟಿಕ್ ಹೊದಿಕೆಯಂತೆ
ಅದಕ್ಕಾಗಿ ಒಂದು ಕೋಟಿ ರೂಪಾಯಿ ಖರ್ಚಂತೆ
ವಾಜಪೇಯಿ-ಮೋದಿ ಬಿ.ಜೆ.ಪಿ ಯ ಪ್ರಚಾರಕರಂತೆ
ರಾಹುಲ್ ಗಾಂಧಿಗೆ ಪ್ರತಿಷ್ಟೆಯ ಕಣವಂತೆ
ಟೀಮ್ ಅಣ್ಣರಿಂದ ಕೈ ವಿರುದ್ದ ಪ್ರಚಾರವಂತೆ
ಮುಲಾಯಂಗೆ ಕುರ್ಚಿ ಮೇಲೆ ಭಾಳ ಆಸೆಯಂತೆ
ಮತ ಎಣಿಕೆ  ಮಾರ್ಚ್ ನಾಕರ ಬದಲಾಗಿ ಆರಿಗಂತೆ
ಮತದಾರಿಗಂತೂ ದಿನಕ್ಕೊಂದು ಆಮಿಷವಂತೆ

ಅಂತೆ ಕಂತೆ

ನಿಡುಮಾಮಿಡಿಗೆ ಮಡೆ ಮಡೆ ಸ್ನಾನದ ಚಿಂತೆ
ಎನ್. ಟಿ. ಪಿ. ಪಿ ಸಲುವಾಗಿ ಪೇಜಾವರರ ನಿರಶನವಂತೆ
ಬಿ.ಎಸ್. ವೈ ಗೆ ಮುಖ್ಯ ಮಂತ್ರಿ ಸ್ಥಾನ ಬೇಕಂತೆ
ಲೋಕಾಯುಕ್ತರಿಗೆ ಸಿಕ್ಕಿ ಬೀಳುತ್ತಿದೆ ನೋಟಿನ ಕಂತೆ ಕಂತೆ
ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ಇನ್ನೂ ಮನೆ ಸಿಕ್ಕಿಲ್ಲವಂತೆ
ರೈತ ಸಂಘ ಒಳ ಜಗಳದಿಂದ ಇಬ್ಬಾಗವಾಗುವುದಂತೆ
ಸುದ್ದಿವಾಹಿನಿಗಳಲ್ಲಿ ಇಂತದ್ದೇ ಸುದ್ದಿ, ಬರೆ ಅಂತೆ ಕಂತೆ
ದಿನಪತ್ರಿಕೆಗಳೂ ಇಂತದ್ದೇ ಸುದ್ದಿ ಹೊತ್ತುತಂತೆ?

Sunday, January 8, 2012

ಐ ಮ್ - ನ್ಯಾನೋ ಕಥೆ - ೨

ಅವರಿಬ್ಬರಿಗೂ ಒಂದು ವರ್ಷಕ್ಕಿಂತ ಕಡಿಮೆ ಅಂತರ. ಅವನು ಓದಿನಲ್ಲಿ ಒಂದು ವರ್ಷ ಮುಂದು. ಅವನು ತೆಗೆದುಕೊಳ್ಳುತ್ತಿದ್ದ ಕೋರ್ಸಸ್ ನೆ ಅವಳು ತೆಗೆದುಕೊಳ್ಳುತ್ತಿದ್ದಳು. ಹೈಸ್ಕೂಲ್ ಲಿ ಪ್ರಥಮ ಭಾಷೆ ಸಂಸ್ಕೃತ, ಪಿ.ಯು.ಸಿಲಿ ಪಿ ಸಿ ಎಂ ಬಿ, ಪದವಿಯಲ್ಲಿ ಎಲೆಕ್ಟ್ರಾನಿಕ್ಸ್ ಹೀಗೆ. ದೂರದೂರಿನಲ್ಲಿದ್ದರು ಇಬ್ಬರಿಗೂ ಏನೋ ಒಂದು ರೀತಿ ಸೆಳೆತ.

