Pages

Tuesday, December 12, 2017

ಮತ ಯಾರಿಗೆ ? - ಜಿಜ್ಞಾಸೆ



ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಅಬ್ಬಬ್ಬಾ ಅಂದರೆ ಇನ್ನಾರು ತಿಂಗಳಲ್ಲಿ ಮುಂದಿನ  ಸರ್ಕಾರ ಮತ್ತು ಮುಂದಿನ ಮುಖ್ಯಮಂತ್ರಿ ಆಗಿ ಹೋಗಿರುತ್ತಾರೆ.  ಪ್ರತೀ ಚುನಾವಣೆಯಲ್ಲೂ ಕಣ್ಮುಚ್ಚಿ ಭಾರತೀಯ ಜನತಾ ಪಕ್ಷಕ್ಕೆ ಮತ ಒತ್ತುತ್ತಿದ್ದ ನನಗೆ ಈ ಬಾರಿ ಯಾರಿಗೆ ಮತ ಹಾಕಬೇಕೆಂಬ ಜಿಜ್ಞಾಸೆ.

ಬಾಯ್ಬಿಟ್ಟರೆ ಜಾತಿ ರಾಜಕೀಯ, ಅಲ್ಪಸಂಖ್ಯಾತ ಎಂದು ಕರೆಸಿಕೊಳ್ಳುವವರ ಓಲೈಕೆ, ಹಿಂದೂ ವಿರೋಧಿ ಕಾಂಗ್ರೇಸ್ ಪಕ್ಷಕ್ಕಂತೂ ಖಂಡಿತ ನಾನು ಮತ ನೀಡಲಾರೆ.
ಗಾಳಿ ಬಂದಲ್ಲಿ ತೂರುವ, ಕುಟುಂಬಕ್ಕಷ್ಟೇ ಸೀಮಿತವಾದ, ಜಾತ್ಯಾತೀತ ಎಂದು ಬರೇ ಹೆಸರಿನಲ್ಲಿ ಉಳಿಸಿಕೊಂಡಿರುವ ಜನತಾ ದಳವನ್ನು ನಂಬುವಂತೆಯೇ ಇಲ್ಲ.
ಇನ್ನ ಉಳಿದಿರುವುದು ಭಾರತೀಯ ಜನತಾ ಪಕ್ಷ !

