Pages

Thursday, March 21, 2013

ನ್ಯಾನೋ ಕಥೆಗಳು

ಬದಲಾದದ್ದು ಏನು?
ಬದಲಾಗಿರೋ ಈ  ಜನಗಳ ನಡುವಿನಲ್ಲಿ ಪ್ರಪಂಚದ ಆಗು ಹೋಗುಗಳನ್ನು ಜೀರ್ಣಿಸಿಕೊಳ್ಳಲಾಗದ ತಾತನಿಗೆ ಎರಡು ಬಾಳೆಹಣ್ಣು ಕೊಟ್ಟು, ನೀವು ತಿಂದಿದ್ದನ್ನಾದರೂ ಜೀರ್ಣಿಸಿಕೊಳ್ಳಿ, ಕಾಲ ಬದಲಾಗಿದೆ ಎಂದೇನೋ ಹೇಳಿ ಬಂದುಬಿಟ್ಟೆ. ದಾರಿಯಲ್ಲಿ ಬರುವಾಗ, ನಾಗರೀಕತೆಯ ಸೋಗಿನಲ್ಲಿ ಪಾಶ್ಚಾತ್ಯರ ಸಂಸ್ಕೃತಿಗೆ ಮಾರುಹೋಗಿ ಪಬ್ ಮುಂದೆ ಚಡ್ಡಿ ಹಾಕಿ ಸಿಗರೇಟ್ ಹಿಡಿದು ನಿಂತಿದ್ದ ಯುವತಿಯನ್ನು ನೋಡಿ, ಕಾಲ ಬದಲಾಗಿಲ್ಲ, ಜನರೇ ಬದಲಾಗಿರೋದು ಅನಿಸಿ, ತಕ್ಷಣವೇ ತಾತನಲ್ಲಿ ಕ್ಷಮೆ ಬೇಡಿದೆ.

ಸತ್ತ ದೇವರು
ಮನೆಯಲ್ಲಿ ದೇವರ ಫೋಟೋಗೆ ಕೈಮುಗಿದು ಕುಂಕುಮ ಇಟ್ಟುಕೊಳ್ಳೋ ಎಂದು ಹೇಳಿದ ತಾಯಿಗೆ, ಸಾಕು ಮಾಡು ನಿನ್ನ ಗೊಡ್ಡು ಸಂಪ್ರದಾಯ ಎಂದು ಜರಿದು ಬಂದ ಹುಡುಗ, ದಾರಿಯಲ್ಲಿ ಸ್ಮಶಾನದ ಮುಂದೆ ಓಡಿಸುತ್ತಿದ್ದ ವಾಹನದ ವೇಗ ತಗ್ಗಿಸಿ, ಒಂದು ಕೈಯಲ್ಲೇ ಎದೆ ಮುಟ್ಟಿಕೊಂಡು ಮುಂದೆ ಹೋದ.

ಬ್ರೌನ್ ಬ್ಯಾಗ್ 
ಮೌಲ್ಯಮಾಪಕ ಉತ್ತೀರ್ಣನಾಗಲು  ವಿದ್ಯಾರ್ಥಿಗಳು ಪರೀಕ್ಷೆ ಬರೆದರಂತೆ. ಅವರು ಮೌಲ್ಯಮಾಪನ ಮಾಡಿ ಯಾರಿಗೆ ಹೆಚ್ಚು ಅಂಕ ನೀಡಿದ್ದರೋ ಆ ವಿದ್ಯಾರ್ಥಿಗಳು ಎಲ್ಲ ಪ್ರಶ್ನೆಗೂ ಸರಿ ಉತ್ತರ ನೀಡಿದ್ದಾರೆಂದು ಅವರು ಭಾವಿಸಿದ್ದಾರೆ, ಫಲಿತಾಂಶ ಇನ್ನು ಬಂದಿಲ್ಲ. ನೆನಪಿರಲಿ, ಫಲಿತಾಂಶವನ್ನು ತಿರುಚಿ ಪ್ರಕಟಿಸಲು ಅವರಿಗೆ ಒಂದು ಕ್ಷಣ ಸಾಕು.

                                           ***********************************

Monday, March 4, 2013

ಕಾಯಕವೇ ಕೈಲಾಸ


ಅಕ್ಕ ಬೈದಳು :
ಯಾವುದಕ್ಕೂ ಒಂದ್ ಹೊತ್ತು ಗೊತ್ತು ಇರ್ಬೇಕು
ಅಮ್ಮ ಅಂದರು :
ಟೈಮ್ ಗೆ ಸರಿಯಾಗಿ ಊಟ ತಿಂಡಿ ಮಾಡು
ಇವಳು ಚಿವುಟಿದಳು :
ಫೋನಲ್ಲಾದ್ರೂ ಮಾತಾಡಕ್ ಆಗಲ್ವಾ?
ಗೆಳೆಯರು ಉಗಿದರು :
ಪಿಂಗ್ ಮಾಡುದ್ರು ರಿಪ್ಲೈ ಮಾಡಲ್ಲ
ಕೊಲೀಗ್ ಕೇಳಿದಳು :
ಬ್ಲಾಗ್ ಬರಿಯೋದು ಬಿಟ್ಟು ಬಿಟ್ಟ?
ಅವರಿಗೆಲ್ಲ ನನ್ನ ಒಂದೇ ಉತ್ತರ :
ಕಾಯಕವೇ ಕೈಲಾಸ
ಇಲ್ಲ ಅಂದ್ರೆ ಆಗತ್ತೆ, ಖಾಯಂ ಮನೆ ವಾಸ