ಈಗಿನಂತೆ ಮೊಬೈಲ್ ಈಮೇಲ್ ಗಳು ಇರಲ್ಲಿಲ್ಲ, ವರ್ಷಕ್ಕೆ ಒಂದೆರಡು ಬಾರಿ ಅಷ್ಟೇ ಅವರ ಭೇಟಿ. ಒಂದು ಬಾರಿ ಅವನು ಅವಳೂರಿಗೆ ಬಂದಾಗ ಪೋಸ್ಟ್ ಆಫೀಸ್ ಗೆ ಕರೆದೊಯ್ದಳು. ಒಳ ಹೋಗಿ ಕೈಲಿ ಪಾಸ್ ಪೋರ್ಟ್ ಹಿಡಿದು ಬಂದ ಅವಳನ್ನು ಕಂಡು ಇವನ ಮನಸಲಿ ನಾಲ್ಕಾರು ಪ್ರೆಶ್ನೆಗಳು, ಮುಖದಲ್ಲಿ ಏನೋ ಗೊಂದಲ. ಪಾಸ್ ಪೋರ್ಟ್ ಸಿಕ್ಕ ಖುಷಿಯಲ್ಲಿದ್ದ ಅವಳು ಇದ್ಯಾವುದನ್ನು ಗಮನಿಸಲ್ಲಿಲ್ಲ.

ಅವನಂದುಕೊಂಡಂತೆ ಕೆಲ ತಿಂಗಳ ಬಳಿಕ ಮದುವೆಯಾಗಿ ಅವಳು ವಿದೇಶಕ್ಕೆ ಹೊರಟುಹೋದಳು. ಅವನು ಫೇಸ್ ಬುಕ್ಕಲೀ ಫೋಟೋ ನೋಡುತ್ತಾ, ನಾನು ಅವಳನ್ನು ಪ್ರೀತಿಸುತ್ತಿದ್ದೇನಾ? ಎಂದು ಯೋಚಿಸುತ್ತಿರುವಾಗಲೇ ಐ ಮ್ ಮಾಡಿ ಹೀರೋಯಿನ್ನ ಯಾವಾಗ ಬರೋದು ಅಂದಳು. ಅಂದು ಈ ಐ ಮ್ ಇದ್ದಿದ್ದರೆ ನೀನೆ ನನ್ನ ಹೀರೋಯಿನ್ ಆಗಿರ್ತಿದ್ದೆನೋ? ಅಂತ ಟೈಪಿಸಿ ಅಳಸಿದ ಅವನು, ಸಿನಿಮಾ ಪ್ರೊಡ್ಯೂಸ್ ಮಾಡೋರು ಇನ್ನೂ ಹೀರೋಯಿನ್ ನ ಸೆಲೆಕ್ಟ್ ಮಾಡಿಲ್ಲ ಎಂದು ಹಾಸ್ಯದ ನಗೆ ಟೈಪಿಸಿದ.
ಆದರೆ ನಿಜವಾಗಿ ಅವನ ಮುಖ ಬಾಡಿತ್ತು.

Friday, January 6, 2012

ಆರನೆ ಬಾರಿ!

ಪಾಂಟಿಂಗ್ ಹಸ್ಸಿ ಬ್ಯಾಟಿಂಗ್ ಭರ್ಜರಿ
ಕಪ್ತಾನ ಕ್ಲಾರ್ಕ್ ಗಂತೂ ತ್ರಿಶತಕದ ಗರಿ
ಸಿಡ್ನೀ ಮೈದಾನದಲ್ಲಿ ಸಚಿನ್ ರದು ೨೨೧ ಸರಾಸರಿ
ಆದರೂ ಬಾರಿಸಲಾಗಲ್ಲಿಲ್ಲ ನೂರನೇ ಸೆಂಚೂರಿ
ಲಕ್ಷ್ಮಣ್ ದ್ರಾವಿಡ್ ಮೇಲಿತ್ತು ಭರವಸೆ ಮಿತಿ ಮೀರಿ
ಕೊಹ್ಲಿ ಧೋನಿ ಅಂತೂ ಲೆಕ್ಕಕ್ಕೆ ಇರ್ಲ್ಲಿಲ್ಲಾರಿ
ಅಶ್ವಿನ ಒಬ್ಬನೇ ಮುಟ್ಟಿಸಲಾಗಲ್ಲಿಲ್ಲ ಬೃಹತ್ ಗುರಿ
ವಿದೇಶಿ ನೆಲದಲ್ಲಿ ಭಾರತ ಸೋತಿತು ಸತತ ಆರನೆ ಬಾರಿ