ಒಂದು ವೇಳೆ ನಾನು ಬಿಜೆಪಿಗೆ ಮತ ನೀಡಿ, ಬಿಜೆಪಿ ಸರ್ಕಾರ ರಚಿಸಿತು ಎಂದಿಟ್ಟುಕೊಳ್ಳಿ (ನಾನು ಮತ ನೀಡಿದ ತಕ್ಷಣ ಬಿಜೆಪಿ ಗೆಲ್ಲುತ್ತೆ ಅಂತ ಅನ್ಕೋಬೇಡಿ ಮತ್ತೆ !),  ಆಮೇಲೆನಾಗುತ್ತದೆ? ಯಡ್ಯೂರಪ್ಪ ಮುಖ್ಯಮಂತ್ರಿ (?) ಆದರೆ ಅಶೋಕ ಈಶ್ವರಪ್ಪ ಉಪ-ಮುಖ್ಯಮಂತ್ರಿಗಳಾಗುತ್ತಾರೆ (LKG ಸರ್ಕಾರ) . ಹಿಂದೂ ವಿರೋಧಿಯಲ್ಲ ಅನ್ನೋದು ಬಿಟ್ಟರೆ ಮೇಲೆ ಹೇಳಿದ ಎಲ್ಲವೂ ಬಿಜೆಪಿಗೂ ಅನ್ವಯಿಸುವುದೇ! ಅಧಿಕಾರದಲ್ಲಿದ್ದಾಗ ಇವರು ಆಡಿದ ನಾಟಕ - ಪ್ರಹಸನಗಳನ್ನು ಕಣ್ಣಾರೆ ಕಂಡಿದ್ದೇವೆ.
ಯಡ್ಯೂರಪ್ಪ - ಈಶ್ವರಪ್ಪ ಅವರುಗಳ ಜಗಳದ ಜುಗಲ್ ಬಂದಿ, ಯಡ್ಯೂರಪ್ಪ - ಅನಂತಕುಮಾರ್ ರವರ ತೆರೆಮರೆ ಕಾದಾಟ,
ಅಧಿಕಾರ ಇದ್ದಾಗ ಯಡ್ಯೂರಪ್ಪ, ಜಗದೀಶಶೆಟ್ಟರ್ ಹಾಗು ಸದಾನಂದ ಗೌಡ ಮಾಡಿದ ಅಧಿಕಾರದ ದುರುಪಯೋಗ, ಸ್ವತಃ ಜೈಲಿಗೆ ಹೋಗಿಬಂದ ಯಡ್ಯೂರಪ್ಪ, ಹಾಲಪ್ಪ, ರೇಣುಕಾಚಾರ್ಯ, ಲಕ್ಷ್ಮಣ ಸವದಿಯರಂತ ಕಾಮಾಂಧರನ್ನು ಅಕ್ಕ-ಪಕ್ಕ ಕೂರಿಸಿಕೊಂಡಿರೊ ಯಡ್ಯೂರಪ್ಪ, ಬಾಯ್ಬಿಟ್ಟರೆ ಕೆಟ್ಟ ಕೊಳಕ ಮಾತಾಡುವ ಈಶ್ವರಪ್ಪ, ಯಾವ ಗೂಂಡಾಗಳಿಗೂ  ಕಮ್ಮಿ ಇಲ್ಲದ ಅಶೋಕ... ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ. ಶೋಭಕ್ಕನ ಬಗ್ಗೆ ಏನೂ ಹೇಳುವುದು ಬೇಡ ಅಂತಲೇ ಬಿಟ್ಟಿದ್ದೇನೆ.

