Pages

Wednesday, April 13, 2016

ತಾಪಮಾನ













ಬೆಂಗಳೂರಿನ ಗರಿಷ್ಠ ತಾಪಮಾನ ತಲುಪಿದೆ ನಲವತ್ತೆರಡು
ಅದಕ್ಕೆ ಕಾರಣಗಳೆನೆಂದು ನೀ ಪಟ್ಟಿ ಮಾಡು
ದಶ ದಿಕ್ಕುಗಳಿಂದಲೂ ಕಬಳಿಕೆಯಾಗುತ್ತಿದೆ ಕಾಡು
ಕೆರೆಗಳಂತೂ ಆಗಿವೆ ಕಾಂಕ್ರೀಟ್ ಕಟ್ಟಡಗಳ ಬೀಡು
ಎಲ್ಲಾ ಕಡೆ ಥಳಥಳಿಸುತಿದೆ ಡಾಂಬರು ರೋಡು
ಮಾಯವಾಗಿದೆ ನಗರದ ಹೊರವಲಯದಲ್ಲಿ ಗುಡ್ಡ-ಗಾಡು
ಹುಡುಕಿದರೂ ಕಾಣದಾಗಿದೆ ಹಕ್ಕಿ-ಪಕ್ಷಿಗಳ ಗೂಡು
ವನ್ಯ ಜೀವಿಗಳು ತಪ್ಪುತ್ತಿವೆ ಅದರ ಜಾಡು
ಇದಕ್ಕೆಲ್ಲ ಏನು ಪರಿಹಾರ ನೀ ತಡಕಾಡು
ರಜಾ ದಿನಗಳಲ್ಲೊಂದು ಸಸಿ ನೆಡು
ಅದ ಪೋಷಿಸಿ ಆರೈಕೆ ಮಾಡು
ಪರಿಹಾರ ಕಾರ್ಯ ತಡ ಆದರೆ ಕಾದಿದೆ ದೊಡ್ಡ ಕೇಡು

Friday, April 1, 2016

ಮಾತು


ಮಾತು ಅತಿ ಹೆಚ್ಚಾದರೆ ಅದಕ್ಕಿಲ್ಲ ಕಿಮ್ಮತ್ತು
ಮಾತು ಅತಿ ಕಡಿಮೆಯಾದರೂ ಇಲ್ಲ ಗಮ್ಮತ್ತು 
ಹೆಚ್ಚು-ಕಡಿಮೆಯಾದರಂತೂ ಕಾದಿರತ್ತೆ ಆಪತ್ತು 
ಮಿತವಾಗಿ ಮಾತಾಡುವುದು ಒಂದು ಕರಾಮತ್ತು 
ಸಿದ್ದಿಸಿಕೊಂಡವನಿಗೆ ಅದೇ ದೊಡ್ಡ ಸಂಪತ್ತು 
ಮಧ್ಯೆ ಮಾತಾಡುವರಿಗೆ ಹೇಳುವರು, ಅವರಿಗೆ ಯಾಕೆ ಬೇಕಿತ್ತು 
ಕೆಲವರು ಮಾತಾಡಿದರಂತೂ ಉದುರುವುದು ಮುತ್ತು 
ಕೆಲವೊಮ್ಮೆ ಮಾತಾಡಿದರೆ ಬರುವುದು ಕುತ್ತು 
ಆದರಿಂದಲೇ ಮಾತಾಡು ನೀ ಎಚ್ಚೆತ್ತು
*******