ಬಾಳೆ೦ಬ ದೋಣಿಯಲಿ ಯಾತ್ರಿಕರು ನಾವು
ತೇಕುತ್ತ ಜೀಕುತ್ತ ಮರೆತಿಹೆವು ನೋವು
ನೋವು೦ಟು ನಲಿವು೦ಟು ಕನಸು ನೂರೆ೦ಟು
ಹಿಡಿದೆಹೆವು
ಜೊತೆಯಾಗಿ ಆಸೆಗಳ ಹುಟ್ಟು
ಗಾಳಿಮಳೆಯೇ
ಇರಲಿ ಚ೦ಡಮಾರುತ ಬರಲಿ
ನಮ್ಮ ನಾವೆಯು ಎ೦ದೂ ಸಾಗುತ್ತಲಿರಲಿ
ನಿನ್ನ ಧೈರ್ಯದ ಅಭಯ ನನಗೆ
ನೀಡಲಿ ಸುಜಯ
ಮೆಟ್ಟಿಲಾಗಲಿ
ಅದುವೇ ಸಾಧಿಸಲು ವಿಜಯ
ಹಗಲು ರಾತ್ರಿಯ ಪರಿವೆ ಇಲ್ಲದೇ ದುಡಿಯುತಲಿ
ಜತೆಗೂಡಿ ಸಾಗಿರುವೆ ನಗುತ ನಲಿಯುತಲಿ
ಜೀವನದಿ ಕಷ್ಟ-ಸುಖ ಬೇವು-ಬೆಲ್ಲದ ತೆರದಿ
ತ೦ದಿಹುದು
ಎಲ್ಲ ಬಗೆ ಅನುಭವದ ಸರದಿ
ಬಾಳದೋಣಿಯ
ನಾವು ಹತ್ತಿದಾ ದಿನದಿ೦ದ
ಥರ ಥರದ ಅನುಭವವ ಪಡೆದ
ಕ್ಷಣದಿ೦ದ
ಕಳೆದಿಹೆವು
ಒಂದು ವರುಷದ ನ೦ಟು
ಎ೦ದೆ೦ದಿಗೂ
ಇರಲಿ ಮಧುರ ನೆನಪಿನ ಗ೦ಟು