ಮೋದಿ ಅಲೆ ಮೇಲೆ ತೇಲುತ್ತಿರುವ ಇವರ್ಯಾರಿಗೂ ಸ್ವಂತ ವರ್ಚಸ್ಸಿಲ್ಲ.  ಮೋದಿ ಮುಖ ನೋಡಿ ಇಲ್ಲಿ ಮತ ಹಾಕಲು ಸಾಧ್ಯವೇ ಇಲ್ಲ. ಮೇಲಾಗಿ ಇವರ್ಯಾರಿಗೂ ಕರ್ನಾಟಕದ ಬಗ್ಗೆ ಕನಸಿಲ್ಲ. ಪರಿವರ್ತನಾ ರ್ಯಾಲಿ ಗಳಲ್ಲಿ ಇವರ ಭಾಷಣಗಳನ್ನು ಕೇಳಿ. ಅಲ್ಲಿ ಕೇಳಿಸುವುದು ಬರೀ ರಾಜಕೀಯದ ದ್ವೇಷ, ಪರಸ್ಪರ ಹೀಯಾಳಿಕೆ,  ಏಕವಚನದ ಪ್ರಯೋಗ - ಮಾತಿನ ಮೇಲೆ ಹಿಡಿತವೇ ಇಲ್ಲ. Maturity ಅನ್ನೋದೇ ಇಲ್ಲ . ಇವರಿಗೆ ಬೇಕಿರುವುದು ಬರೀ ಅಧಿಕಾರ.
ಇನ್ನು ಬಿಜೆಪಿಯವರು ವಿರೋಧ ಪಕ್ಷವಾಗಿ ಮಾಡಿದ್ದಾದರೂ ಏನು? ಯಾವ ಪ್ರಕರಣವನ್ನು ಇತ್ಯರ್ಥ ಮಾಡಲೇ ಇಲ್ಲ , ಕೊನೆಯವರೆಗೂ ಕೊಂಡೊಯ್ಯಲಿಲ್ಲ.  ಸೋಮಾರಿಗಳಾಗಿ ನಿದ್ದೆ ಮಾಡುತ್ತಿದ್ದವರನ್ನು ಜನರೇ ಬಡಿದ್ದೆಬ್ಬಿಸಬೇಕಾಯಿತು. ಅದು ಡೀಕೆ ರವಿ ಪ್ರಕರಣವಿರಬಹುದು, ಗಣಪತಿ ಪ್ರಕರಣವಿರಬಹದು, ಮೇಟಿ, ತಂವೀರ್ ಸೇಠ್ , ಆಂಜನೇಯ, ಡೀಕೇಶಿ ಮುಂತಾದವರ ಪ್ರಕರಣಗಳಿರಬಹುದು . ಯಾವೂದಕ್ಕೂ ತಾರ್ಕಿಕ ಅಂತ್ಯ ಕಾಣಿಸಲು ಪ್ರಯತ್ನಿಸಲೇ ಇಲ್ಲ. ಎರಡು ದಿನ ಕಾಟಾಚಾರಕ್ಕೆ ಹೋರಾಟ ಮಾಡಿ ಒಂದು ಪ್ರೆಸ್ ಕಾನ್ಫರೆನ್ಸ ಮಾಡಿ ಎಲ್ಲವನ್ನೂ ಮುಗಿಸಿಬಿಟ್ಟರು. ಬಾಯ್ಬಿಟ್ಟರೆ ಎಲ್ಲಿ ನಮ್ಮ ಬುಡಕ್ಕೆ ಇನ್ಯಾವ ಬತ್ತಿ ಇಡುವರೋ ಎಂದು ಬಿಜೆಪಿಯವರು ಮುದುರಿ ಮೂಲೆಯಲ್ಲಿ ಕೂತಿದ್ದನ್ನು ನೋಡಿದವರಿಗೆ ಇವರುಗಳ ಮೇಲೆ ಅನುಮಾನ ಮೂಡಿರಿವುದು ತೀರಾ ಸಹಜವೇ.

ಈ ಬಾರಿ ಬಿಜೆಪಿ ಗೆ ಮತ ಅಂತ ತೀರ್ಮಾನಿಸೋದು ಬಹಳ ಕಷ್ಟ.

ಬಿಜೆಪಿಗೆ ತುರ್ತಾಗಿ ಮಾಡಬೇಕಿರುವುದು:
೧. ೭೫ನೇ ವಸಂತದ ಹೊಸ್ತಿಲ್ಲಲ್ಲಿರುವ, ಜೈಲಿಗೆ ಹೋಗಿ ಬಂದ ಯಡ್ಯೂರಪ್ಪ, ಸಾವಿರ ಜನರನ್ನು ಸೇರಿಸಲು ಅಶಕ್ಯರಾದ ಈಶ್ವರಪ್ಪ, ಕೇಸ್ ಗಳನ್ನು ಮಾಡಿಕೊಂಡಿರುವ ಹಾಲಪ್ಪ, ಸವದಿ, ರೇಣುಕಾಚಾರ್ಯ ಮುಂತಾದವರನ್ನು ಅಧಿಕಾರದಿಂದ ದೂರವಿಡಬೇಕು.
೨. ಯುವ ಜನರ ಕಣ್ಮಣಿಗಳಾದ ಅನಂತಕುಮಾರ್ ಹೆಗಡೆ, ಸುರೇಶ ಕುಮಾರ್, ಸಿ ಟಿ ರವಿ, ಪ್ರತಾಪ್ ಸಿಂಹ, ಪಿ ರಾಜೀವ್ ಮುಂತಾದ ಯುವ ನಾಯಕರನ್ನು ಮುಂಚೂಣಿಗೆ ತರಬೇಕು ಹಾಗು ಅಧಿಕಾರ ನೀಡಬೇಕು.
೩. ಕರ್ನಾಟಕದ ಬಗ್ಗೆ ಉಜ್ವಲ ಕನಸುಗಳನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥ, ವಿಶ್ವೇಶ್ವರ ಭಟ್ , ರವೀಂದ್ರ ಜೋಶಿ ಮುಂತಾದ ಪತ್ರಕರ್ತ / ಅಂಕಣಕಾರರನ್ನು ಪಕ್ಷಕ್ಕೆ ಕರೆ ತರಬೇಕು.
೪. ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಹೇಗೆ ಅಭಿವೃದ್ಧಿ ಮಾಡುತ್ತೇವೆ ಎಂಬುದನ್ನು ಎಳೆ ಎಳೆ ಯಾಗಿ ಬಿಡಿಸಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು. ಅಭಿವೃದ್ಧಿ ಪದ ಕೇವಲ ಪ್ರಣಾಳಿಕೆಗೆ ಮೀಸಲಾಗಬಾರದು.

