ಪದಗಳಲ್ಲಿ
ಅಡಗಿದ ಸಿದ್ದಾಂತಗಳ ತಳದ ಮೇಲೆ,
ಅರ್ಥೈಸಿಕೊಳ್ಳುವ
ಮನಸುಗಳ ಸವಾರಿ,ತಮಗೆ ಬೇಕಾದಂತೆ.
ಒಂದೇ ಪದವನ್ನು ಸಾವಿರ ಮನಸುಗಳು
ಸಾವಿರ ರೀತಿಯಲ್ಲಿ ಅರ್ಥೈಸಿಕೊಳ್ಳಬಲ್ಲವು.
ನೈಜತೆಯ ಸಾವು ಇನ್ನೆಲ್ಲೂ ಇಲ್ಲ,
ಅದು ಇರುವುದು ಅರ್ಥೈಸಿಕೊಳ್ಳುವ ಮನದ
ತೀಕ್ಷ್ಣತೆಯ ಬುದ್ದಿವಂತಿಕೆಯಲ್ಲಿ.
*******************************************