Pages

Saturday, February 4, 2012

Second T20

ಭಾರತ ಕ್ರಿಕೆಟ್ ತಂಡದ ಬಗ್ಗೆ ಮಾಡಿದ್ದರು ಎಲ್ಲರೂ ಕುಚೋದ್ಯ
ಹಾಗಾಗಿ ಆಟಗಾರರೆಲ್ಲ ಚುರುಕಾಗಿದ್ದರು ಫೀಲ್ಡ್ ಮಧ್ಯ
ಅದಾಗಿತ್ತು ಎರಡೆನೆಯ ಹಾಗು ಕೊನೆಯ T20 ಪಂದ್ಯ
ಅಂತೂ-ಇಂತೂ ನಮ್ಮವರೇ ಗೆದ್ರಲ ಸದ್ಯ
ಇದರ ಬಗ್ಗೆ ಬಂದಿದೆ ಇಂದಿನ ದಿನ ಪತ್ರಿಕೆಗಳಲ್ಲಿ ವಿಶೇಷ ಗದ್ಯ
ಆದ್ರೂ ನೀವ್ ಓದ್ಕೊಬಿಡಿ ಈ ಚಿಕ್ಕ ಪದ್ಯ

Friday, February 3, 2012

2G Scam

2008ಲಿ ಹಾಕಿದ್ದರು 2G ತರಂಗಾಂತರದ ಹರಾಜಾ
ಆ ಕಾಲಕ್ಕಿದ್ದ ಟೆಲಿಕಾಮ್ ಮಿನಿಸ್ಟ್ರೇ ಎ.ರಾಜಾ
ಲೈಸೆನ್ಸ್ ಹಂಚಿಕೆಯಲಿ ಕನಿಮೊಳಿ ಜೊತೆ ಸೇರಿ ಮಾಡಿದ ಭಾರಿ ಮಜಾ
ಇವರ ವಿರುದ್ದ ದೂರಿದ ಸ್ವಾಮಿ ಗುಡುಗಿದ ಇದಲ್ಲ ಸಾಜ
ವಿಚಾರಣೆ ನಡೆಸಿದ ನ್ಯಾಯಾಲಯ ನೀಡಿತ್ತು ಇಬ್ಬರಿಗೂ ಸಜಾ
ಕೇಸು ಸುಪ್ರೀಮ್ ಮೆಟ್ಟಿಲೇರಿ ಕೊನೆಗೂ ಕೋರ್ಟ್ ಮಾಡಿತು ಎಲ್ಲ ಲೈಸೆನ್ಸ್ ವಜಾ
ನನ್ನದೇನೂ ಪಾತ್ರ ಇಲ್ಲ ಅನ್ನುತ್ತಿರುವ ಚಿದಂಬರಂ ದೊಡ್ಡ ಖೋಜಾ
ಬಾಯಿಗ್ ಬಂದಹಾಗೆ ಮಾತಾಡ್ತಿರೋ ಕಪಿಲ್ನ ಸೇರಿಸಬೇಕು ಗ್ಯಾರೇಜಾ
ಇಷ್ಟಾದರೂ ಬಾಯಿ ಮುಚ್ಕೋಂಡಿರೊ ಸಿಂಗ್‌ಗೆ ಹೇಳಿ ನೀ ಆರಾಮಗಿ ಸೋಜಾ
+++++++++++++++++++++++++++++++++++++++++++++++++
ಸಾಜ: ಸಹಜವಾದುದು, ಸ್ವಾಭಾವಿಕವಾದುದು,ಸರಳವಾದುದು, ನಿರಾಡಂಬರವಾದುದು,ನಿಜ, ದಿಟ,ಸತ್ಯವಂತ, ಪ್ರಾಮಾಣಿಕ

Thursday, February 2, 2012

First T20

ಒಂದೇ ಬೌಂಡರಿಗೆ ಪೆವಿಲಿಯನ್ ಸೇರಿದ ವೀರೇಂದ್ರ ಸೆಹ್ವಾಗ್
ಭರವಸೆ ಮೂಡಿಸಿದ್ದ ಕೊಹ್ಲಿ ವಿಕೆಟ್ ಕಿತ್ತಿದ ಬ್ರಾಡ್ ಹಾಗ್
'ಗಂಭೀರ'ವಾಗಿ ಬ್ಯಾಟ್ ಮಾಡದ ಗೌತಮ
ಭಾರತದ 'ಹಿತ'ಕಾಯದ ರೋಹಿತ್ ಶರಮ
ಕ್ರಿಶ್ಚಿಯಾನ ಎಸೆತಕ್ಕೆ ಬೋಲ್ಡ್ ಆದ ರೈನ
ಕಡೆ ಓವೆರಲಿ ತಿಣುಕಾಡಿದ ಅಶ್ವಿನ
ಟೆಸ್ಟ್ ಇನ್ನಿಂಗ್ಸ್ ಆಡಿದ ನಾಯಕ ಮಹೇಂದ್ರ
ಎನಿಕ್ಕೂ ಪ್ರಯೋಜನವಾಗದ ರವೀಂದ್ರ
ಆಲ್ ರೌಂಡ್ ಆಟ ಪ್ರದರ್ಶಿಸಿದ ಹಸ್ಸಿ
ಬಳಿದನು ಭಾರತದ ಮುಖಕ್ಕೆ ಮಸಿ
ಕೊನೆಗೂ ಏರಲಾಗಲ್ಲಿಲ್ಲ ವಾಡ್ ಪೇರಿಸಿದ ರನ್ ಗೋಡೆ
ವರುಣನ ಕೃಪೆಗೂ ಪಾತ್ರವಾಗದ ಭಾರತೀಯ ಪಡೆ
ವಿಜಯಲಕ್ಷ್ಮೀ ಒಲಿದಳು ಬೈಲಿಯ ಆಸೀಫ್ಸ್ ಕಡೆ
(ಇಷ್ಟೆಲ್ಲಾ ಬರಿದ್ಮೇಲ್ ಅನ್ಸಿದ್ದು)
ಭಾರತೀಯ ಕ್ರಿಕೆಟ್ ತಂಡಕ್ಕೆ ಎಳ್ಳು ನೀರು ಬಿಟ್ಟು, ತಿನ್ನು SLVಲಿ ಇಡ್ಲಿ-ವಡೆ