ನಾಯಕರುಗಳು ಪರಿವರ್ತಿತರಾಗದೆ ಸುಮ್ಮನೆ ಪರಿವರ್ತನಾ ರ್ಯಾಲಿ ಗಳಲ್ಲಿ ಸಮಯ ಕಳೆಯುತ್ತಾ ಮೋದಿ ಅಲೆ ಮೇಲೆ ತೇಲಾಡುತ್ತೇವೆ ಎಂಬ ಭ್ರಮೆ ಬಿಡದಿದ್ದರೆ 'ಕರ್ನಾಟಕ 'ದ 'ಪ್ರಜ್ಞಾವಂತ' ಮತದಾರರು ಮತ್ತೊಂದು 'ಜನತಾ ಪಕ್ಷ'ದ ಕಡೆ ತಿರುಗಿ ನೋಡುವ ಅನಿವಾರ್ಯತೆಯನ್ನು ತಳ್ಳಿಹಾಕುವಂತಿಲ್ಲ .
*****

Monday, December 4, 2017

ಬ್ರಾಹ್ಮಣರು - ಅಸ್ಪೃಶ್ಯರು

ಹರಿ-ವಿಷ್ಣುವನ್ನು ಆರಾಧಿಸುವವರು ಹರಿಜನರು
ಅವರೇ ನಿಜವಾದ ಅಸ್ಪೃಶ್ಯರು
ಇಂದು ನಮ್ಮ ದೇಶದಲ್ಲಿ ಬ್ರಾಹ್ಮಣರೇ ಅಲ್ಪ-ಸಂಖ್ಯಾತರು
ಯಾವ ರಾಜಕೀಯ ಪಕ್ಷಕ್ಕೂ ವೋಟ್-ಬ್ಯಾಂಕ್ ಆಗಿ ಸಲ್ಲದವರು
ಮೀಸಲಾತಿ, ಸೌಲಭ್ಯ, ಭಾಗ್ಯ ಯೋಜನೆಗಳ ಹತ್ತಿರ ಕೂಡ ಸುಳಿಯದವರು
ಸ್ವಾಭಿಮಾನದ ಮೂರ್ತ ಸ್ವರೂಪರು, ಎಂದೂ ಸರ್ಕಾರದ ಆಶ್ರಯ ಬೇಡದವರು
ಎಲ್ಲರೊಂದಿಗೂ ಬೆರೆಯುವ ಸಮಚಿತ್ತದವರು
ಆದರೂ ಕಿಡಿಗೇಡಿಗಳ ಬಾಯಿಗೆ ಆಹಾರ ವಾಗುವವರು
ಬಂದರೂ ಇಂಥ ನೂರು ಹ.ಸೂ. ಭಗವಾನರು
ಅಲುಗಾಡಿಸಲೂ ಸಾಧ್ಯವಿಲ್ಲ ಬ್ರಾಹ್ಮಣತ್ವದ ಬೇರು